ಪುಸ್ತಕದೊಳಗೆ ಫೋನ್‌: ಅಮ್ಮನಿಗೆ ಸಿಕ್ಕಿಬಿದ್ದ ಬಾಲಕ: ವೀಡಿಯೋ ನೋಡಿ ಮಗ ಇವತ್ತು ಸತ್ತಾ ಎಂದ ನೆಟ್ಟಿಗರು

ಓದಲು ಹೇಳಿದರೆ ಮೊಬೈಲ್ ಒತ್ತುತ್ತಾ ಕೂರುವ ಅಮ್ಮ ಅಪ್ಪ ಬರುತ್ತಿದ್ದಂತೆ ಮೆಲ್ಲನೆ ಮೊಬೈಲ್ ಅಡಗಿಸಿ ಪೋಷಕರ ಕಣ್ಣಿಗೆ ಮೆಣ್ಣೆರಚುವ ಮಕ್ಕಳು ಕಡಿಮೆ ಏನಿಲ್ಲ,  ಈ ರೀತಿ ಕಳ್ಳಾಟವಾಡುತ್ತಿದ್ದ ಪುಟ್ಟ ಬಾಲಕನೋರ್ವ ಅಮ್ಮನ ಕೈಗೆ ಸಿಕ್ಕಿಬಿದ್ದಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. 

mother caught his son using mobile phone  inside  book  while studying what happens next to know watch this viral video akb

ಇತ್ತೀಚೆಗಂತೂ ಸಣ್ಣವರಿಂದ ಹಿಡಿದು ಮುದುಕರವರೆಗೂ ಎಲ್ಲರೂ ಮೊಬೈಲ್‌ಗೆ ದಾಸರಾಗಿದ್ದಾರೆ. ಮೊಬೈಲ್ ಹಿಡಿದ ಜನ ತಮ್ಮ ಸಮೀಪದಲ್ಲೇ ಬಾಂಬ್ ಬ್ಲಾಸ್ಟ್‌ ಆದರೂ ತಿಳಿಯದಷ್ಟು ಮೊಬೈಲ್ ಒಳಗೆ ಮುಳುಗಿ ಹೋಗಿರುತ್ತಾರೆ. ಮಕ್ಕಳನ್ನಂತೂ ಈ ಮೊಬೈಲ್ ಚಟದಿಂದ ಬಿಡಿಸುವುದೇ ಪೋಷಕರಿಗೆ ದೊಡ್ಡ ತಲೆನೋವಾಗಿದೆ.  ಓದಲು ಹೇಳಿದರೆ ಮೊಬೈಲ್ ಒತ್ತುತ್ತಾ ಕೂರುವ ಅಮ್ಮ ಅಪ್ಪ ಬರುತ್ತಿದ್ದಂತೆ ಮೆಲ್ಲನೆ ಮೊಬೈಲ್ ಅಡಗಿಸಿ ಪೋಷಕರ ಕಣ್ಣಿಗೆ ಮೆಣ್ಣೆರಚುವ ಮಕ್ಕಳು ಕಡಿಮೆ ಏನಿಲ್ಲ, ಈ ಮೂಲಕ ಮಕ್ಕಳು ತಮ್ಮದೇ ಭವಿಷ್ಯದ ಮೇಲೆ ಕಲ್ಲು ಹಾಕಿಕೊಳ್ಳುತ್ತಿದ್ದಾರೆ. ಈ ರೀತಿ ಕಳ್ಳಾಟವಾಡುತ್ತಿದ್ದ ಪುಟ್ಟ ಬಾಲಕನೋರ್ವ ಅಮ್ಮನ ಕೈಗೆ ಸಿಕ್ಕಿಬಿದ್ದಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. 

ವೀಡಿಯೋದಲ್ಲೇನಿದೆ.

ವೀಡಿಯೋದಲ್ಲಿ ಕಾಣಿಸುವಂತೆ ತಾಯಿಯೊಬ್ಬಳು (Mother) ಓದುತ್ತಿರುವ ಪುಟ್ಟ ಬಾಲಕನ ಮುಂದೆ ಕುಳಿತು ತನ್ನ ಕೆಲಸದಲ್ಲಿ ತೊಡಗಿದ್ದಾಳೆ. ಈ ವೇಳೆ ಬಾಲಕ ಅಮ್ಮನ ಕಣ್ಣು ತಪ್ಪಿಸಿ ಪುಸ್ತಕದೊಳಗೆ ಮೊಬೈಲ್ ಇರಿಸಿ ಅಮ್ಮನ ಮುಂದೆ ಓದುತ್ತಿರುವಂತೆ ನಟಿಸುತ್ತಾ ಮೊಬೈಲ್ (Smart Phone) ನೋಡುತ್ತಿದ್ದಾನೆ. ಈ ಬಾಲಕನ ಕೈಯಲ್ಲಿ ಯುಪಿಎಸ್‌ಸಿ ಪರೀಕ್ಷೆಗೆ ಓದುವ ಪುಸ್ತಕವಿದ್ದರೆ, ಪುಸ್ತಕದ ಒಳಗೆ ಮೊಬೈಲ್ ಫೋನ್ ಇದೆ. ಈತನ ಕಪಟ ನಾಟಕವನ್ನು ಅಮ್ಮನಿಗೆ ತೋರಿಸುವ ಸಲುವಾಗಿ (ಬಹುಶಃ ಬಾಲಕನ ಹಿರಿಯ ಸಹೋದರ) ಯುವಕನೋರ್ವ ಬಾಲಕನ ಹಿಂದಿನಿಂದ ಕನ್ನಡಿ ಹಿಡಿದಿದ್ದಾನೆ. ಆದರೆ ಮೊಬೈಲ್‌ನಲ್ಲಿ ಮುಳುಗಿದ್ದ ಬಾಲಕನಿಗೆ ಇದ್ಯಾವುದು ಗೊತ್ತಿಲ್ಲ. ಇತ್ತ ಕನ್ನಡಿಯಲ್ಲಿ ಮಗನ ಹಣೆಬರಹ ತಾಯಿಗೆ ಕಂಡಿದ್ದು, ಕೂಡಲೇ ಸಿಟ್ಟಿಗೆದ್ದ ತಾಯಿ ಪುಸ್ತಕವನ್ನು(Book) ಮಗುಚಿ ಹಾಕಿದಾಗ ಅಲ್ಲಿ ಮೊಬೈಲ್ ಇರುವುದು ಕಂಡಿದೆ. 

ಅಮ್ಮನ ಪ್ರೀತಿಗೆ ಸರಿಸಾಟಿ ಎಲ್ಲಿ? ಮರಿಗಳಿಗಾಗಿ ಚಿಕನ್ ಪ್ಯಾಕೇಟನ್ನೇ ಎಗರಿಸಿದ ತಾಯಿ ಬೆಕ್ಕು

ಇದನ್ನು ನೋಡಿದ ಅಮ್ಮ ಮಗನಿಗೆ ಎರಡು ಬಾರಿಸುವುದಕ್ಕೆ ಎದ್ದು ನಿಲ್ಲುತ್ತಾಳೆ, ಅದೇ ವೇಳೆ ಬಾಲಕ ಕಾಲಿಗೆ ಬುದ್ದಿ ಹೇಳಲು ಮುಂದಾಗಿ ಬಾಗಿಲಿನತ್ತ ಓಡಲು ಮುಂದಾಗಿದ್ದಾನೆ. ಆದರೆ ಅಷ್ಟರಲ್ಲೇ ಕನ್ನಡಿಯಲ್ಲಿ ಬಾಲಕನ ಹಣೆಬರಹವನ್ನು ತಾಯಿಗೆ ತೋರಿಸಿದ ಯುವಕ ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿಕೊಂಡು ಹೋಗಿದ್ದು, ಅಮ್ಮನ ಕೈಗೆ ಈ ಬಾಲಕ ಸಿಕ್ಕಿ ಬಿದ್ದಿದ್ದಾನೆ. ಅಮ್ಮನ ಕೈಗೆ ಮೊಬೈಲ್‌ಗೆ ಸಿಕ್ಕಿಬಿದ್ದು, ಅಚೇ ಓಡಿ ತಪ್ಪಿಸಿಕೊಳ್ಳಲು ಆಗದೇ ಪೇಚಿಗೆ ಸಿಲುಕಿದ ಬಾಲಕನ ವೀಡಿಯೋ ನೋಡುಗರನ್ನು ನಗೆಗಡಲಲ್ಲಿ ತೇಲಿಸುತ್ತಿದೆ. ಇದು ತಮಾಷೆಗೆ ಮಾಡಿದ ವೀಡಿಯೋ ಆಗಿದ್ದರೂ ವೀಡಿಯೋದ ಕಂಟೆಂಟ್‌ನಿಂದಾಗಿ ಇದು ವೈರಲ್ ಆಗಿದೆ. 

ಫ್ಯಾಷನ್‌ ಲೋಕದಲ್ಲಿ ಹವಾ ಸೃಷ್ಟಿಸಿದ ಪುಟಾಣಿ ಮಾಡೆಲ್‌ಗಳ ಸುಂದರ ಫೋಟೋಗಳು

ವೀಡಿಯೋ ನೋಡಿದ ಅನೇಕರು ಹಲವು ರೀತಿ ಹಾಸ್ಯಮಯವಾಗಿ ಕಾಮೆಂಟ್ ಮಾಡಿದ್ದಾರೆ. ಅಮ್ಮ ಮಗ ಐಎಎಸ್ ಆಗ್ತಾನೆ ಎಂದು ಬಯಸಿದ್ರೆ ಮಗನ ಕತೆ ನೋಡಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನಾನು ಇದೇ ರೀತಿ ಮಾಡುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಮಗ ಇವತ್ತು ಸತ್ತಾ ಎಂದು ಪ್ರತಿಕ್ರಿಯಿಸಿದ್ದಾರೆ. ಇವತ್ತು ಮಗನ ಬೆನ್ನು ಹುಡಿಯಾಗೋದು ಗ್ಯಾರಂಟಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದರ ಜೊತೆಗೆ ನೂರಾರು ಜನ ನಗುವ ಇಮೋಜಿ ಕಾಮೆಂಟ್ ಮಾಡಿದ್ದಾರೆ.

ಮಲಗೋದು ಭಾರತದಲ್ಲಿ ತಿನ್ನೋದು ಫಾರಿನ್‌ನಲ್ಲಿ: ಬಾರ್ಡರ್‌ನಲ್ಲಿರುವ ವಿಶೇಷ ಮನೆ ಇದು...!

ಅಮ್ಮನ ಕೈಗೆ ಸಿಕ್ಕಿಬಿದ್ದು ಒದೆ ತಿನ್ನಲು ಸಿದ್ದನಾದ ಈ ಮಗನ ವೀಡಿಯೋವನ್ನು ನೀವು ಒಮ್ಮೆ ನೋಡಿ


 

Latest Videos
Follow Us:
Download App:
  • android
  • ios