ಫೋಟೋ ನೋಡಿದ ತಕ್ಷಣ ನಿಮಗೇನ್ ಕಾಣ್ಸುತ್ತೆ, ಪುರುಷನ ಮುಖಾನ, ಮಹಿಳೆನಾ?
ಯಾವುದೇ ಒಂದು ವಿಷಯದ ಬಗ್ಗೆ ಮಾತನಾಡಲು ಹೊರಟಾಗ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅಭಿಪ್ರಾಯವಿರುತ್ತದೆ. ಅದೇ ರೀತಿ ಒಂದು ಫೋಟೋವನ್ನು ನೋಡುವಾಗಲೂ ಎಲ್ಲರಿಗೂ ಒಂದೇ ಚಿತ್ರ ಕಾಣಿಸಬೇಕೆಂದಿಲ್ಲ. ಇದನ್ನೇ ಆಪ್ಟಿಕಲ್ ಇಲ್ಯೂಷನ್ ಎಂದು ಹೇಳುತ್ತಾರೆ. ಈ ಫೋಟೋವನ್ನು ನೋಡಿದ ತಕ್ಷಣ ನಿಮಗೇನ್ ಕಾಣುತ್ತೆ ಹೇಳಿ. ಇದು ನೀವು ಓಪನ್ ಮೈಡೆಂಡಾ ಅಥವಾ ಸೀಕ್ರೆಟ್ ಮಾಡೋ ವ್ಯಕ್ತಿನಾ ಅನ್ನೋದನ್ನು ಹೇಳುತ್ತೆ.
ಇಂಟರ್‌ನೆಟ್‌ನ ವಿಶಾಲವಾದ ವಿಸ್ತಾರವು ತನ್ನೊಳಗೆ ಆಪ್ಟಿಕಲ್ ಭ್ರಮೆಗಳ ವಿಸ್ಮಯಕಾರಿ ಸಂಗ್ರಹವನ್ನು ಹೊಂದಿದೆ, ಅದು ನಮ್ಮನ್ನು ಬೆರಗುಗೊಳಿಸುವಲ್ಲಿ ಎಂದಿಗೂ ವಿಫಲವಾಗುವುದಿಲ್ಲ. ಈ ಭ್ರಮೆಗಳು, ಕೌಶಲ್ಯದಿಂದ ರಚಿಸಲ್ಪಟ್ಟಿವೆ, ನಮ್ಮ ಗ್ರಹಿಕೆಗಳನ್ನು ಕುಶಲತೆಯಿಂದ ನಿರ್ವಹಿಸುತ್ತವೆ ಮತ್ತು ವಾಸ್ತವದ ಮೇಲೆ ನಮ್ಮ ಗ್ರಹಿಕೆಗೆ ಸವಾಲು ಹಾಕುತ್ತವೆ. ಆಪ್ಟಿಕಲ್ ಇಲ್ಯೂಷನ್, ವ್ಯಕ್ತಿತ್ವದ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಸಹ ಬಹಿರಂಗಪಡಿಸಬಹುದು. ಆಪ್ಟಿಕಲ್ ಅದ್ಭುತಗಳ ಈ ಖಜಾನೆಯಲ್ಲಿ, ಒಂದು ನಿರ್ದಿಷ್ಟ ಭ್ರಮೆ ಇತ್ತೀಚೆಗೆ ಪ್ರಪಂಚದಾದ್ಯಂತದ ನೆಟಿಜನ್‌ಗಳ ಕಲ್ಪನೆಯನ್ನು ವಶಪಡಿಸಿಕೊಂಡಿದೆ. ಅದು ಪುರುಷ ಹಾಗೂ ಮಹಿಳೆಯಂತೆ ಕಾಣಿಸುತ್ತಿರೋ ಒಂದು ಫೋಟೋ. ಮೊದಲು ನಿಮಗೇನ್ ಕಾಣುತ್ತೆ ಅನ್ನೋದು ನಿಮ್ಮ ವ್ಯಕ್ತಿತ್ವ ನಿರ್ಧರಿಸುತ್ತೆ.
ಆಪ್ಟಿಕಲ್ ಇಲ್ಯೂಷನ್ ಸ್ಪೆಷಲಿಸ್ಟ್ ಮಿಯಾ ಯಿಲಿನ್ ಅವರು ಟಿಕ್‌ಟಾಕ್‌ನಲ್ಲಿನ ವೀಡಿಯೊದಲ್ಲಿ ಹಂಚಿಕೊಂಡಿರುವ ಅಸಾಮಾನ್ಯ ಕಲಾಕೃತಿ ಇಲ್ಲಿದೆ. ಈ ಆಪ್ಟಿಕಲ್ ಭ್ರಮೆಯ ಮೂಲಕ ನೀವು ನಿಮ್ಮ ವ್ಯಕ್ತಿತ್ವ (Personality) ಹೇಗೆ ಎಂಬುದನ್ನು ತಿಳಿದುಕೊಳ್ಳಹುದು. ಈ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ (Social media) ಶೀಘ್ರ ವೈರಲ್ ಆಗಿದ್ದು, ಇದು ನಿಜವಾದ ಪರ್ಸನಾಲಿಟಿಯನ್ನು ಡಿಕೋಡ್ ಮಾಡ್ತಿದೆ ಎಂದು ಹಲವರು ಹೇಳ್ತಿದ್ದಾರೆ. ಈ ಆಪ್ಟಿಕಲ್ ಇಲ್ಯೂಶನ್ ತುಂಬಾ ನಿಜವಾಗಿದೆ ಎಂಬ ಅಭಿಪ್ರಾಯ (Opinion) ವ್ಯಕ್ತಪಡಿಸುತ್ತಿದ್ದಾರೆ.
ಫೋಟೋದಲ್ಲಿ ನಿಮಗೇನ್ ಕಾಣುತ್ತೆ ಅನ್ನೋದು ನಿಮ್ ಲವ್ ಲೈಫ್ ಹೇಗಿರುತ್ತೆ ಅನ್ನೋದನ್ನು ತಿಳಿಸುತ್ತೆ
ನೀವೂ ಸಹ ಈ ಫೋಟೋವನ್ನು ನೋಡಿ, ನಿಮ್ಗೆ ಪುರುಷ (Men) ಅಥವಾ ಮಹಿಳೆ (Woman) ಯಾರ ಮುಖ ಮೊದಲಿಗೆ ಕಂಡಿತು ಎಂಬುದನ್ನು ಮನವರಿಕೆ ಮಾಡಿಕೊಳ್ಳಿ. ಅದರ ಮೇಲೆ ನಿಮ್ಮ ವ್ಯಕ್ತಿತ್ವ ಯಾವ ರೀತಿಯದ್ದು ಎಂಬುದನ್ನು ತಿಳಿದುಕೊಳ್ಳಿ.
ಮಹಿಳೆಯ ಮುಖ
ನೀವು ಮೊದಲು ಕುಣಿಯುತ್ತಿರುವ ಮಹಿಳೆಯನ್ನು ನೋಡಿದರೆ, ಮಿಯಾ ಅವರ ವಿಶ್ಲೇಷಣೆಯ ಪ್ರಕಾರ, ನೀವು ಉನ್ನತ ನೈತಿಕತೆ ಹೊಂದಿರುವ ಜನರಲ್ಲಿ ಒಬ್ಬರಾಗಿರುತ್ತೀರಿ, ನೀವು ಎಲ್ಲರ ಬಗ್ಗೆ ಹೆಚ್ಚು ದಯೆ (Kind)ಯನ್ನು ಹೊಂದಿರುತ್ತೀರಿ. ಮಾತ್ರವಲ್ಲ ಕ್ಷಮಿಸುವ ಮನೋಭಾವ ನಿಮ್ಮಲ್ಲಿ ಹೆಚ್ಚಿಗಿರುತ್ತದೆ. ಯಾವುದೇ ಕೆಲಸ ಕೊಟ್ಟರೂ ದಕ್ಷತೆಯಿಂದ ಮಾಡಬಲ್ಲವರಾಗಿರುತ್ತೀರಿ. ಮಾತ್ರವಲ್ಲ, ನೀವು ಯಾವಾಗಲೂ ಜೀವನವನ್ನು ಸಕಾರಾತ್ಮಕ ದೃಷ್ಟಿಯಿಂದ (Positive mind) ನೋಡಲು ಬಯಸುತ್ತೀರಿ ಎಂಬುದು ತಿಳಿದುಬರುತ್ತದೆ.
ನೀವು ಇತರರೊಂದಿಗೆ ಬೆರೆಯುವುದನ್ನು ಆನಂದಿಸುತ್ತೀರಿ ಮತ್ತು ಸಾಮಾಜಿಕವಾಗಿ ಎಲ್ಲರ ಜೊತೆ ಖುಷಿಯಿಂದ ಇರುತ್ತೀರಿ. ಹಾಗೆಯೇ ನೀವು ಕೆಲವು ದೌರ್ಬಲ್ಯಗಳನ್ನು ಸಹ ಹೊಂದಿದ್ದೀರಿ. ವಿಶ್ಲೇಷಣೆಯ ಪ್ರಕಾರ, ಇಂಥವರು ಗೆಳೆಯರಿಂದ ಸುಲಭವಾಗಿ ಪ್ರಭಾವಿತರಾಗಬಹುದು. ಗೊಂದಲಕ್ಕೊಳಗಾಗಬಹುದು. ನಿಮ್ಮ ಕಡೆಗೆ ಇತರ ಜನರ ನಕಾರಾತ್ಮಕ ನಡವಳಿಕೆ (Negative thinking)ಯಿಂದ ಒತ್ತಡವನ್ನು ಅನುಭವಿಸದಿರಲು ಜಾಗೃತ ಪ್ರಯತ್ನಗಳನ್ನು ಮಾಡಿ.
ನೀವು ಜೀನಿಯಸ್ಸಾ? ಹಾಗಿದ್ರೆ ಹತ್ತೇ ಸೆಕೆಂಡಲ್ಲಿ ಫೋಟೋದಲ್ಲಿ ನಿಮಗೆಷ್ಟು M ಕಾಣಿಸ್ತಿದೆ ಹೇಳಿ
ಪುರುಷನ ಮುಖ
ಫೋಟೋವನ್ನು ನೋಡಿದ ತಕ್ಷಣ ನಿಮಗೆ ಪುರುಷನ (Men) ಮುಖ ಕಾಣಿಸಿದರೆ ನೀವು ಎಲ್ಲಾ ವಿಷಯವನ್ನು ಸೀಕ್ರೆಟ್ ಮಾಡಲು ಬಯಸುವ ವ್ಯಕ್ತಿ ಎಂಬುದು ತಿಳಿದುಬರುತ್ತದೆ. ನಿಮಗೆ ನಿಜವಾಗಿ ಯಾರೂ ಅರ್ಥವಾಗುವುದಿಲ್ಲ ಎಂದು ನೀವು ಆಗಾಗ ಭಾವಿಸುತ್ತೀರಿ. ವಿಷಯಗಳನ್ನು ವಿಶ್ಲೇಷಣಾತ್ಮಕವಾಗಿ ಮತ್ತು ತಾರ್ಕಿಕವಾಗಿ ನೋಡಲು ಇಷ್ಟಪಡುತ್ತೀರಿ ಮತ್ತು ಜನರನ್ನು ಸಂತೋಷಪಡಿಸಲು ಬಯಸುವುದಿಲ್ಲ. ನೀವು ಸ್ವತಂತ್ರವಾಗಿರಲು ಇಷ್ಟಪಡುತ್ತೀರಿ. ಜೀವನದಲ್ಲಿ ನಡೆದ ಯಾವುದೇ ಘಟನೆಯನ್ನು ಇನ್ನೊಬ್ಬರಿಗೆ ಹೇಳಲು ಬಯಸುವುದಿಲ್ಲ. ಹಾಗೆಯೇ ಬದುಕಿನ ಯಾವುದೇ ಹಂತದಲ್ಲಿ ಮತ್ತೊಬ್ಬರ ಸಲಹೆ (Suggestion) ಕೇಳುವುದು ಅಗತ್ಯವೆಂದು ಪರಿಗಣಿಸುವುದಿಲ್ಲ.
ನೀವು ಸಹ ಈ ಆಪ್ಟಿಕಲ್ ಇಲ್ಯೂಶನ್ ಫೋಟೋ ನೋಡಿ ನಿಮಗೇನು ಕಾಣಿಸ್ತು ಮತ್ತು ಇದು ನಿಮ್ಮ ಪರ್ಸನಾಲಿಟಿಗೆ ಎಷ್ಟರಮಟ್ಟಿಗೆ ಮ್ಯಾಚ್ ಆಗ್ತಿದೆ ಅನ್ನೋದನ್ನು ಕಾಮೆಂಟ್‌ನಲ್ಲಿ ತಿಳಿಸಿ.