ಆಕೆ ವೈದ್ಯೆ, ಗಂಡನೂ ವೈದ್ಯ, ಮೊದಲ ರಾತ್ರೀಲಿ ಬ್ಲೀಡ್ ಆಗದಿದ್ದಕ್ಕೆ ಚಚ್ಚಿದ ಪತಿ ರಾಯ!

ಅವರಿಬ್ಬರೂ ಮೆಡಿಕಲ್‌ ಓದಿದವರು. ಪ್ರೀತಿಸಿ ಮದುವೆಯಾದವರು. ಆದರೆ ಆಕೆ ಅನುಭವಿಸಬೇಕಾಗಿ ಬಂದುದು ಮಾತ್ರ ಸ್ಲಮ್‌ನಲ್ಲಿ ವಾಸಿಸುವ ಮಹಿಳೆಯರು ಅನುಭವಿಸುತ್ತಾರೆ ಎಂದು ನಾವು ಅಂದುಕೊಳ್ಳುವ ಅತಿ ದಾರುಣ ಹಿಂಸೆ. ಅದನ್ನು ಆಕೆಯ ಮಾತುಗಳಲ್ಲೇ ಓದಿ.

 

woman shares pain of her struggle of domestic violence and abusive husband

ಅದು 2017. ನಾವಿಬ್ಬರೂ ಮೆಡಿಕಲ್‌ (medical) ಓದುತ್ತಿದ್ದೆವು. ಪರಸ್ಪರ ಭೇಟಿಯಾಗಿ ಪ್ರೀತಿಯಲ್ಲಿ ಬಿದ್ದೆವು. ಅವನೇ ಮೊದಲು ಪ್ರಪೋಸ್‌ (propose) ಮಾಡಿದ. ನಾನು ಓಕೆ ಎಂದೆ. ಅದೊಂದು ಕನಸಿನಂತಿತ್ತು. ನಾನು ನನ್ನ ಕ್ಲಾಸ್‌ನ ಟಾಪರ್‌ ಆಗಿದ್ದೆ. ಸಾಕಷ್ಟು ಕನಸುಗಳು ಇದ್ದವು.ಅವನ ಹೆತ್ತವರು ಅವನಿಗೆ ಮಾರ್ವಾಡಿ ಹೆಣ್ಣನ್ನು ಮದುವೆ ಮಾಡಿಸಲು ಬಯಸಿದ್ದರು. ನಾನು ಪಂಜಾಬಿ ಆಗಿದ್ದೆ. ನಾನು ಆತನನ್ನು ಎಷ್ಟು ನಂಬಿದ್ದೆ ಎಂದರೆ, ಅವನಿಗಾಗಿ ಮೆಡಿಕಲ್‌ ಅರ್ಧದಲ್ಲೇ ಬಿಡಲು ರೆಡಿಯಾಗಿದ್ದೆ. ಆದರೆ ನನ್ನ ಹೆತ್ತವರು ನಮ್ಮ ಮೆಡಿಕಲ್‌ ಮುಗಿದ ಮೇಲೆ ಮಾತ್ರವೇ ಮದುವೆ ಎಂದು ಕಂಡಿಷನ್‌ ಹಾಕಿದರು. ಅದು ನನಗೆ ಮುಂದೆ ಒಳ್ಳೆಯದಾಯಿತು. ಆದರೆ ಮದುವೆಯಾದ ಮೇಲೆ ನಾನು ಕೆಲಸ ಮಾಡಬಾರದು ಎಂದು ಅವನ ಹೆತ್ತವರು ಶರತ್ತು ಹಾಕಿದರು. ನಾನು ಒಪ್ಪಿದೆ. ನಾವಿಬ್ಬರೂ ಮದುವೆಯಾದೆವು.

ಮದುವೆಯಾದ ಮೊದಲ ರಾತ್ರಿಯೇ ನರಕದ ಅನುಭವ ನನಗಾಯಿತು. ನಮ್ಮಿಬ್ಬರ ಮೊದಲ ಮಿಲನದ (firts time sex) ವೇಳೆ ನನಗೆ ರಕ್ತಸ್ರಾವ (bleeding) ಆಗಲಿಲ್ಲ. ಇದರಿಂದ ಆತ ರೊಚ್ಚಿಗೆದ್ದ. ʼನೀನು ಕನ್ಯೆಯಲ್ಲʼ (virgin) ಎಂದ. ʼಯಾರ ಜತೆ ಮಲಗಿದ್ದೀ ಹೇಳುʼ ಎಂದು ಇಡೀ ರಾತ್ರಿ ಹಿಂಸೆ ನೀಡಿದ.ಹನಿಮೂನ್‌ (honeymoon) ನರಕಸದೃಶವಾಯಿತು. ಹನಿಮೂನ್‌ನಿಂದ ಹಿಂದಿರುಗಿದ ಬಳಿಕ, ನನ್ನ ತಂಗಿಗೆ ನಾನು ಒಂದು ಪೆನ್ಸಿಲ್‌ ಖರೀದಿಸಿ ತಂದಿದ್ದಕ್ಕಾಗಿ ಅವನು ನನ್ನನ್ನು ಎಲ್ಲರ ಮುಂದೆ ಹೊಡೆದ. ಅವನ ಹೆತ್ತವರು ಅವನಿಗೆ ಸಪೋರ್ಟ್‌ ಮಾಡಿದರು.

 

ನಾನು ಪಾತ್ರೆ, ಬಟ್ಟೆಗಳನ್ನು ತೊಳೆಯಬೇಕಾಗಿತ್ತು. ಅಡುಗೆ ಮಾಡಬೇಕಿತ್ತು. ಆದರೆ ಹೊರಗೆ ಕೆಲಸಕ್ಕೆ ಹೋಗುವಂತಿರಲಿಲ್ಲ. ಮಾವನೂ ಡಾಕ್ಟರ್.‌ ಅವರ ಕ್ಲಿನಿಕ್‌ಗೆ ಹೋಗಿ ಟೇಬಲ್‌ ಒರೆಸಬೇಕಿತ್ತು. ಪೇಷೆಂಟ್‌ಗಳನ್ನು ನೋಡುವಂತಿರಲಿಲ್ಲ. ಹೀಗೆ ಕೆಲವು ವರ್ಷಗಳ ಬಳಿಕ ನಾನು ಗರ್ಭಿಣಿಯಾದೆ. ಮಗಳು ಜನಿಸಿದಳು. ಗಂಡ ದುಃಖಿಸಿದ. ಅವನಿಗೆ ಗಂಡು ಮಗು ಬೇಕಿತ್ತು. ಮತ್ತಷ್ಟು ಹಿಂಸೆ ನೀಡಿದ. ಆದರೆ ಇದ್ಯಾವುದೂ ನನ್ನ ಅಪ್ಪ ಅಮ್ಮನಿಗೆ ತಿಳಿಯದಂತೆ ಎಚ್ಚರ ವಹಿಸಿದೆ. ಇವನು ಕುಡಿಯಲು ಶುರುಮಾಡಿದ. ಕುಡುಕತನ ಮಿತಿ ಮೀರಿತು. ಅವನ ಅಪ್ಪ ದುಡಿಯುತ್ತಿದ್ದುದರಿಂದ ಇವನಿಗೆ ದುಡಿಯುವ ಅಗತ್ಯವೂ ಇರಲಿಲ್ಲ.

ಎರಡನೇ ಬಾರಿಗೆ ನಾನು ಗರ್ಭಿಣಿಯಾದೆ. ಒಮ್ಮೆ ಅವನು ಕುಡಿದು ಬಂದುದರಿಂದ ತಡೆಯಲಾಗದೆ ನಾನು ಹಾಲ್‌ನಲ್ಲಿ ಮಲಗಿದೆ. ಮಗಳೂ (Daughter) ನನ್ನ ಜೊತೆಗೇ ಮಲಗಿದಳು. ಅವನು ರೇಗಿ ಎದ್ದು ಬಂದು ನನ್ನ ಹೊಟ್ಟೆಯ ಮೇಲೆ ಕುಳಿತು ಮಗಳ ಬ್ರೇನ್‌ವಾಶ್‌ ಮಾಡ್ತಿದೀಯಾ ಎಂದು ನನ್ನ ಮುಖವನ್ನೆಲ್ಲ ಜಜ್ಜಿಹಾಕಿದ. ರಕ್ತ ಬಂತು. ಬೆಳಗಿನ ಜಾವ ನಾಲ್ಕು ಗಂಟೆಗೆ ತಂದೆಗೆ ಫೋನ್‌ ಮಾಡಿದೆ. ನನ್ನ ತಂದೆ ತಾಯಿ ಬಂದವರು ನನ್ನ ಸ್ಥಿತಿ ಕಂಡು ಗಾಬರಿಯಾದರು. ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದರು. ಆಗ ಅವನು ತಪ್ಪು ಒಪ್ಪಿಕೊಂಡು ಸರಿಹೋದವನಂತೆ ನಾಟಕ ಆಡಿದ. ನಾವು ನಂಬಿದೆವು.

Weird Wedding: ಇಲ್ಲಿ ವರನಲ್ಲ, ಅವನ ಸಹೋದರಿ ಜೊತೆ ವಧು ಸಪ್ತಪದಿ ತುಳಿಯುತ್ತಾಳೆ !

ಎರಡನೆಯ ಮಗಳು ಜನಿಸಿದಳು. ಆದರೆ ಅವನು ಸರಿಹೋಗಲಿಲ್ಲ. ಅವನ ತಂದೆ ಸತ್ತು ಹೋದ ಬಳಿಕ ದಿನದ 24 ಗಂಟೆಗಳೂ ಕುಳಿತು ಕುಡಿಯತೊಡಗಿದ. ಕ್ಲಿನಿಕ್‌ಗೆ ಹೋಗುತ್ತಿರಲಿಲ್ಲ. ಅಥವಾ ಸ್ನೇಹಿತರ ಜತೆ ಜೂಜಾಡುತ್ತಿದ್ದ. ಕೆಲವೊಮ್ಮೆ ಕುಡಿದು ಚಿತ್ತಾಗಿ ಬಂದು, ನಿದ್ರೆ ಮಾಡುತ್ತಿದ್ದ ನನ್ನ ಮೇಲೆ ಐಸ್‌ ನೀರು ಎರಚುತ್ತಿದ್ದ. 'ನಾನು ನಿನ್ನ ಮೇಲೆ ಮೂತ್ರ ಮಾಡಿಲ್ಲ. ಅದಕ್ಕೆ ಸಂತೋಷಪಡು'ʼ ಎನ್ನುತ್ತಿದ್ದ. ಕುಡಿದು ಹಣವನ್ನೆಲ್ಲ ಕಳೆಯುತ್ತಿದ್ದನೇ ಹೊರತು, ಮಕ್ಕಳ ಸ್ಕೂಲ್‌ ಫೀ ಸಹ ಕಟ್ಟುತ್ತಿರಲಿಲ್ಲ. ಎಲ್ಲರ ಮುಂದೆ ನನ್ನನ್ನು ಅಶ್ಲೀಲವಾಗಿ ಬಯ್ಯುತ್ತಿದ್ದ. ವೇಶ್ಯೆ ಎಂದು ಜರೆಯುತ್ತಿದ್ದ. ನನ್ನ ಮಕ್ಕಳು ಈತನನ್ನು ಪೂರ್ತಿ ಅಸಹ್ಯಿಸಿಕೊಳ್ಳುತ್ತಿದ್ದರು.

ನನ್ನ ದೊಡ್ಡ ಮಗಳು ಅಥ್ಲೀಟ್‌ ಆಗಬಯಸಿದ್ದಳು. ಇದಕ್ಕಾಗಿ ನಾವು ಬೇಗನೆ ಎದ್ದು ಜುಹೂ ಬೀಚ್‌ಗೆ ರನ್ನಿಂಗ್‌ ಹೋಗುತ್ತಿದ್ದೆವು. ಇವನು ಕೆಲವೊಮ್ಮೆ ನಮ್ಮನ್ನು ಹಿಂಬಾಲಿಸುತ್ತಿದ್ದ. ಕೆಲವೊಮ್ಮ ನಡುಬೀದಿಯಲ್ಲಿ ಮಗಳನ್ನು ನಿಲ್ಲಿಸಿ ʼನಿನ್ನ ಅಮ್ಮ ಎಲ್ಲಿದ್ದಾಳೆ? ಯಾರ ಜತೆಗೆ ಮಲಗಿದ್ದಾಳೆ?ʼ ಎಂದೆಲ್ಲಾ ಬಯ್ಯುತ್ತಾ ವಾಕರಿಕೆ ಹುಟ್ಟಿಸುತ್ತಿದ್ದ.

ಅವನ ಹೇಸಿಗೆ ಬೈಗುಳ ನನ್ನ ಮಕ್ಕಳನ್ನೂ ಮುಟ್ಟಿದಾಗ ಮಾತ್ರ ನಾನು ಇನ್ನು ಇವನ ಜೊತೆಗಿರುವುದು ಸರಿಯಲ್ಲ ಎಂದು ನಿರ್ಧರಿಸಿದೆ. ನಾಲ್ಕಾರು ಬಾರಿ ಮಾದಕವ್ಯಸನ ರಿಹ್ಯಾಬ್‌ ಸೆಂಟರ್‌ಗೆ ಸೇರಿ ಹೊರಬಂದರೂ ಅವನು ಸರಿ ಹೋಗದಿದ್ದಾಗ, ಬಿಟ್ಟುಬಿಡಲು ಮುಂದಾದೆ. ಆದರೆ ಅವನಿಗೆ ನನ್ನದೇ ಹಣದಲ್ಲಿ ಕ್ಲಿನಿಕ್‌ ಹಾಕಿಕೊಟ್ಟಿದ್ದೆ. ಅದನ್ನೆಲ್ಲಾ ಹಾಳು ಮಾಡಿದ್ದ.

ಕೊನೆಗೂ ನಾನು ಅವನಿಂದ ಬೇರೆಯಾದೆ. ಆದರೆ ಡೈವೋರ್ಸ್‌ ಕೊಡಲು ಅವನು ಒಪ್ಪಿಲ್ಲ. ಇನ್ನೂ ಆಗಾಗ ಬಂದು ಹಿಂಸೆ ಕೊಡುತ್ತಾನೆ. 20 ವರ್ಷಗಳ ಬಳಿಕ ನಾನು ನನ್ನದೇ ಕ್ಲಿನಿಕ್‌ ತೆಗೆದು, ಪ್ರಾಕ್ಟೀಸ್‌ ಮಾಡುತ್ತಿದ್ದೇನೆ. ನನ್ನ ಮಕ್ಕಳು ನನ್ನನ್ನು ಸ್ಟ್ರಾಂಗ್‌ ಆಗಿ ಇಡಲು ತುಂಬಾ ಸಹಕಾರ ಕೊಡುತ್ತಿದ್ದಾರೆ. ತುಂಬಾ ಪ್ರೀತಿ (Love), ಮಮತೆಯಿಂದ ನಾವು ಮೂವರೂ ಬದುಕುತ್ತಿದ್ದೇವೆ. ಭೂತಕಾಲದ ಹಿಂಸೆ ಕ್ರೌರ್ಯಗಳ ನೆರಳು ಬೀಳದಂತೆ ನೋಡಿಕೊಳ್ಳುತ್ತಿದ್ದೇವೆ.

Relationship Tips: ಚಿತ್ರ ವಿಚಿತ್ರವಾಗಿದೆ ಮಹಿಳೆಯರ ಸೆಕ್ಸ್ ಫ್ಯಾಂಟಸಿ

source: humans of bombay
 

Latest Videos
Follow Us:
Download App:
  • android
  • ios