ನೇಪಾಳದ ಬೀದಿಯಲ್ಲಿ ಮೈಸೂರಿನ ರಾಜ-ರಾಣಿ ವಾಕಿಂಗ್, ಶಾಪಿಂಗ್!
ಮೈಸೂರು ಮಹಾರಾಜ ಮತ್ತು ಮಹಾರಾಣಿಯವರು ಸದ್ಯ ನೇಪಾಳ ಪ್ರವಾಸದಲ್ಲಿದ್ದು, ಅಲ್ಲಿನ ಬೀದಿ ಬೀದಿಯಲ್ಲಿ ಸಾಮಾನ್ಯರಂತೆ ತಿರುಗಾಡುತ್ತಾ ಎಂಜಾಯ್ ಮಾಡ್ತಿದ್ದಾರೆ. ಕೆಲವೊಂದು ಫೋಟೋಗಳು ನಿಮಗಾಗಿ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಈ ವರ್ಷ ನೇಪಾಳದ ಪಶುಪತಿ ದೇವಾಲಯದಲ್ಲಿ ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಒಡೆಯರ್ (Yaduveer Krishnadatta Wadeyar) ಅವರ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು.
ಕನ್ನಡ ರಾಜ್ಯೋತ್ಸವ (Kannada Rajyotsava) ಕಾರ್ಯಕ್ರಮದಲ್ಲಿ ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಒಡೆಯರ್ ಜೊತೆಗೆ ಮಹಾರಾಣಿ ತೃಷಿಕಾ ಒಡೆಯರ್ ಭಾಗಿಯಾಗಿ ಕನ್ನಡ ಭಾಷೆ, ಸಂಸ್ಕೃತಿಯ ಉಳಿವಿಗಾಗಿ ಪ್ರತಿಯೊಬ್ಬರೂ ಕೈ ಜೋಡಿಸಬೇಕೆಂದು ಕರೆ ನೀಡಿದ್ದರು.
ನಮ್ಮ ನೆರೆ ರಾಷ್ಟ್ರವಾದ ನೇಪಾಳದಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ನಡೆದಿರೋದರಿಂದ ಮಹಾರಾಜ ದಂಪತಿ ನೇಪಾಳ (Nepal) ದರ್ಶನ ಕೂಡ ಮಾಡಿ ಬಂದಿದ್ದಾರೆ. ನೇಪಾಳದಲ್ಲಿ ಒಂದು ದಿನ ಎಂದು ಪೋಸ್ಟ್ ಹಾಕಿ, ಪ್ರಸಿದ್ಧ ತಾಣಗಳಿಗೆ ಭೇಟಿ ನೀಡಿದ್ದಾರೆ.
ಕಾರ್ಯಕ್ರಮದ ಬಳಿಕ ರಾಜ-ರಾಣಿ ನೇಪಾಳದ ಪ್ರವಾಸಿ ತಾಣಗಳನ್ನು ಸಾಮಾನ್ಯ ಜನರಂತೆ ಬೀದಿ ಬೀದಿಯಲ್ಲಿ ಸುತ್ತುತ್ತಾ, ಎಂಜಾಯ್ ಮಾಡುತಿದ್ದಾರೆ. ರಾಜಕುಮಾರಿ ತ್ರಿಷಿಕಾದೇವಿ ಈ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ (Social media) ಹಂಚಿಕೊಂಡಿದ್ದಾರೆ.
ಪಶುಪತಿನಾಥ ಮಂದಿರದ ಜೊತೆಗೆ ವಿವಿಧ ದೇಗುಲಗಳ ಫೋಟೋ, ಸ್ಟ್ರೀಟ್ ಮಾರ್ಕೆಟ್‌ನಲ್ಲಿ ಮಹಾರಾಣಿಯವರು ತಿರುಗಾಡುತ್ತಿರುವ ಫೋಟೊ ಹಾಗೂ ರೆಸ್ಟೋರೆಂಟ್ ಒಂದರ ಎದುರು ನಿಂತಿರುವ ಮಹಾರಾಜರ ಫೋಟೋಗಳನ್ನು ನೋಡಿ ಜನರು ಖುಷಿ ಪಟ್ಟಿದ್ದಾರೆ.
ಮೈಸೂರಿನ ಒಡೆಯ ದಂಪತಿ ಸಿಂಪಲ್ ಲುಕ್ ಮತ್ತು ಸರಳ ನಡೆಗೆ ಮನಸೋತಿರುವ ಅಭಿಮಾನಿಗಳು ನಿಮ್ಮ ಸರಳತೆಗೆ (simplicity) ಸಲಾಂ ಎಂದಿದ್ದಾರೆ. ಅಲ್ಲದೇ ನಮ್ಮ ಮಾಡರ್ನ್ ಯುಗದ ಮಹಾರಾಜ ಮತ್ತು ಮಹಾರಾಣಿ ಎಂದು ಕಾಮೆಂಟ್ ಮಾಡಿದ್ದಾರೆ.
ಮೈಸೂರು ಮಹಾರಾಜ ದಂಪತಿ ಪ್ರವಾಸ ಪ್ರಿಯರಾಗಿದ್ದು, ಹೆಚ್ಚಾಗಿ ಸಫಾರಿ, ಪ್ರವಾಸ ಮಾಡುತ್ತಲೇ ಇರುತ್ತಾರೆ. ರಾಣಿಯವರು ತಮ್ಮ ಸೋಶಿಯಲ್ ಮೀಡೀಯಾದಲ್ಲಿ ಫೋಟೋಗಳನ್ನು ಶೇರ್ ಮಾಡುವ ಮೂಲಕ ಜನರ ಜೊತೆ ಕನೆಕ್ಟ್ ಆಗುತ್ತಲಿರುತ್ತಾರೆ.