ಬರೋಬ್ಬರಿ 84 ದಿನ ಯುವತಿಯ ಕೂದಲಲ್ಲೇ ಗೂಡು ಕಟ್ಟಿ ವಾಸವಿದ್ದ ಹಕ್ಕಿ..!
ಪ್ರಪಂಚದಲ್ಲಿ ವಿಚಿತ್ರ ಘಟನೆಗಳು ಆಗಿಂದಾಗಲೇ ನಡೆಯುತ್ತಲೇ ಇರುತ್ತವೆ. ಇದು ಅಂಥಹದ್ದೇ ಒಂದು ಘಟನೆ. ಪಕ್ಷಿ (Bird)ಗಳ ಬಗ್ಗೆ ವಿಪರೀತ ಕಾಳಜಿ ಇರುವ ಯುವತಿಯೊಬ್ಬಳು ಹಕ್ಕಿಗೆ ತನ್ನ ಕೂದಲಿ (Hair)ನಲ್ಲೇ ಗೂಡು (Nest) ಕಟ್ಟಲು ಜಾಗ ಮಾಡಿಕೊಟ್ಟಿದ್ದಾಳೆ. ಒಂದಲ್ಲ ಎರಡಲ್ಲ ಭರ್ತಿ 84 ದಿನ ಅದನ್ನು ತನ್ನ ಕೂದಲಿನ ಗೂಡಿನೊಳಗೆ ಭರ್ತಿ ಇರಿಸಿದ್ದಾಳೆ.
ಮಾನವೀಯತೆ ಕಡಿಮೆಯಾಗುತ್ತಿರುವ ಸಮಾಜದಲ್ಲಿ ನಾವಿದ್ದೇವೆ. ಅದರಲ್ಲೂ ಕೆಲವೊಬ್ಬರಿಗೆ ಕೇವಲ ಮನುಷ್ಯರ ಬಗ್ಗೆ ಮಾತ್ರವಲ್ಲ ಪ್ರಾಣಿ (Animal), ಪಕ್ಷಿ (Bird)ಗಳ ಬಗ್ಗೆಯೂ ವಿಪರೀತ ಕಾಳಜಿರುತ್ತದೆ. ರಸ್ತೆ ಬದಿ ಸಿಕ್ಕ ಪ್ರಾಣಿಗಳನ್ನು ಮನೆಗೆ ತಂದು ಸಾಕುತ್ತಾರೆ. ಗಾಯಗೊಂಡ ಹಕ್ಕಿಗಳನ್ನು ಶುಶ್ರೂಷೆ ಮಾಡುತ್ತಾರೆ. ಈ ಯುವತಿಯು ಅದೇ ರೀತಿ ಪ್ರಾಣಿ ಪಕ್ಷಿಗಳ ಬಗ್ಗೆ ಕಾಳಜಿ ಇದ್ದವಳು. ಆದರೆ ಅವುಗಳ ರಕ್ಷಣೆಗೆ ಆಕೆ ಮಾಡಿರುವ ಕೆಲಸ ಮಾತ್ರ ಅಸಾಧಾರಣವಾದುದು. ಇಂಗ್ಲೆಂಡ್‌ನ ಯುವತಿ ಹನ್ನಾ ಬೋರ್ನ್-ಟೇಲರ್ ಹೆಚ್ಚು ಕಡಿಮೆ ಮೂರು ತಿಂಗಳು ಹಕ್ಕಿಗೆ ತನ್ನ ಕೂದಲಿನಲ್ಲಿ ಗೂಡು ಕಟ್ಟಲು ಅವಕಾಶ ಮಾಡಿಕೊಟ್ಟಿದ್ದಾಳೆ. ಹಕ್ಕಿಯೊಂದು ತನ್ನ ಹಿಂಡುಗಳಿಂದ ತ್ಯಜಿಸಲ್ಪಟ್ಟ ನಂತರ ಸುಮಾರು ಮೂರು ತಿಂಗಳ ಕಾಲ ತನ್ನ ಕೂದಲಿನಲ್ಲಿ (Hair) ಹೇಗೆ ಗೂಡುಕಟ್ಟಿತು ಎಂಬುದನ್ನು ಯುವತಿಯೊಬ್ಬರು ಬಹಿರಂಗಪಡಿಸಿದ ನಂತರ ಈ ವಿಚಾರ ಭಾರೀ ವೈರಲ್ (Viral) ಆಗಿದೆ.
ಹೊರಾಂಗಣದಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದ ಹೆನ್ನಾ ಸ್ಥಳೀಯ ಪಕ್ಷಿಗಳು ಮತ್ತು ಅವುಗಳ ದಿನಚರಿಗಳ ಬಗ್ಗೆ ಸಾಕಷ್ಟು ಕಲಿತಿದ್ದರು. ಆದರೆ 2018 ರಲ್ಲಿ ಒಂದು ದಿನ ಚಂಡಮಾರುತದಿಂದಾಗಿ ದಾರಿ ತಪ್ಪಿದ ಒಂದು ಪುಟ್ಟ ಹಕ್ಕಿ ದಾರಿ ತಪ್ಪಿತ್ತು. ಹೆನ್ನಾ ಅದನ್ನು ರಕ್ಷಿಸಿ ಅದರ ಕಾಳಜಿ ವಹಿಸಲು ಶುರು ಮಾಡಿದರು. ತಾಯಿಯ ಜವಾಬ್ದಾರಿಯನ್ನು ವಹಿಸಿಕೊಂಡ ನಂತರ, ಹನ್ನಾ ಹಕ್ಕಿಯ ಜತೆ ಆತ್ಮೀಯವಾಗಿ ಇರತೊಡಗಿತು.. ಹಕ್ಕಿ ಹಾರಲು ಕಲಿತದ್ದನ್ನು ಹೆನ್ನಾ ಗಮನಿಸಿದಳು. ಮತ್ತು ದಿನಗಳು ಕಳೆದಂತೆ, ಹಕ್ಕಿ ಹನ್ನಾನ್‌ಳ ಕೂದಲಿನ ಮೇಲೆ ಮತ್ತು ಅವಳ ಕೊರಳೆಲುಬಿನ ತೋಪಿನ ಮೇಲೆ ಸಣ್ಣ ಗೂಡು (Nest)ಗಳನ್ನು ಮಾಡಲು ಪ್ರಾರಂಭಿಸಿತು. ಆ 84 ದಿನ ಹಕ್ಕಿಯ ಕಾಳಜಿಯ ವಹಿಸಬೇಕಾಗಿದ್ದ ಕಾರಣ ಹನ್ನಾನ್ ತಲೆಸ್ನಾನ ಕೂಡಾ ಮಾಡಲ್ಲಿಲ್ಲ.
ವಾವ್ ಏನ್ ಟೇಸ್ಟ್..ಥೈಲ್ಯಾಂಡ್ ಬ್ಲಾಗರ್ ಸೌತ್ ಇಂಡಿಯನ್ ಫುಡ್‌ಗೆ ಫಿದಾ
ಹನ್ನಾನ್ ದಿ ಗಾರ್ಡಿಯನ್‌ಗೆ ನೀಡಿದ ಸಂದರ್ಶನದಲ್ಲಿ ಹಕ್ಕಿಯನ್ನು ತನ್ನ ಹಿಂಡುಗಳಿಂದ ಮಿಸ್ ಆಗಿತ್ತು. ಹಕ್ಕಿ ಗೂಡು ಮಾವಿನ ಮರಗಳಿಂದ ಎಲ್ಲೋ ಹೋಗಿತ್ತು. ಅದಕ್ಕೆ ಮನೆಯನ್ನು ಹುಡುಕಲಾಗಲಿಲ್ಲ, ಅದು ನನ್ನ ಕೂದಲಿನಲ್ಲಿ ಗೂಡುಕಟ್ಟಲು ಪ್ರಾರಂಭಿಸಿತು ಎಂದಿದ್ದಾರೆ .ಹನ್ನಾನ್ ಉದ್ದನೆಯ ದಪ್ಪವಾದ ಹೊಂಬಣ್ಣದ ಕೂದಲುಗಳ ನಡುವೆ ರೋಮದಿಂದ ಕೂಡಿದ ಹಕ್ಕಿಯ ಫೋಟೋಗಳನ್ನು ಹಂಚಿಕೊಂಡಿದ್ದಾಳೆ.
2013ರಲ್ಲಿ ಕೆಲವು ವೀಸಾ ಸಮಸ್ಯೆಗಳಿಂದಾಗಿ ಕೆಲಸ ಸಿಗದ ಕಾರಣ ಪ್ರಕೃತಿಯತ್ತ ಮುಖ ಮಾಡಿ ಪಕ್ಷಿಗಳ ಬಗ್ಗೆ ಕಲಿಯಲು ಆರಂಭಿಸಿದ್ದೆ ಎಂದು ಹನ್ನಾ ಬೋರ್ನ್-ಟೇಲರ್ ಹೇಳಿದ್ದಾರೆ. ಹಿಂಡಿನಿಂದ ಕೈ ಬಿಟ್ಟ ಹಕ್ಕಿ ಕೈ ಸೇರಿತು. ಹನ್ನಾನ್ ದಿ ಗಾರ್ಡಿಯನ್‌ಗೆ ನೀಡಿದ ಸಂದರ್ಶನದಲ್ಲಿ ಹಕ್ಕಿಯನ್ನು ತನ್ನ ಹಿಂಡುಗಳಿಂದ ಕೈಬಿಡಲಾಯಿತು ಮತ್ತು ಅವನ ಗೂಡು ಮಾವಿನ ಮರಗಳಿಂದ ಹಾರಿಹೋಯಿತು ಎಂದು ಹೇಳಿದರು. ಮನೆಯನ್ನು ಹುಡುಕಲಾಗಲಿಲ್ಲ, ಅದು ಹನ್ನಾಳ ಕೂದಲಿನಲ್ಲಿ ಗೂಡುಕಟ್ಟಲು ಪ್ರಾರಂಭಿಸಿತು.
Viral Video: ಸೇಬು, ಸಪೋಟ, ಬಾಳೆಹಣ್ಣು ಸೇರಿಸಿ ಟೀ ಮಾಡಿದ ಚಾಯ್ವಾಲ
'ಅದರ ಕಣ್ಣುಗಳು ಬಿಗಿಯಾಗಿ ಮುಚ್ಚಲ್ಪಟ್ಟವು ಮತ್ತು ನಡುಗುತ್ತಿತ್ತು. ಒಂಟಿಯಾಗಿ ಬದುಕಲು ತುಂಬಾ ಚಿಕ್ಕದಾಗಿತ್ತು. ಅದನ್ನುಟವೆಲ್‌ಗಳೊಂದಿಗೆ ರಟ್ಟಿನ ಪೆಟ್ಟಿಗೆಯಲ್ಲಿ ಇರಿಸಿದೆ, ರಾತ್ರಿಯಿಡೀ ಎಚ್ಚರವಾಗಿದ್ದೆ, ಹಕ್ಕಿಯನ್ನು ಹೇಗೆ ಕಾಳಜಿ ವಹಿಸಬೇಕು ಎಂದು ಸಂಶೋಧನೆ ಮಾಡಿದೆ' ಎಂದು ಹನ್ನಾ ತಿಳಿಸಿದ್ದಾರೆ. ವನ್ಯಜೀವಿ ತಜ್ಞ ಹನ್ನಾಗೆ ಈ ಪುಟ್ಟ ಪಕ್ಷಿಯನ್ನು ಕಾಡಿಗೆ ಸಿದ್ಧಪಡಿಸಲು ಕನಿಷ್ಠ 12 ವಾರಗಳು ಬೇಕಾಗುತ್ತದೆ ಎಂದು ಹೇಳಿದರು. ಇದನ್ನು ತಿಳಿದ ನಂತರ, ಹನ್ನಾ ಗೆದ್ದಲು ಮತ್ತು ಇತರ ವಸ್ತುಗಳನ್ನು ನೀಡುವ ಮೂಲಕ ಪಕ್ಷಿಯನ್ನು ನೋಡಿಕೊಳ್ಳಲು ಪ್ರಾರಂಭಿಸಿದಳು.
ಹಕ್ಕಿ ಕೂದಲಿನ ಪರದೆಯ ಕೆಳಗೆ ತನ್ನನ್ನು ತಾನೇ ಸಿಕ್ಕಿಸಿಕೊಂಡು ತನ್ನ ಕೊಕ್ಕಿನಿಂದ ಪ್ರತ್ಯೇಕ ಎಳೆಗಳನ್ನು ಸಂಗ್ರಹಿಸಿತ್ತು ಹಕ್ಕಿ. ಅವುಗಳನ್ನು ನೇಯ್ದ ಸುತ್ತಿನಲ್ಲಿ ಸಣ್ಣ ಗೂಡನ್ನು ಕಟ್ಟಿ ಹಕ್ಕಿ ಅದರೊಳಗೆ ಕೂರುತ್ತದೆ ಎಂದು ಹೆನ್ನಾನ್ ಹೇಳಿದರು. ಆದರೆ ಕ್ರಿಸ್‌ಮಸ್ ವಿರಾಮದ ಸಮಯದಲ್ಲಿ, ಹಕ್ಕಿಯ ಹಿಂಡು ಪ್ರದೇಶಕ್ಕೆ ಮರಳಿದ್ದರಿಂದ ಹಕ್ಕಿಯನ್ನು ಬಿಟ್ಟಿದ್ದಾಗಿ ಹನ್ನಾ ತಿಳಿಸಿದ್ದಾರೆ.