ಗಂಗೌರ್ ಹಬ್ಬದ ಸಂಭ್ರಮಕ್ಕೆ ಕೈತುಂಬಾ ಮೆಹೆಂದಿ ಹಾಕಿಕೊಳ್ಳುವುದು ಒಂದು ವಿಶೇಷ. ಮಾರ್ವಾಡಿ ಶೈಲಿಯ ಮೆಹೆಂದಿ ನಿಮ್ಮ ಕೈಗಳಿಗೆ ಮಹಾರಾಣಿಯಂತಹ ಕಳೆ ನೀಡುತ್ತದೆ. ಇಲ್ಲಿವೆ 7 ಸುಂದರ ಡಿಸೈನ್‌ಗಳು.
women Mar 14 2026
Author: Suvarna News Image Credits:Instagram
Kannada
ಮೆಹೆಂದಿ ವಿಶೇಷತೆ
ಈ ಡಿಸೈನ್ ತುಂಬಾನೇ ಶ್ರೀಮಂತ ಹಾಗೂ ರಾಯಲ್ ಆಗಿರುತ್ತೆ. ಇದರಲ್ಲಿ ದೊಡ್ಡ ದೊಡ್ಡ ಪ್ಯಾಟರ್ನ್‌ಗಳು, ಹೂವು-ಎಲೆ ಮತ್ತು ಜಾಲರಿಯಂತಹ ಡಿಸೈನ್‌ಗಳನ್ನು ಬಿಡಿಸಲಾಗುತ್ತದೆ. ಇದು ಸುಂದರವಾಗಿ ಮತ್ತು ಆಕರ್ಷಕವಾಗಿ ಕಾಣಿಸುತ್ತದೆ.
Image credits: Instagram
Kannada
ಸೂಕ್ಷ್ಮ ಡೀಟೇಲಿಂಗ್ ಇರುತ್ತೆ
ರಜವಾಡಿ ಮೆಹೆಂದಿಯಲ್ಲಿ ಸೂಕ್ಷ್ಮವಾದ ಡೀಟೇಲಿಂಗ್ ಇರುವ ಡಿಸೈನ್ ತುಂಬಾ ಸುಂದರವಾಗಿ ಕಾಣುತ್ತದೆ. ನೀವು ಈ ರೀತಿ ಹೂವು, ಎಲೆಗಳು ಮತ್ತು ಕ್ರಿಸ್-ಕ್ರಾಸ್ ಪ್ಯಾಟರ್ನ್ ಇರುವ ರಜ್ವಾಡಿ ಮೆಹೆಂದಿಯನ್ನು ಹಾಕಿಕೊಳ್ಳಬಹುದು.
Image credits: Instagram
Kannada
ಮಂಡಲ ಪ್ಯಾಟರ್ನ್
ರಜ್ವಾಡಿ ಮೆಹೆಂದಿಯಲ್ಲಿ ಮಂಡಲ ಆರ್ಟ್ ಪ್ಯಾಟರ್ನ್ ತುಂಬಾ ಸುಂದರವಾಗಿ ಕಾಣುತ್ತದೆ. ಪೂಜೆ ಪುನಸ್ಕಾರಿಗಳಿಗೆ ಅಂಗೈ ಮೇಲೆ ಈ ರೀತಿ ದುಂಡಗಿನ ಆಕಾರದ ಮಂಡಲ ಡಿಸೈನ್ ಇರುವ ಮೆಹೆಂದಿಯನ್ನು ಹಾಕಿ.
Image credits: AI
Kannada
ಸಿಂಪಲ್ ಮೆಹೆಂದಿ ಡಿಸೈನ್
ರಜವಾಡಿ ಮೆಹೆಂದಿಯಲ್ಲಿ ಈ ರೀತಿಯ ಸಿಂಪಲ್ ಆದ್ರೂ ಎಲಿಗೆಂಟ್ ಆಗಿರುವ ಮೆಹೆಂದಿ ತುಂಬಾ ಚೆನ್ನಾಗಿ ಕಾಣುತ್ತೆ. ಇದರಲ್ಲಿ ಕ್ರಿಸ್-ಕ್ರಾಸ್ ಪ್ಯಾಟರ್ನ್ ಮತ್ತು ಸಣ್ಣ ಮೆಹೆಂದಿ ಕೋನ್‌ನಿಂದ ಡೀಟೇಲಿಂಗ್ ಮಾಡಲಾಗಿದೆ.
Image credits: AI
Kannada
ಜಾಲರಿ ಮಾದರಿಯ ಮೆಹೆಂದಿ ಡಿಸೈನ್
ಇದು ಸಿಂಪಲ್ ಮೆಹೆಂದಿ ಡಿಸೈನ್ ಆದ್ರೂ ಬೇಗನೆ ಹಾಕಿ ಮುಗಿಸಬಹುದು. ಇದರಲ್ಲಿ ಮಧ್ಯದಲ್ಲಿ ಒಂದು ದೊಡ್ಡ ಆಕೃತಿಯನ್ನು ಬಿಡಿಸಿ, ಅಕ್ಕಪಕ್ಕದಲ್ಲಿ ಸಣ್ಣ ಡೀಟೇಲಿಂಗ್ ಮಾಡಲಾಗುತ್ತದೆ.
Image credits: Instagram
Kannada
ಸ್ಪೆಷಲ್ ಮೆಹೆಂದಿ ಡಿಸೈನ್
ಈ ಡಿಸೈನ್ ಪೂಜೆ ಪುನಸ್ಕಾರಗಳಿಗೆ ಮಾತ್ರವಲ್ಲದೇ, ಮದ್ವೆಗೆ ಹೇಳಿ ಮಾಡಿಸಿದಂತಿದೆ. ಕೈ ನಡುವೆ ಕೆಲವು ಅಕ್ಷರಗಳಿದ್ದು, ಹುಡುಗ, ಹುಡುಗಿಯ ಹೆಸರನ್ನು ಬರೆದು ಕೊಂಡರೆ ಸಂಭ್ರಮ ಹೆಚ್ಚಿಸುತ್ತದೆ.
Image credits: Instagram
Kannada
ಎಲಿಗೆಂಟ್ ಮೆಹೆಂದಿ ಡಿಸೈನ್
ಸಿಂಪಲ್ ಮೆಹೆಂದಿ ಬೇಕಾದರೆ ಅಂಗೈಯಲ್ಲಿ ಈ ರೀತಿಯ ಕ್ರಿಸ್-ಕ್ರಾಸ್ ಪ್ಯಾಟರ್ನ್ ಇರುವ ಜಾಲರಿ ಮೆಹೆಂದಿ ಹಾಕಿಸಿಕೊಳ್ಳಿ. ಇದರಲ್ಲಿ ಸ್ವಲ್ಪ ಮಂಡಲ ಆರ್ಟ್ ಡೀಟೇಲಿಂಗ್ ಮತ್ತು ಮಧ್ಯದಲ್ಲಿ 'ಗಂಗೌರ್' ಎಂದು ಬರೆಯಲಾಗಿದೆ.