ಹೆಣ್ಣುಮಕ್ಕಳ ಮೇಲಿನ ದಾಳಿ, ಬಾಂಬ್ ಸ್ಫೋಟ ಸಾಮಾನ್ಯ ಘಟನೆಯಲ್ಲ, ನೇಹಾ ಹತ್ಯೆ ಉಲ್ಲೇಖಿಸಿ ಕಾಂಗ್ರೆಸ್ ಕುಟುಕಿದ ಮೋದಿ!
ಹೆಣ್ಣುಕ್ಕಳ ಮೇಲೆ ಹಲ್ಲೆ, ಬಾಂಬ್ ಸ್ಫೋಟ, ಭಜನೆಗೂ ವಿರೋಧ, ಇದು ಸಾಮಾನ್ಯ ಘಟನೆಯಲ್ಲ ಎಂದು ಪ್ರಧಾನಿ ಮೋದಿ ಪರೋಕ್ಷವಾಗಿ ನೇಹಾ ಕೊಲೆ ಪ್ರಕರಣ, ರಾಮೇಶ್ವರಂ ಸ್ಫೋಟ ಪ್ರಕರಣ ಉಲ್ಲೇಖಿಸಿ ಕಾಂಗ್ರೆಸ್ ಸರ್ಕಾರವನ್ನು ತಿವಿದಿದ್ದಾರೆ.
ಬೆಂಗಳೂರು(ಏ.20) ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕ ಕಾಂಗ್ರೆಸ್ ಸರ್ಕಾರ ವಿರುದ್ದ ಹರಿಹಾಯ್ದಿದ್ದಾರೆ. ನೇಹಾ ಹೀರೆಮಠ್ ಹತ್ಯೆ ಪ್ರಕರಣವನ್ನು ಪರೋಕ್ಷವಾಗಿ ಉಲ್ಲೇಖಿಸಿ ಘಟನೆಯ ಗಂಭೀರತೆಯನ್ನು ವಿವರಿಸಿದ್ದಾರೆ. ಕರ್ನಾಟಕದಲ್ಲಿ ಹೆಣ್ಣುಮಕ್ಕಳ ಮೇಲೆ ಹಲ್ಲೆ ನಡೆಯುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಬಾಂಬ್ ಸ್ಫೋಟಿಸುತ್ತಿದೆ. ಭಜನೆ, ಗೀರ್ತನೆ ಹಾಡಿದರೂ ಹಲ್ಲೆಯಾಗುತ್ತಿದೆ. ಇದು ಸಾಮಾನ್ಯ ಘಟನೆಯಲ್ಲ. ನಾನು ಬೆಂಗಳೂರು ಹಾಗೂ ಕರ್ನಾಟಕ ಜನತೆಗೆ ಆಗ್ರಹಿಸುತ್ತೇನೆ. ನೀವು ಕಾಂಗ್ರೆಸ್‌ನಿಂದ ಎಚ್ಚರವಹಿಸಬೇಕು ಎಂದು ಮೋದಿ ಹೇಳಿದ್ದಾರೆ.
ನೇಹಾ ಕೊಲೆ ಪ್ರಕರಣ, ರಾಮೇಶ್ವರಂ ಸ್ಫೋಟ ಪ್ರಕರಣ, ಜೈ ಶ್ರೀರಾಮ್ ಹಾಡು ಹಾಕಿದ್ದಕ್ಕೆ ಹಲ್ಲೆ, ರಾಮ ನವಮಿ ದಿನ ಶ್ರೀರಾಮನ ಬಾವುಟ ಹಾಕಿ ತೆರಳುತ್ತಿದ್ದ ಯುವಕರ ಮೇಲಿನ ಹಲ್ಲೆ ಪ್ರಕರಣವನ್ನು ಮೋದಿ ಹೆಸರೆತ್ತದೆ ಉಲ್ಲೇಖಿಸಿದ್ದಾರೆ. ಈ ಘಟನಗಳು ಮರುಕಳಿಸುತ್ತಿರಲು ಕಾಂಗ್ರೆಸ್ ಕುಮ್ಮಕ್ಕು ಕಾರಣ ಎಂದು ಮೋದಿ ಪರೋಕ್ಷವಾಗಿ ಹೇಳಿದ್ದಾರೆ. ಹೀಗಾಗಿ ಜನರು ಕಾಂಗ್ರೆಸ್‌ನಿಂದ ಎಚ್ಚರ ವಹಿಸಬೇಕು ಎಂದು ಮೋದಿ ಹೇಳಿದ್ದಾರೆ.
ಮೋದಿ, ಕುಟುಂಬ, ಸುಳ್ಳು ಆರೋಪ ಇಂಡಿಯಾ ಒಕ್ಕೂಟದ ಟಾರ್ಗೆಟ್, ಬಿಜೆಪಿ ಗುರಿ ಅಭಿವೃದ್ಧಿ ಭಾರತ; ಮೋದಿ ಭಾಷಣ!
ನಿಮ್ಮ ಕನಸು ನನ್ನ ಸಂಕಲ್ಪವಾಗಿದೆ. ನನ್ನ ಕಣ ಕಣ ನಿಮಗಾಗಿ, ದೇಶಕ್ಕಾಗಿ ಮಿಡಿಯುತ್ತಿದೆ. ದಿನದ 24 ಗಂಟೆ ಹಾಗೂ 2047ರ ಕನಸಿಗಾಗಿ ಶ್ರಮವಹಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ. ಕಾಂಗ್ರೆಸ್‌ನಿಂದ ಎಲ್ಲರೂ ಎಚ್ಚರವಹಿಸಬೇಕು. ಹೀಗಾಗಿ ಬಿಜೆಪಿ-ಎನ್‌ಡಿಎಗೆ ಅತೀ ಹೆಚ್ಚಿನ ಮತಗಳನ್ನು ನೀಡಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಈ ಮೂಲಕ ಸುಭದ್ರ ಹಾಗೂ ಸುರಕ್ಷಿತ ಜೀವನಕ್ಕೆ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಮೋದಿ ಮನವಿ ಮಾಡಿದ್ದಾರೆ.
ಕರ್ನಾಟಕದಲ್ಲಿ 4,000 ರೂಪಾಯಿಯನ್ನು ಬಿಜೆಪಿ ಸರ್ಕಾರ ನೀಡುತ್ತಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಇದನ್ನು ತಡೆದಿದೆ. ಕಾಂಗ್ರೆಸ್ ರೈತ ವಿರೋಧಿಯಾಗಿದೆ ಎಂದು ಮೋದಿ ಹೇಳಿದ್ದಾರೆ. ಬೆಂಗಳೂರು ಯುವ ಶಕ್ತಿ, ಯುವ ಪ್ರತಿಭೆಗಳ ವೇದಿಕೆಯಾಗಿದೆ. ಆದರೆ ಇಂಡಿಯಾ ಒಕ್ಕೂಟ ಇದರ ವಿರೋಧಿಯಾಗಿದೆ. ಕಾಂಗ್ರೆಸ್ ಜನಧನ ಖಾತೆ ವಿರೋಧಿಸಿ, ಕಾಂಗ್ರೆಸ್ ಡಿಜಿಟಲ್ ಪೇಮೆಂಟ್ ವಿರೋಧ ಮಾಡಿತ್ತು, ಕೊರೋನಾ ಸಮಯದಲ್ಲಿ ಬೆಂಗಳೂರಿನ ಐಟಿ ಕ್ಷೇತ್ರ ವಿಶ್ವಕ್ಕೆ ನೆರವು ನೀಡಿತ್ತು. ಕಾಂಗ್ರೆಸ್ ಮೇಡ್ ಇನ್ ಇಂಡಿಯಾ ಕೊರೋನಾ ವ್ಯಾಕ್ಸಿನ್ ಕೂಡ ವಿರೋಧಿಸಿತ್ತು. ಭಾರತವನ್ನು ಗ್ರೀನ್ ಹಬ್, ಫಾರ್ಮಾ ಹಬ್, ಎಲೆಕ್ಟ್ರಿಕ್ ವಾಹನ ಹಬ್, ಸೆಮಿಕಂಡಕ್ಚರ್ ಹಬ್ ಮಾಡುತ್ತೇವೆ. ಇದರಿಂದ ಬಾರತ ಗ್ಲೋಬಲ್ ಎಕಾನಮಿಕ್ ಹಬ್ ಆಗಲಿದೆ. ಆದರೆ ಇಂಡಿಯಾ ಒಕ್ಕೂಟ ನಾಯಕರು ಹೇಳುತ್ತಾರೆ, ಮೋದಿಯನ್ನು ಸೋಲಿಸುತ್ತೇವೆ ಎನ್ನುತ್ತಿದೆ. ಮೋದಿ ಗ್ಯಾರೆಂಟಿ ಚಂದ್ರಯಾನ ಬಳಿಕ ಗಗನಯಾನ , ಆದರೆ ಕಾಂಗ್ರೆಸ್ ಹೇಳುತ್ತಿದ್ದೆ ಮೋದಿ ಹಠಾವೋ, ಕಾಂಗ್ರೆಸ್ ನವೋದ್ಯಮಿಗಳ ವಿರೋಧಿ ಎಂದು ಮೋದಿ ಹೇಳಿದ್ದಾರೆ.
28ಕ್ಕೆ 28 ಕ್ಷೇತ್ರ ಗೆದ್ದುಕೊಡುತ್ತೇವೆ, ಪ್ರಧಾನಿ ಮೋದಿಗೆ ಯಡಿಯೂರಪ್ಪ ...