Asianet Suvarna News Asianet Suvarna News

ಸಾಯೋ ವಯಸ್ಸಾದರೂ ವರ್ಜಿನ್ ಹುಡುಗೀರು ಬೇಕು ಎನ್ನೋದೇಕೆ ವೃದ್ಧರು?

ಕನ್ಯತ್ವದ ಬಗ್ಗೆ ಈಗ್ಲೂ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಕೆಲವು ಕಡೆ ವರ್ಜಿನ್ ಹುಡುಗಿಯನ್ನು ಮದುವೆಗೆ ಆಯ್ಕೆ ಮಾಡಿಕೊಳ್ಳುವ ಜನರಿದ್ದಾರೆ. ಅದ್ರಲ್ಲೂ ಹಿರಿಯ ವ್ಯಕ್ತಿಗಳು ಇದಕ್ಕೆ ಹೆಚ್ಚು ಆದ್ಯತೆ ನೀಡ್ತಾರೆ. ಅದಕ್ಕೆ ಸಾಕಷ್ಟು ಕಾರಣವಿದೆ. 
 

The Real Reason Why Older Men Get Attracted To Virgins
Author
First Published Dec 9, 2022, 3:21 PM IST

ಜನರು ಬದಲಾವಣೆಗೆ ಹೊಂದಿ ಕೊಳ್ತಿದ್ದಾರೆ. ಹಿಂದಿದ್ದ ಅನೇಕ ನಂಬಿಕೆ, ಪದ್ಧತಿಗಳು ಈಗ ಮಾಯವಾಗ್ತಿವೆ. ಮಹಿಳೆಯರು ಪುರುಷರ ಸಮಾನ ಕೆಲಸ ಮಾಡ್ತಿದ್ದಾರೆ. ಪುರುಷರಷ್ಟೆ ಸ್ವಾತಂತ್ರ್ಯವನ್ನು ಮಹಿಳೆಯರು ಹೊಂದಿದ್ದಾರೆ. ಈಗಿನ ದಿನಗಳಲ್ಲಿ ಮದುವೆಗಿಂತ ಮೊದಲು ಶಾರೀರಿಕ ಸಂಬಂಧ ಬೆಳೆಸುವುದು ಸಾಮಾನ್ಯವಾಗ್ತಿದ್ದರೂ ಭಾರತದಲ್ಲಿ ಈಗ್ಲೂ ಕನ್ಯತ್ವದ ಬಗ್ಗೆ ಅನೇಕರು ತಮ್ಮದೆ ನಂಬಿಕೆಯನ್ನು ಹೊಂದಿದ್ದಾರೆ. ಈಗಿನ ಯುವಜನತೆ ಕನ್ಯತ್ವದ ಬಗ್ಗೆ ಹೆಚ್ಚು ಮಹತ್ವ ನೀಡದೆ ಹೋದ್ರೂ ಹಿರಿಯ ವ್ಯಕ್ತಿಗಳು ಕನ್ಯತ್ವಕ್ಕೆ ಆದ್ಯತೆ ನೀಡ್ತಿದ್ದಾರೆ. 

ಭಾರತ (India) ದ ಕೆಲ ಪ್ರದೇಶಗಳಲ್ಲಿ ಮೊದಲ ರಾತ್ರಿ ಕನ್ಯತ್ವ (Virginity) ಪರೀಕ್ಷೆ ನಡೆಯುತ್ತದೆ. ಈ ಬಗ್ಗೆ ಸಾಕಷ್ಟು ವಿರೋಧಗಳು ಕೂಡ ಕೇಳಿ ಬಂದಿವೆ. ಕನ್ಯತ್ವದ ಪೊರೆ ಬರೀ ಶಾರೀರಿಕ ಸಂಬಂಧ (Physical) ಬೆಳೆಸುವುದರಿಂದ ಮಾತ್ರವಲ್ಲ ಬೇರೆ ಕಾರಣಗಳಿಂದ ಕೂಡ ಹರಿಯುತ್ತದೆ. ಸೈಕ್ಲಿಂಗ್ (Cycling) ಸೇರಿ ಕೆಲ ಕ್ರೀಡೆಗಳು ಇದಕ್ಕೆ ಕಾರಣ. ಆದ್ರೆ ಕನ್ಯತ್ವ ಎನ್ನುವುದನ್ನು ಬರೀ ಕನ್ಯತ್ವ ಪೊರೆಯಿಂದ ನೋಡದ ಜನರಿದ್ದಾರೆ. ಈವರೆಗೆ ಯಾವುದೇ ವ್ಯಕ್ತಿ ಜೊತೆ ಸಂಬಂಧ ಬೆಳೆಸದ ಶುದ್ಧ ಮಹಿಳೆ ಎಂಬ ದೃಷ್ಟಿಕೋನದಿಂದ ಆಕೆಯನ್ನು ನೋಡುತ್ತಾರೆ. ಈವರೆಗೆ ಸಂಬಂಧ ಬೆಳೆಸದ ಹುಡುಗಿಯನ್ನು ಮದುವೆ (Marriage) ಯಾಗಲು ಅನೇಕರು ಬಯಸ್ತಾರೆ. ವಿಶೇಷವಾಗಿ ಹಿರಿಯ ವ್ಯಕ್ತಿಗಳು ಇಂಥ ಹುಡುಗಿಯರನ್ನು ಹುಡುಕ್ತಾರೆ. ಪುರುಷರು ಈವರೆಗೂ ಶಾರೀರಿಕ ಸಂಬಂಧ ಬೆಳೆಸದ ವರ್ಜಿನ್ ಹುಡುಗಿಯನ್ನು ಮದುವೆಯಾಗಲು ಯಾಕೆ ಇಷ್ಟಪಡ್ತಾರೆ ಎಂಬುದನ್ನು ನಾವಿಂದು ಹೇಳ್ತೆವೆ.

ಹುಡುಗರು ವರ್ಜಿನ್ ಹುಡುಗಿ ಬಯಸೋದು ಏಕೆ?:
ತನ್ನಿಷ್ಟದಂತೆ ಆಕೆಯನ್ನು ಬದಲಿಸಬಹುದು:
ವರ್ಜಿನ್ ಹುಡುಗಿಯನ್ನು ತನ್ನ ಇಷ್ಟ ಮತ್ತು ಆದ್ಯತೆಗೆ ತಕ್ಕಂತೆ ಬದಲಿಸಬಹುದು ಎಂದು ಹಿರಿಯ ಪುರುಷರು ಭಾವಿಸ್ತಾರೆ. ತಮ್ಮ ನಂಬಿಕೆಗಳು ಮತ್ತು ಮೌಲ್ಯಗಳನ್ನು ಆಕೆ ಮೇಲೆ ಸುಲಭವಾಗಿ ಹೇರಬಹುದು ಎಂದು ಅವರು ನಂಬುತ್ತಾರೆ. ವರ್ಜಿನ್ ಆಗಿರುವ ಹುಡುಗಿ ಹೇಳಿದಂತೆ ಕೇಳ್ತಾಳೆ ಎನ್ನುವ ನಂಬಿಕೆ ಪುರುಷರದ್ದು. 

Real Story : 27 ವರ್ಷಗಳ ನಂತ್ರ ಸಿಕ್ತು ಹಳೆ ಲವರ್‌ನ ನಿಜವಾದ ಪ್ರೀತಿ

ಸ್ವಾಭಿಮಾನ : ಕನ್ಯೆಯ ಜೊತೆ ಶಾರೀರಿಕ ಸಂಬಂಧ (Physical Relationship) ಬೆಳೆಸಿದಾಗ ಪುರುಷರ ಸ್ವಾಭಿಮಾನ ಹೆಚ್ಚಾಗುತ್ತದೆ. ಮಹಿಳೆ ಜೊತೆ ಸಂಬಂಧ ಬೆಳೆಸಿದ ಮೊದಲ ವ್ಯಕ್ತಿ ನಾನೇ ಎಂಬ ಹೆಮ್ಮೆಯ ಭಾವ ಅವರಲ್ಲಿ ಮೂಡುತ್ತದೆ. ಆ ಮಹಿಳೆ ತನ್ನವಳು ಎನ್ನುವ ಉತ್ಸಾಹದಲ್ಲಿ ಅವರಿರುತ್ತಾರೆ.  

ಅಸೂಯೆ (Jealous) ಮತ್ತು ಅಭದ್ರತೆ (Insecurity) : ವಯಸ್ಸಾದ ಪುರುಷರು ಕನ್ಯೆ ಜೊತೆ ಶಾರೀರಿಕ ಸಂಬಂಧ ಬೆಳೆಸಲು ಮತ್ತೊಂದು ಕಾರಣವೆಂದ್ರೆ ಅಸೂಯೆ. ಅವರು ಈಗಾಗಲೇ ಸಂಭೋಗ ಬೆಳೆಸಿದ ಮಹಿಳೆ ಜೊತೆ ಶಾರೀರಿಕ ಸಂಬಂಧ ಬೆಳೆಸಲು ಅಸಹ್ಯಪಡುತ್ತಾನೆ. ಕನ್ಯೆ ಜೊತೆ ಸಂಬಂಧ ಬೆಳೆಸಿದಾಗ ಅವರ ಅಭದ್ರತೆ ಕಡಿಮೆಯಾಗುತ್ತದೆ. ಇದೇ ಕಾರಣಕ್ಕೆ ಕನ್ಯೆಯನ್ನು ಮದುವೆಯಾಗಲು ಅವರು ಹೆಚ್ಚು ಹುಡುಕಾಟ ನಡೆಸ್ತಾರೆ.     

ಮಡದಿಗೆ ಪೀರಿಯೆಡ್ಸಾ ಪ್ರೀತಿಯ ಮಳೆಗರೆಯಿರಿ ಸಾಕು, ಅವಳು ಫುಲ್ ಖುಷ್

ಮೂಢ ನಂಬಿಕೆ (Superstitious) : ಇದು ನಂಬಲು ಸ್ವಲ್ಪ ಕಷ್ಟವೆನ್ನಿಬಹುದು.  ಆದರೆ ಕೆಲವರು ಕನ್ಯೆಯೊಂದಿಗೆ ಮಾತ್ರ ಲೈಂಗಿಕ ಸಂಬಂಧ ಹೊಂದುವ ಮೂಢನಂಬಿಕೆ ಹೊಂದಿದ್ದಾರೆ. ಇದು ಆತನ ಮನಸ್ಸಿಗೆ ಸಂಬಂಧಿಸಿದ ವಿಷ್ಯವಾಗಿರುತ್ತದೆ. ಯಾವುದೇ ಕಾರಣಕ್ಕೂ ಅವರು ಕನ್ಯೆಯಲ್ಲದವಳನ್ನು ಒಪ್ಪಿಕೊಳ್ಳುವುದಿಲ್ಲ.  

ಲೈಂಗಿಕ ರೋಗ (Sexual Disease) : ಈವರೆಗೆ ಶಾರೀರಿಕ ಸಂಬಂದ ಬೆಳೆಸದ ಮಹಿಳೆಯನ್ನು ಹುಡುಕಲು ಇನ್ನೊಂದು ಕಾರಣ ಲೈಂಗಿಕ ರೋಗ. ಈಗಾಗಲೇ ಸಂಭೋಗ ಬೆಳೆಸಿದ ಮಹಿಳೆಗೆ ಲೈಂಗಿಕ ರೋಗ ಕಾಡ್ತಿರಬಹುದು. ಹರ್ಪಿಸ್, ಕ್ಲಮೈಡಿಯ, ಗೊನೊರಿಯಾ ಇತ್ಯಾದಿ ಆಕೆಗಿರಬಹುದು ಎಂಬ ಭಯ ಕೆಲವರಿಗಿರುತ್ತದೆ. ಆದ್ರೆ ಕನ್ಯೆಗೆ ಆ ರೋಗದ ಭಯವಿಲ್ಲ. ಆಕೆಯನ್ನು ಪರೀಕ್ಷೆಗೆ ಒಳಪಡಿಸಬೇಕಾಗಿರುವುದಿಲ್ಲ. ಸಂಭೋಗ ಬೆಳೆಸುವ ವೇಳೆ ಜಾಗರೂಕತೆ ಅವಶ್ಯಕತೆಯಿರುವುದಿಲ್ಲ ಎನ್ನುವ ಕಾರಣಕ್ಕೆ ಕೆಲವರು ಕನ್ಯೆಯ ಹುಡುಕಾಟ ನಡೆಸ್ತಾರೆ.

Follow Us:
Download App:
  • android
  • ios