Asianet Suvarna News Asianet Suvarna News

ಹೆಣ್ಮಕ್ಳು ಕೆಲ್ಸಕ್ಕೆ ಹೋಗೋದು ಇದ್ಕೇನಾ? ಲಾಂಡ್ರಿವಾಲಾ ಜತೆಗಿನ ಅನುಭವ ಬಿಚ್ಚಿಟ್ಟ ನಟಿ ಮಾಳವಿಕಾ ಅವಿನಾಶ್​

ಕೆಲಸ, ದುಡಿಮೆ ವಿಷಯಕ್ಕೆ ಬಂದಾಗ ನಿತ್ಯ ಜೀವನದಲ್ಲಿ ಹೆಣ್ಣುಮಕ್ಕಳನ್ನು ಹೇಗೆ ನೋಡುತ್ತಾರೆ ಎನ್ನುವ ಬಗ್ಗೆ ನಟಿ, ರಾಜಕಾರಣಿ ಮಾಳವಿಕಾ ಅವಿನಾಶ್​ ಅವರು ತಮ್ಮ ಅನುಭವ ಹೇಳಿದ್ದು ಹೀಗೆ.. 
 

Malvika Avinash shared her experience about how girls are seen in daily life suc
Author
First Published Aug 21, 2023, 3:21 PM IST

ನಟಿ ಹಾಗೂ ರಾಜಕಾರಣಿ ಮಾಳವಿಕಾ ಅವಿನಾಶ್ (Malavika Avinash) ಆಗಾಗ್ಗೆ ಸೋಷಿಯಲ್​ ಮೀಡಿಯಾ ಮೂಲಕ ಕೆಲವೊಂದು ಮಾಹಿತಿಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್​ ಆಗಿರುವ ಮಾಳವಿಕಾ ಅವರು ತಮಗೆ ಅನ್ನಿಸಿದ್ದನ್ನು ನೇರಾನೇರ ಹೇಳುತ್ತಾರೆ. ತಮ್ಮ ಅನುಭವದ ಸಾರವನ್ನು ಉಣಬಡಿಸುತ್ತಾರೆ. ಇದೀಗ ಮಹಿಳೆ ಮತ್ತು ಪುರುಷರ ಕೆಲಸದ ವಿಷಯ ಬಂದಾಗ ಪರಿಸ್ಥಿತಿ ಹೇಗೆ ಪುರುಷರ ಪರವಾಗಿಯೇ ನಿಲ್ಲುತ್ತದೆ ಎನ್ನುವುದನ್ನು ತಮ್ಮ ಲಾಂಡ್ರಿವಾಲಾನ ಜೊತೆಗಿನ ಮಾತಿನ ಮೂಲಕ ಸೂಚ್ಯವಾಗಿ ವಿವರಿಸಿದ್ದಾರೆ. ಪುರುಷರು ಮತ್ತು ಮಹಿಳೆಯರು ಸಮ-ಸಮ ಎಂದು ಎಷ್ಟೇ ಹೇಳುತ್ತಿದ್ದರೂ,  ಎಷ್ಟೋ ಕ್ಷೇತ್ರಗಳಲ್ಲಿ ಪುರುಷರಿಗಿಂತಲೂ ಮಹಿಳೆಯರು ಒಂದು ಹೆಜ್ಜೆ ಮುಂದೆ ಹೋಗಿದ್ದರೂ ಪುರುಷರು ಮಾಡುವುದು ಮಾತ್ರ ಕೆಲಸ, ಮಹಿಳೆಯರು ಅದೇ ಕೆಲಸ ಮಾಡಿದರೂ ನಗಣ್ಯ ಎನ್ನುವ ಮಾಮೂಲು ಆರೋಪ ಎಂದಿಂದಿಗೂ ಇದ್ದದ್ದೇ. ಇದನ್ನು ಒಂದಿಷ್ಟು ಮಂದಿ  ಒಪ್ಪದೇ ಇರಬಹುದು, ಪುರುಷ ಪ್ರಧಾನ ಸಮಾಜ ಎನ್ನುವುದು ಇಲ್ಲವೇ ಇಲ್ಲ ಎನ್ನುವ ವಾದವೂ ಇದ್ದು, ಇದಕ್ಕೆ ತಕ್ಕುನಾಗಿ ಕೆಲವೊಂದು ಉದಾಹರಣೆಗಳನ್ನು ಕೆಲವರು ಕೊಡುವುದೂ ಇದೆ. ಆದರೆ ಇವೆಲ್ಲವುಗಳ ಮಧ್ಯೆಯೇ, ನಿತ್ಯ ಜೀವನದ ವಿಷಯಕ್ಕೆ ಬಂದಾಗ, ಪುರುಷ-ಮಹಿಳೆ ನಡುವಿನ ತಾರತಮ್ಯ ಹೇಗೆಲ್ಲಾ ಕೆಲಸ ಮಾಡುತ್ತದೆ ಎಂಬ ಬಗ್ಗೆ ಮಾಳವಿಕಾ ತಮ್ಮ ಅನುಭವದ ನುಡಿಯನ್ನು ಹೇಳಿದ್ದಾರೆ. 
 
 ಕೆಲ ದಿನಗಳ ಹಿಂದೆ ಬಾಲಿವುಡ್​ ನಟಿ ವಿದ್ಯಾ ಬಾಲನ್ ಅವರು ವಿಡಿಯೋ ಒಂದನ್ನು ಶೇರ್​ ಮಾಡಿಕೊಂಡಿದ್ದರು. ಅದರಲ್ಲಿ ವಿದ್ಯಾ ಬಾಲನ್​ ಅವರು ತಮಗಾದ ಅನುಭವವನ್ನು ಹೇಳಿಕೊಂಡಿದ್ದರು. ಅದೇನೆಂದರೆ ವಿದ್ಯಾ ಅವರು ಫೋನ್​ ಕಾಲ್​ನಲ್ಲಿ ಬಿಜಿಯಾಗಿದ್ದ ವೇಳೆ ಅವರ ಮನೆಕೆಲಸದಾಕೆ ಬಂದು ಡಿಸ್ಟರ್ಬ್​ ಮಾಡುತ್ತಿದ್ದಳಂತೆ. ಇದರಿಂದ ಕಿರಿಕಿರಿಯಾದ ವಿದ್ಯಾ ಬಾಲನ್ (Vidya Balan)​, ನಿನಗೆ ಏನು ಬೇಕೋ ಅದನ್ನು ನನ್ನ ಗಂಡನಿಗೆ ಹೇಳು ಎಂದರಂತೆ. ಆಗ ಕೂಡಲೇ ಸೇವಕಿ, ಮೇಡಂ, ಯಜಮಾನರು ಫೋನ್​ನಲ್ಲಿ ಬಿಜಿಯಾಗಿದ್ದಾರೆ, ಹೇಗೆ ಹೇಳಲಿ ಎಂದು ಕೇಳಿದಳಂತೆ! ಇದನ್ನು ಹೇಳುತ್ತಾ ವಿದ್ಯಾ ಬಾಲನ್​, ಅಂದರೆ ಪುರುಷರು ಮಾತ್ರ ಪ್ರಮುಖ ಕೆಲಸ ಮಾಡುತ್ತಿದ್ದಾರೆ ಎಂದರ್ಥ, ಅದೇ ಕೆಲಸವನ್ನು ಮಹಿಳೆಯರು ಮಾಡಿದರೆ ಅದು ಪ್ರಮುಖ ಎನಿಸುವುದೇ ಇಲ್ಲವೆ ಎಂದು ಪ್ರಶ್ನಿಸಿದ್ದರು. 

Sudha Murthy Food Controversy: ಸಹಿಷ್ಣುತೆ, ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮತಾನಾಡೋರೆಲ್ಲಿ ಎಂದ ಮಾಳವಿಕಾ
 
ಈಗ ವಿದ್ಯಾ ಬಾಲನ್​ ಅವರ ಇದೇ ವಿಷಯವನ್ನು ಇಟ್ಟುಕೊಂಡ ನಟಿ ಮಾಳವಿಕಾ ತಮಗಾಗಿರುವ ಅನುಭವವನ್ನು ಶೇರ್​ ಮಾಡಿಕೊಂಡಿದ್ದಾರೆ. ಲಾಂಡ್ರಿವಾಲಾನ (Laundry Man) ಜೊತೆಗಿನ ತಮ್ಮ ಮಾತುಕತೆಯನ್ನು ಅವರು ತಿಳಿಸಿದ್ದಾರೆ. ಮಾಳವಿಕಾ ಹೇಳಿದ್ದೇನೆಂದರೆ 'ಇಂದು ಬೆಳಿಗ್ಗೆ ಲಾಂಡ್ರಿವಾಲಾ ನಮ್ಮ ಮನೆಗೆ ಬಂದಿದ್ದ. ಮಾಮೂಲಿನಂತೆ ವಾರದ ಕೊನೆಯಲ್ಲಿ ಆತನಿಗೆ ಹಣವನ್ನು ನೀಡಬೇಕಿತ್ತು. ಅದರಂತೆ ನಾನು ಹೋಗುವಾಗ ವಾರದ ಬಾಕಿಯನ್ನು ತೆಗೆದುಕೊಂಡು ಹೋಗು ಅಂದೆ. ಅದಕ್ಕೆ ಆತ ಕೂಡಲೇ ಅಣ್ಣಾವ್ರು ಈಗಷ್ಟೇ ಕಾರಿನಲ್ಲಿ  ಹೊರಟುಹೋದರು ಎಂದ. (ಇದರ ಅರ್ಥ ದುಡ್ಡು ಕೊಡುವವರು ಕೇವಲ ಪುರುಷರು ಎನ್ನುವುದು ಆತ ತಿಳಿದಿರುವಂತಿದೆ!) ಅದಕ್ಕೆ ನಾನು ಹಾಗಿದ್ದರೆ ನಾನೇನು ತಮಾಷೆಗೆ ದುಡಿಯುವುದಾ? ಮೋಜಿಗಾಗಿ ಶೂಟಿಂಗ್​ಗೆ ಹೋಗುವುದಾ, ಬಾಕಿಯನ್ನು ತೀರಿಸಲು ಸಾಕಷ್ಟು ಗಳಿಸುವುದಿಲ್ಲ ಎಂದು ನೀನು ಭಾವಿಸುವೆಯಾ ಎಂದು ಪ್ರಶ್ನಿಸಿದೆ. ಆತ ತುಂಬಾ ಗೊಂದಲಕ್ಕೆ ಸಿಲುಕಿದ. ನನ್ನ ಜೀವನೋಪಾಯಕ್ಕೆ ಬೇಕಾದಷ್ಟನ್ನು ನಾನು ಗಳಿಸುವುದಿಲ್ಲ ಎನ್ನುವ ಪ್ರಶ್ನೆ ಆತನ ಮುಖದಲ್ಲಿ ಇರುವಂತಿತ್ತು' ಎಂದು ಮಾಳವಿಕಾ ಹೇಳಿಕೊಂಡಿದ್ದಾರೆ.

 ಇದಕ್ಕೆ ಹಲವಾರು ಮಂದಿ ಕಮೆಂಟ್ಸ್​ ಮಾಡಿದ್ದು, ತಮಗಾಗಿರುವ ಅನುಭವವನ್ನು ಶೇರ್ ಮಾಡಿಕೊಂಡಿದ್ದಾರೆ. ನನಗೂ ಇದೇ ರೀತಿಯ ಅನುಭವ ಆಗಿದೆ ಎನ್ನುವುದಾಗಿ ಹೇಳಿದ್ದಾರೆ. ಕೆಲವು ಪುರುಷರು ಇದಕ್ಕೆ ವಿರೋಧ ವ್ಯಕ್ತಪಡಿಸಿ ಕಮೆಂಟ್​ ಮಾಡಿದ್ದಾರೆ. ಒಬ್ಬರು ನಾನು ವರ್ಕ್​ ಫ್ರಂ ಹೋಮ್​ನಲ್ಲಿದ್ದೆ. ನನ್ನ ಗರ್ಭಿಣಿ (Pregnant) ಪತ್ನಿ ಕೆಲಸಕ್ಕೆ ಹೋಗುತ್ತಿದ್ದಳು. ನಮ್ಮ ಮನೆಯ ಕೆಲಸದಾಕೆ ನಾನು ಏನೋ ದೊಡ್ಡ ತಪ್ಪು ಮಾಡುತ್ತಿದ್ದೇನೆ ಎಂದು ಕಿಡಿಕಿಡಿಯಾಗುತ್ತಿದ್ದಳು. ಗರ್ಭಿಣಿಯನ್ನು ಕಚೇರಿಗೆ ಕಳುಹಿಸಿ, ನಾನು ಆರಾಮಾಗಿ ಮನೆಯಲ್ಲಿ ಇದ್ದೇನೆ ಎಂದು ಆಕೆ ಭಾವಿಸದಂತಿತ್ತು ಎಂದು ಹೇಳಿದ್ದು, ಹೀಗೆ ಕೆಲ ಪುರುಷರು ತಮ್ಮ ಅನುಭವ ಶೇರ್​ ಮಾಡಿಕೊಂಡಿದ್ದಾರೆ.

ಮಕ್ಕಳ ಪಾಲನೆ ವಿಷ್ಯದಲ್ಲಿ ನಿಮ್ಮಮ್ಮನ ಮಾತೂ ಕೇಳ್ಬೇಡಿ ಎಂದ ಕಾಜೋಲ್
 

Follow Us:
Download App:
  • android
  • ios