- Home
- Life
- Kitchen
- Kitchen Tips: ಮನೆಯಲ್ಲಿ ಹಲ್ಲಿಗಳ ಕಾಟವೇ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಸಾಕು, ಹಲ್ಲಿ ಹತ್ತಿರ ಬರುವುದೇ ಇಲ್ಲ!
Kitchen Tips: ಮನೆಯಲ್ಲಿ ಹಲ್ಲಿಗಳ ಕಾಟವೇ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಸಾಕು, ಹಲ್ಲಿ ಹತ್ತಿರ ಬರುವುದೇ ಇಲ್ಲ!
ಮನೆಗಳಲ್ಲಿ ಹಲ್ಲಿಗಳು ದೊಡ್ಡ ಸಮಸ್ಯೆ. ಅತ್ತಿತ್ತ ಓಡಾಡುತ್ತಾ ಕಿರಿಕಿರಿ ಉಂಟುಮಾಡುತ್ತವೆ. ಕೆಲವೊಮ್ಮೆ ಇದ್ದಕ್ಕಿದ್ದಂತೆ ಮೈಮೇಲೆ ಬಿದ್ದು ಭಯ ಹುಟ್ಟಿಸುತ್ತವೆ. ಆಹಾರ ಪದಾರ್ಥಗಳ ಮೇಲೂ ಬೀಳುತ್ತವೆ. ಆದರೆಈ ಸಮಸ್ಯೆಗೆ ಸುಲಭವಾಗಿ ಪರಿಹಾರ ಇಲ್ಲಿದೆ ನೋಡಿ.

ಹಲವರ ಮನೆಯಲ್ಲಿ ಹಲ್ಲಿಗಳದ್ದು ದೊಡ್ಡ ಸಮಸ್ಯೆ. ಅತ್ತಿತ್ತ ಓಡಾಡುತ್ತಾ ಕಿರಿಕಿರಿ ಮಾಡುತ್ತವೆ. ಇವು ಹಾನಿಕಾರಕ ಅಲ್ಲದಿದ್ದರೂ, ಅಡುಗೆಮನೆ ಅಥವಾ ಬೆಡ್‌ರೂಮ್‌ನಲ್ಲಿ ಕಂಡರೆ ಭಯವಾಗುತ್ತದೆ. ಅಷ್ಟೇ ಅಲ್ಲ, ಇದ್ದಕ್ಕಿದ್ದಂತೆ ಮೈಮೇಲೆ ಬಿದ್ದುಬಿಡುತ್ತವೆ. ಆಗ ಭಯದಿಂದ ಕಿರುಚುವುದು ಗ್ಯಾರಂಟಿ. ಸ್ವಲ್ಪ ಯಾಮಾರಿದರೂ ಸಾಕು, ಆಹಾರ ಪದಾರ್ಥಗಳ ಮೇಲೆ ಬೀಳುತ್ತವೆ. ಆಗ ಅದನ್ನು ತಿನ್ನಲಾಗದೆ ಬಿಸಾಡಬೇಕಾಗುತ್ತದೆ.
ಇವುಗಳ ಹಿಕ್ಕೆ ಮತ್ತು ಮೂತ್ರದಿಂದ ಮನೆಯವರಿಗೆ ಅನಾರೋಗ್ಯ ಸಮಸ್ಯೆಗಳು ಕೂಡ ಬರಬಹುದು. ಬೇಸಿಗೆ ಶುರುವಾಯಿತೆಂದರೆ, ಮನೆಯಲ್ಲಿ ಕಾಡುವ ಸಮಸ್ಯೆಗಳಲ್ಲಿ ಹಲ್ಲಿಗಳೂ ಒಂದು. ಗೋಡೆ ಮೇಲೆ ಓಡಾಡುತ್ತಾ ಕಿರಿಕಿರಿ ಉಂಟುಮಾಡುತ್ತವೆ. ಬಿಸಿಲು ಹೆಚ್ಚಾದಂತೆ ಆಹಾರ, ನೀರು ಮತ್ತು ತಂಪಾದ ಜಾಗ ಹುಡುಕಿಕೊಂಡು ಇವು ಮನೆ ಒಳಗೆ ಬರುತ್ತವೆ.
ಬೇಸಿಗೆಯಲ್ಲಿ ಹಲ್ಲಿಗಳು ನಿಮ್ಮನ್ನು ಹೆಚ್ಚು ಕಾಡುತ್ತವೆ. ಕೆಲವೊಮ್ಮೆ ಕೋಣೆಯಲ್ಲಿ ಮತ್ತು ಕೆಲವೊಮ್ಮೆ ಸ್ನಾನಗೃಹದಲ್ಲಿ. ಕೆಲವೊಮ್ಮೆ ಅವು ನೆಲದ ಮೇಲೂ ನಡೆಯುತ್ತವೆ. ಹಲ್ಲಿಗಳು ಯಾವುದೇ ವಿಶೇಷ ಹಾನಿಯನ್ನುಂಟುಮಾಡದಿದ್ದರೂ, ಹೆಚ್ಚಿನ ಜನರು ಅವುಗಳನ್ನು ನೋಡಲು ಇಷ್ಟಪಡುವುದಿಲ್ಲ. ಹಲ್ಲಿಗಳು ಮನೆಯೊಳಗೆ ಬರಲು ಹಲವು ಕಾರಣಗಳಿರಬಹುದು.
ಆಹಾರ, ತಂಪಾದ ಸ್ಥಳ, ಬೆಳಕು ಮತ್ತು ಇನ್ನೂ ಅನೇಕ ಕಾರಣವಾಗಿರಬಹುದು. ನಿಮ್ಮ ಮನೆಯಲ್ಲಿ ಹಲ್ಲಿಗಳಿಂದ ತೊಂದರೆ ಆಗುತ್ತಿದ್ದರೆ ಇನ್ನು ಚಿಂತಿಸಬೇಡಿ. ವಾಸ್ತವವಾಗಿ, ಹಲ್ಲಿಗಳನ್ನು ತೊಡೆದುಹಾಕಲು ನಾವು ನಿಮಗಾಗಿ ಕೆಲವು ಸುಲಭ ಪರಿಹಾರಗಳನ್ನು ಈ ಲೇಖನದಲ್ಲಿ ತಿಳಿಸಲಿದ್ದೇವೆ.
ಹಲ್ಲಿಗಳನ್ನು ತೊಡೆದುಹಾಕಲು ಸುಲಭವಾದ ಮಾರ್ಗವೆಂದರೆ ಕರಿಮೆಣಸು
ಹಲ್ಲಿಗಳಿಗೆ ಕರಿಮೆಣಸು ಆಗದು. ಇದನ್ನು ಬಳಸುವುದರಿಂದ ಮನೆಯಲ್ಲಿರುವ ಹಲ್ಲಿಗಳ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಹಲ್ಲಿಗಳು ಹೆಚ್ಚಾಗಿ ಬರುವ ಸ್ಥಳಗಳಲ್ಲಿ ಮೆಣಸಿನಕಾಯಿ ಸಿಂಪಡಿಸಿ. ಕರಿಮೆಣಸು ಮತ್ತು ಕೆಂಪು ಮೆಣಸಿನ ಪುಡಿಯನ್ನು ನೀರಿನಲ್ಲಿ ಬೆರೆಸಿ, ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ ಮನೆಯ ಪ್ರತಿಯೊಂದು ಮೂಲೆಯಲ್ಲೂ ಸಿಂಪಡಿಸಿ.
ಈರುಳ್ಳಿ ಮತ್ತು ಬೆಳ್ಳುಳ್ಳಿಗೆ ಹಲ್ಲಿಗಳು ಮನೆಯಿಂದ ಓಡುತ್ತವೆ
ಮನೆಯಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಇಡುವುದರಿಂದ ಹಲ್ಲಿಗಳು ಮತ್ತು ಇತರ ಕೀಟಗಳನ್ನು ದೂರವಿಡಬಹುದು. ಈರುಳ್ಳಿ, ಬೆಳ್ಳುಳ್ಳಿ ವಾಸನೆ ಹಲ್ಲಿಗಳಿಗೆ ಇಷ್ಟವಾಗದು. ಹೀಗಾಗಿ ಈರುಳ್ಳಿ ಬೆಳ್ಳುಳ್ಳಿ ರಸವನ್ನು ಆಯಾ ಜಾಗದಲ್ಲಿ ಸಿಂಪಡಿಸಿ. ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಪುಡಿಮಾಡಿ, ನೀರಿನಲ್ಲಿ ಬೆರೆಸಿ ಸಿಂಪಡಿಸಬಹುದು. ಹಲ್ಲಿಗಳು ಈರುಳ್ಳಿ ಮತ್ತು ಬೆಳ್ಳುಳ್ಳಿಯ ಘಾಟು ವಾಸನೆಯನ್ನು ಇಷ್ಟಪಡುವುದಿಲ್ಲ .
ಹಲ್ಲಿಗಳನ್ನು ವಿನೆಗರ್ ನಿಂದ ಓಡಿಸಿ
ಹಲ್ಲಿಗಳು ಹೆಚ್ಚಾಗಿ ಬರುವ ಕಡೆ ವಿನೆಗರ್ ಮತ್ತು ನೀರಿನ ಮಿಶ್ರಣವನ್ನು ಸಿಂಪಡಿಸಿ. ವಿನೆಗರ್ ನ ಘಾಟು ವಾಸನೆಯಿಂದಾಗಿ, ಹಲ್ಲಿ ಆ ಸ್ಥಳದ ಹತ್ತಿರವೂ ಬರುವುದಿಲ್ಲ.
ಮೊಟ್ಟೆಯ ಚಿಪ್ಪುಗಳು ಕೆಲಸ ಮಾಡುತ್ತವೆ
ಮೊಟ್ಟೆಯ ಚಿಪ್ಪನ್ನು ಬಳಸಿ ಹಲ್ಲಿಗಳನ್ನು ಮನೆಯಿಂದ ಓಡಿಸಬಹುದು. ಹಲ್ಲಿಗಳು ಮೊಟ್ಟೆಯ ಚಿಪ್ಪಿನ ವಾಸನೆಯನ್ನು ಇಷ್ಟಪಡುವುದಿಲ್ಲ . ಆದ್ದರಿಂದ, ಮೊಟ್ಟೆಯ ಚಿಪ್ಪುಗಳನ್ನು ಇಟ್ಟರೆ, ಹಲ್ಲಿಗಳು ಮನೆಯೊಳಗೆ ಬರುವುದಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

