ಇಲ್ಲೊಬ್ಬರು ಪುಟ್ಟ ಮಗುವಿನ ತಾಯಿ ಮಗುವನ್ನು ಕರೆದುಕೊಂಡೆ ಪರೀಕ್ಷೆ ಬರೆಯಲು ಹಾಲ್ ತಲುಪಿದ್ದು, ಈ ವೇಳೆ ಪೊಲೀಸ್ ಸಿಬ್ಬಂದಿಯೊಬ್ಬರು ಆ ಮಗುವನ್ನು ನೋಡಿಕೊಳ್ಳುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಅಹ್ಮದಾಬಾದ್‌: ಸಂಸಾರಿಯಾಗಿ, ಪುಟ್ಟ ಮಗುವಿನ ಅಮ್ಮನಾಗಿ ಶಿಕ್ಷಣ ಮುಂದುವರಿಸುವ, ಅಥವಾ ಉದ್ಯೋಗವನ್ನು ನಿಭಾಯಿಸಿಕೊಂಡು ಹೋಗುವುದು ಸುಲಭವಲ್ಲ, ಬಹುತೇಕ ಸಂದರ್ಭಗಳಲ್ಲಿ ಹೆಣ್ಣಿನ ಆಸೆಗೆ ಕುಟುಂಬದವರೇ ತಣ್ಣೀರೆರಚುತ್ತಾರೆ. ಸಂಸಾರ ನಿಭಾಯಿಸಿಕೊಂಡು ಹೋದರೆ ಸಾಲದೇ, ಓದೇಕೆ, ಉದ್ಯೋಗವೇಕೆ, ನೀ ಓದಿ ಯಾರ ಸಾಕಾಬೇಕು ಎಂದು ಹೀಯಾಳಿಸುತ್ತಾರೆ. ಈ ಎಲ್ಲಾ ಹೀಯಾಳಿಕೆಗಳನ್ನು ಸಹಿಸಿಕೊಳ್ಳುತ್ತಾ ಪುಟ್ಟ ಮಗುವಿನ ಪಾಲನೆ ಮಾಡುತ್ತಾ ಬಹುತೇಕ ಮಹಿಳೆಯರು ಸಂಸಾರವನ್ನು ನಿಭಾಯಿಸಿಕೊಂಡು ಶಿಕ್ಷಣ ಉದ್ಯೋಗವನ್ನು ಮುಂದುವರಿಸುತ್ತಾರೆ. ಹಲವು ಅಡ್ಡಿ ಆತಂಕಗಳ ನಡುವೆಯೂ ಸಾಧಿಸುವ ಛಲದೊಂದಿಗೆ ಮುನ್ನುಗುತ್ತಾರೆ. ಕೆಲಸದ ಮಧ್ಯೆ ಅಮ್ಮನ ಕೈ ಕಾಲು ಹಿಂದೆಯೇ ಸುತ್ತುವ ಮಗುವನ್ನು ನಿಭಾಯಿಸಿಕೊಂಡು ಅದರ ಪಾಲನೆ ಮಾಡುತ್ತ ಮತ್ತೊಂದೆಡೆ ತಮ್ಮ ಗುರಿಯನ್ನು ಅರಸುತ್ತಾ ಸಾಗುತ್ತಾರೆ. ಅದೇ ರೀತಿ ಇಲ್ಲೊಬ್ಬರು ಪುಟ್ಟ ಮಗುವಿನ ತಾಯಿ ಮಗುವನ್ನು ಕರೆದುಕೊಂಡೆ ಪರೀಕ್ಷೆ ಬರೆಯಲು ಹಾಲ್ ತಲುಪಿದ್ದು, ಈ ವೇಳೆ ಪೊಲೀಸ್ ಸಿಬ್ಬಂದಿಯೊಬ್ಬರು ಆ ಮಗುವನ್ನು ನೋಡಿಕೊಳ್ಳುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಸಾಧಿಸುವ ಛಲವಿದ್ದರೆ ಹಾದಿ ನೂರಾರು ಎಂಬಂತೆ ಇಲ್ಲಿ ಪರೀಕ್ಷೆಗೆ ಮಗುವನ್ನೂ ಕರೆದುಕೊಂಡು ಬಂದ ಮಹಿಳೆಗೆ ಪೊಲೀಸರು ನೆರವಾಗಿದ್ದಾರೆ. ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರು ಮಗುವನ್ನು ಎತ್ತಿಕೊಂಡು ಅದರೊಂದಿಗೆ ಮಾತನಾಡುತ್ತಿರುವ ಫೋಟೋಗಳನ್ನು ಅಹ್ಮದಾಬಾದ್‌ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ (social media) ಪೋಸ್ಟ್ ಮಾಡಿದ್ದಾರೆ. ಆರು ತಿಂಗಳಷ್ಟೇ ತುಂಬಿದ ಈ ಮಗುವನ್ನು ಪೊಲೀಸ್ ಸಿಬ್ಬಂದಿ ಪರೀಕ್ಷೆ ಮುಗಿಯುವವರೆಗೂ ನೋಡಿಕೊಂಡು ಮಹಿಳೆ ಪರೀಕ್ಷೆ ಬರೆಯಲು ಸಹಕಾರ ನೀಡಿದ್ದಾರೆ. 

ಅಮ್ಮನ ಋಣ ತೀರಿಸೋದು ಸಾಧ್ಯಾನ : ಹೆಗಲ ಮೇಲೆ ಹೊತ್ತು ತೀರ್ಥಯಾತ್ರೆಗೆ ಹೊರಟ ಪುತ್ರ ವೀಡಿಯೋ ವೈರಲ್

ಗುಜರಾತ್ ಹೈಕೋರ್ಟ್‌ನ ಗುಮಾಸ್ತ ಹುದ್ದೆಗೆ ನೇಮಕಾತಿ ಪರೀಕ್ಷೆ (Recruitment examination) ನಡೆದಿದ್ದು, ಲಿಖಿತ ಪರೀಕ್ಷೆ ಇತ್ತು. ಗುಜರಾತ್‌ನ ಒಡವ್‌ನಲ್ಲಿದ್ದ ಈ ಪರೀಕ್ಷೆಗೆ ಮಹಿಳೆಯೊಬ್ಬರು 6 ತಿಂಗಳ ಮಗುವನ್ನು ಕರೆತಂದಿದ್ದರು. ಅಹ್ಮದಾಬಾದ್‌ನ ಪೊಲೀಸ್ ಕಾನ್ಸಟೇಬಲ್ ದಯಾ ಬೇನ್ ಅವರು ಈ ಆರು ತಿಂಗಳ ಮಗುವನ್ನು ತಾಯಿ ಪರೀಕ್ಷೆ ಬರೆಯುವವರೆಗೂ ನೋಡಿಕೊಂಡರು. 

ಅಹ್ಮದಾಬಾದ್‌ ಪೊಲೀಸರು ಹಾಕಿರುವ ಪೋಸ್ಟ್‌ನಲ್ಲಿ ಅವರು ಹೀಗೆ ಬರೆದುಕೊಂಡಿದ್ದಾರೆ, 'ಮಹಿಳಾ ಅಭ್ಯರ್ಥಿಯೊಬ್ಬರು ಗುಜರಾತ್ ಹೈಕೋರ್ಟ್‌ನ (Gujarat High court) ಗುಮಾಸ್ತ ಹುದ್ದೆಗೆ ಪರೀಕ್ಷೆ ಬರೆಯಲು ತಮ್ಮ ಆರು ತಿಂಗಳ ಮಗನೊಂದಿಗೆ ಓಢವ್‌ದ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದರು. ಪರೀಕ್ಷೆ ಆರಂಭವಾಗಲು ಇನ್ನೇನು ಕೆಲ ನಿಮಿಚಗಳಿರಬೇಕಾದರೆ ಮಗು ಜೋರಾಗಿ ಅಳಲಾರಂಭಿಸಿತು. ಆದರೆ ಈ ವೇಳೆ ಅಲ್ಲಿದ್ದ ಮಹಿಳಾ ಕಾನ್ಸ್‌ಟೇಬಲ್ ಅವರು ಮಗುವನ್ನು ನೋಡಿಕೊಂಡು ಸಮಾಧಾನಪಡಿಸುವ ಮೂಲಕ ಮಹಿಳೆ ಪರೀಕ್ಷೆ ಬರೆಯಲು ಸಹಾಯ ಮಾಡಿದರು. ಹೀಗೆ ಮಾನವೀಯತೆ ಮೆರೆದ ಮಹಿಳಾ ಕಾನ್ಸ್‌ಟೇಬಲ್‌ಗೆ ಧನ್ಯವಾದಗಳು' ಎಂದು ಅವರು ಬರೆದುಕೊಂಡಿದ್ದಾರೆ. 

ಹೆತ್ತಬ್ಬೆಯ ಮುದ್ದು ಮಗನ ದಾರಿ ತಪ್ಪಿಸಿತಾ? ಬಂಧನ ತಪ್ಪಿಸಲು ಪೊಲೀಸ್ ಕಾರ್ ಬಾನೆಟ್ ಮೇಲೆ ನೇತಾಡಿದ ಅಮ್ಮ

ಸಾಮಾಜಿಕ ಜಾಲತಾಣದಲ್ಲಿ ಅಹ್ಮದಾಬಾದ್ ಪೊಲೀಸರ ಈ ಪೋಸ್ಟ್ ವೈರಲ್ ಆಗಿದ್ದು, ಮಹಿಳಾ ಪೊಲೀಸ್ ಕಾರ್ಯವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಅನೇಕರು ನಿಮ್ಮ ಬಗ್ಗೆ ಹೆಮ್ಮೆ ಎನಿಸಿದೆ ಮೇಡಂ ಎಂದು ಕಾಮೆಂಟ್ ಮಾಡಿದ್ದಾರೆ. ಇದು ನಿಜವಾದ ಪೊಲೀಸರ ಕಾರ್ಯವೈಖರಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅಹ್ಮದಾಬಾದ್ ಪೊಲೀಸ್ ಕುಟುಂಬಕ್ಕೆ ಧನ್ಯವಾದಗಳು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

Scroll to load tweet…