ಮಕ್ಕಳ ಪಾಲನೆ ವಿಷ್ಯದಲ್ಲಿ ನಿಮ್ಮಮ್ಮನ ಮಾತೂ ಕೇಳ್ಬೇಡಿ ಎಂದ ಕಾಜೋಲ್

ತಾಯಿಯ ಜವಾಬ್ದಾರಿ ದೊಡ್ಡದು. ಮಕ್ಕಳು ದಾರಿ ತಪ್ಪಿದ್ರೂ ಸರಿ ದಾರಿಯಲ್ಲಿ ನಡೆದ್ರೂ ಮಾತನಾಡೋದು ತಾಯಿ ಬಗ್ಗೆ. ಹೀಗಿರುವಾಗ ತಾಯಿಯಾದವಳು ಏನು ಮಾಡ್ಬೇಕು ಎಂಬುದನ್ನು ನಟಿ ಕಾಜೋಲ್ ಹೇಳಿದ್ದಾರೆ.
 

No Mother Should Take Advice From Anyone Else Kajol roo

ಸಲಹೆಗಳು ಪುಕ್ಕಟ್ಟೆಯಾಗಿ ಸಿಗುತ್ವೆ. ಹಾಗಾಗಿ ಕಂಡ ಕಂಡವರೆಲ್ಲ ಸಲಹೆ ನೀಡೋದು ಕಾಮನ್. ತಾಯಿಯಾಗ್ತಿರುವ ಮಹಿಳೆಗೆ ಸಲಹೆಗಳ ಮಹಾಪೂರವೆ ಹರಿದು ಬರುತ್ತದೆ. ಒಬ್ಬರು ಒಂದು ತಿನ್ನಿ ಅಂದ್ರೆ ಇನ್ನೊಬ್ಬರು ಇನ್ನೊಂದು ತಿನ್ನಿ ಎನ್ನುತ್ತಾರೆ. ಮಕ್ಕಳನ್ನು ಹೀಗೆ ಸಾಕಿ, ಹಾಗೆ ಸಾಕಿ ಅಂತಾ ಒಬ್ಬರಾದ್ಮೇಲೆ ಒಬ್ಬರು ನಿಮಗೆ ಹೇಳ್ತಾನೆ ಇರ್ತಾರೆ. 

ಮಕ್ಕಳ (Children) ಭವಿಷ್ಯ ಉತ್ತಮವಾಗಿರಬೇಕು, ಅವರು ಸಾಧನೆ ಮಾಡ್ಬೇಕು ಎಂಬುದು ಎಲ್ಲ ಪಾಲಕರ ಆಸೆ. ಮಕ್ಕಳನ್ನು ಹೇಗೆ ಬೆಳೆಸಬೇಕು ಎನ್ನುವ ಪ್ರಶ್ನೆ ಪಾಲಕರನ್ನು ಕಾಡುತ್ತದೆ. ಕೆಲವರು ಸೆಲೆಬ್ರಿಟಿ (Celebrity) ಗಳು ಅಥವಾ ಅಕ್ಕಪಕ್ಕದವರನ್ನು ನೋಡಿ ಮಕ್ಕಳ ಪಾಲನೆ ಮಾಡ್ತಾರೆ. ಮತ್ತೆ ಕೆಲವರು ತಮ್ಮದೆ ದಾರಿಯಲ್ಲಿ ಮಕ್ಕಳನ್ನು ಬೆಳೆಸ್ತಾರೆ. ಇನ್ನು ಕೆಲವರು ಪಾಲಕರ ಮಾತನ್ನು ಆಲಿಸಿ, ಅದ್ರಂತೆ ತಮ್ಮ ಮಕ್ಕಳನ್ನು ಬೆಳೆಸಲು ಮುಂದಾಗ್ತಾರೆ. ತಾಯಂದಿರು, ಅಜ್ಜಿಯಂದಿರು  ತಮ್ಮ ಮಕ್ಕಳಿಗೆ ಮಕ್ಕಳನ್ನು ಬೆಳೆಸೋದು ಹೇಗೆ ಅಂತಾ ಸಲಹೆ ನೀಡ್ತಾರೆ. ಇದನ್ನು ಎಷ್ಟರ ಮಟ್ಟಿಗೆ ಪಾಲಿಸಬೇಕು ಎನ್ನುವ ಗೊಂದಲ ಅನೇಕರಲ್ಲಿದೆ. ಯಾಕೆಂದ್ರೆ ಪಾಲನೆ ನಂತ್ರ ಸಮಸ್ಯೆ ಶುರುವಾದಾಗ ನಮ್ಮ ಬೆನ್ನಿಗೆ ನಿಲ್ಲೋರು ಯಾರು ಎಂಬ ಪ್ರಶ್ನೆಗೆ ಉತ್ತರವಿರೋದಿಲ್ಲ. ಬಾಲಿವುಡ್ (Bollywood) ನಟಿ ಕಾಜೋಲ್ (Kajol) ಮಕ್ಕಳ ಪಾಲನೆಯನ್ನು ಹೇಗೆ ಮಾಡ್ಬೇಕು ಎಂಬ ಬಗ್ಗೆ ತಮ್ಮ ಅಭಿಪ್ರಾಯವನ್ನು ಮುಂದಿಟ್ಟಿದ್ದಾರೆ.

ಮಕ್ಕಳ ಪಾಲನೆ – ಪೋಷಣೆ ಬಗ್ಗೆ ನಟಿ ಕಾಜೋಲ್ ಹೇಳೋದೇನು? : ಯಾವುದೇ ತಾಯಿಯು ತನ್ನ ಸ್ವಂತ ತಾಯಿಯನ್ನು ಒಳಗೊಂಡಂತೆ ಬೇರೆಯವರಿಂದ ಸಲಹೆಯನ್ನು ತೆಗೆದುಕೊಳ್ಳಬಾರದು ಎನ್ನುತ್ತಾರೆ ಕಾಜೋಲ್. ಕಾಜೋಲ್ ಪ್ರಕಾರ ಎಲ್ಲ ತಾಯಂದಿರು ಭಿನ್ನ. ಎಲ್ಲ ತಾಯ್ತನವೂ ಭಿನ್ನ.  ಪ್ರತಿಯೊಬ್ಬರೂ ತಮ್ಮದೇ ರೀತಿಯಲ್ಲಿ ಮಕ್ಕಳನ್ನು ಬೆಳೆಸಬೇಕು. ಯಾವ ತಾಯಿಯೂ, ಯಾವ ತಾಯಿಗೂ ಸಲಹೆ ನೀಡಬಾರದು ಎನ್ನುತ್ತಾರೆ ಕಾಜೋಲ್. ತಾಯ್ತನದ ಬಗ್ಗೆ ಬೇರೆಯವರಿಂದ ಸಲಹೆ ಪಡೆಯೋದು ಒಂದು ಅವ್ಯವಸ್ಥೆ ಎನ್ನುತ್ತಾರೆ ಕಾಜೋಲ್. 

ಮನೆಯಲ್ಲಿರೋ ಎಲ್ಲ ಪುರುಷರಿಗೂ ಒಂದೇ ಹೆಸರು; ಹೀಗಾದ್ರೆ ಗುರುತಿಸೋದು ಹೇಗಪ್ಪಾ?

ನಿಮಗೆ 120ಕ್ಕೂ ಹೆಚ್ಚು ಜನರು ಪಾಲನೆ ಬಗ್ಗೆ ಸಲಹೆ ನೀಡ್ತಾರೆ. ನನ್ನ ಪ್ರಕಾರ ನೀನು ಹೀಗೆ ಮಾಡ್ಬೇಕು, ನನ್ನ ಪ್ರಕಾರ ನೀನು ಹಾಗೆ ಮಾಡ್ಬೇಕು ಅಂತಾ ಎಲ್ಲರೂ ನಿಮಗೆ ಹೇಳ್ತಾರೆ. ಅವರೆಲ್ಲರ ಮಾತು ಕೇಳಿದ್ರೆ ನೀವು ಗೊಂದಲಕ್ಕೆ ಬೀಳ್ತೀರಿ. ನೀವು ಏನು ಆಲೋಚನೆ ಮಾಡಿದ್ದೀರೋ ಅದನ್ನು ನೀವು ಮಾಡಿ ಎನ್ನುತ್ತಾರೆ ಕಾಜೋಲ್. ನಿಮ್ಮ ಮಕ್ಕಳ ಬಗ್ಗೆ ನೀವು ಆಲೋಚನೆ ಮಾಡಿದ್ದು ಸರಿಯಾಗಿರುತ್ತದೆ ಎಂಬುದು ಕಾಜೋಲ್ ವಾದ. ಬೇರೆಯವರು ಏನು ಹೇಳ್ತಾರೆ ಅದನ್ನು ನೀವು ನಿರ್ಲಕ್ಷ್ಯ ಮಾಡೋದು ಬೆಸ್ಟ್ ಎನ್ನುತ್ತಾರೆ ನಟಿ.

ಜನರು ಏನು ಹೇಳ್ತಾರೆ ಅನ್ನೋದನ್ನು ಕೇಳ್ಬೇಡಿ. ನೀವು ಅವರನ್ನು ಪ್ರಶ್ನೆ ಮಾಡಿ ಉತ್ತರ ಕಂಡುಕೊಳ್ಳುವ ಪ್ರಯತ್ನಕ್ಕೂ ಹೋಗ್ಬೇಡಿ. ನೀವು ಏನು ಸರಿ ಅಂದುಕೊಂಡಿದ್ದೀರೋ ಅದನ್ನೇ ನೀವು ನಿಮಗಾಗಿ ಹಾಗೂ ನಿಮ್ಮ ಮಕ್ಕಳಿಗೆ ಮಾಡಿ ಎನ್ನುವುದು ಕಾಜೋಲ್ ಸಲಹೆ.

Personality Tips: ಖುಷಿಖುಷಿಯಾಗಿರೋರು ಈ ಕೆಲಸಗಳನ್ನ ಎಂದಿಗೂ ಮಾಡೋಲ್ಲ

ಯಾರ ಅಭಿಪ್ರಾಯ, ಸಲಹೆಯೂ ಇಲ್ಲಿ ಇಂಪಾರ್ಟೆಂಟ್ ಆಗೋದಿಲ್ಲ ಎನ್ನುವುದು ಕಾಜೋಲ್ ಅಭಿಪ್ರಾಯ. ನೀವು ಹಾಗೂ ನಿಮ್ಮ ಮಕ್ಕಳು ನಿಮ್ಮ ಜವಾಬ್ದಾರಿ. ಯಾರೂ ಇದ್ರ ಕ್ರೆಡಿಟ್ ತೆಗೆದುಕೊಳ್ಳೋದಿಲ್ಲ ಹಾಗೇ ಯಾರೂ ಇದ್ರ ನಷ್ಟವನ್ನು ಮೈಮೇಲೆ ಎಳೆದುಕೊಳ್ಳೋದಿಲ್ಲ. ನೀವು ನಿಮಗಾಗಿ ಹಾಗೂ ನಿಮ್ಮ ಮಕ್ಕಳಿಗಾಗಿ ಎದ್ದು ನಿಲ್ಬೇಕು. ಯಾವುದೇ ಹೊಗಳಿಕೆ ಇರಲಿ ಇಲ್ಲ ತೆಗಳಿಕೆ ಇರಲಿ ಎಲ್ಲವೂ ನಿಮಗೆ ಸಿಗ್ಬೇಕು. ಇದೆಲ್ಲ ನಿಮ್ಮದೇ ಜವಾಬ್ದಾರಿ ಅಂದ್ಮೇಲೆ ನೀವಂದುಕೊಂಡಿದ್ದನ್ನೇ ಮಾಡ್ಬೇಕಲ್ಲವೇ ಎನ್ನುತ್ತಾರೆ ಕಾಜೋಲ್.  ಕಾಜೋಲ್ ಮಾತಿಗೆ ಅನೇಕರು ಹೌದು ಅಂದ್ರೆ ಮತ್ತೆ ಕೆಲವರು ಸಲಹೆ ಪಡೆಯೋದು ಮುಖ್ಯ. ಇದ್ರಿಂದ ಲಾಭವಿದೆಯೇ ಹೊರತು ನಷ್ಟವಿಲ್ಲ ಎಂದಿದ್ದಾರೆ. 
 

Latest Videos
Follow Us:
Download App:
  • android
  • ios