ಅಬ್ಬಬ್ಬಾ..ದಿಂಬಿನ ಬೆಲೆ ಭರ್ತಿ 45 ಲಕ್ಷ ರೂ; ವಿಶ್ವದ ದುಬಾರಿ ಪಿಲ್ಲೋದಲ್ಲಿ ಅಂಥದ್ದೇನಿದೆ ?
ಅಬ್ಬಬ್ಬಾ ಅಂದ್ರೆ ಒಂದು ದಿಂಬಿಗೆ (Pillow) ಎಷ್ಟು ರೂಪಾಯಿ ಕೊಡ್ಬೋದು ಹೇಳಿ. ಮುನ್ನೂರು, ಐನೂರು. ಹೆಚ್ಚೆಂದರೆ ಸಾವಿರ ಅಲ್ವಾ. ಆದ್ರೆ ಇಲ್ಲೊಂದೆಡೆ ಪಿಲ್ಲೊ ಪ್ರೈಸ್ (Price) ಕೇಳಿದ್ರೆ ನೀವು ತಲೆಸುತ್ತಿ ಬೀಳೋದು ಗ್ಯಾರಂಟಿ. ಯಾಕಂದ್ರೆ ಈ ದಿಂಬಿನ ಬೆಲೆ ಭರ್ತಿ 45 ಲಕ್ಷ ರೂಪಾಯಿ. ಅಷ್ಟಕ್ಕೂ ಅದ್ರಲ್ಲೇನಿದೆ ?
ದಿನವಿಡೀ ಕೆಲಸ, ಒಂದೊಂದು ಟೆನ್ಶನ್, ಇದೆಲ್ಲಾ ಕಳೆದು ರಾತ್ರಿ (Night) ವೇಳೆ ಹಾಸಿಗೆಗೆ ಹೋಗುವುದು ಆರಾಮದಾಯಕವಾಗಿರುತ್ತದೆ. ಎಲ್ಲರೂ ರಾತ್ರಿ ಚೆನ್ನಾಗಿ ನಿದ್ದೆ (Sleep) ಮಾಡಬೇಕು ಎಂದು ಬಯಸುತ್ತಾರೆ. ಇದರಿಂದ ಮರುದಿನ ಫ್ರೆಶ್ ಮೂಡ್ ನೊಂದಿಗೆ ಕೆಲಸಕ್ಕೆ ಹೋಗಬಹುದು. ಚೆನ್ನಾಗಿ ನಿದ್ರೆ ಮಾಡಬೇಕು ಎಂದರೆ ಕೆಲವರಿಗೆ ದಿಂಬು ಬೇಕೇ ಬೇಕು. ಸರಿಯಾದ ದಿಂಬು (Pillow) ಸಿಕ್ಕರೆ ಯಾವುದೇ ಕಿರಿಕಿರಿಯಿಲ್ಲದೆ ಆರಾಮವಾಗಿ ನಿದ್ದೆ ಮಾಡಲು ಸಾಧ್ಯವಾಗುತ್ತದೆ. ಒಬ್ಬೊಬ್ಬರು ಒಂದೊಂದು ರೀತಿಯ ದಿಂಬು ಬಳಸುತ್ತಾರೆ. ಕೆಲವೊಬ್ಬರು ಗಟ್ಟಿಯಾದ ದಿಂಬು ಬಳಸಿದರೆ, ಇನ್ನು ಕೆಲವೊಬ್ಬರು ತುಂಬಾ ಮೃದುವಾಗಿರುವ ದಿಂಬು ಬಳಸುತ್ತಾರೆ. ಕಂಫರ್ಟೆಬ (Comfortable) ಆಗಿರಲಿ ಅನ್ನೋ ಕಾರಣಕ್ಕೆ ಹೆಚ್ಚೆಚ್ಚು ದುಡ್ಡು ಕೊಟ್ಟು ಬ್ರ್ಯಾಂಡೆಡ್ ದಿಂಬು ಖರೀದಿಸುವವರೂ ಇದ್ದಾರೆ.
ನಿದ್ದೆ ಸರಿಯಾಗಿ ಬರಲು ನೆಮ್ಮದಿ ಮುಖ್ಯ.ಆದರೆ ನೆಮ್ಮದಿ ಮಾತ್ರವಲ್ಲ, ತಲೆ ದಿಂಬು (pillow) ಸಹ ಬೇಕು ಅನ್ನುತ್ತಾರೆ ಬಹುತೇಕ ಮಂದಿ. ಹಿಂದೆಲ್ಲ, ಮನೆಯಲ್ಲೇ ದಿಂಬು ಹೊಲಿಯುತ್ತಿದ್ದರು.ಆದರೆ ಇಂದು ಮಾರುಕಟ್ಟೆಯಲ್ಲಿ ಬಣ್ಣ ಬಣ್ಣ್ಣದ ಹಲವು ಹಲವು ಬಗೆಯ ದಿಂಬುಗಳು ಸಿಗುತ್ತವೆ.ತಲೆನೋವಿಗೆ, ಕುತ್ತಿಗೆ ನೋವಿಗೆ, ನಿದ್ರಾಹೀನತೆಗೆ, ಹೀಗೆ ಒಂದೊಂದು ಸಮಸ್ಯೆಗೂ ವಿಭಿನ್ನ ಪ್ರಕಾರದ ದಿಂಬುಗಳು ಲಭ್ಯ. ಬೆಲೆಯಲ್ಲೂ ನಾವು ವ್ಯತ್ಯಾಸ ನೋಡಬಹುದು. ಆದ್ರೆ ಇಲ್ಲೊಂದೆಡೆ ದಿಂಬು ಅರ್ಧ ಕೋಟಿಗೆ ಮಾರಾಟ ಆಗುತ್ತಿದೆ.
Cleaning Hacks: ದಿಂಬು ಕೊಳಕಾಗಿದ್ದರೆ ಕೂದಲು. ತ್ವಚೆ ಸೌಂದರ್ಯವೇ ಹಾಳಾಗುತ್ತೆ!
ವಿಶ್ವದ ದುಬಾರಿ ದಿಂಬಿನ ಬೆಲೆ ಭರ್ತಿ 45 ಲಕ್ಷ ರೂ.
ಎಷ್ಟು ಚೆನ್ನಾಗಿದ್ರೂ ದಿಂಬೊಂದಕ್ಕೆ ಎಷ್ಟು ರೂಪಾಯಿ ಕೊಡ್ಬೋದು ಹೇಳಿ. ಮುನ್ನೂರು, ಐನೂರು. ಹೆಚ್ಚೆಂದರೆ ಸಾವಿರ ಅಲ್ವಾ. ಆದ್ರೆ ಇಲ್ಲೊಂದೆಡೆ ಪಿಲ್ಲೊ ಪ್ರೈಸ್ ಭರ್ತಿ 45 ಲಕ್ಷ ರೂಪಾಯಿ. ನೆದರ್ ಲ್ಯಾಂಡ್ಸ್ ಮೂಲದ ಸೈಕೋಥೆರಪಿಸ್ಟ್ ವಿನ್ಯಾಸಗೊಳಿಸಿದ ವಿಶ್ವದ ಅತ್ಯಂತ ದುಬಾರಿ (Costly) ದಿಂಬು ಇದು. ಇದರ ಬೆಲೆ 57,000 ಡಾಲರ್, ಅಂದರೆ ಬರೋಬ್ಬರಿ 45 ಲಕ್ಷ ರೂಪಾಯಿಗಳು.
ಕಂಫರ್ಟೆಬಲ್ ಬಯಸುವ ಜನರು ಹಾಗೆಯೇ ಸಣ್ಣ ಪುಟ್ಟ ವಸ್ತುಗಳಿಗೂ ಸಿಕ್ಕಾಪಟ್ಟೆ ಹಣ ಕೊಡಲು ಸಿದ್ದವಾಗುತ್ತಾರೆ. ಹೆಚ್ಚು ಹಣ ತೆತ್ತರೂ ಸರಿ ವಸ್ತು ಆರಾಮದಾಯಕವಾಗಿರಲಿ ಎಂದು ಅಂದುಕೊಳ್ಳುತ್ತಾರೆ. ಹಾಗಾಗಿಯೇ ಹೆಚ್ಚು ಹಣ ವ್ಯಯಿಸುವುದು ಅಂಥವರಿಗೆ ಭಾರವೆನಿಸುವುದಿಲ್ಲ. ಹಾಗೆಯೇ ಹೆಚ್ಚು ಹಣ ನೀಡಿ ಖರೀದಿಸುವ ವಸ್ತುಗಳು ಗ್ರಾಹಕರ ಪಾಲಿಗೆ ಎಲ್ಲಾ ರೀತಿಯಲ್ಲೂ ಕಂಫರ್ಟೆಬಲ್ ಆಗಿರುತ್ತವೆ. ದಿಂಬು ಸರಿಯಾಗಿಲ್ಲವಾದರೆ ಜನರು ಅಕ್ಷರಶಃ ನಿದ್ರೆಯನ್ನು ಕಳೆದುಕೊಳ್ಳುತ್ತಾರೆ. ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಹೀಗಾಗಿ ದುಬಾರಿಯಾದರೂ ಪರ್ವಾಗಿಲ್ಲ ಎಂದು ಇಂಥಾ ದಿಂಬನ್ನು ಖರೀದಿಸುತ್ತಾರೆ.
Baby Care : ಸಾಸಿವೆ ದಿಂಬಿನ ಮೇಲೆ ಮಲಗಿಸೋ ಪ್ರಯೋಜನಗಳೇನು?
ದಿಂಬಿನೊಳಗಿದೆ ಚಿನ್ನ, ವಜ್ರ, ನೀಲಮಣಿಗಳು
45 ಲಕ್ಷ ರೂಪಾಯಿ ಬೆಲೆಬಾಳುವ ಈ ವಿಶೇಷ ದಿಂಬನ್ನು ವಿಶೇಷವಾಗಿ ವಿನ್ಯಾಸಗೊಳಿಸಿ ತಯಾರಿಸಲಾಗಿದೆ. ಈಜಿಪ್ಟ್ ಹತ್ತಿಯಿಂದ ಇದು ಮಾಡಲ್ಪಟ್ಟಿದೆ, ಮಲ್ಬೆರಿ ರೇಷ್ಮೆಯನ್ನು ಒಳಗೊಂಡಿದೆ ಮತ್ತು ವಿಷಕಾರಿಯಲ್ಲದ ಡಚ್ ಮೆಮೊರಿ ಫೋಮ್‌ನಿಂದ ತುಂಬಿದೆ. ಮಾತ್ರವಲ್ಲ ಇದು ಇಷ್ಟೊಂದು ಕಾಸ್ಟ್ಲೀಯಾಗಲು ಮುಖ್ಯ ಕಾರಣವೆಂದರೆ ಈ ದಿಂಬು 24-ಕ್ಯಾರೆಟ್ ಚಿನ್ನ (Gold), ನೀಲಮಣಿಗಳು ಮತ್ತು ವಜ್ರ (Diamond)ಗಳಿಂದ ಕೂಡಿದೆ. ಹತ್ತಿಯು ರೋಬೋಟಿಕ್ ಮಿಲ್ಲಿಂಗ್ ಯಂತ್ರದಿಂದ ಬರುವ ಕಾರಣ ಹೆಚ್ಚು ಮೆತ್ತಗಿರುತ್ತದೆ.
ನಿದ್ರಾಹೀನತೆಯ ಸಮಸ್ಯೆ ಇರುವವರಿಗೆ ಬೆಸ್ಟ್
ಬಾಂಬೆ ಡೈಯಿಂಗ್‌ನಲ್ಲಿ ಶೆಲ್ಫ್‌ನಲ್ಲಿ ವಿಶ್ವದ ಅತ್ಯಂತ ದುಬಾರಿ ದಿಂಬನ್ನು ಸಂಗ್ರಹಿಸಲಾಗುತ್ತದೆ. ಈ ವಿಶೇಷ ದಿಂಬನ್ನು ತಯಾರಿಸಿದ ವಿನ್ಯಾಸಕರು (Designer), ಇದು ನಿದ್ರಾಹೀನತೆಯ ಸಮಸ್ಯೆ ಹೊಂದಿರುವ ಜನರಿಗೆ ಸುಲಭವಾಗಿ ನಿದ್ದೆ ಬರುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.15 ವರ್ಷಗಳ ಸಂಶೋಧನೆಯನ್ನು ಪರಿಗಣಿಸಿ ವಜ್ರ ಹೊದಿಕೆಯ ಈ ದಿಂಬನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಖರೀದಿ ಮಾಡುವ ಮನಸ್ಸಿದ್ದರು ದಿಂಬು ಹಾಗೆ ಸುಲಭವಾಗಿ ಸಿಗುವುದಿಲ್ಲ. ಇದನ್ನು ಖರೀದಿಸುವ ಪ್ರೊಸೆಸ್ ತುಂಬಾ ಸುದೀರ್ಘವಾಗಿದೆ. ಆರೋಗ್ಯ ಸಮಸ್ಯೆಯಿರಲ್ಲ. ಕಂಫರ್ಟೆಬಲ್ ಅಗಿರುತ್ತೆ ಅಂತ ಇದನ್ನು ಖರೀದಿ ಮಾಡಿದರೂ , ಬಹುಶಃ ಒಬ್ಬ ವ್ಯಕ್ತಿಯು ಕಳ್ಳತನದ ಭಯದಲ್ಲಿ ಮಲಗಲು ಸಾಧ್ಯವಿಲ್ಲ ಅಂತಿದ್ದಾರೆ ಜನ್ರು.