Asianet Suvarna News Asianet Suvarna News

Padmashri Pappammal: ಪದ್ಮಶ್ರೀ ಪಡೆದ 107 ವರ್ಷದ ಸೆಲೆಬ್ರಿಟಿ ಅಜ್ಜಿ ತಮ್ಮ ಬದುಕಿನ ಕತೆ ಹೇಳಿದಾಗ...

ತಮಿಳುನಾಡಿನ ಕೊಯಮತ್ತೂರಿನ ಅಜ್ಜಿ ಪಾಪಮ್ಮಾಳ್‌ ಅವರ ಬದುಕಿನ ಕತೆ ತುಂಬಾ ಇಂಟರೆಸ್ಟಿಂಗ್ ಆಗಿದೆ. ಪದ್ಮಶ್ರೀ ಪ್ರಶಸ್ತಿ ಪಡೆದುದು ಅದರ ಲೇಟೆಸ್ಟ್ ಎಪಿಸೋಡ್ ಅಷ್ಟೇ.

 

 

Padmashri awardee 107 years old grandmas inspiring story
Author
Bengaluru, First Published Jan 23, 2022, 5:55 PM IST

ನಂಗೆ ಈಗ 107 ವರ್ಷ (Centenarian) . ಆದರೆ ನಾನು ಮಾಡಲಾಗದ ಕೆಲಸ ಅಂತ ಯಾವುದೂ ಇಲ್ಲ! ನಾನು ಮುಂಜಾನೆ 3 ಗಂಟೆಗೆ ಏಳ್ತೀನಿ. ಎಲ್ಲ ಕೆಲಸದವರು ಬರೋಕೆ ಮುನ್ನ ನನ್ನ ತೋಟಕ್ಕೆ ಹೋಗ್ತೀನಿ. ಇಡೀ ದಿನ ಅಲ್ಲಿ ಕೆಲಸ ಮಾಡ್ತೀನಿ. ನಂತರ ಅಲ್ಲಿ ಬೆಳೆದುದನ್ನು ತೆಗೆದುಕೊಂಡು ಮಾರಾಟಕ್ಕೆ ಹೋಗ್ತೀನಿ. ಅದೂ ಸೈಕಲ್ (Cycle)  ತುಳಿದುಕೊಂಡು. ನಾನು ಹುಟ್ಟಿ ಬೆಳೀತಾ ಇದ್ದ ಕಾಲಕ್ಕೆ ಸರಿಯಾದ ಸ್ಕೂಲುಗಳು ಇರಲಿಲ್ಲ. ಹೀಗಾಗಿ ನಾನು ಕಲಿತದ್ದೆಲ್ಲ ಸ್ವಂತ. ನನಗೆ ಮದುವೆಯಾದಾಗ ಇನ್ನೂ 14 ವರ್ಷ. ನನಗೆ ನನ್ನ ಅಪ್ಪನ ತೋಟ ಅವರ ನಂತರ ಬಂತು.

ಆಗಿನ ಕಾಲದಲ್ಲಿ ಮದುವೆಯಾದ ಹೆಣ್ಣು (Married) ಮಕ್ಕಳು ಮನೆಯೊಳಗೇ ಇರಬೇಕಾಗಿತ್ತು. ಆದರೆ ನಾನು ಮನೆಯೊಳಗೆ ಕೂರುವವಳಲ್ಲ. 16ನೇ ವಯಸ್ಸಿನಲ್ಲಿ ನನ್ನ ಪ್ರಥಮ ಸಾಹಸ ಆರಂಭಿಸಿದೆ. ಆಗ ನಾನು ಒಂದು ಇಡ್ಲಿ- ವಡಾ ಅಂಗಡಿ ಆರಂಭಿಸಿದೆ. ಅದು 1950ನೇ ಇಸವಿ. ಆಗ ನಾನು ತಿಂಗಳಿಗೆ 20 ರೂಪಾಯಿ ದುಡಿಯುತ್ತಿದ್ದೆ.

Sleep Tips: ನೀವೆಷ್ಟು ಗಂಟೆ ನಿದ್ದೆ ಮಾಡಬೇಕು ಅಂದ್ರೆ..

ನನಗೂ ಗಂಡನಿಗೂ ಮಕ್ಕಳಾಗಲಿಲ್ಲ. ಹೀಗಾಗಿ ನಾವು ದತ್ತು (Adopt) ತೆಗೆದುಕೊಂಡೆವು. ವರ್ಷಗಳು ಕಳೆದವು. ನಮ್ಮ ಮಗ ದೊಡ್ಡವನಾದ. ನಾನು ಇನ್ನೂ ಹೆಚ್ಚಿನ ಕೆಲಸ ಮಾಡಬಹುದು ಅನಿಸಿತು. ಚುನಾವಣೆಗೆ ನಿಂತು ನನ್ನ ಊರಿನ ಸರಪಂಚ ಆದೆ. ನಂತರ ತುಂಬಾ ಸುತ್ತಾಡಿದೆ, ರೈತರ ಹೊಲಗಳಿಗೆಲ್ಲ ಹೋದೆ. ಆಗ ನನಗೆ ಸಾವಯವ ಕೃಷಿಯ (Organic Farming) ಬಗ್ಗೆ ತಿಳಿಯಿತು. ತುಂಬಾ ಆಸಕ್ತಿ ಮೂಡಿತು. ನನ್ನ 50ರ ಪ್ರಾಯದಲ್ಲಿ, ನನ್ನ ಎಲ್ಲಾ ಉಳಿತಾಯದ (Savings) ಹಣವನ್ನು ಹೂಡಿ 10 ಎಕರೆ ಜಾಗ ತೆಗೆದುಕೊಂಡೆ. ನನ್ನದೇ ರೀತಿಯಲ್ಲಿ ಕೃಷಿ ಮಾಡತೊಡಗಿದೆ. ನಾನೇನೂ ಹೆಚ್ಚಿಗೆ ಬೆಳೆಯುತ್ತಿರಲಿಲ್ಲ. ಆದರೆ ಬೆಳೆದುದರಲ್ಲಿ ಸಂತೃಪ್ತಳಾಗಿದ್ದೆ. ನನ್ನ ಕುಟುಂಬಕ್ಕೆ ಬೇಕಾದಷ್ಟು ಬೆಳೆಯುತ್ತದ್ದೆ, ಉಳಿದುದನ್ನು ದಾನವಾಗಿ ಕೊಡುತ್ತಿದ್ದೆ. 57 ವರ್ಷಗಳ ನಂತರವೂ ಅದೇ ನನ್ನ ಅಭ್ಯಾಸವಾಗಿ ಉಳಿದಿದೆ. ಆದರೆ ಈಗ ನನ್ನ ಕೆಲಸ ಸ್ವಲ್ಪ ಹೆಚ್ಚಾಗಿದೆ. ಯಾಕಂತೀರಾ? ನನ್ನ ನಂತರದ ತಲೆಮಾರಿನವರು ಸೋಮಾರಿಗಳಾಗಿದ್ದಾರೆ. ಅವರನ್ನು ನಿರಂತರ ಕೆಲಸ ಮಾಡಿಸಬೇಕಾಗುತ್ತದೆ! ನನ್ನ ದೊಡ್ಡ ಮೊಮ್ಮಗ ಪ್ರತೀ ಅರ್ಧ ಗಂಟೆಗೊಮ್ಮೆ ರೆಸ್ಟ್ ತೆಗೆದುಕೊಳ್ಳುತ್ತಾನೆ. 'ಏಳು ಸೋಮಾರಿ ಹುಡುಗ' ಅಂತ ನಾನು ಅವನನ್ನು ಎಬ್ಬಿಸಬೇಕಾಗುತ್ತದೆ!

ಮಗಳ ಮಗುವನ್ನೇ ಹೆತ್ತುಕೊಟ್ಟ ತಾಯಿ..! ಇದು ಭಾರತದ ಮೊದಲ ಬಾಡಿಗೆ ತಾಯ್ತನದ ಕಥೆ

ಈ ಇಷ್ಟೂ ವರ್ಷಗಳಲ್ಲಿ ನಾನು ಒಂದು ದಿನವೂ ಕಾಯಕ ತಪ್ಪಿಸಿಲ್ಲ. 100 ವರ್ಷದ (Century) ಬಳಿಕ ನಾನು ಇಡೀ ಪಟ್ಟಣದಲ್ಲಿ ಹೆಸರುವಾಸಿಯಾದೆ. 100ನೇ ವರ್ಷದ ಸಮಾರಂಭ ಮಾಡಿದರು. 3000 ಗ್ರಾಮಸ್ಥರು ಸೇರಿದರು. ನಾನು ಅವರಿಗೆಲ್ಲ ಚಿಕನ್ ಬಿರಿಯಾನಿ (Chicken Biriyani) ಮಾಡಿ ಬಡಿಸಿದೆ. ನಂತರ ನಾವು ಜನಪದ (Folk) ಹಾಡು ಕುಣಿತ ಮಾಡಿದೆವು. ಜನ ಅವರ ಮದುವೆಗೆ ನನ್ನನ್ನು ಕರೆಯಲು, ಆಶೀರ್ವಾದ ಪಡೆಯಲು ಶುರು ಮಾಡಿದರು. ನಾನು ಅದೃಷ್ಟದ ವ್ಯಕ್ತಿ ಎಂಬ ನಂಬಿಕೆ ಹೇಗೋ ಹುಟ್ಟಿಕೊಂಡಿದೆ.

ಇದೀಗ ಇಷ್ಟು ವರ್ಷಗಳ ನಂತರ, ನಾನು ನೋಡದ ಜೀವನವೇ ಇಲ್ಲ ಅಲ್ವಾ? ಹಾಗಂತ ಅಂದುಕೊಂಡಿದ್ದೆ. ಆದರೆ ಜೀವನ ನನಗೆ ಸರ್‌ಪ್ರೈಸ್ ಕೊಡ್ತಾನೇ ಬಂದಿದೆ. ಎರಡು ವಾರಗಳ ಹಿಂದೆ ನಂಗೆ ದಿಲ್ಲಿಯಿಂದ ಫೋನ್‌ ಬಂತು. ನಂಗೆ ಪದ್ಮಶ್ರೀ (Padmashri Award) ಪ್ರಶಸ್ತಿ ಬಂದಿದೆ ಅಂತ! ಇಂದೀಗ ನೂರಾರು ಮಂದಿ ನನ್ನನ್ನು ನೋಡೋಕೆ ನನ್ನ ಮನೆ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ನಿನ್ನೆ ತಾನೇ ಒಂದೇ ದಿನ 30 ಇಂಟರ್‌ವ್ಯೂ ನೀಡಿದೆ. ತುಂಬಾ ಮಂದಿ ನನ್ನ ಜೊತೆ ನಗುನಗುತ್ತಾ ಪೋಟೋ ಪೋಸ್ ತೆಗೆದುಕೊಳ್ತಾರೆ. ನನಗೆ ಇದೆಲ್ಲ ತಮಾಷೆ ಅನ್ನಿಸುತ್ತದೆ. ನನ್ನ ಮೊಮ್ಮಗ "ನೀನು ಸೆಲೆಬ್ರಿಟಿಯಾಗಿಬಿಟ್ಟೆ'' ಅಂತಾನೆ. ನಾನು ನಕ್ಕು ಹೇಳ್ತೀನಿ, ''ಅರೇ, ನಾನು ಯಾವಾಗ ಸೆಲೆಬ್ರಿಟಿ (Celebrity) ಆಗಿರ್ಲಿಲ್ಲ ಹೇಳು!'' ಅಲ್ವಾ?

ವಿಮಾನದಲ್ಲಿ ಏಕಾಂಗಿಯಾಗಿ ಇಡೀ ಪ್ರಪಂಚ ಸುತ್ತಿದ್ದ 19ರ ಮಹಿಳಾ ಪೈಲಟ್‌

Follow Us:
Download App:
  • android
  • ios