Asianet Suvarna News Asianet Suvarna News

Good Home: ಸಂತೋಷ ಬೇಕಂದ್ರೆ ಮನೆ ಹೀಗಿಟ್ಟುಕೊಳ್ಳಿ..

ಮನೆಯನ್ನು ಸ್ವಚ್ಛವಾಗಿ, ನೀಟಾಗಿ ಇಟ್ಕೋಬೇಕು ಅನ್ನೋದು ಎಲ್ಲ ಮಹಿಳೆಯರ ಆಸೆ. ಅದು ಸಾಧ್ಯವಾಗುತ್ತಾ ಬಿಡುತ್ತಾ ಅನ್ನೋದು ಬೇರೆ ಪ್ರಶ್ನೆ! ಮನೆಯನ್ನು ನೀಟಾಗಿ ಇಟ್ಕೊಳೋ ಆಸೆ ನಿಮಗೂ ಇದ್ದರೆ ಯಾವುದೆಲ್ಲ ಐಟಮ್ಸ್ ಸರಿಯಾಗಿರ್ಬೇಕು ನೋಡ್ಕೋಳಿ.
 

Neatness of home will keep you happy
Author
Bangalore, First Published Jan 1, 2022, 4:33 PM IST

ಕೆಲವರ ಮನೆ (House) ಪ್ರವೇಶಿಸಿದರೆ ಸಾಕು, ಅಬ್ಬಬ್ಬಾ ಎಂದೆನಿಸುತ್ತದೆ. ಕೂರುವ ಸೋಫಾ(Sofa)ದಿಂದ ಹಿಡಿದು ಹಾಲ್ (Hall) ನಲ್ಲಿ ಯಾವ್ಯಾವ ವಸ್ತುಗಳಿವೆಯೋ ಅವುಗಳ ಮೇಲೆಲ್ಲ ಬಟ್ಟೆಬರೆ (Cloths), ಮಕ್ಕಳ ಪುಸ್ತಕಗಳು (Books) ಹರಡಿಕೊಂಡಿರುತ್ತವೆ. ಯಾರಾದರೂ ಬಂದಾಗ ಅವುಗಳನ್ನು ಎತ್ತಿ ಪಕ್ಕಕ್ಕಿಟ್ಟು ಕುಳಿತುಕೊಳ್ಳಲು ಜಾಗ ಮಾಡಿಕೊಡುವವರೂ ಇದ್ದಾರೆ. ಅಂಥ ಮನೆಗಳಲ್ಲಿ ಮನಸ್ಸಿಗೆ ಖುಷಿ (Happy) ಎನಿಸೋದಿಲ್ಲ. ಹೊರಗಿನವರಾದ ನಮಗೇ ಹಾಗಾದ್ರೆ, ಮನೆಯಲ್ಲೇ ಇರೋ ಅವರಿಗೆ ಹೇಗಿರಬೇಡ? ಖಂಡಿತ ಮನಸ್ಸು ಪ್ರಫುಲ್ಲಿತ(Fresh)ವಾಗಿರಲು ಸಾಧ್ಯವಿಲ್ಲ. ಏಕೆಂದರೆ, ಮನೆಯ ಒಪ್ಪ-ಓರಣ (Neatness) ಕೇವಲ ಸ್ವಚ್ಛತೆ (Clean) ದೃಷ್ಟಿಯಿಂದ ಮಾತ್ರವಲ್ಲ, ಮನಸ್ಸಿನ ಕಿರಿಕಿರಿ (Irritation) ಕಡಿಮೆ ಮಾಡುವಲ್ಲಿಯೂ ಪ್ರಮುಖವಾಗಿದೆ. ಮನೆ ಚಿಕ್ಕದಾಗಿದ್ದರೂ ಪರವಾಗಿಲ್ಲ, ಸ್ವಚ್ಛ ಮತ್ತು ಓರಣವಾಗಿದ್ದರೆ ಖುಷಿ ಎನಿಸುತ್ತದೆ.

ಉದ್ಯೋಗಸ್ಥೆಯಾಗಿರಲಿ, ಗೃಹಿಣಿಯಾಗಿರಲಿ, ಮನೆಯನ್ನು ನೀಟಾಗಿಡುವಲ್ಲಿ  ಮಹಿಳೆಯರ ಚಾಕಚಕ್ಯತೆ (Clever) ಪ್ರಮುಖವಾಗುತ್ತದೆ. ಅಡುಗೆ (Kichen) ಮನೆಯಲ್ಲಿ ಪಾತ್ರೆಗಳನ್ನು ಜೋಡಿಸದೆ ಹಾಗೆಯೇ ಇಡುವುದು, ಮಲಗುವ ಮಂಚದ ಮೇಲೆ ವಸ್ತು ಸಂಗ್ರಹಾಲಯವನ್ನೇ ನಿರ್ಮಿಸುವುದು...ಇಂಥ ಅಭ್ಯಾಸಗಳಿಂದ ಮನೆ ಅರಾಜಕವೆನಿಸುತ್ತದೆ. ಇದರಿಂದ ಮನಸ್ಸಿಗೆ ನೆಮ್ಮದಿ ಕಾಣಿಸುವುದಿಲ್ಲವೆಂದು ಅಧ್ಯಯನಗಳು ಹೇಳುತ್ತವೆ. 

Cheating Wife : ಈ ಎಲ್ಲ ಕಾರಣಕ್ಕೆ ಪತಿಗೆ ಮೋಸ ಮಾಡ್ತಾಳೆ ಪತ್ನಿ

ಮನೆ ನೀಟಾಗಿದ್ದರೆ ಮನಸ್ಸು ಗೊಂದಲದ ಗೂಡಾಗುವುದಿಲ್ಲವಂತೆ. ಸ್ಪಷ್ಟವಾಗಿ ಯೋಚಿಸಲು ಸಾಧ್ಯವಾಗುತ್ತದೆಯಂತೆ. ಇಷ್ಟೇ ಅಲ್ಲ, ಮನೆ ಓರಣವಾಗಿಲ್ಲದೆ ಹೋದರೆ ಪರಸ್ಪರ ಜಗಳವೂ ಹೆಚ್ಚುತ್ತದೆಯಂತೆ. ಹೀಗಾಗಿ, ಮನಸ್ಸು ಪ್ರಫುಲ್ಲವಾಗಿರಲು ಮನೆಯನ್ನು ಓರಣವಾಗಿಟ್ಟುಕೊಳ್ಳುವುದನ್ನು ಕಲಿತುಕೊಳ್ಳಬೇಕು ಎನ್ನುವುದು ಮನೋತಜ್ಞರ ಅಭಿಪ್ರಾಯ. 

Peepal Tree : ಅಶ್ವತ್ಥ ಎಲೆಗಳಿಂದ ಚರ್ಮದ ಸಮಸ್ಯೆ ಸೇರಿ, ಹಲವು ಸಮಸ್ಯೆಗಳನ್ನು ನಿವಾರಿಸಿ

ಕೆಲವು ಟಿಪ್ಸ್

  • ಮೊಟ್ಟಮೊದಲನೆಯದಾಗಿ, ಬೆಳಗ್ಗೆ ಎದ್ದಾಕ್ಷಣ ಹಾಸಿಗೆ (Bed) ಮಡಚಿಡುವ ಅಭ್ಯಾಸ ಮಾಡಿ. ಇದು ಎಲ್ಲರಿಗೂ ಅನ್ವಯ. ಮಂಚವಾಗಿದ್ದರೆ ಹೊದಿಕೆ ಮಡಚಿ, ಮೇಲಿನಿಂದ ಸರಿಯಾಗಿ ಮುಚ್ಚಿಡಬೇಕು. ಮಂಚದ ಮೇಲೆ ಬೇರೆ ಬೇರೆ ವಸ್ತುಗಳನ್ನು ಇಡುವ ಅಭ್ಯಾಸ ಮಾಡಬಾರದು. ಹಾಸಿಗೆ, ಹೊದಿಕೆಗಳು ಹರಡಿಕೊಂಡಿದ್ದರೆ ನೀಟಾಗಿ ಯೋಚಿಸಲು ಸಾಧ್ಯವಾಗುವುದಿಲ್ಲ. 
     
  • ಅಡುಗೆ ಮಾಡುವಾಗ ಬಳಸುವ ಚಿಕ್ಕ ಪುಟ್ಟ ಪಾತ್ರೆಗಳನ್ನು ಸಿಂಕಿಗೆ ಸೇರಿಸಬಾರದು. ಒಮ್ಮೆಗೆ ತೊಳೆದುಕೊಂಡರಾಯಿತು ಎನ್ನುವ ದೃಷ್ಟಿಯಿಂದ ಎಲ್ಲವನ್ನೂ ಸಿಂಕಿಗೆ ಸೇರಿಸುತ್ತ ಬಂದರೆ ಕಿರಿಕಿರಿ ತಪ್ಪಿದ್ದಲ್ಲ. ಹೆಚ್ಚೇನೂ ಅಂಟಿಕೊಂಡಿರದ ಪಾತ್ರೆಗಳನ್ನು ಆ ಕ್ಷಣವೇ ತೊಳೆದುಕೊಂಡರೆ ಸಿಂಕು ತುಂಬಿ ರಗಳೆ ಎನಿಸುವುದಿಲ್ಲ.
     
  • ಬೆಳಗ್ಗೆ ತಿಂಡಿ (Food) ಮಾಡಿದ ಬಳಿಕ ಅಡುಗೆ ಕಟ್ಟೆಯನ್ನು ಹಾಗೆಯೇ ಬಿಡದೆ ನೀಟಾಗಿ ಒರೆಸಿಡಬೇಕು. ಅಲ್ಲಲ್ಲಿ ನೀರು, ಏನಾದರೂ ಕಸ ಬಿದ್ದುಕೊಂಡಿದ್ದರೆ ಓರಣವಾಗಿರುವ ಭಾವನೆ ಮೂಡುವುದಿಲ್ಲ. ಯಾವುದೇ ಸ್ಥಳವನ್ನಾದರೂ ಸರಿ, ಬಳಸಿದ ತಕ್ಷಣ ಚೊಕ್ಕಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. 
     
  • ಬಳಸುವ ಯಾವುದೇ ವಸ್ತುವನ್ನು ಅದರ ಸ್ಥಳದಲ್ಲೇ ಇಡುವ ರೂಢಿ ಅತ್ಯಂತ ಮುಖ್ಯ. ಪುಸ್ತಕ, ಬಟ್ಟೆ, ಕತ್ತರಿ, ಚಾಕು ಇಂತಹ ವಸ್ತುಗಳನ್ನು ಅವುಗಳ ಸ್ಥಳದಲ್ಲೇ ಇಡುವುದರಿಂದ ಗೊಂದಲವಾಗುವುದಿಲ್ಲ. 
     
  • ರಾತ್ರಿ(Night)ಯ ಕೆಲಸವನ್ನು ರಾತ್ರಿಯೇ ಮುಗಿಸುವುದು ಉತ್ತಮ ಅಭ್ಯಾಸ. ಇದರಿಂದ ಮಾರನೆಯ ದಿನ ಬೆಳಗ್ಗೆ ಕಿರಿಕಿರಿ ಆಗುವುದು ಕಡಿಮೆ.
     
  • ಮಕ್ಕಳಿಗೆ ತಮ್ಮ ವಸ್ತುಗಳನ್ನು ಒಂದೆಡೆ ಇರಿಸಿಕೊಳ್ಳುವ ಅಭ್ಯಾಸ ಮಾಡಿಸಿ. ಆರಂಭದಲ್ಲಿ ಕಷ್ಟವೆನಿಸಿದರೂ ಕ್ರಮೇಣ ಮಕ್ಕಳಿಗೂ ಈ ಶಿಸ್ತು (Dicipline) ಅಭ್ಯಾಸವಾಗುತ್ತದೆ. 
     
  • ಇಂದಿನ ದಿನಗಳಲ್ಲಿ ಕಂಡದ್ದೆಲ್ಲವೂ ಬೇಕು. ಹೀಗಾಗಿ, ಖರೀದಿಸುವ ವಸ್ತುಗಳ ಬಗ್ಗೆ ಜಾಗ್ರತೆಯಿರಲಿ. ಶಾಪಿಂಗ್ (Shoping) ಗೆಂದು ಹೋದರೆ, ಬೇಕಿರಲಿ, ಬೇಡವಾಗಿರಲಿ, ಒಂದಿಷ್ಟು ವಸ್ತುಗಳನ್ನು ಮನೆಗೆ ತಂದು ಎಸೆಯುವ ಅಭ್ಯಾಸ ಅನೇಕರಿಗೆ ಇರುತ್ತದೆ. ಇದನ್ನು ಬಿಟ್ಟರೆ ಮನೆಯಲ್ಲಿ ಅನಗತ್ಯ  ವಸ್ತುಗಳ ಸಂಗ್ರಹ ಕಡಿಮೆಯಾಗುತ್ತದೆ. 
     
  • ಹಾಲ್ ನಲ್ಲಾಗಲೀ, ಅಡುಗೆ ಮನೆಯಲ್ಲಾಗಲೀ ಎಷ್ಟು ಬೇಕೋ ಅಷ್ಟೇ ಪೀಠೋಪಕರಣ(Furnitures) ಗಳಿದ್ದರೆ ಚೆಂದ. ಸಣ್ಣ ಸಣ್ಣ ರೂಮ್ ಗಳಿದ್ದಾಗ  ಹೆಚ್ಚು ಪೀಠೋಪಕರಣಗಳಿಂದ ಅಲಂಕರಿಸಲು ಮುಂದಾಗಬೇಡಿ. ಇದರಿಂದ ಮನೆ ಇಕ್ಕಟ್ಟೆನಿಸುತ್ತದೆ. 
Follow Us:
Download App:
  • android
  • ios