ಅಮ್ಮನ ಋಣ ತೀರಿಸೋದು ಸಾಧ್ಯಾನ : ಹೆಗಲ ಮೇಲೆ ಹೊತ್ತು ತೀರ್ಥಯಾತ್ರೆಗೆ ಹೊರಟ ಪುತ್ರ ವೀಡಿಯೋ ವೈರಲ್
ಈಗಿನ ಕಾಲದಲ್ಲಿ ಅಮ್ಮನ ಋಣ ತೀರಿಸುವುದು ಬಿಡಿ ಕನಿಷ್ಠ ಚೆನ್ನಾಗಿ ನೋಡಿಕೊಂಡರೆ ಅದೇ ದೊಡ್ಡ ಪುಣ್ಯ ಹೀಗಿರುವಾಗ ಮಗನೋರ್ವ ಅಮ್ಮನ ಮೇಲಿನ ಪ್ರೀತಿಯಿಂದ ಆಕೆಯನ್ನು ಹೊತ್ತುಕೊಂಡು ತೀರ್ಥಕ್ಷೇತ್ರಗಳ ದರ್ಶನಕ್ಕೆ ಹೊರಟಿದ್ದು, ಆತನ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಮ್ಮನಿಗೆ ಅಮ್ಮನೇ ಸಾಟಿ, ಹೆತ್ತಮ್ಮನ ಋಣ ತೀರಿಸುವುದು ಬಹಳ ಕಷ್ಟದ ಕೆಲಸ ಏನು ತ್ಯಾಗ ಮಾಡಿದರು ಅಮ್ಮ ಮಾಡುವ ತ್ಯಾಗಕ್ಕೆ ಯಾವುದು ಸರಿಸಾಟಿಯಾಗದು, ನವಮಾಸಗಳ ಕಾಲ ಮಗುವನ್ನು ಹೊಟ್ಟೆಯಲ್ಲಿ ಹೊತ್ತು ಜನ್ಮ ನೀಡುವ ತಾಯಿಗೆ ಹೆರಿಗೆಯೊಂದು ಪುನರ್ಜನ್ಮವೇ ಸರಿ. ಅಂತಹ ತಾಯಿ ತನ್ನ ಕರುಳ ಕುಡಿಯ ಒಳಿತಿಗಾಗಿ ಜೀವಮಾನವಿಡೀ ಶ್ರಮಿಸುತ್ತಾಳೆ. ಈಗಿನ ಕಾಲದಲ್ಲಿ ಅಮ್ಮನ ಋಣ ತೀರಿಸುವುದು ಬಿಡಿ ಕನಿಷ್ಠ ಚೆನ್ನಾಗಿ ನೋಡಿಕೊಂಡರೆ ಅದೇ ದೊಡ್ಡ ಪುಣ್ಯ ಹೀಗಿರುವಾಗ ಮಗನೋರ್ವ ಅಮ್ಮನ ಮೇಲಿನ ಪ್ರೀತಿಯಿಂದ ಆಕೆಯನ್ನು ಹೊತ್ತುಕೊಂಡು ತೀರ್ಥಕ್ಷೇತ್ರಗಳ ದರ್ಶನಕ್ಕೆ ಹೊರಟಿದ್ದು, ಆತನ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಿಮಗೆಲ್ಲಾ ಶ್ರವಣಕುಮಾರನ ಕಥೆ ಗೊತ್ತಿರಬಹುದು, ಎರಡು ಬುಟ್ಟಿಗಳಲ್ಲಿ ಅಪ್ಪ ಅಮ್ಮನನ್ನು ಹೊತ್ತು ತೀರ್ಥಯಾತ್ರೆಗೆ ಕರೆದೊಯ್ದ ಶ್ರವಣ ಕುಮಾರನ ಕತೆ ಯಾರಿಗೂ ಗೊತ್ತಿರದಿರಲು ಸಾಧ್ಯವಿಲ್ಲ. ಅದೇ ಕಾರಣಕ್ಕೆ ಪೋಷಕರನ್ನು ದೇವರಂತೆ ಕಾಳಜಿ ಮಾಡುವ ಮಕ್ಕಳನ್ನು ಇಂದಿಗೂ ಶ್ರವಣಕುಮಾರಿಗೆ ಹೋಲಿಸುತ್ತಾರೆ. ಅದೇ ರೀತಿ ಇಲ್ಲೊಬ್ಬ ತರುಣ ಅಮ್ಮನ ಜೊತೆ ಗಂಗಾಜಲವನ್ನು ಹೊತ್ತು ತೀರ್ಥಯಾತ್ರೆ ಹೊರಟಿದ್ದಾನೆ.
Travel Tips: ಅಮರನಾಥ ಯಾತ್ರೆಯಲ್ಲಿ ಬರ್ಗರ್ – ಫಿಜ್ಜಾ ಬ್ಯಾನ್
ಕನ್ವರ್ ಯಾತ್ರೆಗಾಗಿ (Kanwar Yatra 2023) ಮಗನೋರ್ವ ತಾಯಿಯನ್ನು ಹೆಗಲಮೇಲೆ ಹೊತ್ತು ಸಾಗಿಸುವ ವೀಡಿಯೋವೊಂದು ವೈರಲ್ ಆಗಿದೆ. ಸುದ್ದಿಸಂಸ್ಥೆ ಎಎನ್‌ಐ ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ತಕ್ಕಡಿಯಂತಿರುವ ಬುಟ್ಟಿಯನ್ನು ನಿರ್ಮಿಸಿ ಅದರ ಒಂದು ಬದಿಯಲ್ಲಿ ಅಮ್ಮನನ್ನು ಮತ್ತೊಂದು ಬದಿಯಲ್ಲಿ ಗಂಗಾಜಲವನ್ನು ತುಂಬಿಕೊಂಡು ಯುವಕ ಕನ್ವರ್ ಯಾತ್ರೆಗೆ ಹೊರಟಿರುವ ದೃಶ್ಯ ವೀಡಿಯೋದಲ್ಲಿದೆ. ಹರಿದ್ವಾರದಲ್ಲಿ ಸೆರೆಯಾದ ವೀಡಿಯೋ ಇದಾಗಿದ್ದು, ಪ್ರತಿ ವರ್ಷ ಶಿವ ಭಕ್ತರು ಉತ್ತರ ಭಾರದತ ಲೆಕ್ಕಾಚಾರದ ಪ್ರಕಾರ ಪ್ರಸ್ತುತ ಶ್ರಾವಣ ಮಾಸವಾಗಿರುವ ಜುಲೈ 4 ರಿಂದ ಆಗಸ್ಟ್ ಅಂತ್ಯದವರೆಗೂ ಕನ್ವರ್ ಯಾತ್ರೆಯನ್ನು ಕೈಗೊಳ್ಳುತ್ತಾರೆ. ಈ ವೇಳೆ ಕಾಲ್ನಡಿಗೆಯಲ್ಲಿಯೇ ದೇಶದ ವಿವಿಧೆಡೆಯಿಂದ ಹಿಂದೂ ತೀರ್ಥಕ್ಷೇತ್ರಗಳಾದ ಉತ್ತರಾಖಂಡ್‌ನ ಹರಿದ್ವಾರ, ಗೋಮುಖ, ಗಂಗೋತ್ರಿಗೆ ಭಕ್ತರು ಕಾಲ್ನಡಿಗೆಯಲ್ಲಿ ಸಾಗಿ ಬರುತ್ತಾರೆ. ಹೀಗೆ ಬರುವ ಯಾತ್ರಿಗಳು ಶಿವನಿಗೆ ಅಭಿಷೇಕ ಮಾಡುವುದಕ್ಕಾಗಿ ಗಂಗೆಯ ನೀರನ್ನು ಹೊತ್ತು ತರುತ್ತಾರೆ.
ಸೈಕಲ್‌ನಲ್ಲಿ 11 ರಾಜ್ಯಗಳಿಗೆ ತೀರ್ಥಯಾತ್ರೆ ಕೈಗೊಂಡ ತಮಿಳುನಾಡಿನ ವ್ಯಕ್ತಿ!
ಜುಲೈ 4 ರಂದು ಪ್ರಾರಂಭವಾದ ಈ ಯಾತ್ರೆ ಆಗಸ್ಟ್ ಅಂತ್ಯದವರೆಗೆ ಮುಂದುವರೆಯಲಿದೆ. ಗಂಗಾ ನದಿಯ ಪವಿತ್ರ ನೀರನ್ನು ತರಲು ದೇಶದಾದ್ಯಂತದ ಭಕ್ತರು ಹಿಂದೂ ಯಾತ್ರಾ ಸ್ಥಳಗಳಾದ ಹರಿದ್ವಾರ, ಗೌಮುಖ ಮತ್ತು ಉತ್ತರಾಖಂಡದ ಗಂಗೋತ್ರಿ ಮತ್ತು ಬಿಹಾರದ ಸುಲ್ತಂಗಂಜ್‌ಗೆ ಪ್ರಯಾಣಿಸುತ್ತಾರೆ. ನಂತರ ಅಲ್ಲಿಂದ ನೀರು ತೆಗೆದುಕೊಂಡು ಬಂದು ಶಿವನಿಗೆ ಅಭಿಷೇಕ ಮಾಡುತ್ತಾರೆ. 59 ದಿನಗಳ ಕಾಲ ಈ ಪವಿತ್ರ ಮಾಸವಿದ್ದು, ಜನ ತೀರ್ಥಕ್ಷೇತ್ರಗಳ ದರ್ಶನ ಪಡೆಯುತ್ತಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಅಮ್ಮನನ್ನು ಹೊತ್ತು ಸಾಗುತ್ತಿರುವ ಮಗನಿಗೆ ಧನ್ಯವಾದ ಸಲ್ಲಿಸಿದ್ದಾರೆ.