Garden tips : ಈ ಜಾಗದಲ್ಲಿ ಅಪ್ಪಿತಪ್ಪಿಯೂ ಪುದೀನಾ ಬೆಳೆಸ್ಬೇಡಿ
garden tips :ಬಾಲ್ಕನಿ, ಟೆರೆಸ್ ನಲ್ಲಿ ಸುಲಭವಾಗಿ ಬೆಳೆಯಬಲ್ಲ ಗಿಡಗಳಲ್ಲಿ ಪುದೀನಾ ಕೂಡ ಒಂದು. ಪಾಟ್ ನಲ್ಲಿ ಇದನ್ನು ಬೆಳೆಸ್ಬಹುದು. ಅಡುಗೆ ರುಚಿಯನ್ನು ಹೆಚ್ಚಿಸುವ ಈ ಪುದೀನಾ ಔಷಧಿ ಗುಣವನ್ನು ಹೊಂದಿದೆ. ಮನೆಯಲ್ಲಿ ಪುದೀನಾ ಬೆಳೆಸೋ ಪ್ಲಾನ್ ಇದ್ರೆ ಕೆಲ ಪ್ರದೇಶದಲ್ಲಿ ಅಪ್ಪಿತಪ್ಪಿಯೂ ಬೆಳೆಸ್ಬೇಡಿ.

ಪುದೀನಾ ಬೆಳೆ
ಪುದೀನ ಪರಿಮಳಯುಕ್ತ, ಕಡಿಮೆ ಎತ್ತರಕ್ಕೆ ಬೆಳೆಯುವ ಮತ್ತೆ ಸುಲಭವಾಗಿ ಹರಡುವ ಸಸ್ಯ. ಇದನ್ನು ಬೆಳೆಯೋದು ಸುಲಭ. ಪುದೀನಾವನ್ನು ಬೆಳೆಸುವ ಮುನ್ನ ಕೆಲ ವಿಷ್ಯವನ್ನು ನೀವು ನೆನಪಿಡಬೇಕು. ಯಾಕೆಂದ್ರೆ ಇದು ತುಂಬಾ ವೇಗವಾಗಿ ಬೆಳೆಯುತ್ತದೆ. ಇಡೀ ಪ್ರದೇಶವನ್ನು ಇದು ಆಕ್ರಮಿಸಬಹುದು. ಇದ್ರಿಂದ ನಿಮ್ಮ ಗಾರ್ಡನ್ ಗೆ ಹಾನಿ ಮಾಡ್ಬಹುದು. ಬೇರೆ ಗಿಡದ ಬೆಳವಣಿಗೆಗೆ ಅಡ್ಡಿ ಮಾಡ್ಬಹುದು. ಹಾಗಾಗಿ ಪುದೀನಾ ಎಲ್ಲಿ ಬೆಳೆಸಿದ್ರೆ ಒಳ್ಳೆಯದು ಎಂಬ ವಿಷ್ಯ ನಿಮಗೆ ತಿಳಿದಿರಬೇಕು.
ಹೂವಿನ ಗಿಡಗಳ ಅಕ್ಕಪಕ್ಕ ಬೆಳೆಸ್ಬೇಡಿ
ಪುದೀನದ ಕಾಂಡ,ಬೇರು ವೇಗವಾಗಿ ಹಬ್ಬುತ್ತೆ. ನಿಮ್ಮ ಗಾರ್ಡನ್ ನಲ್ಲಿರುವ ಹೂವಿನ ಗಿಡಗಳ ಜಾಗಕ್ಕೆ ಅದು ದಾಳಿ ನಡೆಸೋದಲ್ದೆ ಅವುಗಳ ನೀರು, ಪೋಷಕಾಂಶವನ್ನು ಹೀರಿಕೊಳ್ಳುತ್ತೆ. ಇದ್ರಿಂದ ಹೂವಿನ ಗಿಡಗಳ ಬೆಳವಣಿಗೆ ಕುಂಠಿತವಾಗುತ್ತೆ. ಸುಂದರ ಹೂ ಬಿಡ್ತಿದ್ದ ಗಿಡ ಏಕಾಏಕಿ ಒಣಗ್ಬಹುದು, ಹಾಳಾಗ್ಬಹುದು.
ತರಕಾರಿ ಗಿಡಗಳಿಂದ್ಲೂ ಪುದೀನಾ ದೂರ ಇರ್ಲಿ
ಪುದೀನ ಎಲೆಗಳು,ಕೀಟ, ಹುಳುಗಳಿಂದ ಗಿಡವನ್ನು ರಕ್ಷಿಸುತ್ತೆ. ಅದ್ರ ವಾಸನೆಗೆ ಕೀಟ ಹತ್ತಿರ ಬರೋದಿಲ್ಲ. ಇದೇ ಕಾರಣಕ್ಕೆ ಕೆಲವರು ತರಕಾರಿ ಗಿಡದ ಪಕ್ಕದಲ್ಲಿ ಪುದೀನಾ ಬೆಳೆಸ್ತಾರೆ. ಆದ್ರೆ ಪುದೀನಾ ಗಿಡದ ಬೇರುಗಳು ಬೇಗ ಹರಡುವ ಕಾರಣ ತರಕಾರಿ ಬೇರುಗಳನ್ನು ಉಸಿರುಗಟ್ಟಿಸುತ್ತೆ. ಅವುಗಳಿಗೆ ಅಗತ್ಯವಿರೋ ಪೋಷಕಾಂಶ ಸಿಗೋದಿಲ್ಲ.
ಲಾನ್
ನೀವು ಮನೆ ಮುಂದೆ ಅಥವಾ ಅಕ್ಕಪಕ್ಕ ಲಾನ್ ಬೆಳೆಸಿದ್ರೆ ಅಲ್ಲೂ ಪುದೀನಾ ಬೆಳೆಸುವ ಪ್ರಯತ್ನಕ್ಕೆ ಹೋಗ್ಬೇಡಿ. ಇದು ಲಾನ್ ಪೂರ್ತಿ ಹರಡಿ ಅದ್ರ ಸೌಂದರ್ಯ ಹಾಳು ಮಾಡುತ್ತೆ. ಲಾನ್ ಜೊತೆ ನೀವು ಈ ಪುದೀನಾ ಗಿಡ ಕತ್ತರಿಸೋದು ಕಷ್ಟವಾಗುತ್ತದೆ.
ಒಣ ಪ್ರದೇಶದಲ್ಲಿ ಬೆಳೆಸ್ಬೇಡಿ
ಪುದೀನಾ, ತೇವಾಂಶವುಳ್ಳ ಪೋಷಕಾಶ ಭರಿತ ಮಣ್ಣನ್ನು ಇಷ್ಟಪಡುತ್ತದೆ. ನೀವು ಒಣ ಅಥವಾ ಮರಳಿರುವ ಪ್ರದೇಶದಲ್ಲಿ ಪುದೀನಾ ಬೆಳೆಸಿದ್ರೆ, ಅದು ವೇಗವಾಗಿ ಹರಡಲು ಪ್ರಯತ್ನ ಮಾಡೋದಲ್ದೆ ಅಕ್ಕಪಕ್ಕದ ಮಣ್ಣನ್ನು ದುರ್ಬಲಗೊಳಿಸುತ್ತದೆ.
ಪಾಟ್ ಬಳಸಿ
ಪುದೀನ, ಗಾರ್ಡನ್ ನಲ್ಲಿ ಉಳಿದ ಗಿಡಕ್ಕೆ ತೊಂದ್ರೆ ನೀಡ್ಬಾರದು ಅಂದ್ರೆ ನೀವು ಅದನ್ನು ಪಾತ್ರೆ ಅಥವಾ ಪಾಟ್ ನಲ್ಲಿ ಬೆಳೆಸಲು ಪ್ರಯತ್ನಿಸಿ. ಪಾಟ್ ನಲ್ಲಿ ಸುಲಭವಾಗಿ ಇದು ಬೆಳೆಯುತ್ತದೆ. ಪುದೀನಾ ಸಸ್ಯ, ತೇವಾಂಶವಿರುವ ಮಣ್ಣಿನಲ್ಲಿ ಬೆಳೆಯುತ್ತದೆ. ಬಿಸಿಲಿನಷ್ಟೆ ನೆರಳು ಇದಕ್ಕೆ ಅಗತ್ಯ. ಹೆಚ್ಚು ಸೂರ್ಯನ ಬೆಳಕು ಬೀಳುವಂತೆ ನೋಡಿಕೊಳ್ಳಿ. ಜೊತೆಗೆ ತೇವಾಂಶ ಕಾಯ್ದುಕೊಳ್ಳಿ. ಒಂದ್ವೇಳೆ ನೀವು ನೆಲದ ಮೇಲೆ ಅದನ್ನು ಬೆಳೆಸೋದಾದ್ರೆ ಆಗಾಗ ಅದನ್ನು ಟ್ರಿಮ್ ಮಾಡಿ. ಬುಡ ಸಮೇತ ಗಿಡವನ್ನು ಕೀಳಬೇಕು.
ಪುದೀನಾ ಬೆಳೆ ಹೀಗಿರಲಿ
ಪುದೀನಾದಲ್ಲಿ ನಾನಾ ವಿಧಗಳಿವೆ. ಪ್ರತಿಯೊಂದು ಸಸ್ಯ ತನ್ನದೇ ವೈಶಿಷ್ಟ್ಯತೆ ಹೊಂದಿದೆ. ನೀವು ನರ್ಸರಿಯಿಂದ ತಂದ ಪುದೀನಾ ಸಸ್ಯವನ್ನು ದೊಡ್ಡ ಪಾಟ್ ಗೆ ಸ್ಥಳಾಂತರಿಸಬೇಕು. ಅದಕ್ಕೂ ಮುನ್ನ ಪಾಟ್ ಗೆ ತೂತು ಮಾಡ್ಬೇಕು. ಪ್ರತಿ ಬಾರಿ ಹರಿತ ಕತ್ತರಿಯಿಂದ ನೀವು ಪುದೀನಾ ಎಲೆಯನ್ನು ಕತ್ತರಿಸಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

