Bengaluru Traffic ಅವ್ಯವಸ್ಥೆಗೆ ವರ್ಷಕ್ಕೆ 20,000 ಕೋಟಿ ನಷ್ಟ: ಬಯಲಾಯ್ತು ಶಾಕಿಂಗ್ ಅಧ್ಯಯನ
ಬೆಂಗಳೂರು ನಗರದ ಸಂಚಾರ ವಿಳಂಬ, ದಟ್ಟಣೆ, ಸಿಗ್ನಲ್ ಸ್ಥಗಿತ, ಸಮಯ ನಷ್ಟ, ಇಂಧನ ನಷ್ಟ ಮತ್ತು ಸಂಬಂಧಿತ ಅಂಶಗಳಿಂದ ವರ್ಷಕ್ಕೆ 19,725 ಕೋಟಿ ರೂ. ನಷ್ಟ ಅನುಭವಿಸಿದೆ ಎಂದು ಅಧ್ಯಯನ ಬಹಿರಂಗಪಡಿಸಿದೆ.
ಬೆಂಗಳೂರು (ಆಗಸ್ಟ್ 7, 2023): ಬೆಂಗಳೂರು ಅಂದ್ರೆ ನೆನಪಾಗೋದು ಐಟಿ ಸಿಟಿ, ಭಾರತದ ಸಿಲಿಕಾನ್ ಸಿಟಿ. ಅದನ್ನು ಬಿಟ್ರೆ ಇಲ್ಲಿನ ಕುಖ್ಯಾತ ಟ್ರಾಫಿಕ್, ಇದು ಜಗತ್ತಿನಾದ್ಯಂತ ಹೆಸರುವಾಸಿಯಾಗಿದೆ. ಇದೀಗ ಹೊಸ ವರದಿಯೊಂದು ಬಹಿರಂಗಪಡಿಸಿರೋದು ಏನೆಂದರೆ, ಸಿಲಿಕಾನ್ ಸಿಟಿಯ ಟ್ರಾಫಿಕ್‌ನಿಂದ ವರ್ಷಕ್ಕೆ 20 ಸಾವಿರ ಕೋಟಿ ರೂ. ನಷ್ಟವಾಗ್ತಿದೆ.
ಹೌದು, ಬೆಂಗಳೂರು ನಗರದ ಸಂಚಾರ ವಿಳಂಬ, ದಟ್ಟಣೆ, ಸಿಗ್ನಲ್ ಸ್ಥಗಿತ, ಸಮಯ ನಷ್ಟ, ಇಂಧನ ನಷ್ಟ ಮತ್ತು ಸಂಬಂಧಿತ ಅಂಶಗಳಿಂದ ವರ್ಷಕ್ಕೆ 19,725 ಕೋಟಿ ರೂ. ನಷ್ಟ ಅನುಭವಿಸಿದೆ ಎಂದು ಅಧ್ಯಯನ ಬಹಿರಂಗಪಡಿಸಿದೆ. ಸಂಚಾರ ತಜ್ಞ ಎಂ.ಎನ್. ಶ್ರೀಹರಿ ಮತ್ತು ಅವರ ತಂಡ ನಡೆಸಿದ ಅಧ್ಯಯನವು ರಸ್ತೆ ಯೋಜನೆ, ಮೇಲ್ಸೇತುವೆ, ಸಂಚಾರ ನಿರ್ವಹಣೆ ಮತ್ತು ಮೂಲಸೌಕರ್ಯ ಕೊರತೆಯ ಸುತ್ತಲಿನ ಸಮಸ್ಯೆಗಳನ್ನು ಪರಿಶೀಲಿಸಿದೆ.
ಇದನ್ನು ಓದಿ: ಆದಾಯ ತೆರಿಗೆ ರೀಫಂಡ್‌ಗೆ ಕಾಯ್ತಿದ್ದೀರಾ..? ನಿಮಗೂ ಈ ರೀತಿ ಸಂದೇಶ ಬರ್ಬೋದು ಎಚ್ಚರ!
ನಗರದಲ್ಲಿ 60 ಸಂಪೂರ್ಣ ಕಾರ್ಯನಿರ್ವಹಣೆಯ ಮೇಲ್ಸೇತುವೆಗಳಿದ್ದರೂ, ವಿಳಂಬ, ದಟ್ಟಣೆ, ಸಿಗ್ನಲ್‌ಗಳಲ್ಲಿ ನಿಲುಗಡೆ, ವೇಗವಾಗಿ ಚಲಿಸುವ ವಾಹನಗಳ ಅಡಚಣೆ, ಇಂಧನ ನಷ್ಟ, ಉದ್ಯೋಗಿಗಳ ಸಮಯದ ನಷ್ಟ, ವಾಹನದ ಸಮಯದ ನಷ್ಟವನ್ನು ಸಂಬಳದ ಆಧಾರದ ಮೇಲೆ ಹಣವಾಗಿ ಪರಿವರ್ತಿಸಿದಾಗ ಹಾಗೂ ಮತ್ತಷ್ಟು ಕಾರಣದಿಂದ ರಸ್ತೆ ಬಳಕೆದಾರರಿಗೆ 19,725 ಕೋಟಿ ರೂ. ನಷ್ಟವಾಗಿದೆ ಎಂದು ಈ ಅಧ್ಯಯನ ಹೇಳುತ್ತದೆ. ವರದಿಗಳು ಹೇಳುವಂತೆ ಐಟಿ ವಲಯದಲ್ಲಿ ಹೆಚ್ಚಿದ ಉದ್ಯೋಗದ ಬೆಳವಣಿಗೆಯು ವಸತಿ, ಶಿಕ್ಷಣದಂತಹ ಎಲ್ಲ ಸಂಬಂಧಿತ ಸೌಲಭ್ಯಗಳ ಅಭಿವೃದ್ಧಿಗೆ ಕಾರಣವಾಗಿದೆ ಎಂದು ಹೇಳುತ್ತದೆ. ಇದು 1.45 ಕೋಟಿ ಜನಸಂಖ್ಯೆಯ ಅಸಾಧಾರಣ ಬೆಳವಣಿಗೆಗೆ ಮತ್ತು 1.5 ಕೋಟಿಗೆ ಹತ್ತಿರವಿರುವ ವಾಹನ ಜನಸಂಖ್ಯೆಗೆ ಕಾರಣವಾಗಿದೆ.
ಬೆಂಗಳೂರು 88 ಚದರ ಕಿಲೋಮೀಟರ್‌ನಿಂದ 2023 ರಲ್ಲಿ 985 ಚದರ ಕಿಲೋಮೀಟರ್‌ಗೆ ವಿಸ್ತರಿಸಿದೆ. ಹಾಗೂ, ನಗರವನ್ನು 1,100 ಚದರ ಕಿಲೋಮೀಟರ್‌ಗೆ ವಿಸ್ತರಿಸಬೇಕು ಎಂದು ಅಧ್ಯಯನವು ಪ್ರಸ್ತಾಪಿಸಿದೆ. "ಮತ್ತೊಂದೆಡೆ, ರಸ್ತೆಯ ಉದ್ದದ ಬೆಳವಣಿಗೆಯು ವಾಹನದ ಬೆಳವಣಿಗೆ ಮತ್ತು ಪ್ರದೇಶದ ಬೆಳವಣಿಗೆಗೆ ಅನುಗುಣವಾಗಿಲ್ಲ. ರಸ್ತೆಯ ಒಟ್ಟು ಉದ್ದವು ಸುಮಾರು 11,000 ಕಿಲೋಮೀಟರ್‌ಗಳಷ್ಟಿದ್ದು, ನಮ್ಮ ಸಾರಿಗೆ ಬೇಡಿಕೆಗಳನ್ನು ಪೂರೈಸಲು ಇದು ಸಾಕಾಗುವುದಿಲ್ಲ" ಎಂದು ವರದಿ ಹೇಳಿದೆ.
ಇದನ್ನೂ ಓದಿ: ಭೂಮಿ ತಾಯಿಗಿಲ್ಲಿ ಬಂಗಾರಕ್ಕೂ ಅಧಿಕ ಬೆಲೆ: ಎಕರೆಗೆ 100 ಕೋಟಿ ರೂ. ಗೆ ಮಾರಾಟ!
"ಜನಸಂಖ್ಯೆಯ ಘಾತೀಯ ಬೆಳವಣಿಗೆ ಮತ್ತು ಅವರ ಉದ್ಯೋಗ ಸಾಮರ್ಥ್ಯದ ವೇಗವು ಅಸ್ತಿತ್ವದಲ್ಲಿರುವ ಮೂಲಸೌಕರ್ಯ ಬೆಳವಣಿಗೆಯೊಂದಿಗೆ ಹೊಂದಿಕೆಯಾಗುವುದಿಲ್ಲ. ಅಂತರದ ಕೊರತೆಯು ವಿಳಂಬ, ದಟ್ಟಣೆ, ಹೆಚ್ಚಿನ ಪ್ರಯಾಣದ ಸಮಯ ಮತ್ತು ನೇರ ಹಾಗೂ ಪರೋಕ್ಷ ವೆಚ್ಚದ ವಿಷಯದಲ್ಲಿ ಭಾರಿ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ" ಎಂದು ಶ್ರೀಹರಿ ಮತ್ತು ಅವರ ತಂಡ ಹೇಳಿದೆ.
ನಗರಕ್ಕೆ ರೇಡಿಯಲ್ ರಸ್ತೆಗಳು, ವರ್ತುಲ ರಸ್ತೆಗಳು, ಔಟರ್ ರಿಂಗ್ ರಸ್ತೆ (ORR), ಪೆರಿಫೆರಲ್ ರಿಂಗ್ ರಸ್ತೆ) PRR ಮತ್ತು (ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ) STRR ಅನ್ನು ಒಳಗೊಂಡಿರುವ ನಿರ್ದಿಷ್ಟ ರಿಂಗ್‌ಗಳ ಅಗತ್ಯವಿದೆ ಎಂದು ಶ್ರೀಹರಿ ಹೇಳಿದರು, ಹಾಗೆಯೇ ಪ್ರತಿ 5 ಕಿ.ಮೀ.ಗೆ ಒಂದು ವೃತ್ತಾಕಾರದ ಮಾರ್ಗವನ್ನು ರೇಡಿಯಲ್ ರಸ್ತೆಗಳಿಂದ ಸಂಪರ್ಕಿಸಿಬೇಕು. STRR ಅನ್ನು ಬಹಳ ಹಿಂದೆಯೇ ಯೋಜಿಸಲಾಗಿದ್ದರೂ, ಭೂಸ್ವಾಧೀನ ಸಮಸ್ಯೆಗಳಿಂದಾಗಿ, ನಿರ್ಮಾಣ ಮತ್ತು ನಿರ್ವಹಣಾ ವೆಚ್ಚದಲ್ಲಿ ಏರಿಕೆ ಕಂಡುಬಂದಿದೆ.
ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ಶೀಘ್ರದಲ್ಲೇ 1 ಕೋಟಿಗೂ ಹೆಚ್ಚು ಉದ್ಯೋಗಿಗಳಿಗೆ ತುಟ್ಟಿಭತ್ಯೆ ಹೆಚ್ಚಳ!
ಇನ್ನು, ಮುಂದಿನ 25 ವರ್ಷಗಳವರೆಗೆ ರಸ್ತೆ ಸಂಚಾರವನ್ನು ಪೂರೈಸಲು ಹೆಚ್ಚಿನ ಅಂಡರ್‌ಗ್ರೌಂಡ್ ರಸ್ತೆ ವ್ಯವಸ್ಥೆಗಳನ್ನು ತಜ್ಞರು ಸೂಚಿಸಿದ್ದಾರೆ. ಮೆಟ್ರೋಗಳಿಗೆ ಮತ್ತು ಸರ್ಕಾರಿ ಬಸ್‌ಗಳಿಗೆ ಅಂಡರ್‌ಗ್ರೌಂಡ್ ಸಾರಿಗೆಯನ್ನು ಸರ್ಕಾರ ಅನ್ವೇಷಿಸಬೇಕಾಗಿದೆ ಎಂದು ಅಧ್ಯಯನವು ಹೇಳುತ್ತದೆ.ಸಂಚಾರಕ್ಕೆ ಮತ್ತು ಫುಟ್‌ಪಾತ್‌ಗಳು ಕಾನೂನುಬದ್ಧವಾಗಿ ಪಾದಚಾರಿಗಳ ನಡಿಗೆಗೆ ಮೀಸಲಾಗಿರುವುದರಿಂದ ಸರ್ಕಾರವು ರಸ್ತೆ ಬದಿಯ ಪಾರ್ಕಿಂಗ್ ಅನ್ನು ತೆಗೆದುಹಾಕಬೇಕು ಎಂದೂ ಅಧ್ಯಯನ ಹೇಳಿದೆ.
ತಂಡವು ಮೆಟ್ರೋ, ಮೋನೋರೈಲ್ ಮತ್ತು ಹೆಚ್ಚಿನ ಸಾಮರ್ಥ್ಯದ ಬಸ್‌ಗಳಂತಹ ಸಮೂಹ ಸಾರಿಗೆಯನ್ನು ಹೆಚ್ಚಿಸಲು ಶಿಫಾರಸು ಮಾಡಿದೆ ಮತ್ತು ಖಾಸಗಿ ಸಾರಿಗೆ ವ್ಯವಸ್ಥೆಯನ್ನು ವಿರೋಧಿಸಿದೆ. VMS [ವೇರಿಯಬಲ್ ಮೆಸೇಜ್ ಸಿಸ್ಟಮ್] ಬಳಸುವ ರಸ್ತೆ ಬಳಕೆದಾರರಿಗೆ ಮಾಹಿತಿಯೊಂದಿಗೆ ಕೃತಕ ಬುದ್ಧಿಮತ್ತೆ ಮತ್ತು ರೋಬೋಟಿಕ್ಸ್ ಪರಿಚಯವನ್ನು ಸಹ ಶಿಫಾರಸು ಮಾಡಲಾಗಿದೆ.