ಕಚೇರಿಯಲ್ಲಿ ರಜೆ ಪಡೆಯಲು ಕಷ್ಟಪಡುವವರಿಗಾಗಿ ಮೇಕಪ್ ಕಲಾವಿದೆ ನಕಲಿ ಗಾಯಗಳನ್ನು ಸೃಷ್ಟಿಸುವ ವಿಡಿಯೋ ಹಂಚಿಕೊಂಡಿದ್ದಾರೆ. ರಜೆಗಾಗಿ ಇಂತಹ ಅನೈತಿಕ ಮಾರ್ಗಗಳನ್ನು ಉತ್ತೇಜಿಸುವುದು ಸರಿಯಲ್ಲ ಎಂದು ಟೀಕೆಗಳು ವ್ಯಕ್ತವಾಗಿವೆ. ಮನರಂಜನೆಗಾಗಿ ಈ ವಿಡಿಯೋ ಮಾಡಿದ್ದಾಗಿ ಆಕೆ ಸಮಜಾಯಿಷಿ ನೀಡಿದ್ದರೂ, ಇದು ವ್ಯಾಪಕವಾಗಿ ಚರ್ಚೆಗೆ ಗ್ರಾಸವಾಗಿದೆ. ಈ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಬಾರದೆಂದು ಆಕೆ ಹೇಳಿದ್ದಾರೆ.

ಕೆಲವು ಸಂದರ್ಭಗಳಲ್ಲಿ ಕಚೇರಿಗಳಿಂದ ರಜೆ ತೆಗೆದುಕೊಳ್ಳುವುದೇ ದುಸ್ತರವಾಗಿ ಬಿಡುತ್ತದೆ. ಕೆಲವರು ಕಚೇರಿಯಲ್ಲಿ ಸರಿಯಾಗಿ ಕೆಲಸ ಮಾಡದಿದ್ದರೂ ಪರವಾಗಿಲ್ಲ, ವಿವಿಧ ರೀತಿಯ ಇನ್​ಫ್ಲುಯೆನ್ಸ್​ ಬಳಸಿ ಸುಲಭದಲ್ಲಿ ರಜೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಚೆನ್ನಾಗಿ ಕೆಲಸ ಮಾಡುವವರು ಇದನ್ನು ನೋಡಿ ಹೊಟ್ಟೆ ಉರಿದುಕೊಳ್ಳುವುದಷ್ಟೇ ಆಗಿಬಿಡುತ್ತದೆ. ಅವರಿಗೆ ಸೂಕ್ತ ಕಾರಣಕ್ಕೆ ರಜೆ ಬೇಕಿದ್ದರೂ ಅದು ಸಿಗುವುದೇ ಇಲ್ಲ. ಇನ್ನು ಕೆಲವು ಸಂದರ್ಭಗಳಲ್ಲಿ ಏನೂ ಕಾರಣಗಳು ಇಲ್ಲದಿದ್ದರೂ ರಜೆ ತೆಗೆದುಕೊಳ್ಳಬೇಕು ಎನ್ನಿಸುತ್ತದೆ. ಮತ್ತೆ ಕೆಲವೊಮ್ಮೆ ಸಿಕ್ ಲೀವ್​ಗಳು ತುಂಬಾ ಇದ್ದು, ವರ್ಷಾಂತ್ಯ ಬಂದರೂ ಅದನ್ನು ತೆಗೆದುಕೊಳ್ಳಲು ಬಾಸ್​ ಪರ್ಮಿಷನ್​ ಕೊಡಲಾಗಲೂ ಪೇಚಿಗೆ ಸಿಲುಕುವ ಉದ್ಯೋಗಿಗಳೂ ಇದ್ದಾರೆ.

ಕಾರಣ ಏನೇ ಇರಲಿ. ಹೀಗೆ ಮಾಡಿದರೆ ನಿಮಗೆ ಸುಲಭದಲ್ಲಿ ಸಿಕ್​ ಲೀವ್ ಸಿಕ್ಕಿಬಿಡುತ್ತದೆ. ಒಂದು ವೇಳೆ ಮೊದಲೇ ರಜೆ ಹಾಕಿ ಹುಷಾರಿಲ್ಲ ಎಂದು ರೀಲು ಬಿಟ್ಟಿದ್ದರೆ, ಹೀಗೆ ಮಾಡಿ ನೋಡಿದರೆ, ಬಾಸ್​​ ನಿಮ್ಮನ್ನು ನಂಬಲೇಬೇಕಾಗುತ್ತದೆ ಎಂದು ಹೇಳಿ ವಿಡಿಯೋ ಮಾಡಿರುವ ಪುಣೆ ಪುಣೆ ಮೂಲದ ಮೇಕಪ್ ಕಲಾವಿದೆಯೊಬ್ಬಳು ಈಗ ಪೇಚಿಗೆ ಸಿಲುಕಿದ್ದಾಳೆ. ಕೆಲಸದಿಂದ ರಜೆ ತೆಗೆದುಕೊಳ್ಳಲು ನೆಪವಾಗಿ ನಕಲಿ ಅಪಘಾತದ ಗಾಯದ ಗುರುತುಗಳನ್ನು ಹೇಗೆ ಸೃಷ್ಟಿಸುವುದು ಎಂಬುದನ್ನು ಪ್ರದರ್ಶಿಸುವ ವಿಡಿಯೋ ಅನ್ನು ಈಕೆ ಪೋಸ್ಟ್​ ಮಾಡಿದ್ದಾಳೆ. ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಹಾಸ್ಯಕ್ಕಾಗಿ ಈ ವಿಡಿಯೋ ಮಾಡಿದ್ದು, ಇದು ಕೇವಲ ಹಾಸ್ಯವಷ್ಟೇ, ಯಾರೂ ಸೀರಿಯಸ್​ ಆಗಿ ಇದನ್ನು ತೆಗೆದುಕೊಳ್ಳಬೇಡಿ ಎಂದು ಈಕೆ ಹೇಳಿದ್ದರೂ ಈ ವಿಡಿಯೋಗೆ ಭಾರಿ ಟೀಕೆ ವ್ಯಕ್ತವಾಗುತ್ತಿದೆ. ಕೆಲಸದ ಸ್ಥಳದಲ್ಲಿ ಅನೈತಿಕ ನಡವಳಿಕೆಯನ್ನು ಈಕೆ ಉತ್ತೇಜಿಸುತ್ತಿದ್ದಾರೆ ಎಂದು ಹಲವರು ಟೀಕಿಸಿದ್ದಾರೆ.

ಘಿಬ್ಲಿ ಫೋಟೋ ಬಳಸ್ತಿದ್ದೀರಾ? ಗೋಳೋ ಎಂದು ಅಳುವ ಮೊದ್ಲು ಸೈಬರ್​ ಕ್ರೈಂನವರ ಈ ಎಚ್ಚರಿಕೆ ಕೇಳಿಬಿಡಿ...

ಮೇಕಪ್ ಕಲಾವಿದೆ ಪ್ರೀತಮ್ ಜುಜಾರ್ ಕೊಥವಾಲಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಈ ವಿಡಿಯೋ ಶೀಘ್ರದಲ್ಲಿ ವೈರಲ್ ಆಗಿದ್ದು, ಅನೇಕ ವೀಕ್ಷಕರು ಅದರ ದುರುಪಯೋಗದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಅನ್ನು ಮನರಂಜನೆಗಾಗಿ ಉದ್ದೇಶಿಸಲಾಗಿದೆ ಎಂದು ಕೊಥವಾಲಾ ಶೀರ್ಷಿಕೆ ಕೊಟ್ಟಿದ್ದಾರೆ. ಈ ವೀಡಿಯೊವನ್ನು ಮನರಂಜನೆಗಾಗಿ ಮಾತ್ರ ಉದ್ದೇಶಿಸಲಾಗಿದೆ ಮತ್ತು ಗಂಭೀರವಾಗಿ ಪರಿಗಣಿಸಬಾರದು ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ. "ಈ ವೀಡಿಯೊ ವಿಶೇಷವಾಗಿ ರಜೆ ಪಡೆಯಲು ಕಷ್ಟಪಡುವ ಐಟಿ ವೃತ್ತಿಪರರಿಗಾಗಿ" ಎಂದು ಅವರು ಬರೆದಿದ್ದಾರೆ. ಆದರೂ ಇದು ಟೀಕೆಗೆ ಗುರಿಯಾಗಿದೆ. ತಮ್ಮ ಸೃಜನಶೀಲ ಟ್ಯುಟೋರಿಯಲ್‌ಗಳಿಗೆ ಹೆಸರುವಾಸಿಯಾದ ವೃತ್ತಿಪರ ಮೇಕಪ್ ಕಲಾವಿದೆ ಕೊಥವಾಲಾ, ಮೇಕಪ್ ತಂತ್ರಗಳನ್ನು ಬಳಸಿಕೊಂಡು ವಾಸ್ತವಿಕ ಗಾಯದ ಗುರುತುಗಳನ್ನು ಹೇಗೆ ಸೃಷ್ಟಿಸುವುದು ಎಂಬುದನ್ನು ಪ್ರದರ್ಶಿಸುವ ವಿವಾದಾತ್ಮಕ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಅವರು ಈ ವಿಡಿಯೋ ಅನ್ನು ದಯವಿಟ್ಟು ಐಟಿ ಹೆಡ್​ಗಳು ನೋಡಬೇಡಿ ಎಂದೂ ತಮಾಷೆಯಾಗಿ ಬರೆದಿದ್ದಾರೆ. ಅವರೇ ರಜೆ ಮಂಜೂರು ಮಾಡುವವರು ಆಗಿರುವುದರಿಂದ ವಿಡಿಯೋ ನೋಡಬೇಡಿ ಎಂದಿದ್ದಾರೆ.


ಆರಂಭಿಕ ವಿಡಿಯೋದಲ್ಲಿ ಕಲಾವಿದೆ, ಹೇಗೆ ಮೇಕಪ್​ ಮಾಡಿಕೊಳ್ಳುವುದು ಎಂದು ತೋರಿಸಿದ್ದಾರೆ. ಸುದೀರ್ಘ ಸಿಕ್​ ಲಿವ್​ ಪಡೆದು ವಾಪಸ್​ ಕಚೇರಿಗೆ ಹೋದಾಗ, ಯಾವುದೇ ಗಾಯದ ಗುರುತು ಮುಖದಲ್ಲಿ ಇಲ್ಲದ ಪಕ್ಷದಲ್ಲಿ ಸಂದೇಹ ಬರುತ್ತದೆ. ಆದ್ದರಿಂದ ಬಕಲಿ ಗಾಯದ ಗುರುತು ಹೇಗೆ ಸೃಷ್ಟಿಸಬೇಕು ಎಂದು ಅವರು ಹೇಳಿದ್ದಾರೆ. ಜೊತೆಗೆ, ಅದನ್ನು ತೋರಿಸಿದ್ದಾರೆ ಕೂಡ. "ನಿಮ್ಮ ಸಿಕ್ ಲೀವ್​ ಮುಗಿದ ನಂತರ ನನ್ನ ಜುಗಾಡ್ ಇಲ್ಲಿದೆ" ಎಂದಿರುವ ಅವರು, ಗಾಯವು ನೈಸರ್ಗಿಕವಾಗಿ ಗುಣವಾಗುವಂತೆ ಕಾಣುವಂತೆ ಮೇಕಪ್ ಅನ್ನು ಮತ್ತೆ ಹೇಗೆ ಹಚ್ಚಿಕೊಳ್ಳಬೇಕು ಎಂಬುದನ್ನು ವಿವರಿಸಿದರು. ಕೆಲವು ವೀಕ್ಷಕರು ಸೃಜನಶೀಲತೆಯನ್ನು ಮೆಚ್ಚಿಕೊಂಡರೆ, ಇನ್ನೂ ಅನೇಕರು ವಿಷಯದ ಪರಿಣಾಮಗಳಿಂದ ಗಾಬರಿಗೊಂಡರು.

ಡ್ರೋನ್​ನಲ್ಲಿ ಬಂದ ಹಾರ ವರನ ಕೊರಳ ಬದ್ಲು ಸಿಕ್ಕಾಕ್ಕೊಂಡಿದ್ದೇ ಬೇರೆ ಕಡೆ! ಮದುಮಗ ಕಕ್ಕಾಬಿಕ್ಕಿ... ವಿಡಿಯೋ ವೈರಲ್​

View post on Instagram