37 ಸಾವಿರ ಅಡಿ ಎತ್ತರದಲ್ಲಿ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರ ಡಾನ್ಸ್‌: ವೈರಲ್ ವಿಡಿಯೋ

37 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರು ಹಾಡೊಂದಕ್ಕೆ ಬಿಂದಾಸ್ ಆಗಿ ಡಾನ್ಸ್ ಮಾಡಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ.

Passengers dancing in Indigo flight for haryani song video goes viral akb

ನವದೆಹಲಿ: ಇತ್ತೀಚಿನ ಕೆಲ ತಿಂಗಳುಗಳಿಂದ  ವಿಮಾನದಲ್ಲಿ ಪ್ರಯಾಣಿಕರು ಕುಡಿದು ಮಾಡುವ ಕಿತಾಪತಿಗಳಿಂದಾಗಿ ವಿಮಾನ ಪ್ರಯಾಣದ ಬಗ್ಗೆ ವಿಮಾನದಲ್ಲಿ ಪ್ರಯಾಣಿಸುವ ದೊಡ್ಡವರ ಬಗ್ಗೆ ಜನ ಸಾಮಾನ್ಯರಲ್ಲಿ ಒಂದು ರೀತಿಯ ಅಸಹ್ಯಭಾವ ಮೂಡಿತ್ತು.  ಕೆಲವರು ವಿಮಾನದಲ್ಲಿ  ಪ್ರಯಾಣಿಕರು ಕುಡಿದು ಗಗನಸಖಿಗಳಿಗೆ ಕಿರುಕುಳ ನೀಡಿದ್ದಲ್ಲದೇ ಕೆಲವರು ವಿಮಾನದ ಸಿಬ್ಬಂದಿಯ ಮೇಲೆ ಹಲ್ಲೆ ಕೂಡ ಮಾಡಿದ್ದ ಘಟನೆಗಳು ನಡೆದಿದ್ದವು. ಇಂತಹ ಅಸಹ್ಯಕರ ಘಟನೆಗಳ ನಡುವೆ ಈಗ ವಿಮಾನದಲ್ಲಿ ಪ್ರಯಾಣಿಕರು  ಡಾನ್ಸ್ ಮಾಡಿದ ಘಟನೆ ನಡೆದಿದೆ. 

ಹೌದು, 37 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರು ಹಾಡೊಂದಕ್ಕೆ ಬಿಂದಾಸ್ ಆಗಿ ಡಾನ್ಸ್ ಮಾಡಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಪ್ರಯಾಣಿಕರ ಜೋಶ್ ಹಾಗೂ ಶಕಲಕ ಸ್ಟೆಪ್‌ ನೋಡುಗರನ್ನು ಕೂಡ ಕುಣಿಯುವಂತೆ ಮಾಡಿದೆ. ಆದರೆ ಅನೇಕರು ಸುರಕ್ಷತೆಯ ಆತಂಕ ವ್ಯಕ್ತಪಡಿಸಿದ್ದಾರೆ. ಹರ್ಯಾಣಿ ಗಾಯಕಿ ಸಪ್ನಾ ಚೌಧರಿ ಅವರ 'ತೆರಿ ಅಖ್ಯಾ ಕಾ ಯೋ ಕಾಜಲ್' ಹಾಡು ಟೇಪೊಂದರಲ್ಲಿ ಪ್ಲೇ ಆಗುತ್ತಿದ್ದರೆ, ವಿಮಾನದ ಸೀಟಿನಿಂದ ಎದ್ದು ಬಂದ ಪ್ರಯಾಣಿಕರು ಸೀಟಿನ ಮಧ್ಯೆ ಓಡಾಡಲು ಇರುವ ಖಾಲಿ ಜಾಗದಲ್ಲಿ ನಿಂತುಕೊಂಡು ಬಿಂದಾಸ್ ಸ್ಟೆಪ್ ಹಾಕಿದ್ದಾರೆ. 

ಈ ವಿಡಿಯೋವನ್ನು ಆಂಕರ್ ಜೆಕೆ (Anchor JK (Jay Karmani) ಎಂಬುವವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು,  ಸಪ್ನಾ ಚೌಧರಿ (Sapna Chudhari) ಹಾಡು 37 ಸಾವಿರ ಅಡಿ ಎತ್ತರದಲ್ಲಿ ತೇಲಿ ಬಂದಿದ್ದು ಹೀಗೆ ಎಂದು ಬರೆದುಕೊಂಡಿದ್ದಾರೆ.  ಇದನ್ನು ನೋಡಿದ ಅನೇಕರು ಅದ್ಹೇಗೆ ವಿಮಾನದ ಸಿಬ್ಬಂದಿ ನಿಮಗೆ ಡಾನ್ಸ್ ಮಾಡಲು ಅವಕಾಶ ನೀಡಿದರು? ಇದು ಅಪಾಯಕಾರಿ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.  ಮತ್ತೆ ಕೆಲವರು ಇದು ಹೇಗೆ ಸಾಧ್ಯ ವಿದ್ಯಾವಂತ ಅನಾಗರಿಕರು ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೊಂದು ನಾಚಿಕೆಗೇಡಿನ ಘಟನೆ ಹೀಗೆ ನೃತ್ಯ ಮಾಡ್ತಿರಬೇಕಾದ್ರೆ ವಿಮಾನದ ಸಿಬ್ಬಂದಿ ಎಲ್ಲಿ ಹೋಗಿದ್ದರು ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. 

ಇಂಡಿಗೋ ವಿಮಾನದಲ್ಲಿ ಕುಡಿದ ಮತ್ತಲ್ಲಿ ವಾಂತಿ, ಮಲ ವಿಸರ್ಜಿಸಿದ ಪ್ರಯಾಣಿಕ

ಕೆಲದಿನಗಳ ಹಿಂದೆ ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಪಾನಮತ್ತ ಪ್ರಯಾಣಿಕನೊಬ್ಬ ವಿಮಾನದ ತುರ್ತು ನಿರ್ಗಮನ ದ್ವಾರ ತೆರೆಯಲು ಯತ್ನಿಸಿರುವ ಘಟನೆ ನಡೆದಿತ್ತು. ಉತ್ತರ ಪ್ರದೇಶದ ಕಾನ್ಪುರ ಮೂಲದ ಆರ್‌.ಪ್ರತೀಕ್‌(40) ಎಂಬಾತ ವಿಮಾನದಲ್ಲಿ ಹುಚ್ಚಾಟ ಮೆರೆದಿದ್ದ. ನಂತರ ಇಂಡಿಗೋ ವಿಮಾನದ ಸಿಬ್ಬಂದಿ, ಆರೋಪಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್‌) ಸಿಬ್ಬಂದಿಗೆ ಹಸ್ತಾಂತರಿಸಿದರು. ಬಳಿಕ ಸಿಐಎಸ್‌ಎಫ್‌ ಸಿಬ್ಬಂದಿ ಆರೋಪಿಯನ್ನು ವಿಮಾನ ನಿಲ್ದಾಣದ ಸಮೀಪದ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದಾಗ ಮದ್ಯ ಸೇವಿಸಿರುವುದು ಸಾಬೀತಾಯಿತು. 

ನಂತರ ಆತನನ್ನು ಬೆಂಗಳೂರು ಇಂಟರ್‌ ನ್ಯಾಷನಲ್‌ ಏರ್‌ಪೋರ್ಟ್‌(ಬಿಐಎಎಲ್‌) ಠಾಣೆಯ ಪೊಲೀಸರಿಗೆ ಒಪ್ಪಿಸಲಾಯಿತು. ಸಾರ್ವಜನಿಕರೊಂದಿಗೆ ದುರ್ವರ್ತನೆ, ಇತರರ ಜೀವ ಹಾಗೂ ವೈಯಕ್ತಿಕ ಜೀವಕ್ಕೆ ಅಪಾಯ ತಂದೊಡ್ಡುವುದು, ಸುರಕ್ಷತೆಗೆ ಭಂಗ ತರಲು ಯತ್ನ ಆರೋಪದಡಿ ಪ್ರಕರಣ ದಾಖಲಿಸಿರುವ ಬಿಐಎಎಲ್‌ ಠಾಣೆ ಪೊಲೀಸರು, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯವು ಆರೋಪಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದುಬೈನಿಂದ ಭಾರತಕ್ಕೆ ಹಾರುತ್ತಿದ್ದ ವಿಮಾನದಲ್ಲಿ ಕುಡಿದು ಗಲಾಟೆ, ತಾಯ್ನಾಡಿಗೆ ಕಾಲಿಟ್ಟ ತಕ್ಷಣ ಕೈಗೆ ಕೋಳ!

ವಿಮಾನದಲ್ಲಿ ಹುಚ್ಚಾಟ: ಆರೋಪಿ ಪ್ರತೀಕ್‌ ಇ-ಕಾರ್ಮಸ್‌ (E-comerce)ಕಂಪನಿಯೊಂದರಲ್ಲಿ ಮಾರ್ಕೆಟಿಂಗ್‌ ಎಕ್ಸಿಕ್ಯೂಟಿವ್‌ ಆಗಿದ್ದಾನೆ. ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಬರುವ ‘6ಇ 308’ ಸಂಖ್ಯೆಯ ಇಂಡಿಗೋ ವಿಮಾನ ಏರಿದ್ದ ಈತ. ವಿಮಾನ ಟೇಕಾಫ್‌ ಆದ ಬಳಿಕ ಮದ್ಯಸೇವಿಸಿದ್ದಾನೆ. ಆರೋಪಿಯು ಕ್ಷುಲ್ಲಕ ಕಾರಣಕ್ಕೆ ಸಹ ಪ್ರಯಾಣಿಕರೊಂದಿಗೆ ದುರ್ವರ್ತನೆ ತೋರಿದ್ದಾನೆ. ವಿಮಾನದ ಸಿಬ್ಬಂದಿ ಎಷ್ಟೇ ಹೇಳಿದರೂ ಕೇಳದೆ ಅನುಚಿತವಾಗಿ ವರ್ತಿಸಿದ್ದಾನೆ. ಬಳಿಕ ವಿಮಾನದ ತುರ್ತು ನಿಗರ್ಮನ ದ್ವಾರದ ಬಾಗಿಲು ತೆರೆಯಲು ಯತ್ನಿಸಿದ್ದಾನೆ ಎಂದು ಸಿಬ್ಬಂದಿ ದೂರಿದ್ದರು
 

Latest Videos
Follow Us:
Download App:
  • android
  • ios