Asianet Suvarna News Asianet Suvarna News

ಮುಟ್ಟಿನ ರಜೆ ಬೇಡ.. ಮತ್ತೇನು ಮಾಡ್ಬೇಕು? ಸಲಹೆ ನೀಡಿದ ಮಾಮ್ ಅರ್ಥ್ ಸಂಸ್ಥಾಪಕಿ

ಮಹಿಳೆಯರು ತಮ್ಮ ಸಮಾನತೆಗೆ ಹೋರಾಡುತ್ತಿದ್ದಾರೆ. ಈ ಮಧ್ಯೆ ಮುಟ್ಟಿನ ದಿನಗಳಲ್ಲಿ ರಜೆ ಬೇಕು ಎಂಬ ಕೂಗು ಕೇಳಿಬರ್ತಿದೆ. ಸ್ಮೃತಿ ಇರಾನಿ ನಂತ್ರ ಈಗ ಮಾಮ್ ಅರ್ಥ್ ಸಂಸ್ಥಾಪಕಿ ಮುಟ್ಟಿನ ರಜೆ ಬಗ್ಗೆ ಸಲಹೆ ನೀಡಿದ್ದಾರೆ.
 

Mamaearth Co Founder Ghazal Alagh Suggested Amid Period Leave roo
Author
First Published Dec 16, 2023, 3:47 PM IST

ಪಿರಿಯಡ್ಸ್ ಸಮಯದಲ್ಲಿ ರಜೆ ನೀಡ್ಬೇಕೆ ಬೇಡ್ವೆ ಎನ್ನುವ ವಿಚಾರ ಸದ್ಯ ಚರ್ಚೆಯಲ್ಲಿದೆ. ಅನೇಕ ಕಂಪನಿಗಳು ಪಿರಿಯಡ್ಸ್ ವೇಳೆ ರಜೆ ನೀಡುತ್ತಿವೆ. ಮತ್ತೆ ಕೆಲ ಕಂಪನಿಗಳು ಪಿರಿಯಡ್ಸ್ ರಜೆ ಬಗ್ಗೆ ಆಲೋಚನೆ ನಡೆಸ್ತಿವೆ. ಈ ಮಧ್ಯೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, ಮಹಿಳಾ ಉದ್ಯೋಗಿಗಳಿಗೆ ಕಡ್ಡಾಯವಾಗಿ ಪಿಡಿಯಡ್ಸ್ ರಜೆ ನೀಡುವುದನ್ನು ವಿರೋಧಿಸಿದ್ದರು. ರಾಜ್ಯಸಭೆಯಲ್ಲಿ ಸಂಸದ ಮನೋಜ್ ಕುಮಾರ್ ಝಾ ಅವರ ಪ್ರಶ್ನೆಗೆ ಉತ್ತರಿಸಿದ ಸ್ಮೃತಿ ಇರಾನಿ, ಮುಟ್ಟು ಜೀವನದ ಸಹಜ ಕ್ರಿಯೆ. ಅದಕ್ಕಾಗಿ ವಿಶೇಷ ರಜೆಯ ಅಗತ್ಯವಿಲ್ಲ ಎಂದಿದ್ದರು. ಇದೇ ವಿಷ್ಯ ಈಗ ಸಾಕಷ್ಟು ಚರ್ಚೆಯಾಗ್ತಿದೆ. ಈ ಮಧ್ಯೆ ಸೌಂದರ್ಯ ಮತ್ತು ಮಗುವಿನ ಉತ್ಪನ್ನ ಬ್ರಾಂಡ್ ಮಾಮಾ ಅರ್ಥ್‌ನ ಸಹ ಸಂಸ್ಥಾಪಕಿ ಗಜಲ್ ಅಲಾಘ್ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ನೀಡಿದ್ದಾರೆ.

ಮಾಮಾ ಅರ್ಥ್ (Mama Earth) ನ ಸಹ ಸಂಸ್ಥಾಪಕಿ ಗಜಲ್ ಅಲಾಘ್ (Ghazal Alagh) ಹೇಳೋದೇನು? : ಮುಟ್ಟಿನ ಅವಧಿಯಲ್ಲಿ ನೀಡುವ ರಜೆಯು ಹೋರಾಟವು ಲಿಂಗ ಸಮಾನತೆಯ ಪ್ರಗತಿಯನ್ನು ದುರ್ಬಲಗೊಳಿಸಬಹುದು ಎಂದು ಗಜಲ್ ಕಳವಳ ವ್ಯಕ್ತಪಡಿಸಿದ್ದಾರೆ. ಅವರು ಸಾಮಾಜಿಕ ಮಾಧ್ಯಮಗಳ ಮೂಲಕ ಮೂರನೇ ಮಾರ್ಗವನ್ನು ಸೂಚಿಸಿದ್ದಾರೆ. ಸಮಾನತೆಗಾಗಿ ಮಹಿಳೆಯರು ಹೋರಾಟ ನಡೆಸುತ್ತಿದ್ದಾರೆ. ಈ ಸಮಯದಲ್ಲಿ ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ರಜೆ ನೀಡಿದ್ರೆ ಆ ಹೋರಾಟ ನಿಷ್ಪ್ರಯೋಜಕವಾಗಲಿದೆ ಎಂದು ಗಜಲ್ ಅಲಾಘ್ ಹೇಳಿದ್ದಾರೆ. 

ಕೂಲಿ ಕೆಲಸಕ್ಕೆ ಹೋಗಿ ದಿನಕ್ಕೆ ಕೇವಲ 5 ರೂ. ಸಂಪಾದಿಸ್ತಿದ್ದ ಮಹಿಳೆ, ಈಗ ಕೋಟ್ಯಾಧಿಪತಿ!

ನಾವು ಶತಮಾನಗಳಿಂದ ಸಮಾನ ಅವಕಾಶಗಳು ಮತ್ತು ಮಹಿಳೆಯರ ಹಕ್ಕುಗಳಿಗಾಗಿ ಹೋರಾಡುತ್ತಿದ್ದೇವೆ. ಈಗ ಮುಟ್ಟಿನ ರಜೆಗಾಗಿ ನಾವು ನಡೆಸುವ ಹೋರಾಡುವುದು ಈ ಕಠಿಣ ಪರಿಶ್ರಮಕ್ಕೆ ಹಿನ್ನಡೆಯಾಗಬಹುದು. ಹಾಗಾದರೆ ನಾವು ರಜೆ ಪಡೆಯುವ ಬದಲು ಇನ್ನೊಂದು ಮಾರ್ಗ ಅನುಸರಿಸಬಹುದು ಎಂದು ಗಜಲ್ ಅಲಾಘ್ ಹೇಳಿದ್ದಾರೆ. ಪಿರಿಯಡ್ಸ್ ನ ಎಲ್ಲ ಮಹಿಳೆಯರಿಗೆ ರಜೆ ನೀಡುವ ಬದಲು, ಮುಟ್ಟಿನ ಸಮಯದಲ್ಲಿ ನೋವು ತಿನ್ನುವ ಮಹಿಳೆಯರಿಗೆ ರಿಯಾಯಿತಿ ನೀಡಬಹುದು. ರಜೆ ನೀಡುವ ಬದಲು ಮನೆಯಿಂದಲೇ ಕೆಲಸ ಮಾಡುವ ಅವಕಾಶ ನೀಡಬಹುದು ಎಂದು ಗಜಲ್ ಅಲಾಘ್ ಹೇಳಿದ್ದಾರೆ. 

ದೊಡ್ಡ ಗಾತ್ರದ ಸ್ತನಗಳಿಂದ ಸುಸ್ತಾಗಿದ್ರೆ, ಇಲ್ಲಿದೆ ಬೆಸ್ಟ್ ಪರಿಹಾರ!

ಮುಟ್ಟಿನ ರಜೆ ನೀಡಲು ಸುಪ್ರೀಂ ಕೋರ್ಟ್ (Supreme Court) ತಿರಸ್ಕಾರ : ಈ ವರ್ಷದ ಫೆಬ್ರವರಿ 24 ರಂದು ಸುಪ್ರೀಂ ಕೋರ್ಟ್ ಆ ಪಿಐಎಲ್ ಅನ್ನು ಪರಿಗಣಿಸಲು ನಿರಾಕರಿಸಿತ್ತು ಎಂಬುದು ಗಮನಾರ್ಹ. ಇದರಲ್ಲಿ ವಿದ್ಯಾರ್ಥಿನಿಯರು ಮತ್ತು ಉದ್ಯೋಗಸ್ಥ ಮಹಿಳೆಯರಿಗೆ ತಮ್ಮ ಕೆಲಸದ ಸ್ಥಳಗಳಲ್ಲಿ ಮುಟ್ಟಿನ ಸಮಯದಲ್ಲಿ ರಜೆ ನೀಡಲು ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡುವಂತೆ ಕೋರಬೇಕೆಂದು ಪಿಐಎಲ್ ನಲ್ಲಿ ಕೋರಲಾಗಿತ್ತು. ಪಿಐಎಲ್ ಪರಿಶೀಲನೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠ, ನಿರ್ಧಾರ ಕೈಗೊಳ್ಳಲು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ಪ್ರಾತಿನಿಧ್ಯ ನೀಡಬಹುದು ಎಂದಿತ್ತು. ಮುಟ್ಟಿನ ಸಮಯದಲ್ಲಿ ರಜೆ ನೀಡುವ ಕಾರಣದಿಂದಾಗಿ ಮಹಿಳೆಯರಿಗೆ ಉದ್ಯೋಗ ಸಿಗುವ ಸಾಧ್ಯತೆ ಕಡಿಮೆ ಇರುತ್ತದೆ ಎಂದು  ಸಿಜೆಐ ಅಭಿಪ್ರಾಯಪಟ್ಟಿತ್ತು.

ಮುಟ್ಟಿನ ರಜೆ ನೀಡ್ತಿವೆ ಈ ಎಲ್ಲ ಕಂಪನಿ : ಭಾರತೀಯ ಕಂಪನಿ ಸೇರಿದಂತೆ ಅನೇಕ ಕಂಪನಿಗಳು ಮುಟ್ಟಿನ ರಜೆ ನೀಡ್ತಿವೆ. ಇವಿಪನ್, ಜೊಮಾಟೊ, ಬೈಜೂಸ್, ಸ್ವಿಗ್ಗಿ, Asianet News DIgital, ಮೆಗ್ಜೆಟರ್, ಎಆರ್ ಸಿ, ಫ್ಲೈ ಮೈ ಬಿಜ್ ಮತ್ತು ಗುಜುಪ್ ಸೇರಿದಂತೆ ಅನೇಕ ಕಂಪನಿಗಳು ಮುಟ್ಟಿನ ದಿನಗಳಲ್ಲಿ ಮಹಿಳೆಯರಿಗೆ ರಜೆ ನೀಡ್ತಿವೆ. ಯುಕೆ, ಚೀನಾ, ಜಪಾನ್, ತೈವಾನ್, ಇಂಡೋನೇಷ್ಯಾ, ದಕ್ಷಿಣ ಕೊರಿಯಾ, ಸ್ಪೇನ್ ಮತ್ತು ಜಾಂಬಿಯಾ ಈಗಾಗಲೇ ಕೆಲವು ರೀತಿಯ ಮುಟ್ಟಿನ ನೋವಿನ ರಜೆಯನ್ನು ನೀಡುತ್ತಿವೆ.
 

Follow Us:
Download App:
  • android
  • ios