ಅಯ್ಯೋ ನಮ್ದು ಇದೇ ಕತೆ... ನಂದಿನಿ ಹಾಡಿನ ನ್ಯೂವರ್ಷನ್‌ಗೆ ಹೌದಪ್ಪ ಹೌದು ಎಂದ ಗೃಹಿಣಿಯರು...!

ನನ್ನಮ್ಮ ಸೂಪರ್‌ಸ್ಟಾರ್ ಮಹಿತಾ ಅಮ್ಮ ತನುಜಾ ಗೃಹಣಿಯರಿಗಾಗಿ ನಾನು ನಂದಿನಿ ಹೊಸ ವರ್ಷನ್‌ ಸೃಷ್ಟಿಸಿದ್ದು, ಈ ವೀಡಿಯೋ ನೋಡಿದ ಹೆಂಗೆಳೆಯರೆಲ್ಲಾ ನಮ್ದು ಇದೇ ಕತೆ ಎಂದಿದ್ದಾರೆ. ಈ ವೀಡಿಯೋ ಈಗ ಸಾಕಷ್ಟು ವೈರಲ್ ಆಗ್ತಿದೆ.

Nanu nandini housewife version goes viral, created by nannamma superstar Fame mahita mother tanuja akb

ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ ವಿಕಿಪೀಡಿಯಾ ಖ್ಯಾತಿಯ ವಿಕಾಸ್ ಅವರ 'ನಾನು ನಂದಿನಿ' ಹಾಡು ಸಾಮಾಜಿಕ ಜಾಲತಾಣದಲ್ಲಿ ಸುಂಟರಗಾಳಿಯನ್ನೇ ಎಬ್ಬಿಸಿದ್ದು, ಯಾರ ಬಾಯಲ್ಲಿ ಕೇಳಿದರು ಇದೇ ಹಾಡು ಗುನುಗುತ್ತಿರುತ್ತಾರೆ. ಈ ನಾನು ನಂದಿನಿ ಹಾಡು ವಿಕಾಸ್ & ಟೀಮ್‌ಗೆ ರಾತ್ರೋರಾತ್ರಿ ಜನಪ್ರಿಯತೆಯನ್ನು ತಂದು ಕೊಟ್ಟಿದೆ. ಅನೇಕ ಸೆಲೆಬ್ರಿಟಿಗಳು ಕೂಡ ಈ ಹಾಡಿಗೆ ಡಾನ್ಸ್‌ ಮಾಡುವ ಮೂಲಕ ರೀಲ್ಸ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಕೆಲವರು ಅದೇ ವರ್ಷನ್‌ನಲ್ಲಿ ತಾವೇ ಹಾಡು ಬರೆದು ರೀಲ್ಸ್ ಮಾಡಿದ್ದು, ಈ ವೀಡಿಯೋಗಳು ಕೂಡ ಬಹಳ ಫೇಮಸ್ ಆಗಿವೆ. ಅನೇಕರು ಈ ನಂದಿನಿ ಹಾಡಿನ ಟ್ಯೂನ್‌ನಲ್ಲಿಯೇ ಸಾಹಿತ್ಯ ಬದಲಿಸಿ ಹಾಡು ಬರೆದಿದ್ದು, ತಮ್ಮದೇ ಹೊಸ ಹಾಡಿಗೆ ರೀಲ್ಸ್ ಮಾಡಿ ಹಾಕುತ್ತಿದ್ದಾರೆ. ಇಂತಹ ಹಲವು ವಿಭಿನ್ನ ರೀಲ್ಸ್‌ಗೆ ವಿಕಿಪೀಡಿಯಾ ವಿಕಾಸ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ ನನ್ನಮ್ಮ ಸೂಪರ್‌ ಸ್ಟಾರ್‌ ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಗಳಿಸಿರುವ  ಪುಟಾಣಿ ಮಹಿತಾ (Mahita) ಅಮ್ಮ ತನುಜಾ (Tanuja) ಅವರು ಕೂಡ ತಮ್ಮದೇ ವರ್ಷನ್‌ನ ನಂದಿನಿ ಹಾಡು ಬರೆದು ರೀಲ್ಸ್ ಮಾಡಿದ್ದು, ಈ ರೀಲ್ಸ್ ಕೂಡ ಸಾಕಷ್ಟು ಕೂಡ ವೈರಲ್ ಆಗಿದೆ. ಮನೆ ಮಕ್ಕಳು ಸಂಸಾರದ ಏಳ್ಗೆಗಾಗಿ ತಮ್ಮೆಲ್ಲಾ ಆಕಾಂಕ್ಷೆಗಳನ್ನು ಬದಿಗಿಟ್ಟು ಜೀವನ ಸವೆಸುವ ಹೆಣ್ಣು ಮಕ್ಕಳ ಬವಣೆಯನ್ನು ಈ ರೀಲ್ಸ್  ಕಟ್ಟಿಕೊಟ್ಟಿದೆ. ಈ ವೀಡಿಯೋ ನೋಡಿದ ಅನೇಕ ಹೆಣ್ಣು ಮಕ್ಕಳು ಇದು ನಮ್ಮದೇ ಕತೆ ಎಂದಿದ್ದಾರೆ.

ರೈಲಲ್ಲೂ ಜೋಲಿ ಕಟ್ಟಿ ನಿದ್ದೆಗೆ ಜಾರಿದ ದೊಡ್ಡ ಪಾಪುವಿನ ವೀಡಿಯೋ ಸಖತ್ ವೈರಲ್‌

ಹಾಡಿನ ಸಾಹಿತ್ಯ ಹೀಗಿದೆ. 

ನಾನು ನಂದಿನಿ ಬಾಳಲ್ಲಿ ನೊಂದಿನಿ
ಮದ್ವೆ ಆಗಿನಿ ಮನೆ ಕೆಲಸ ಮಾಡ್ತಿನಿ
ಪಾತ್ರೆ ತೊಳಿತಿನಿ, ಕಸನೂ ಗುಡಿಸ್ತೀನಿ
ಗಂಡ ಮಕ್ಕಳಿಗಾಗಿ ಜೀವನನೇ ಸವೆಸ್ತೀನಿ

ಬಾರೆ ನಂದಿನಿ ಶಾಪಿಂಗ್ ಮಾಡಣ... ದುಡ್ಡಿಲ್ಲ...
ಬಾರೆ ನಂದಿನಿ ಪಾರ್ಟಿ ಮಾಡೋಣ... ನನ್‌ ಗಂಡ ಬಿಡಲ್ಲ...
ಬಾರೆ ನಂದಿನಿ ಮೂವಿಗೆ ಹೋಗೋಣ... ಟೈಮಿಲ್ಲಾ...
ಬಾರೆ ನಂದಿನಿ ಟ್ರಿಪ್‌ಗೆ ಹೋಗೋಣ... ನನ್‌ ಗಂಡ ಕಳ್ಸಲ್ಲ...

ಪುಸ್ತಕದೊಳಗೆ ಫೋನ್‌: ಅಮ್ಮನಿಗೆ ಸಿಕ್ಕಿಬಿದ್ದ ಬಾಲಕ: ವೀಡಿಯೋ ನೋಡಿ ಮಗ ಇವತ್ತು ಸತ್ತಾ ಎಂದ ನೆಟ್ಟಿಗರು


ಈ ಸಾಹಿತ್ಯದ ಜೊತೆಗೆ ತನುಜಾ ಅವರೇ ಈ ಹಾಡು ಹಾಡಿದ್ದು ಚೆನ್ನಾಗಿ ನಟನೆ ಮಾಡಿದ್ದಾರೆ. ಇದು ಬಹುತೇಕ ಮನೆ ಮಕ್ಕಳು ಎಂದು ತಮ್ಮ ಕನಸನ್ನು ಕಡೆಗಣಿಸಿ ಮನೆಗಾಗಿ ಜೀವನ ಸವೆಸುವ ಹೆಣ್ಣು ಮಕ್ಕಳ ಪಾಡಾಗಿದೆ. ವೀಡಿಯೋ ನೋಡಿದ ಅನೇಕ ಮಹಿಳೆಯರು ನಮ್ದು ಇದೇ ಕತೆ ಎಂದು ಕಾಮೆಂಟ್ ಮಾಡಿದ್ದಾರೆ. ನೀವು ಬರೆದಿರುವ ಪ್ರತಿಯೊಂದು ಪದವೂ ನಮ್ಮ ಜೀವನಕ್ಕೆ ಸೂಟ್ ಆಗ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮನೆಯಲ್ಲಿರುವ ಪ್ರತಿಯೊಬ್ಬ ಮಹಿಳೆಗೂ ಇದು ಅನ್ವಯವಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.  ನ್ಯೂಸ್ ಚಾನೆಲ್‌ನಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದ ತನುಜಾ ಅವರು ತಮ್ಮ ಮುದ್ದಿನ ಮಗಳು ಮಹಿತಾ ಜೊತೆ ಕಲರ್ಸ್‌ ಕನ್ನಡದ ರಿಯಾಲಿಟಿ ಶೋ ನನ್ನಮ್ಮ ಸೂಪರ್‌ ಸ್ಟಾರ್‌ನಲ್ಲಿ ಭಾಗವಹಿಸಿದ್ದರು. ಇದಾದ ನಂತರ ಈ ಅಮ್ಮ ಮಗಳಿಬ್ಬರ ಖ್ಯಾತಿ ದಿನೇ ದಿನೇ ಹೆಚ್ಚುತ್ತಿದೆ. ಪುತ್ರಿ ಮಹಿತಾ ಹಾಡು ಹಾಗೂ ನಟನೆ ಎರಡರಲ್ಲೂ ಎಕ್ಸ್‌ಫರ್ಟ್‌ ಆಗಿದ್ದು, ಮಹಿತಾ ವೀಡಿಯೋ ಕೂಡ ಇತ್ತೀಚೆಗೆ ಸಖತ್ ವೈರಲ್ ಆಗಿತ್ತು. ಒಟ್ಟಿನಲ್ಲಿ ಈ ಅಮ್ಮ ಮಗಳಿಬ್ಬರಿಗೂ ಕಲಾ ಸರಸ್ವತಿ ಚೆನ್ನಾಗಿಯೇ ಒಲಿದಿದ್ದಾಳೆ ಎಂದರೆ ತಪ್ಪಗಲಾರದು. 

ರೈಲು ಬರಲು ಕೆಲ ಕ್ಷಣಗಳಿರುವಾಗ ರೈಲುಹಳಿಗೆ ಬಿದ್ದ ಅಂಧ ತಾಯಿಯ ಮಗ: ಆಮೇಲಾಗಿದ್ದು ಪವಾಡ..!

ಹೆಂಗೆಳೆಯರೆಲ್ಲಾ ಇಷ್ಟಪಟ್ಟ ನಂದಿನಿ ಹಾಡನ್ನು ನೀವು ಒಮ್ಮೆ ಕೇಳಿ

 

 

Latest Videos
Follow Us:
Download App:
  • android
  • ios