ಗರ್ಭಪಾತದಿಂದ ನೊಂದ ಮಹಿಳೆಗೆ ಮಗು ಹೆರುವಂತೆ ಒತ್ತಡ: ಆಸ್ಪತ್ರೆಯಿಂದ ಮಗು ಕದ್ದ ಮಹಿಳೆ
ಮಕ್ಕಳನ್ನು ಮಾಡಿಕೊಳ್ಳುವಂತೆ ಕುಟುಂಬ ಹಾಗೂ ಪೋಷಕರ ಒತ್ತಾಯ ಕಿರುಕುಳದಿಂದ ಬೇಸತ್ತ ಮಹಿಳೆಯೊಬ್ಬರು ಆಸ್ಪತ್ರೆಯೊಂದರಿಂದ ನವಜಾತ ಶಿಶುವನ್ನು ಕದ್ದು ಸಿಕ್ಕಿಬಿದ್ದ ದಯನೀಯ ಘಟನೆ ನಡೆದಿದೆ.

ನೋಯ್ಡಾ: ಮಕ್ಕಳನ್ನು ಮಾಡಿಕೊಳ್ಳುವಂತೆ ಕುಟುಂಬ ಹಾಗೂ ಪೋಷಕರ ಒತ್ತಾಯ ಕಿರುಕುಳದಿಂದ ಬೇಸತ್ತ ಮಹಿಳೆಯೊಬ್ಬರು ಆಸ್ಪತ್ರೆಯೊಂದರಿಂದ ನವಜಾತ ಶಿಶುವನ್ನು ಕದ್ದು ಸಿಕ್ಕಿಬಿದ್ದ ದಯನೀಯ ಘಟನೆ ನಡೆದಿದೆ. ಮಕ್ಕಳನ್ನು ಮಾಡಿಕೊಳ್ಳುವಂತೆ ಪೋಷಕರ ಹಾಗೂ ಕುಟುಂಬದ ನಿರಂತರ ಒತ್ತಡದಿಂದ ಬೇಸತ್ತ ವಿವಾಹಿತ ಮಹಿಳೆ ಇವರ ಹಾವಳಿಗೆ ಕೊನೆ ಹಾಡಲು ನಿರ್ಧರಿಸಿ ಆಸ್ಪತ್ರೆಯೊಂದರಿಂದ ಯಾರೋ ಹೆತ್ತ ಮಗುವನ್ನು ಕದ್ದಿದ್ದು ಸಿಕ್ಕಿಬಿದ್ದಾಳೆ. ಉತ್ತರಪ್ರದೇಶದ ನೋಯ್ಡಾದ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.
ಮಗು ಕಳ್ಳತನ ಪಕರಣವನ್ನು ಬೇಧಿಸಿದ ಪೊಲೀಸರು ಮಹಿಳೆಯ ವಶದಲ್ಲಿದ್ದ ಮಗುವನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಮಗು ಕದ್ದ ಮಹಿಳೆಯನ್ನು ಪೊಲೀಸರು ವಿಚಾರಣೆ ನಡೆಸಿದಾಗ ಕಣ್ಣೀರಾಕಿದ ಆಕೆ, ತನಗೆ ಮಗು ಮಾಡಿಕೊಳ್ಳುವಂತೆ ಕುಟುಂಬದಿಂದ ತೀವ್ರ ಒತ್ತಡವಿತ್ತು. ಈ ಒತ್ತಡಕ್ಕೆ ಅಂತ್ಯ ಹಾಡಲು ಕೃತ್ಯವೆಸಗಿದ್ದಾಗಿ ಹೇಳಿ ಆಕೆಯ ದೈನ್ಯ ಸ್ಥಿತಿಯನ್ನು ವಿವರಿಸಿದ್ದಾಳೆ. ವಾರದ ಹಿಂದೆ ನೋಯ್ಡಾದ ಸೆಕ್ಟರ್ 24ರಲ್ಲಿರುವ ಇಎಸ್‌ಐಸಿ ಆಸ್ಪತ್ರೆಯಿಂದ ESIC Hospitalನವಜಾತ ಶಿಶುವೊಂದು ಕಳ್ಳತನವಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಗುವಿಗಾಗಿ ಹುಡುಕಾಟ ನಡೆಸಿದ್ದರು.
ಗರ್ಭಿಣಿ ಗೆಳತಿ ಕೊಂದು ಮಗುವನ್ನು ಕದಿಯಲು ಹೊಟ್ಟೆ ಕೊಯ್ದ ಮಹಿಳೆ..!
ಖೋಡಾ Khodaಪ್ರದೇಶದ ನಿವಾಸಿ ಇಶ್ರತ್ Isharatಎಂಬಾಕೆ ಮೇ 25 ರಂದು ಇಎಸ್‌ಐಸಿ ಆಸ್ಪತ್ರಯಲ್ಲಿ ಮೇ. 25 ರಂದು ಮಗುವಿಗೆ ಜನ್ಮ ನೀಡಿದ್ದರು. ಆದರೆ ಮಾರನೇ ದಿನವೇ ಮಗು ಆಸ್ಪತ್ರೆಯಿಂದ ನಾಪತ್ತೆಯಾಗಿತ್ತು. ಹೀಗಾಗಿ ಕಾರ್ಯಾಚರಣೆಗೆ ಇಳಿದ ಪೊಲೀಸರಿಗೆ ಭಂಗೇಲ್ Bhangelನಿವಾಸಿ ರಾಣಿ Raniಎಂಬುವವರ ಸುಪರ್ದಿಯಲ್ಲಿ ಮಗು ಇರುವುದು ಗೊತ್ತಾಗಿತ್ತು. ಹೀಗಾಗಿ ಸ್ಥಳಕ್ಕೆ ತೆರಳಿದ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ಮಗುವನ್ನು ಆಕೆಯಿಂದ ತೆಗೆದುಕೊಂಡಿದ್ದರು. ನಂತರ ಆಕೆಯನ್ನು ವಿಚಾರಣೆ ನಡೆಸಿದಾಗ ಆಕೆ ಅತ್ತೆ ಮಾವನ ಕಿರುಕುಳ ತಾಳಲಾರದೇ ಈ ಕೃತ್ಯವೆಸಗಿದ್ದಾಗಿ ಹೇಳಿದ್ದಾಳೆ. ಎಂದು ಫಸ್ಟ್ ಝೋನ್‌ನ ಡೆಪ್ಯೂಟಿ ಕಮೀಷನರ್ ಆಪ್ ಪೊಲೀಸ್ ಹರೀಶ್ ಛಂದೇರ್ (Harish Chander) ಹೇಳಿದ್ದಾರೆ.
ಮಕ್ಕಳನ್ನು ಕದ್ದ ರಾಣಿ (Rani) ಈ ಹಿಂದೆ ಈ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುತ್ತಿದ್ದು, ರಾಣಿಗೆ ಈ ಹಿಂದೆ ಎರಡು ಬಾರಿ ಗರ್ಭಪಾತವಾಗಿತ್ತು (abortion). ಇತ್ತ ಆಕೆಯ ಅತ್ತೆ ಮಾವ ಆಕೆಯನ್ನು ಮಗು ಹೇರಲು ಆಗುತ್ತಿಲ್ಲ ಎಂದು ನಿಂದಿಸಲು ಶುರು ಮಾಡಿದ್ದರು. ಇದರಿಂದ ಮಾನಸಿಕವಾಗಿ ಒತ್ತಡಕ್ಕೊಳಗಾದ ಆಕೆ ಆಸ್ಪತ್ರೆಯಿಂದ ಮಗುವನ್ನು ಕದಿಯುವ ನಿರ್ಧಾರಕ್ಕೆ ಬಂದಿದ್ದಳು.
Davanagere: ಸಂಬಂಧಿಕರ ಸೋಗಿನಲ್ಲಿ ಬಂದು ನವಜಾತ ಶಿಶು ಕದ್ದ ಮಹಿಳೆ
ಮದ್ವೆಯಾದ ಕೂಡಲೇ ಮಕ್ಕಳನ್ನು ಮಾಡಿಕೊಳ್ಳಬೇಕು ಎಂಬ ಒತ್ತಡ ಪ್ರತಿಯೊಬ್ಬ ವಿವಾಹಿತರಿಗಿರುತ್ತದೆ. ಹೋದಲ್ಲಿ ಬಂದಲ್ಲಿ ಬಂಧುಗಳು ಆತ್ಮೀಯರು ಏನಾದರೂ ವಿಶೇಷವಿದೆಯೇ ಎಂದು ಕೇಳುತ್ತಾ ನವ ವಿವಾಹಿತರನ್ನು ಕಾಡುತ್ತಾರೆ. ಇದೊಂದು ತರ ಸಾಮಾಜಿಕ ಒತ್ತಡವಾಗಿದೆ. ಇದರ ಜೊತೆಗೆ ಮನೆಯವರಿಂದಲೂ ಕಿರುಕುಳ ಶುರುವಾದರೆ ಆ ಹೆಣ್ಣಿನ ಗೋಳು ಶತ್ರುವಿಗೂ ಬೇಡ, ಇದೇ ಕಾರಣಕ್ಕೆ ಮಹಿಳೆ ಇಲ್ಲಿ ಎಲ್ಲಾ ಒತ್ತಡದಿಂದ ಪರಿಹಾರ ಪಡೆದುಕೊಳ್ಳಲು ಅಡ್ಡದಾರಿ ಹಿಡಿದಿದ್ದು, ಈ ಘಟನೆ ನಮ್ಮ ಸಮಾಜದ ಪ್ರಸ್ತುತ ಚಿತ್ರಣವನ್ನು ತೆರೆದಿಟ್ಟಿದೆ.