ಅಧಿಕ ತೂಕ, ಬೊಜ್ಜು, ಟಮ್ಮೀಸ್ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ನಿಯಮಿತವಾಗಿ ಯೋಗ, ಜಿಮ್, ವರ್ಕೌಟ್ ಮಾಡುವವರು ಮಾತ್ರ ಫ್ಲಾಟ್ ಟಮ್ಮೀಸ್ ಹೊಂದಿರುತ್ತಾರೆ. ಈ ಮಧ್ಯೆ ಟ್ವಿಟರ್ ಬಳಕೆದಾರರೊಬ್ಬರು ಫ್ಲಾಟ್ ಟಮ್ಮೀಸ್ ಇಲ್ಲದ ಮಹಿಳೆಯರು ವರ್ಜಿನ್ ಆಗಿರಲ್ಲ ಅನ್ನೋ ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ.

ಒತ್ತಡದ ಜೀವನಶೈಲಿ, ಕಳಪೆ ಆಹಾರಪದ್ಧತಿಯಿಂದ ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆ ಎಲ್ಲರಲ್ಲೂ ಸಾಮಾನ್ಯವಾಗಿದೆ. ಇದರಿಂದಾಗಿಯೇ ಅಧಿಕ ತೂಕ, ಬೊಜ್ಜು, ಹೊಟ್ಟೆಯಲ್ಲಿ ಕೊಬ್ಬು ಶೇಖರಣೆ ಮೊದಲಾದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಟಮ್ಮಿ ಕಾಣಿಸಿಕೊಳ್ಳುತ್ತೆ ಎಂದು ಅಲವತ್ತುಕೊಳ್ಳದವರು ಇವತ್ತಿನ ದಿನಗಳಲ್ಲಿ ಕಡಿಮೆ. ಟಮ್ಮಿ ಕಾಣಿಸಬಾರದೆಂದು ಧರಿಸಬಹುದಾದ ಕೆಲವು ಬೆಲ್ಟ್‌ಗಳು ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ. ಅಷ್ಟರಮಟ್ಟಿಗೆ ಟಮ್ಮೀಸ್ ಅನ್ನುವುದು ಸಾಮಾನ್ಯವಾಗಿದೆ. ಜಂಕ್‌ಫುಡ್ ಸೇವನೆ, ವ್ಯಾಯಾಮ ಮಾಡದಿರುವುದು ಮೊದಲಾದವು ಈ ಸಮಸ್ಯೆಗೆ ಕಾರಣವಾಗ್ತಿದೆ. ಇದೆಲ್ಲದರ ಮಧ್ಯೆ ಟ್ವಿಟರ್‌ನಲ್ಲೊಬ್ಬ ವ್ಯಕ್ತಿ ಟಮ್ಮಿ ಬಗ್ಗೆ ವಿಚಿತ್ರ ಹೇಳಿಕೆಯನ್ನು ನೀಡಿದ್ದಾರೆ. 

ದೊಡ್ಡ ಹೊಟ್ಟೆ ಹೊಂದಿರುವ ಮಹಿಳೆಯರು ಕನ್ಯೆಯರಲ್ಲ
ದೊಡ್ಡ ಹೊಟ್ಟೆಯನ್ನು ಹೊಂದಿರುವ ಮಹಿಳೆಯರು (Women) ಕನ್ಯೆಯರಲ್ಲ ಎಂದು ವ್ಯಕ್ತಿಯೊಬ್ಬರು ಹೇಳಿರುವ ಪೋಸ್ಟ್‌ನ ಸ್ಕ್ರೀನ್‌ಶಾಟ್‌ನ್ನು 'ಆಸ್ಕ್ ಆಬ್ರಿ' ಎಂಬ ಹೆಸರಿನ ಟ್ವಿಟರ್ ಬಳಕೆದಾರರು ಹಂಚಿಕೊಂಡಿದ್ದಾರೆ. ಫ್ಲಾಟ್ ಟಮ್ಮೀಸ್ ಇಲ್ಲದ ಮಹಿಳೆಯರು ವರ್ಜಿನ್ ಆಗಿರಲ್ಲ ಎಂದು ಇವರು ಸ್ಪಷ್ಟವಾಗಿ ಹೇಳಿದ್ದಾರೆ. ಅವರ ಪ್ರಕಾರ, ಫ್ಲಾಟ್ ಟಮ್ಮೀಸ್ ಇಲ್ಲದ ಮಹಿಳೆಯರು ತಮ್ಮ ಕನ್ಯತ್ವವನ್ನು (Virgin) ಕಳೆದುಕೊಂಡಿದ್ದಾರುತ್ತಾರಂತೆ. ಈ ವಿಚಿತ್ರ ಹೇಳಿಕೆಗೆ ನೆಟ್ಟಿಗರು ಶಾಕ್ ಆಗಿದ್ದಾರೆ. ವ್ಯಕ್ತಿಯ ಹೇಳಿಕೆಗಳು ಮಹಿಳೆಯರ ದೇಹಗಳ (Body) ಬಗ್ಗೆ ಕೆಲವರಿಗೆ ಎಷ್ಟು ಕಡಿಮೆ ತಿಳಿದಿದೆ ಮತ್ತು ಲೈಂಗಿಕ ಶಿಕ್ಷಣವು (Sex education) ನಿಜವಾಗಿಯೂ ಎಷ್ಟು ಮುಖ್ಯ ಎಂಬುದನ್ನು ನೆನಪಿಸುತ್ತದೆ ಎಂದು ಹಲವರು ಕಾಮೆಂಟಿಸಿದ್ದಾರೆ.

ಆಕೆ ವೈದ್ಯೆ, ಗಂಡನೂ ವೈದ್ಯ, ಮೊದಲ ರಾತ್ರೀಲಿ ಬ್ಲೀಡ್ ಆಗದಿದ್ದಕ್ಕೆ ಚಚ್ಚಿದ ಪತಿ ರಾಯ!

'ಹುಡುಗರು ಹೊಟ್ಟೆ ಫ್ಲಾಟ್ ಆಗಿರುವ ಹುಡುಗಿಯರನ್ನು ಬಯಸುದಿಲ್ಲವೆಂಬುದು ಸುಳ್ಳು. ಎಲ್ಲಾ ಹುಡುಗರು ಸಣ್ಣ ಹೊಟ್ಟೆಯ ಹುಡುಗಿಯನ್ನು ಬಯಸುತ್ತಾರೆ. ಹುಡುಗಿಯರು ಯಾರೂ ಈ ವಿಚಾರಕ್ಕೆ ನಮ್ಮ ಮೇಲೆ ರೇಗಬೇಡಿ. ಫ್ಲಾಟ್ ಹೊಟ್ಟೆಯಿರುವ ಹುಡುಗಿ ಬೇಕೆಂದು ಬಯಸುವುದು ಅಪರಾಧವಲ್ಲ. ಅದಕ್ಕಿಂತ ಹೆಚ್ಚಾಗಿ ದಪ್ಪ ಟಮ್ಮೀ ಹೊಂದಿರುವವರು ಕನ್ಯತ್ಯ ಕಳೆದುಕೊಂಡಿರುತ್ತಾರೆ' ಎಂದು ಪೋಸ್ಟ್‌ನ ಆರಂಭದಲ್ಲಿ ತಿಳಿಸಲಾಗಿದೆ. 

'ಹೊಟ್ಟೆ ಉಬ್ಬು ಗರ್ಭಾಶಯದ ಪ್ರದರ್ಶನವಾಗಿದೆ'
'ಫ್ಲಾಟ್ ಟಮ್ಮಿ ಇಲ್ಲದ ಮಹಿಳೆಯರು ಕನ್ಯೆಯರಲ್ಲ ಮತ್ತು ಸ್ವಲ್ಪ ಹೊಟ್ಟೆ ಉಬ್ಬು ಅಂಡಾಶಯದ ಪ್ರದರ್ಶನವಾಗಿದೆ' ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಪೋಸ್ಟ್‌ಗೆ ಕಮೆಂಟಿಸಿರುವ ಹಲವರು ವ್ಯಕ್ತಿಯ ತಿಳುವಳಿಕೆಯ ಕೊರತೆಯನ್ನು ಟೀಕಿಸಿದ್ದಾರೆ. ಇನ್ನೊಬ್ಬರು 'ಮಹಿಳೆಯರೇ ನಿಮ್ಮ ಅಂಡಾಶಯ (Uterus) ಕಾಣುತ್ತಿದೆಯಾ ನೋಡಿ' ಎಂದು ಕಾಲೆಳೆದಿದ್ದಾರೆ. ಒಟ್ನಲ್ಲಿ ಬಾಡಿ ಶೇಮಿಂಗ್ ತಪ್ಪು ಅನ್ನೋ ಈ ದಿನಗಳಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ದೇಹದ ಆಕಾರ (Body shape), ವರ್ಜಿನಿಟಿಯ ಬಗ್ಗೆ ಮಾತನಾಡಿರೋದು ವಿಪರ್ಯಾಸವೇ ಸರಿ. 

ಸಾಯೋ ವಯಸ್ಸಾದರೂ ವರ್ಜಿನ್ ಹುಡುಗೀರು ಬೇಕು ಎನ್ನೋದೇಕೆ ವೃದ್ಧರು?

ಮದುವೆಯಾದ ಮೊದಲ ದಿನವೇ ಕನ್ಯತ್ವ ಪರೀಕ್ಷೆ
ಮದುವೆಯಾದ ಮೊದಲ ದಿನವೇ ಹೆಣ್ಣಿಗೆ ಕನ್ಯತ್ವ ಪರೀಕ್ಷೆ ಮಾಡುವ ಅನಿಷ್ಟ ಪದ್ಧತಿ ಇವತ್ತಿಗೂ ಜಾರಿಯಲ್ಲಿದೆ. ರಾಜಸ್ಥಾನದಲ್ಲಿ ಆಚರಣೆಯಲ್ಲಿರುವ ಅರ್ಥಹೀನ ಆಚರಣೆಯಲ್ಲಿ ಕುಕ್ಡಿ ಪದ್ಧತಿ ಹೆಸರಿನಲ್ಲಿ ವಧುವಿಗೆ ಕನ್ಯತ್ವ ಪರೀಕ್ಷೆ ಪರೀಕ್ಷೆ ಮಾಡಿಸಲಾಗುತ್ತದೆ. ಮದುವೆಯಾದ ತಕ್ಷಣವೇ ಗಂಡನ ಕೋಣೆಗೆ ಹೋಗುವ ವಧು ಕನ್ಯತ್ವ ಪರೀಕ್ಷೆಗೊಳಪಡುತ್ತಾಳೆ. ಹಾಸಿಗೆ ಮೇಲೆ ರಕ್ತದ ಕಲೆಗಳು ಇರುವುದು ಕಂಡು ಬಂದರೆ, ಪರೀಕ್ಷೆಯಲ್ಲಿ ಪಾಸ್​ ಆಗಿದ್ದಾಳೆಂದು ಒಪ್ಪಿಕೊಳ್ಳುತ್ತಾರೆ. ರಾಜಸ್ಥಾನದ ಭಿಲ್ವಾರ ಎಂಬಲ್ಲಿ ಇಂತಹದೊಂದು ಅನಿಷ್ಟ ಪದ್ಧತಿ ಜಾರಿಗೆ ಇರುವುದು ಕಂಡು ಬಂದಿದೆ.

ಇದರ ಮೂಲಕ ವಧು ಮೊದಲ ರಾತ್ರಿ ಗಂಡನೊಂದಿಗೆ ದೈಹಿಕ ಸಂಪರ್ಕ ನಡೆಸಿದಾಗ ಬಿಳಿಯ ಹಾಸಿಗೆ (ರಕ್ತ) ಕಲೆಯಾಗಬೇಕು. ಇದನ್ನ ಬೆಳಗ್ಗೆ ಗ್ರಾಮದ ಎಲ್ಲರಿಗೂ ತೋರಿಸಲೇಬೇಕು. ಅದರ ಮೂಲಕ ಆಕೆಗೆ ಶೀಲದ ಸರ್ಟಿಫಿಕೇಟ್ ನೀಡುವುದರ ಜೊತೆಗೆ, ಗಂಡನ ಮನೆಯಲ್ಲಿ ಇಟ್ಟುಕೊಳ್ಳುವ ಬಗ್ಗೆ ಅಂತಿಮ ಮುದ್ರೆ ಹಾಕುತ್ತಾರೆ.

Scroll to load tweet…