Asianet Suvarna News Asianet Suvarna News

Miss Universe ಹರ್ನಾಜ್ ಸಂಧುಗೆ ಈ ಕಾಯಿಲೆ ಇದೆಯಂತೆ!

ಮಿಸ್ ಯೂನಿವರ್ಸ್ ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದು ಜಾಗತಿಕ ಸಾಧನೆ ಮಾಡಿದ ಪಂಜಾಬಿನ ಹುಡುಗಿ ಹರ್ನಾಜ್ ಕೌರ್ ಸಂಧು ಈಗ ತಮಗಿರುವ ಒಂದು ವಿಶಿಷ್ಟ ಅಲರ್ಜಿಯ ವಿಚಾರ ಬಿಚ್ಚಿಟ್ಟಿದ್ದಾರೆ...

 

 

Miss Universe Harnaaz Sandhu Has this Gluten Allergy
Author
Bengaluru, First Published Mar 31, 2022, 5:01 PM IST

ಮಿಸ್ ಯೂನಿವರ್ಸ್ (Miss Universe) ಆಗಿರುವ ಹರ್ನಾಜ್ ಸಂಧು (Harnaaz Sandhu) ಈಗ ಹಲವಾರು ಕಾರಣಗಳಿಗಾಗಿ ಸುದ್ದಿಯಲ್ಲಿದ್ದಾರೆ. ಅದು ಹಿಜಾಬ್ (Hijab) ವಿವಾದ ಬಗ್ಗೆ ಅವರ ದೃಷ್ಟಿಕೋನ ಆಗಿರಬಹುದು, ಅಥವಾ ಬಾಡಿ ಶೇಮ್ (Body Shaming) ಮಾಡುವವರಿಗೆ ಸೂಕ್ತ ಪ್ರತಿಕ್ರಿಯೆ ನೀಡುವುದರಿರಬಹುದು.

ಹರ್ನಾಜ್ ಇತ್ತೀಚೆಗೆ ಲ್ಯಾಕ್ಮೆ ಫ್ಯಾಶನ್ ವೀಕ್ ರ್ಯಾಂಪ್‌ನಲ್ಲಿ (Ramp) ನಡೆದರು. ಅಲ್ಲಿ ಅವರು ಸ್ಪೆಜಿಯಾ ಮೈಕ್ರೋ-ವೆಲ್ವೆಟ್ ಗೌನ್ ಉಡುಪನ್ನು ಧರಿಸಿದ್ದರು. ಈ ಗೌನ್‌ನಲ್ಲಿ ಅವರು ಮೊದಲಿಗಿಂತ ಸ್ವಲ್ಪ ದಪ್ಪ ಆಗಿರುವುದು ಕಂಡುಬಂದಿತ್ತು. ಆದರೆ ಕಾರ್ಯಕ್ರಮದ ಚಿತ್ರಗಳನ್ನು ನೋಡಿದ ಹಲವು ಮಂದಿ ಆಕೆಯನ್ನು ಟ್ವಿಟರ್, ಇನ್‌ಸ್ಟಾಗ್ರಾಂ ಮುಂತಾದ ಕಡೆ ಟ್ರೋಲ್ ಮಾಡಿದರು. 'ನಿನ್ನ ತೂಕ ಹೆಚ್ಚಾಗಿದೆ' "ನೀನು ಡ್ರಮ್ ಥರ ಆಗಿದೀಯ' ಎಂದೆಲ್ಲ ಟೀಕಿಸಿದರು.

ಅದಕ್ಕೆ ಉತ್ತರವಾಗಿ ಹರ್ನಾಜ್ ಬ್ಯೂಟಿಫುಲ್ ಉತ್ತರ ಕೊಟ್ಟರು. ಅದು ಹೀಗಿದೆ...

ಅವಳು ತುಂಬಾ ತೆಳ್ಳಗಿದ್ದಾಳೆ ಎಂದು ಮೊದಲು ಹಿಂಸೆಗೆ ಒಳಗಾದ ವ್ಯಕ್ತಿಗಳಲ್ಲಿ ನಾನೂ ಒಬ್ಬಳು. ಈಗ ಅವರು 'ಅವಳು ದಪ್ಪಗಿದ್ದಾಳೆ' ಎಂದು ನನ್ನನ್ನು ಗೇಲಿ ಮಾಡುತ್ತಿದ್ದಾರೆ. ನನ್ನ ಸೆಲಿಯಾಕ್ ಕಾಯಿಲೆಯ (Celiac Disease) ಬಗ್ಗೆ ಯಾರಿಗೂ ತಿಳಿದಿಲ್ಲ. ನಾನು ಗೋಧಿ ಹಿಟ್ಟು ಮತ್ತು ಇತರ ಅನೇಕ ವಸ್ತುಗಳನ್ನು ತಿನ್ನಲು ಸಾಧ್ಯವಿಲ್ಲ. ಅದೊಂದು ಗ್ಲುಟನ್‌ (Gluten) ಅಲರ್ಜಿ. ಅದು ಇದೆ ಎಂದು ಅನೇಕ ಜನರಿಗೆ ತಿಳಿದಿಲ್ಲ.

ಹಿಜಾಬ್ ಧರಿಸುವ ಬಗ್ಗೆ ಮಿಸ್ ಯೂನಿವರ್ಸ್ ಹರ್ನಾಜ್ ಸಂಧು ಹೇಳಿದ್ದೇನು ?

ಸುಂದರವಾಗಿ ಕಾಣುವುದಷ್ಟೇ ಅಲ್ಲ

ವಿಶ್ವ ಸುಂದರಿ ಸ್ಪರ್ಧೆಗಳು ಕೇವಲ ಬಾಹ್ಯ ಸೌಂದರ್ಯದಿಂದ ನಡೆಸಲ್ಪಡುವುದಿಲ್ಲ. ನನ್ನ ಅನಿಸಿಕೆಯಂತೆ ಎಲ್ಲರೂ ಸುಂದರವಾಗಿದ್ದಾರೆ. ನೀವು ನಿಮ್ಮನ್ನು ಹೇಗೆ ಪ್ರತಿನಿಧಿಸುತ್ತೀರಿ ಮತ್ತು ನೀವು ಯಾವ ರೀತಿಯ ಸಿದ್ಧಾಂತವನ್ನು ಹೊಂದಿದ್ದೀರಿ ಎಂಬುದು ಮುಖ್ಯ. ನಾನು ಅತ್ಯಂತ ಸುಂದರ ಹುಡುಗಿ ಎಂದು ನೀವು ಭಾವಿಸಿದರೆ ನಾನು ವಿಶ್ವ ಸುಂದರಿ ಗೆದ್ದಿದ್ದೇನೆ.

ಕ್ಷಮಿಸಿ, ನಾನು ಅತ್ಯಂತ ಸುಂದರವಾಗಿಲ್ಲದಿರಬಹುದು. ಆದರೆ ನಾನು ದಪ್ಪವಾಗಿದ್ದರೂ, ತೆಳ್ಳಗಿದ್ದರೂ, ನನ್ನ ದೇಹವನ್ನು ನಂಬುವ ಧೈರ್ಯ ಮತ್ತು ಆತ್ಮವಿಶ್ವಾಸದ ಹುಡುಗಿಯರಲ್ಲಿ ನಾನು ಒಬ್ಬಳು. ನಾನು ನನ್ನನ್ನು ಪ್ರೀತಿಸುತ್ತೇನೆ, ನಾನು ಬದಲಾವಣೆಗಳನ್ನು ಪ್ರೀತಿಸುತ್ತೇನೆ. ಮತ್ತು ನೀವು ಅದನ್ನು ಪ್ರಶಂಸಿಸಬೇಕು. ಏಕೆಂದರೆ ಪ್ರತಿಯೊಬ್ಬರೂ ಬದಲಾಗುತ್ತಾರೆ. ಆದ್ದರಿಂದ ನೀಬೂ ಬದಲಾಯಿಸುತ್ತಿದ್ದರೆ ಸಂತೋಷವಾಗಿರಿ. ನೀವು ಜೀವನದಲ್ಲಿ ಸವಾಲುಗಳನ್ನು ಎದುರಿಸುತ್ತಿದ್ದರೆ, ಅದರಿಂದ ಒಳ್ಳೆಯದು ಆಗಲಿದೆ ಎಂದರ್ಥ. ಅದಕ್ಕೆ ನೀವು ಕೃತಜ್ಞರಾಗಿರಬೇಕು.

ನಾನು ದೇಹದ ಸಕಾರಾತ್ಮಕತೆಯನ್ನು ನಂಬುವ ವ್ಯಕ್ತಿ. ವಿಶ್ವ ಸುಂದರಿ ವೇದಿಕೆಯಲ್ಲಿ ನಾವು ಮಹಿಳಾ ಸಬಲೀಕರಣ, ಹೆಣ್ತನ ಮತ್ತು ದೇಹದ ಧನಾತ್ಮಕತೆಯ ಬಗ್ಗೆ ಮಾತನಾಡುತ್ತೇವೆ. ಅದನ್ನೇ ಮೂಲವಾಗಿಟ್ಟುಕೊಂಡು ನನ್ನನ್ನು ಟ್ರೋಲ್ ಮಾಡುವವರು ಬಹಳಷ್ಟು ಜನರಿದ್ದಾರೆ ಎಂದು ನನಗೆ ತಿಳಿದಿದೆ. ಅದು ಪರವಾಗಿಲ್ಲ. ಏಕೆಂದರೆ ಅದು ಅವರ ಮನಸ್ಥಿತಿ, ಅವರ ಕಳಂಕಗಳು. ಮಿಸ್ ಯೂನಿವರ್ಸ್ ಅಲ್ಲದಿದ್ದರೂ ಪ್ರತಿದಿನ ಟ್ರೋಲ್ ಆಗುವ ಬಹಳಷ್ಟು ವ್ಯಕ್ತಿಗಳಿದ್ದಾರೆ. ನಾನು ಮಾದರಿಯಲ್ಲ. ನೀವು ಕೂಡ ಸುಂದರವಾಗಿದ್ದೀರಿ ಎಂದು ಅವರಿಗೆ ನಾನು ಹೇಳಬಯಸುತ್ತೇನೆ, ಆ ಮೂಲಕ ನಾನು ಅವರನ್ನು ಸಬಲಗೊಳಿಸಲು ಬಯಸುತ್ತೇನೆ...

ಬರೋಬ್ಬರಿ 84 ದಿನ ಯುವತಿಯ ಕೂದಲಲ್ಲೇ ಗೂಡು ಕಟ್ಟಿ ವಾಸವಿದ್ದ ಹಕ್ಕಿ..!

ಸೆಲಿಯಾಕ್ ಕಾಯಿಲೆ ಎಂದರೇನು?

ಸೆಲಿಯಾಕ್ ಕಾಯಿಲೆಯು ಒಂದು ಬಗೆಯ ಅಲರ್ಜಿ (Allergy). ಇದು ದೇಹದ ರೋಗ ಪ್ರತಿರೋಧ ಶಕ್ತಿಯನ್ನು (Immunity) ಸಡಿಲಗೊಳಿಸುತ್ತದೆ. ಅಂದರೆ ಇದರಲ್ಲಿ ರೋಗಪೀಡಿತ ವ್ಯಕ್ತಿಯ ಸ್ವಂತ ಪ್ರತಿರಕ್ಷಣಾ ವ್ಯವಸ್ಥೆಯು ದೇಹದ ವಿರುದ್ಧವೇ ಕಾರ್ಯನಿರ್ವಹಿಸುತ್ತದೆ. ಈ ಸ್ವಯಂ ನಿರೋಧಕ ಪ್ರತಿಕ್ರಿಯೆಯು ಉಂಟಾಗುವುದು ಗ್ಲುಟನ್ ಅನ್ನು ಸೇವಿಸಿದಾಗ. ಗ್ಲುಟೆನ್ ಗೋಧಿ ಹಿಟ್ಟು, ಮೈದಾ ಮುಂತಾದ ಪದಾರ್ಥಗಳಲ್ಲಿ ಹೇರಳವಾಗಿದೆ.

ಸೆಲಿಯಾಕ್ ಕಾಯಿಲೆಯು ಅಪೌಷ್ಟಿಕತೆ, ಮೂಳೆ ಸಾಂದ್ರತೆಯ ನಷ್ಟ, ಫಲವತ್ತತೆಯ ಸಮಸ್ಯೆಗಳು, ನರವೈಜ್ಞಾನಿಕ ಕಾಯಿಲೆಗಳು ಮತ್ತು ಕೆಲವೊಮ್ಮೆ ಕ್ಯಾನ್ಸರ್‌ಗೆ (Cancer) ಕಾರಣವಾಗುತ್ತದೆ. ಈ ರೋಗದ ಬಗೆಗೆ ಅರಿವಿನ ಕೊರತೆಯಿಂದಾಗಿ, ಇದು ನಂತರದ ಹಂತಕ್ಕೆ ಮುಂದುವರಿಯುವವರೆಗೆ ಅನೇಕ ಜನರಿಗೆ ಇದು ಇದೆ ಎಂದು ತಿಳಿದಿರುವುದಿಲ್ಲ.

ಕ್ರೋನ್ಸ್ ಕಾಯಿಲೆ, ಕರುಳಿನ ಊತ, ಅಲ್ಸರೇಟಿವ್ ಕೊಲೈಟಿಸ್, ಕರುಳು ಸೋಂಕು ಮತ್ತು ಕರುಳಿನ ಬ್ಯಾಕ್ಟೀರಿಯಾದ ಬೆಳವಣಿಗೆಯಂತಹ ಇತರ ರೋಗಲಕ್ಷಣಗಳು ಮತ್ತು ರೋಗಗಳು ಸೆಲಿಯಾಕ್ ಕಾಯಿಲೆಯ ಇರುವಿಕೆಯನ್ನು ಸೂಚಿಸುತ್ತವೆ. ಇದರ ಸಾಮಾನ್ಯ ಲಕ್ಷಣಗಳೆಂದರೆ ದೀರ್ಘಕಾಲದ ಅತಿಸಾರ, ಮಲಬದ್ಧತೆ, ಗ್ಯಾಸ್, ಕಾಲುಗಳ ಮರಗಟ್ಟುವಿಕೆ, ತಪ್ಪಿದ ಋತುಚಕ್ರ, ರಕ್ತಹೀನತೆ, ಬಂಜೆತನ, ಆಸ್ಟಿಯೊಪೊರೋಸಿಸ್, ಹಲ್ಲುಗಳ ಬಣ್ಣ ಮಂಕಾಗುವುದು, ಹೊಟ್ಟೆ ನೋವು, ಹೊಟ್ಟೆ ಉಬ್ಬರಿಸುವಿಕೆ, ಸ್ನಾಯು ಸೆಳೆತ, ಕೀಲು ನೋವು ಮತ್ತು ಚರ್ಮದ ತುರಿಕೆ.

ಹೇಗೆ ತಿಳಿಯುವುದು?

ಹೊಟ್ಟೆ ಉಬ್ಬರಿಸುವಿಕೆ, ಮಲಬದ್ಧತೆ, ಹೊಟ್ಟೆ ಉರಿ, ವಿವರಿಸಲಾಗದ ತೂಕ ನಷ್ಟವನ್ನು ದೀರ್ಘಕಾಲದವರೆಗೆ ಅನುಭವಿಸಿದರೆ, ನೀವು ನಿಮ್ಮ ಆಹಾರವನ್ನು ಪರೀಕ್ಷಿಸಬೇಕು ಮತ್ತು ವೈದ್ಯರನ್ನು ಸಂಪರ್ಕಿಸಬೇಕು.

ಕಣ್ಣೀರಿದ್ರೆ ಕೊಡಿ ಪ್ಲೀಸ್‌..! ಐದಾರು ಹನಿಯಿದ್ರೆ ಸಾಕು, ಭರ್ತಿ 19650 ರೂ. ಸಿಗುತ್ತೆ..!

ಹೇಗೆ ಬರುತ್ತದೆ?

ತಜ್ಞರು ಹೇಳುವ ಪ್ರಕಾರ ಇದು ಆನುವಂಶಿಕ. ಅದು ನಿಮ್ಮ ಕುಟುಂಬದಲ್ಲಿ ಇದ್ದರೆ ನೀವು ಅದನ್ನು ಪಡೆಯುವ ಸಾಧ್ಯತೆಯಿದೆ.


 

Follow Us:
Download App:
  • android
  • ios