Asianet Suvarna News Asianet Suvarna News

Bengaluru: ಟ್ರಾಫಿಕ್‌ ಜಾಮ್‌ನಲ್ಲೇ ಬಟಾಣಿ ಸಿಪ್ಪೆ ಸುಲಿದ ಮಹಿಳೆ, ಪೋಸ್ಟ್‌ ವೈರಲ್‌

ಬೆಂಗಳೂರು ಟ್ರಾಫಿಕ್‌ನಲ್ಲೇ ವೇಸ್ಟ್ ಆಗೋ ಟೈಂ ಅಷ್ಟಿಷ್ಟಲ್ಲ. ಅಯ್ಯೋ ಈ ಟ್ರಾಫಿಕ್ ಇಲ್ಲಾಂದ್ರೆ ಆಫೀಸ್‌ಲ್ಲಿ ಇರ್ತಿದ್ದೆ. ಅಯ್ಯೋ ಟ್ರಾಫಿಕ್ ಇಲ್ಲಾಂದ್ರೆ ಮನೆಗೆ ಹೋಗಿ ಅಡಿಗೇನೆ ಆಗಿರ್ತಿತ್ತು. ಹೀಗೆ ಒಬ್ಬೊಬ್ಬರ ಅಳಲು ಒಂದೊಂದು ರೀತಿ. ಹೀಗಿರುವಾಗ ಇಲ್ಲೊಬ್ಬ ಮಹಿಳೆ ಟ್ರಾಫಿಕ್‌ ಜಾಮ್‌ನಲ್ಲಿ ಸಮಯದ ಸದುಪಯೋಗ ಮಾಡಿದ್ದಾರೆ. ಅದ್ಹೇಗೆ?

Peak Bengaluru Moment, Woman Peels Vegetables While Stuck In Traffic Vin
Author
First Published Sep 19, 2023, 2:58 PM IST

ಬೆಂಗಳೂರು.ಇಲ್ಲಿನ ಸುಂದರವಾದ ವಾತಾವರಣದಿಂದಾಗಿ ಜನರು ಈ ಮಹಾನಗರವನ್ನು ಹೆಚ್ಚು ಇಷ್ಟಪಡುತ್ತಾರೆ. ಆದರೆ ಇತ್ತೀಚಿನ ಕೆಲ ವರ್ಷಗಳಲ್ಲಿ ಬೆಂಗಳೂರು ಕಿಕ್ಕಿರಿದ ಟ್ರಾಫಿಕ್‌ನಿಂದಾಗಿ ಹೆಚ್ಚು ಫೇಮಸ್ ಆಗುತ್ತಿದೆ. ಇಲ್ಲಿನ ಸಂಚಾರ ದಟ್ಟಣೆಯಿಂದಾಗಿಯೇ ಜನರು ಈ ನಗರವನ್ನು ದ್ವೇಷಿಸಲು ತೊಡಗಿದ್ದಾರೆ. ಪೀಕ್ ಅವರ್‌ಗಳಲ್ಲಂತೂ ರಸ್ತೆ ವಾಹನಗಳಿಂದ ಕಿಕ್ಕಿರಿದು ತುಂಬುತ್ತದೆ. ಕ್ಯಾಬ್‌, ಆಟೋ ರಿಕ್ಷಾಗಳು ಸಹ ಲಭ್ಯವಾಗುವುದಿಲ್ಲ. ಇದರಿಂದಾಗಿ ಪ್ರಯಾಣಿಕರು ವಿವಿಧ ಸ್ಥಳಗಳಲ್ಲಿ ಸಿಲುಕಿಕೊಳ್ಳುತ್ತಾರೆ. ಉದ್ದೇಶಿತ ಸ್ಥಳಕ್ಕೆ ನಿಗದಿತ ಸಮಯಕ್ಕೆ ಸರಿಯಾಗಿ ತಲುಪಲಾಗದೆ ತೊಂದರೆ ಅನುಭವಿಸುತ್ತಾರೆ.

ಬೆಂಗಳೂರಿನ ಟ್ರಾಫಿಕ್ ಅವ್ಯವಸ್ಥೆ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಅರ್ಧಗಂಟೆಯ ದಾರಿ ಟ್ರಾಫಿಕ್‌ನಲ್ಲಿ ತಲುಪೋಕೆ ಒಂದು ಗಂಟೆ (One hour) ಹಿಡಿಯೋದು ಇದೆ. ಟ್ರಾಫಿಕ್ ನಿಯಂತ್ರಣಕ್ಕೆ ಪರ್ಯಾಯವಾಗಿ ಅದೆಷ್ಟೇ ವ್ಯವಸ್ಥೆ ಮಾಡಿಕೊಂಡ್ರೂ ದಿನವಿಡೀ ಬೆಂಗಳೂರಿನ ರಸ್ತೆಗಳಲ್ಲಿ (Bengaluru road) ಟ್ರಾಫಿಕ್ ಅಬ್ಬರವಂತೂ ಕಡಿಮೆಯಾಗೋದೆ ಇಲ್ಲ. ಮೆಟ್ರೋ, ಕ್ಯಾಬ್‌ ಎಂದು ಅದೆಷ್ಟೇ ವ್ಯವಸ್ಥೆಯಿದ್ದರೂ ಅವ್ಯವಸ್ಥೆ ಹಾಗೆಯೇ ಇರುತ್ತದೆ. ಅರ್ಧ ಜೀವ್ನ ಟ್ರಾಫಿಕ್‌ನಲ್ಲೇ ಮುಗಿದು ಹೋಯ್ತಪ್ಪಾ ಅಂತ ಮಾತನಾಡಿಕೊಳ್ಳುವವರೂ ಇದ್ದಾರೆ. 

Bengaluru Traffic ಅವ್ಯವಸ್ಥೆಗೆ ವರ್ಷಕ್ಕೆ 20,000 ಕೋಟಿ ನಷ್ಟ: ಬಯಲಾಯ್ತು ಶಾಕಿಂಗ್ ಅಧ್ಯಯನ

ಟ್ರಾಫಿಕ್‌ ಜಾಮ್‌ ​ನಲ್ಲೇ ತರಕಾರಿ ಸಿಪ್ಪೆ ಸುಲಿದ ಮಹಿಳೆ
ಟ್ರಾಫಿಕ್ ಜಾಮ್ ಆದಾಗ ಯಾರಿಗೂ ಏನೂ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಇಂಥಾ ಸಂದರ್ಭದಲ್ಲಿ ಸಮಯವನ್ನು ಸದುಪಯೋಗ ಮಾಡಿಕೊಳ್ಳುವವರೂ ಇದ್ದಾರೆ. ಈ ಹಿಂದೆ ಟೆಕ್ಕಿಯೊಬ್ಬ ಕಿಕ್ಕಿರಿದ ಟ್ರಾಫಿಕ್‌ನಲ್ಲಿ ಬೈಕ್‌ನಲ್ಲಿ ಕುಳಿತು ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವ ವಿಡಿಯೋ ವೈರಲ್ ಆಗಿತ್ತು. ಆ ನಂತರ ಬಿಎಂಟಿಸಿ ಡ್ರೈವರ್ ಲಂಚ್‌ಬಾಕ್ಸ್‌ನಿಂದ ಊಟ ಮಾಡೋ ಫೋಟೋ ಸಹ ವೈರಲ್ ಆಗಿತ್ತು. ಸದ್ಯ ಟ್ರಾಫಿಕ್‌ ಜಾಮ್‌ ​ನಲ್ಲೇ ತರಕಾರಿ ಸಿಪ್ಪೆ ಸುಲಿದ ಮಹಿಳೆಯ ಫೋಟೋ ವೈರಲ್ ಆಗಿದೆ.

ಎಕ್ಸ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಪ್ರಿಯಾ ಹೆಸರಿನ ಬಳಕೆದಾರರು ಕಾರಿನ ಸೀಟಿನಲ್ಲಿ ಇರಿಸಲಾದ ಸಿಪ್ಪೆ ಸುಲಿದ ಬಟಾಣಿಯ (Green peas) ಫೋಟೋವನ್ನು ಅಪ್‌ಲೋಡ್ ಮಾಡಿದ್ದಾರೆ. 'ಟ್ರಾಫಿಕ್ ಜಾಮ್ ಆದಾಗ ಸಮಯದ ಸದುಪಯೋಗ' ಎಂದು ಈ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.ಪ್ರಿಯಾ ಅವರು ಫೋಟೋವನ್ನು ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ (Social media) ಭಾರೀ ವೈರಲ್​ ಆಗಿದ್ದು, ಸುಮಾರು 50,000 ವೀವ್ಸ್ ಗಳಿಸಿದೆ. ಸುಮಾರು 100 ಕಾಮೆಂಟ್​​​​ಗಳು ಬಂದಿವೆ. ನೆಟ್ಟಿಗರು ಈ ಪೋಸ್ಟ್‌ಗೆ ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.

ಬೆಂಗಳೂರು: ಟ್ರಾಫಿಕ್‌ ರೂಲ್ಸ್‌ ಉಲ್ಲಂಘಿಸಿದ್ರೆ ಕಾದಿದೆ ಬಿಗ್‌ ಶಾಕ್!

ಪೋಸ್ಟ್ ವೈರಲ್‌, ನೆಟ್ಟಿಗರಿಂದ ನಾನಾ ರೀತಿಯ ಕಾಮೆಂಟ್
ಒಬ್ಬ ಬಳಕೆದಾರರು,  'ಬೆಂಗಳೂರಿನ ದಟ್ಟಣೆಯ ಟ್ರಾಫಿಕ್​​ ಪ್ರಯಾಣಿಸುವಾಗ ಕಲಿಯುವುದು, ಸಾಧಿಸುವುದು ಮತ್ತು ಬೆಳೆಯಲು ತುಂಬಾ ಇದೆ' ಎಂದು ಕಾಮೆಂಟ್​​​​ ಮಾಡಿದ್ದಾರೆ. ಮತ್ತೊಬ್ಬರು, 'ಇದನ್ನು ನನ್ನ ಬಾಸ್‌ಗೆ ಕಳುಹಿಸುತ್ತಿದ್ದೇನೆ' ಎಂದಿದ್ದಾರೆ. ಮತ್ತೊಬ್ಬರು ಪ್ರಿಯಾ ಅವರನ್ನು ಸಮಯವನ್ನು ಬಳಸಿಕೊಂಡಿದ್ದಕ್ಕಾಗಿ ಶ್ಲಾಘಿಸಿದರು. ಇನ್ನೊಬ್ಬರು, 'ಮೊಬೈಲ್ ಹೈಡ್ರೋಪೋನಿಕ್ಸ್ ಫಾರ್ಮ್‌ಗಳ ಕಲ್ಪನೆಯೊಂದಿಗೆ ಸ್ಟಾರ್ಟಪ್ ಬಂದರೆ ನನಗೆ ಆಶ್ಚರ್ಯವಾಗುವುದಿಲ್ಲ. ಬೆಂಗಳೂರಿನ ಟ್ರಾಫಿಕ್ ಮಧ್ಯೆ ಸಿಲ್ಕ್‌ಬೋರ್ಡ್‌ನಿಂದ ವಾಹನ ಇಂದಿರಾನಗರ ತಲುಪುತ್ತಿದ್ದಂತೆ ಗಿಡಗಳು ಬೆಳೆಯುತ್ತವೆ' ಎಂದು ಕಾಮೆಂಟ್ ಮಾಡಿದ್ದಾರೆ. 

ಮುಂಬೈ ರೈಲು ಚಟುವಟಿಕೆಗಳು ಅಂತಿಮವಾಗಿ ಬೆಂಗಳೂರಿಗೆ ಬಂದಿದ್ದು, ಇದು ಬೆಂಗಳೂರಿನ ಟ್ರಾಫಿಕ್​ಗೆ ಸಂಪೂರ್ಣ ಅರ್ಥವನ್ನು ನೀಡುತ್ತದೆ ಎಂದು ಬಳಕೆದಾರರು ಬರೆದಿದ್ದಾರೆ.  'ಸಮಯದ ಉಳಿತಾಯ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮುಂಬೈನ ಸ್ಥಳೀಯ ರೈಲುಗಳಲ್ಲಿ ಪ್ರಯಾಣದ ಸಮಯದಲ್ಲಿ ತರಕಾರಿಗಳ ಸಿಪ್ಪೆ ಸುಲಿಯುವುದು ಸಾಮಾನ್ಯ ಅಭ್ಯಾಸವಾಗಿದೆ' ಎಂದು ಮತ್ತೋರ್ವ ಬಳಕೆದಾರರು ತಿಳಿಸಿದ್ದಾರೆ. ಅಂದಹಾಗೆ ವರದಿಯೊಂದರ ಪ್ರಕಾರ ವಿಶ್ವದಲ್ಲೇ ಅತಿ ಹೆಚ್ಚು ವಾಹನ ದಟ್ಟಣೆ ಇರುವುದು ಲಂಡನ್​​ನಲ್ಲಾದರೆ, ಅದರ ನಂತರದ ಸ್ಥಾನವನ್ನು ಬೆಂಗಳೂರು ಪಡೆದುಕೊಂಡಿದೆ ಎನ್ನಲಾಗುತ್ತಿದೆ. 
 

Follow Us:
Download App:
  • android
  • ios