Asianet Suvarna News Asianet Suvarna News

Sleep Tips: ನೀವೆಷ್ಟು ಗಂಟೆ ನಿದ್ದೆ ಮಾಡಬೇಕು ಅಂದ್ರೆ..

ನೀವು ಪ್ರತಿ ದಿನ ಎಷ್ಟು ಗಂಟೆ ನಿದ್ದೆ ಮಾಡುತ್ತಿದ್ದೀರಾ? ದೇಹಕ್ಕೆ ಕಡಿಮೆ ನಿದ್ರೆಯು ಒಳ್ಳೆಯದಲ್ಲ, ಹಾಗೆಯೇ ಅತಿಯಾದ ನಿದ್ದೆಯೂ ಕೂಡ ಒಂದು ಕಾಯಿಲೆ. ನೀವು ಎಷ್ಟು ಗಂಟೆ ನಿದ್ರಿಸುತ್ತಿದ್ದೀರ ಎಂಬ ಆಧಾರದ ಮೇಲೆ ನಿಮ್ಮ ದೇಹದ ಆರೋಗ್ಯ ನಿಂತಿದೆ.
 

Your sleep good or bad
Author
Bangalore, First Published Jan 23, 2022, 12:11 PM IST

ಕೆಲವರಿಗೆ ರಾತ್ರಿ ನಿದ್ದೆಯೇ ಬರುವುದಿಲ್ಲ, ಇನ್ನೂ ಕೆಲವರಿಗೆ ಎಷ್ಟು ನಿದ್ರೆ ಮಾಡಿದರೂ ಮುಗಿಯುವುದೇ ಇಲ್ಲ. ಕೆಲವರು ನಿದ್ದೆಯಲ್ಲಿ ಮಾತನಾಡಿದರೆ ಇನ್ನೂ ಕೆಲವರು ಗೊರಕೆ ಹೊಡೆಯುತ್ತಾರೆ. ಇನ್ನು ಯುವಜನರು ಬಹಳ ಕಡಿಮೆ ನಿದ್ರೆ ಮಾಡುತ್ತಾರೆ. ನಿದ್ದೆ ಹಾಗೂ ಗೊರಕೆ (Snoring) ಹೊಡೆಯುವುದರ  ಬಗ್ಗೆ ಜನರಲ್ಲಿ ಹಲವಾರು ಅನುಮಾನಗಳಿರುತ್ತವೆ. ಎಷ್ಟು ಹೊತ್ತು ಮಲಗಬೇಕು, ನಿದ್ರೆ ಕಡಿಮೆಯಾದರೆ ಏನಾಗುತ್ತದೆ ಇತ್ಯಾದಿ. ಈ ಬಗ್ಗೆ ಸಂಪೂರ್ಣ ವಿವರ ನಾವು ಕೊಡುತ್ತೇವೆ. 

ಜನರು ಸಾಮಾನ್ಯವಾಗಿ ನಿದ್ರೆಗೆ (Sleeping)  ಸಂಬಂಧ ಪಟ್ಟ ಕೆಲವೊಂದು ಊಹೆ ಅಥವಾ ಕಲ್ಪನೆಗಳನ್ನು ಹೊಂದಿರುತ್ತಾರೆ. ಆದರೆ ವಾಸ್ತವ ಏನು ನೋಡೋಣ. ಜನರ ಸಾಮಾನ್ಯ ನಂಬಿಕೆಗಳು ಹೀಗಿವೆ;

ವಯಸ್ಕರಿಗೆ (Adults) ಕಡಿಮೆ ನಿದ್ರೆ ಸಾಕಾಗುತ್ತದೆ.
ಇದು ತಪ್ಪು ಕಲ್ಪನೆ, ಪ್ರತಿಯೊಬ್ಬರಿಗೂ ಆರೋಗ್ಯಕರ ಜೀವನ ನಡೆಸಲು ಸಾಕಷ್ಟು ನಿದ್ರೆ ಬೇಕೇ ಬೇಕು. ಆದರೆ ವಯಸ್ಕರು ದಿನಕ್ಕೆ 5 ಗಂಟೆಗಳಷ್ಟು ಮಾತ್ರ ನಿದ್ರಿಸುತ್ತಾರೆ. ವಾಸ್ತವದಲ್ಲಿ 7 ರಿಂದ 10 ಗಂಟೆಗಳ ಕಾಲ ನಿದ್ರಿಸುವುದು ಅವಶ್ಯಕವಾಗಿರುತ್ತದೆ. ಆದರೆ ಕೆಲವು ಅಧ್ಯಯನಗಳ ಪ್ರಕಾರ ಸುಮಾರು 30 ಶೇಕಡದಷ್ಟು ವಯಸ್ಕರು 7 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಕಡಿಮೆ ನಿದ್ರೆ ಮಾಡುವುದರಿಂದ ಈಗ ವ್ಯತ್ಯಾಸ ತಿಳಿಯದೇ ಇರಬಹುದು. ಆದರೆ ಮುಂದೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಒಂದೊಂದು ದೇಹ ಪ್ರಕೃತಿಗೆ ಒಂದೊಂದು ರೀತಿಯ ಪರಿಣಾಮವನ್ನು ಬೀರುತ್ತದೆ.

Hearing Loss: ಶೀತದಿಂದ ಕಿವಿ ಕೆಪ್ಪಾದೀತು ಎಚ್ಚರ!

ಗೊರಕೆ ಹೊಡೆಯುವುದರಿಂದ ಯಾವುದೇ ಅಪಾಯವಿಲ್ಲ
ಗೊರಕೆ ಹೊಡೆಯುವುದರಿಂದ ಪ್ರಾರಂಭದಲ್ಲಿ ಯಾವುದೇ ಸಮಸ್ಯೆ ಕಾಣಿಸುವುದಿಲ್ಲ ಆದರೂ ತುಂಬಾ ದಿನಗಳ ತನಕ ಈ ಅಭ್ಯಾಸ ಮುಂದುವರೆದರೆ ಸ್ವಲ್ಪ  ಜಾಗರೂಕರಾಗಿ. ಏಕೆಂದರೆ ಇದು ಮೂಗಿನ ಉಸಿರಾಟಕ್ಕೆ ಸಂಬಂಧಪಟ್ಟ ತೊಂದರೆಯ ಲಕ್ಷಣವಾಗಿರಬಹುದು. ಹಾಗಾಗಿ ಬಹಳ ದಿನಗಳ ತನಕ ಗೊರಕೆಯನ್ನು ಕಡೆಗಣಿಸಿ ಸಮಸ್ಯೆ ಹೆಚ್ಚಿಸಿಕೊಳ್ಳಬೇಡಿ. ಇದರಿಂದಾಗಿ ಉಸಿರಾಟದ ಸಮಸ್ಯೆಗಳು ಶುರುವಾಗಿ ಬಿಡಬಹುದು.

ಮದ್ಯಪಾನ (Alcohol) ನಿದ್ರೆ ತರಿಸುತ್ತದೆ
ಮದ್ಯಪಾನ ಮಾಡಿದಾಗ ನಿದ್ರೆ ಬಂದಂತಾಗುವುದೇನೋ ನಿಜ. ಆದರೆ ಇದು ಆರೋಗ್ಯಕರ ನಿದ್ರೆ ಅಲ್ಲ. ಇಂತಹ ಅಭ್ಯಾಸವನ್ನು ಮುಂದುವರೆಸುವುದರಿಂದ ಸ್ವಲ್ಪ ವರ್ಷಗಳ ಬಳಿಕ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತದೆ. 

Psychology: ದಿಂಬನ್ನು ಅಪ್ಪಿಕೊಂಡು ಮಲಗುವವರ ವ್ಯಕ್ತಿತ್ವ ಇದು..

ಕೆಲವು ಜನರು ಎಲ್ಲಿ ಬೇಕಾದರೂ ನಿದ್ರಿಸಬಲ್ಲರು
ಕೆಲವು ಜನರು ಮಲಗಿದ ಕೂಡಲೇ ನಿದ್ರೆಗೆ ಜಾರಿ ಬಿಡುತ್ತಾರೆ, ಎಂತಹ ಗಲಾಟೆ ತುಂಬಿದ ವಾತಾವರಣವಾದರೂ ಆರಾಮವಾಗಿ ನಿದ್ರಿಸುತ್ತಾರೆ. ಯಾವಾಗ ಬೇಕಿದ್ದರೂ ನಿದ್ರಿಸುತ್ತಾರೆ ಅಂದರೆ ಅವರು ಬಹಳ ಆರೋಗ್ಯವಂತರು ಎಂಬ ಅರ್ಥವಲ್ಲ. ಅವರು ದಣಿದಿದ್ದಾರೆ ಹಾಗೂ ಬಿಡುವಿಲ್ಲದ ಜೀವನ ನಡೆಸುತ್ತಿದ್ದಾರೆ ಎಂದರ್ಥ. ಈ ರೀತಿಯ ಆರೋಗ್ಯ ಶೈಲಿ ಎಲ್ಲರಿಗೂ ಒಳ್ಳೆಯದಲ್ಲ.

ಕಡಿಮೆ ನಿದ್ರೆಗೆ ದೇಹ (Body) ಹೊಂದಿಕೊಳ್ಳುತ್ತದೆ
ನಿದ್ರೆ ಕಡಿಮೆ ಮಾಡುವುದರಿಂದ ಮಾನಸಿಕ ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ಸಂಶೋಧನೆಗಳು ತಿಳಿಸಿವೆ. ನಿದ್ರಾ ಹೀನತೆಯು ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ರಾತ್ರಿಯ ವೇಳೆಯಲ್ಲಿ ನಿದ್ರೆ ಕಡಿಮೆ ಮಾಡಿದರೆ ಹಗಲು ಹೊತ್ತಿನಲ್ಲಿ ನಿದ್ರೆ ಬರಲು ಶುರುವಾಗುತ್ತದೆ. ಕಡಿಮೆ ನಿದ್ರೆಗೆ ದೇಹ ಹೊಂದಿಕೊಳ್ಳುವುದಿಲ್ಲ. ಬದಲಿಗೆ ಅನಾರೋಗ್ಯ ಹೆಚ್ಚುತ್ತದೆ.

ಚೆನ್ನಾಗಿ ನಿದ್ರಿಸುವವರು ನಿದ್ರೆಯಲ್ಲಿ ಒದ್ದಾಡುವುದಿಲ್ಲ
ನಿದ್ದೆಯಲ್ಲಿ ಚಲಿಸುವುದು ಬಹಳ ಸಾಮಾನ್ಯ ವಿಷಯ. ಇದರಲ್ಲಿ ಸುಖ ನಿದ್ರೆ ಮಾಡುವವರು ಹೊರಳುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆದರೆ ನಿದ್ದೆ ಮಾಡುವಾಗ ಬಹಳ ಒದ್ದಾಡುತ್ತಾರೆ. ಜೊತೆಯಲ್ಲಿರುವವರಿಗೂ ತೊಂದರೆ ನೀಡುತ್ತಿದ್ದಾರೆ ಎಂದರೆ ಆಗ ಯೋಚಿಸುವ ಅಗತ್ಯವಿದೆ. ಯಾವುದಾದರೂ ಸಮಸ್ಯೆ ಅವರನ್ನು ಬಾಧಿಸುವ ಕಾರಣದಿಂದ ಹೀಗಾಡುತ್ತಿರಬಹುದು.

ಹೆಚ್ಚು ನಿದ್ರಿಸುವವರು ಆರೋಗ್ಯವಂತರು (Healthy)
ಹೇಗೆ ಕಡಿಮೆ ನಿದ್ರೆಯಿಂದ ತೊಂದರೆಗಳು ಕಾಣಿಸುತ್ತವೆಯೋ ಹಾಗೆಯೇ ಹೆಚ್ಚು ನಿದ್ರೆಯಿಂದ ಕೂಡ ಅಪಾಯಗಳಿವೆ. ತಡವಾಗಿ ಮಲಗುವುದು ಹಾಗೂ ತಡವಾಗಿ ಏಳುವುದು ಆರೋಗ್ಯ ಸಮಸ್ಯೆಯನ್ನು ತರಿಸಬಹುದು. ಹೆಚ್ಚು ನಿದ್ರೆ ಕೂಡ ಅನಾರೋಗ್ಯದ ಲಕ್ಷಣ.
 

Follow Us:
Download App:
  • android
  • ios