ಒಂದು ಹೆರಿಗೆಯಾದಾಗ್ಲೇ ಮಹಿಳೆಯರು ಅಬ್ಬಬ್ಬಾ ಸತ್ತು ಬದುಕಿ ಬಂದೆ ಅಂತ ಹೇಳ್ತಾರೆ. ಹೀಗಿರುವಾಗ ಇಲ್ಲೊಬ್ಬ ಮಹಿಳೆ 28 ವರ್ಷಕ್ಕೆ 9 ಮಕ್ಕಳನ್ನು ಹೊಂದಿದ್ದಾಳೆ. ಅದು ಕೂಡಾ ಆಕೆ ಬರೋಬ್ಬರಿ 12 ವರ್ಷಗಳ ಕಾಲ ಸತತವಾಗಿ ಗರ್ಭಿಣಿಯಾಗುವ ಮೂಲಕ. ಆ ಬಗ್ಗೆ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.

ಗರ್ಭಾವಸ್ಥೆ ಎಂಬುದು ಮಹಿಳೆಯ ಪಾಲಿಗೆ ಅತ್ಯಂತ ಸವಾಲಿನದ್ದಾಗಿದೆ. ಮಹಿಳೆಯ ದೈಹಿಕ, ಮಾನಸಿಕ ಸ್ಥಿತಿ ಇದರಿಂದ ಬದಲಾವಣೆಯಾಗುತ್ತದೆ. ಹೆರಿಗೆಯ ನಂತರ ಮಹಿಳೆ ಸತ್ತು ಬದುಕುತ್ತಾಳೆ ಎಂದು ಹಿರಿಯರು ಹೇಳಿರುವುದನ್ನು ಕೇಳಿರಬಹುದು. ಯಾಕೆಂದರೆ ಈ ಸಮಯದಲ್ಲಿ ಮಹಿಳೆ ಅಷ್ಟೊಂದು ಯಾತನೆಯನ್ನು ಅನುಭವಿಸುತ್ತಾಳೆ. ಹೀಗಾಗಿ ಗರ್ಭಿಣಿಯಾಗುವ ಮೊದಲು ಮಹಿಳೆ ತನ್ನ ಆರೋಗ್ಯ ಸ್ಥಿತಿಯನ್ನು ಗಮನಿಸಿಕೊಳ್ಳುತ್ತಾಳೆ. ಹಿಂದಿನ ಕಾಲದಲ್ಲೆಲ್ಲಾ ಮಹಿಳೆಯರು ಹತ್ತು-ಇಪ್ಪತ್ತು ಮಕ್ಕಳಿಗೆ ಜನ್ಮ ನೀಡುತ್ತಿದ್ರು. ಅವರ ಆರೋಗ್ಯವೂ ಅಷ್ಟು ಚೆನ್ನಾಗಿರುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಒತ್ತಡದ ಜೀವನಶೈಲಿ, ಕೆಟ್ಟ ಆಹಾರಪದ್ಧತಿಯಿಂದ ಯಾರ ಆರೋಗ್ಯವೂ ಚೆನ್ನಾಗಿರಲ್ಲ. ಹೀಗಾಗಿ ಹೆಚ್ಚಿನ ಮಹಿಳೆಯರು ಎರಡು-ಮೂರು ಮಕ್ಕಳು ಸಾಕೆಂದು ಸುಮ್ಮನಾಗಿಬಿಡುತ್ತಾರೆ.

ಆದ್ರೆ ಇಲ್ಲೊಬ್ಬ ಮಹಿಳೆ (Women) ಮಾತ್ರ ಕೇವಲ 28 ವರ್ಷಕ್ಕೆ ಒಂಬತ್ತು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಅದು ವರ್ಷಕ್ಕೊಂದು ಮಗುವಿನಂತೆ ಆಕೆಗೆ ಬರೋಬ್ಬರಿ 12 ವರ್ಷ ಮಕ್ಕಳಾಗಿತ್ತು. ಕೋರಾ ಡ್ಯೂಕ್ ಎಂದು ಗುರುತಿಸಲ್ಪಟ್ಟ ಮಹಿಳೆ 2001ರಲ್ಲಿ 17ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಗರ್ಭಿಣಿ (Pregnant)ಯಾದರು ಮತ್ತು ನಂತರ ಪ್ರತಿ ವರ್ಷವೂ ಮಗುವಿಗೆ ಜನ್ಮ (Birth) ನೀಡುತ್ತಲೇ ಬಂದರು. ಆಕೆಯ ಕೊನೆಯ ಮಗು 2012 ರಲ್ಲಿ ಜನಿಸಿತು. ಮಹಿಳೆಗೆ ಈಗ 39 ವರ್ಷ ವಯಸ್ಸು. ಸದ್ಯ ಅವರು ನೆವಾಡಾದ ಲಾಸ್ ವೇಗಾಸ್‌ನಲ್ಲಿ ತನ್ನ ಒಂಬತ್ತು ಮಕ್ಕಳು ಮತ್ತು ಗಂಡ ಆಂಡ್ರೆ ಡ್ಯೂಕ್‌ನೊಂದಿಗೆ ವಾಸಿಸುತ್ತಿದ್ದಾರೆ. 

ನಿರಂತರ ದೇಹ ಸಂಪರ್ಕ ಹೊರತು ಪಡಿಸಿ, ಈ ಕಡೆ ಗಮನ ಹರಿಸಿದರೆ ಪ್ರೆಗ್ನೆನ್ಸಿ ಸುಲಭ!

ತಾಯಿಯಾಗುವ ಅನುಭವವನ್ನು ಇಷ್ಟಪಡುವ ಕೋರಾ
ನ್ಯೂಸ್‌ವೀಕ್‌ನ ವರದಿಯ ಪ್ರಕಾರ, ಕೋರಾ ಮತ್ತು ಆಂಡ್ರೆ ಈಗ 23 ವರ್ಷಗಳಿಂದ ಒಟ್ಟಿಗೆ ಇದ್ದಾರೆ. ಕೋರಾ ಅವರು ಒಂಬತ್ತು ಮಕ್ಕಳನ್ನು ಹೊಂದಲು ಎಂದಿಗೂ ಯೋಜಿಸಲಿಲ್ಲ ಆದರೆ ಅವರು ತಾಯಿ (Mother)ಯಾಗುವ ಅನುಭವವನ್ನು ಇಷ್ಟಪಡುತ್ತಿದ್ದರು ಎಂದು ತಿಳಿದುಬಂದಿದೆ.'ತಾಯ್ತನ ನನಗೆ ಕಷ್ಟವೆನಿಸಲ್ಲಿಲ್ಲ. ನನ್ನ ಪತಿಯ ನೆರವಿನಿಂದ ಸಾಕಷ್ಟು ಅಡೆತಡೆಗಳನ್ನು ನಿವಾರಿಸಲು ಸಾಧ್ಯವಾಯಿತು' ಎಂದು ಕೋರಾ ಹೇಳಿದರು. 

ಕೋರಾ ಡ್ಯೂಕ್ ಮತ್ತು ಆಂಡ್ರೆ ಡ್ಯೂಕ್ ಥಿಯೇಟರ್ ತರಗತಿಯ ಸಮಯದಲ್ಲಿ ಪರಸ್ಪರ ಭೇಟಿಯಾದರು. ನಂತರ ಇಬ್ಬರೂ ಪ್ರೀತಿಸಿ ಮದುವೆಯಾದರು. ಕೋರಾ ಡ್ಯೂಕ್ ಚೊಚ್ಚಲ ಮಗು, ಎಲಿಜಾಗೆ 21 ವರ್ಷ, ನಂತರ ಜನಿಸಿದ ಶೀನಾಗೆ 20 ವರ್ಷ. ನಂತರದ ಸಾಲಿನಲ್ಲಿ ಜನಿಸಿದ ಝಾನ್ (17), ಕೈರೋ (15), ಸಯಾಹ್ (14), ಅವಿ (13), ರೊಮಾನಿ (12), ಮತ್ತು ತಾಜ್ (10) ಸಹ ಆರೋಗ್ಯವಾಗಿದ್ದಾರೆ. ದೊಡ್ಡವರಾಗಿರುವ ಎಲ್ಲಾ ಮಕ್ಕಳ ಜೊತೆ ಕೋರಾ ಡ್ಯೂಕ್ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

Paris Hilton: 15 ವರ್ಷಕ್ಕೇ ವೃದ್ಧನಿಂದ ರೇಪ್​, 20 ವರ್ಷಕ್ಕೆ ಗರ್ಭಿಣಿ: ಖ್ಯಾತ ನಟಿಯ ಭಯಾನಕ ಕಥೆ!

ಕ್ಲಿಪ್ ಆರು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಅವರ ಕಥೆ ವೈರಲ್ ಆದಂದಿನಿಂದ, ಸಾಮಾಜಿಕ ಮಾಧ್ಯಮ ಬಳಕೆದಾರರು ದಂಪತಿಗೆ ಸುಮಾರು ಒಂದು ದಶಕದವರೆಗೆ ಗರ್ಭಿಣಿಯಾಗಿರುವುದು ಹೇಗಿತ್ತು ಎಂದು ಕೋರಾವನ್ನು ಕೇಳುವುದು ಸೇರಿದಂತೆ ಅನೇಕ ಪ್ರಶ್ನೆಗಳನ್ನು ಹಾಕಿದ್ದಾರೆ. 

'ನನ್ನ ಒಟ್ಟು ಗರ್ಭಧಾರಣೆಯ ಸಮಯದ ಚೌಕಟ್ಟಿನ ಬಗ್ಗೆ ನಾನು ಗಮನ ಹರಿಸಲಿಲ್ಲ. ನಾನು ಚಿಕ್ಕವಳಾಗಿದ್ದೆ ಮತ್ತು ಬಹಳಷ್ಟು ಬಾರಿ ಗರ್ಭಿಣಿಯಾದೆ. ಇದರಿಂದ ನಾನು ಆಗ ತೊಂದರೆ ಅನುಭವಿಸದಿದ್ದರೂ ಈಗ ಆಗಾಗ ಅನಾರೋಗ್ಯಕ್ಕೆ ಒಳಗಾಗುತ್ತೇನೆ' ಎಂದು ಕೋರಾ ಡ್ಯೂಕ್ ಹೇಳುತ್ತಾರೆ. 'ಜನರು ಸಹ ಈ ಬಗ್ಗೆ ಸಾಕಷ್ಟು ಬಾರಿ ಕಾಮೆಂಟ್ ಮಾಡುತ್ತಿದ್ದರು. ಇದರಿಂದ ನಾನು ಮಾನಸಿಕವಾಗಿಯೂ ಒತ್ತಡಕ್ಕೆ ಒಳಗಾಗಿದ್ದೆ' ಎಂದು ತಿಳಿಸಿದ್ದಾರೆ. ತಾಜ್ ಹುಟ್ಟಿದ ನಂತರ, ಕೋರಾ ಡ್ಯೂಕ್ ಹೆಚ್ಚು ಮಕ್ಕಳನ್ನು ಹೊಂದಲು ಬಯಸದ ಕಾರಣ ಶಸ್ತ್ರಚಿಕಿತ್ಸೆಗೆ ಮಾಡಿಸಿಕೊಂಡರು ಎಂದು ತಿಳಿದುಬಂದಿದೆ.

View post on Instagram