Peepal Tree : ಅಶ್ವತ್ಥ ಎಲೆಗಳಿಂದ ಚರ್ಮದ ಸಮಸ್ಯೆ ಸೇರಿ, ಹಲವು ಸಮಸ್ಯೆಗಳನ್ನು ನಿವಾರಿಸಿ
ಔಷಧೀಯ ಗುಣಗಳಿಂದ (medicinal power) ಸಮೃದ್ಧವಾಗಿರುವ ಅಶ್ವತ್ಥ ಮರವು ಹೆಚ್ಚು ಆಮ್ಲಜನಕ ನೀಡುವ ಮರವಾಗಿದೆ. ಅಶ್ವತ್ಥ ಮರದ ತೊಗಟೆಯನ್ನು ಅನೇಕ ರೋಗಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಚರ್ಮದ ಸಮಸ್ಯೆಗಳಾದ ಗಡ್ಡೆ ಮತ್ತು ಕೂದಲು ಒಡೆಯುವಂತಹ ಸಮಸ್ಯೆಗಳಿಗೆ ಅಶ್ವತ್ಥ ಎಲೆ ಅತ್ಯುತ್ತಮ ಚಿಕಿತ್ಸೆ ನೀಡುತ್ತದೆ.
ಔಷಧೀಯ ಗುಣಗಳಿಂದ (medicinal power) ಸಮೃದ್ಧವಾಗಿರುವ ಅಶ್ವತ್ಥ ಮರವು ಹೆಚ್ಚು ಆಮ್ಲಜನಕ ನೀಡುವ ಮರವಾಗಿದೆ. ಅಶ್ವತ್ಥ ಮರದ ತೊಗಟೆಯನ್ನು ಅನೇಕ ರೋಗಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಚರ್ಮದ ಸಮಸ್ಯೆಗಳಾದ ಗಡ್ಡೆ ಮತ್ತು ಕೂದಲು ಒಡೆಯುವಂತಹ ಸಮಸ್ಯೆಗಳಿಗೆ ಅಶ್ವತ್ಥ ಎಲೆ ಅತ್ಯುತ್ತಮ ಚಿಕಿತ್ಸೆ ನೀಡುತ್ತದೆ.
ನಿರಂತರವಾಗಿ ಅಶ್ವತ್ಥ ಎಲೆಗಳನ್ನು (peepal leaves) ಜಗಿಯುವುದರಿಂದ ಒತ್ತಡ ನಿವಾರಣೆಯಾಗುವುದರಿಂದ ದೇಹ ಆರೋಗ್ಯವಾಗಿ ಇರುತ್ತದೆ. ಅಶ್ವತ್ಥ ಎಲೆಗಳನ್ನು ಅರೆದು ಒಂದು ತಿಂಗಳ ಕಾಲ ಕುಡಿಯುವುದರಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಯಾವ ಯಾವ ರೋಗಗಳಿಗೆ ಅಶ್ವತ್ಥ ಎಲೆಗಳನ್ನು ಬಳಸಿ ಚಿಕಿತ್ಸೆ ನೀಡಬಹುದು ಎಂಬುದನ್ನು ನಾವು ತಿಳಿಯೋಣ.
ಕೂದಲು ಉದುರುವುದನ್ನು ಗುಣಪಡಿಸುತ್ತದೆ
ಕೂದಲು ಉದುರುವ ಸಮಸ್ಯೆಗೆ (hair loss problem)ಪರಿಹಾರ ಸಿಗುತ್ತದೆ. ಕೂದಲು ಉದುರುವಾಗ ಅಶ್ವತ್ಥ ಹಾಲನ್ನು ಹಚ್ಚುವುದರಿಂದ ಬೇಗನೆ ಗುಣವಾಗುತ್ತವೆ. ಅಶ್ವತ್ಥ ತೊಗಟೆಯನ್ನು ನೀರಿನಲ್ಲಿ ಕುದಿಸಿ ಉಜ್ಜಿ ಹಚ್ಚುವುದರಿಂದ ಕೂದಲು ಸೊಗಸಾಗಿ ಬೆಳೆಯುತ್ತದೆ.
ಚರ್ಮದ ಸಮಸ್ಯೆಗಳಿಗೆ ಅತ್ಯುತ್ತಮ ಚಿಕಿತ್ಸೆ
ಕೆಲವರಿಗೆ ಚರ್ಮದ ಸಮಸ್ಯೆ (skin problem)ತುಂಬಾ ಇರುತ್ತದೆ. ಇಂತಹವರು 20 ಗ್ರಾಂ ಅಶ್ವತ್ಥ ತೊಗಟೆಯನ್ನು 200 ಗ್ರಾಂ ನೀರಿಗೆ ಹಾಕಿ ಕುದಿಸಿ ಸೋಸಿ ಕಾಲು ಭಾಗ ಮಾಡಿ ಬೆಳಗ್ಗೆ ಕುಡಿದರೆ ಚರ್ಮದ ಸಮಸ್ಯೆ ಇಲ್ಲವಾಗುತ್ತದೆ.
ಅಶ್ವತ್ಥ ಎಲೆಗಳನ್ನು ತಿನ್ನುವುದು, ಅಥವಾ ಕಷಾಯ ಮಾಡುವ ಮೂಲಕ ಸರ್ಪಸುತ್ತು ಸಮಸ್ಯೆ ನಿವಾರಣೆಯಾಗುತ್ತದೆ. ಚರ್ಮದ ಕಿರಿ ಕಿರಿ ಇನ್ನಿತರ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ಸಹ ಅಶ್ವತ್ಥ ಎಲೆಗಳು ಸಹಾಯ ಮಾಡುತ್ತದೆ. ಇದನ್ನು ನೀವು ಟ್ರೈ ಮಾಡಬಹುದು.
ಮಲಬದ್ಧತೆಗೆ ಔಷಧ
ಮಲಬದ್ಧತೆ ಮತ್ತು ಅನಿಲ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಅಶ್ವತ್ಥ ಎಲೆಗಳನ್ನು ಬಳಸಲಾಗುತ್ತದೆ. ಇದನ್ನು ಕೀಟನಾಶಕ ಎಂದೂ ಪರಿಗಣಿಸಲಾಗುತ್ತದೆ, ಆದ್ದರಿಂದ ಇದರ ಬಳಕೆಯು ಹೊಟ್ಟೆಯ ಸಮಸ್ಯೆಗಳಲ್ಲಿ ಅತ್ಯಂತ ಪ್ರಯೋಜನಕಾರಿಯಾಗಿದೆ.
ಚರ್ಮವನ್ನು ಸುಧಾರಿಸುತ್ತದೆ
ಚರ್ಮದ ಬಣ್ಣವನ್ನು ಸುಧಾರಿಸುವಲ್ಲಿ ಅಶ್ವತ್ಥ ತೊಗಟೆ ಅತ್ಯಂತ ಪರಿಣಾಮಕಾರಿಯಾಗಿದೆ. ಅಶ್ವತ್ಥ ತೊಗಟೆ ಅಥವಾ ಅದರ ಎಲೆಗಳನ್ನು ಬಳಸುವ ಮೂಲಕ ಚರ್ಮದ ಸುಕ್ಕುಗಳನ್ನು ಕಡಿಮೆ ಮಾಡಬಹುದು. ಚರ್ಮಕ್ಕೆ ಹೊಳಪನ್ನು ನೀಡುತ್ತದೆ.