Asianet Suvarna News Asianet Suvarna News

ಧಮ್ ಎಳೆಯದೇ ಹೋದ್ರೂ ಮಹಿಳೆಯರನ್ನು ಹೆಚ್ಚು ಕಾಡ್ತಿದೆ Lung Cancer

ಶ್ವಾಸಕೋಶದ ಕ್ಯಾನ್ಸರ್ ಅಂದಾಗ ಬಹುತೇಕರು ನಾವು ಸಿಗರೇಟ್ ಸೇದಲ್ಲ ನಮಗೆ ಬರಲ್ಲ ಅಂದುಕೊಳ್ತಾರೆ. ಆದ್ರೆ ನೀವು ಧೂಮಪಾನ ಮಾತ್ರ ಮಾಡ್ಬೇಕಾಗಿಲ್ಲ, ಚಿಕ್ಕ ವಯಸ್ಸಿನಲ್ಲಿಯೇ ಮಹಿಳೆಯರಿಗೆ ಈ ಕ್ಯಾನ್ಸರ್ ಕಾಡಲು ಇನ್ನೂ ಅನೇಕ ಕಾರಣವಿದೆ.
 

Lung Cancer Is The Biggest Cause Of Cancer Deaths In India
Author
First Published Nov 24, 2022, 1:07 PM IST

ಪುರುಷರಲ್ಲಿ ಸಾಮಾನ್ಯವಾಗಿ ಕಂಡು ಬರುವ ಕ್ಯಾನ್ಸರ್ ಶ್ವಾಸಕೋಶದ ಕ್ಯಾನ್ಸರ್. ಆದ್ರೆ ಈ ಕ್ಯಾನ್ಸರ್ ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ತಿರುವುದು ಆತಂಕ ಸೃಷ್ಟಿಸಿದೆ. ಅದ್ರಲ್ಲೂ ಚಿಕ್ಕ ವಯಸ್ಸಿನ ಮಹಿಳೆಯರಲ್ಲಿ ಈ ಕ್ಯಾನ್ಸರ್ ಹೆಚ್ಚಾಗಿ ಕಾಣಿಸಿಕೊಳ್ತಿರುವುದು ಮತ್ತಷ್ಟು ಭಯ ಹುಟ್ಟಿಸಿದೆ. ಮೇದಾಂತ ನಡೆಸಿದ ಅಧ್ಯಯನವೊಂದು ಶ್ವಾಸಕೋಶದ ಕ್ಯಾನ್ಸರ್ ಗೆ ಸಂಬಂಧಿಸಿದಂತೆ ಹಲವು ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದೆ.

ಭಾರತ (India) ದಲ್ಲಿ ಸಾವಿಗೆ ಅತಿ ದೊಡ್ಡ ಕಾರಣ ಶ್ವಾಸಕೋಶ (Lungs) ದ ಕ್ಯಾನ್ಸರ್ (Cancer) : ಮೇದಾಂತ ಅಧ್ಯಯನ ಮಾತ್ರವಲ್ಲ ಅನೇಕ ಅಧ್ಯಯನ (Study) ದ ವರದಿಗಳು ಇದನ್ನು ಸ್ಪಷ್ಟಪಡಿಸಿವೆ. ಭಾರತದಲ್ಲಿ ಕ್ಯಾನ್ಸರ್ ಪ್ರಮಾಣ ಹೆಚ್ಚಾಗಿದೆ. ಅದ್ರಲ್ಲೂ ಶ್ವಾಸಕೋಶದ ಕ್ಯಾನ್ಸರ್ ಹೆಚ್ಚಾಗ್ತಿದೆ. ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿರುವವರನ್ನು ಬದುಕಿಸುವುದು ಕಷ್ಟ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ದೊರತಲ್ಲಿ ಮಾತ್ರ ಬದುಕುಳಿಯುವ ಸಾಧ್ಯತೆಯಿರುತ್ತದೆ. ಗ್ಲೋಬೋಕನ್ 2020 ವರದಿಯ ಪ್ರಕಾರ, ಭಾರತದಲ್ಲಿ ಕ್ಯಾನ್ಸರ್ ಸಾವುಗಳಿಗೆ ಶ್ವಾಸಕೋಶದ ಕ್ಯಾನ್ಸರ್ ಅತಿ ದೊಡ್ಡ ಕಾರಣವಾಗಿದೆ.

ಚಿಕ್ಕ ವಯಸ್ಸಿನವರನ್ನು ಕಾಡ್ತಿದೆ ದೊಡ್ಡ ಸಮಸ್ಯೆ : ಮೇದಾಂತ ಆಸ್ಪತ್ರೆ ಮಾರ್ಚ್ 2012 ರಿಂದ ನವೆಂಬರ್ 2022 ರವರೆಗೆ ಅಧ್ಯಯನ ನಡೆಸಿದೆ.  ಶ್ವಾಸಕೋಶದ ಕ್ಯಾನ್ಸರ್ ನ 304 ಪ್ರಕರಣಗಳನ್ನು ಅಧ್ಯಯನ ಮಾಡಿದೆ. ಇದರಲ್ಲಿ ಯುವ ಜನತೆ ಮತ್ತು ಧೂಮಪಾನಿಗಳಲ್ಲದವರಲ್ಲಿ ಶ್ವಾಸಕೋಶದ ಕ್ಯಾನ್ಸರ್ ವೇಗವಾಗಿ ಹೆಚ್ಚುತ್ತಿದೆ ಎಂಬುದು ಕಂಡುಬಂದಿದೆ. ಈ ಅಧ್ಯಯನದಲ್ಲಿ ಸುಮಾರು ಶೇಕಡಾ 2.6ರಷ್ಟು ರೋಗಿಗಳು ಸುಮಾರು 20 ವರ್ಷ ವಯಸ್ಸಿನವರಾಗಿದ್ದರು. ಶೇಕಡಾ 10 ರಷ್ಟು ಜನರು 40 ವರ್ಷಕ್ಕಿಂತ ಕಡಿಮೆ ಮತ್ತು ಶೇಕಡಾ 20 ರಷ್ಟು ಜನರು 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.

ಶ್ವಾಸಕೋಶದ ಕ್ಯಾನ್ಸರ್ ಗೆ ಧೂಪಪಾನ ಮಾತ್ರ ಕಾರಣವಲ್ಲ : ಧೂಮಪಾನ ಮಾಡಿದ್ರೆ ಮಾತ್ರ ಶ್ವಾಸಕೋಶದ ಕ್ಯಾನ್ಸರ್ ಕಾಡುತ್ತದೆ ಎಂದು ಹಿಂದೆ ನಂಬಲಾಗಿತ್ತು. ಆದ್ರೀಗ ಪರಿಸ್ಥಿತಿ ಬದಲಾಗಿದೆ. ಈಗ  ಚಿಕ್ಕ ವಯಸ್ಸಿನಲ್ಲೇ ಧೂಮಪಾನ ಮಾಡದವರಿಗೂ ಶ್ವಾಸಕೋಶದ ಕ್ಯಾನ್ಸರ್ ಕಾಣಿಸಿಕೊಳ್ತಿದೆ. ಅಧ್ಯಯನದಲ್ಲಿ ಒಟ್ಟು ಪುರುಷ ರೋಗಿಗಳಿಗೆ ಹೋಲಿಸಿದರೆ ಶೇಕಡಾ 30 ರಷ್ಟು ಮಹಿಳಾ ರೋಗಿಗಳು ಧೂಮಪಾನಿ ಮಾಡದವರು ಎಂಬುದು ಕಂಡು ಬಂದಿದೆ. ಸಂಶೋಧಕರ ಪ್ರಕಾರ, ಶ್ವಾಸಕೋಶದ ಕ್ಯಾನ್ಸರ್ ಗೆ ವಾಯು ಮಾಲಿನ್ಯ ಮುಖ್ಯ ಕಾರಣವಾಗ್ತಿದೆ.

ಊಟ ಮಾಡೋವಾಗ ಈ ರೀತಿಯಾಗೋದು ಅಂಡಾಶಯ ಕ್ಯಾನ್ಸರ್ ಲಕ್ಷಣ ಇರಬಹುದು!

ಮಹಿಳೆಯರಲ್ಲೂ ಸಾಮಾನ್ಯವಾಗ್ತಿದೆ ಈ ಕ್ಯಾನ್ಸರ್ : ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಾಗ್ತಿದೆ ಎಂದು ಅಧ್ಯಯನ ಹೇಳಿದೆ. ಗ್ಲೋಬೋಕನ್ 2020 ವರದಿಯ ಪ್ರಕಾರ, ಶ್ವಾಸಕೋಶದ ಕ್ಯಾನ್ಸರ್ ಮಹಿಳೆಯರಲ್ಲಿ ಮೂರನೇ ಸಾಮಾನ್ಯ ಕ್ಯಾನ್ಸರ್ ಆಗಿದೆ. 2012ರಲ್ಲಿ ಇದು ಏಳನೇ ಸ್ಥಾನದಲ್ಲಿತ್ತು. ಕರುಳಿನ ಕ್ಯಾನ್ಸರ್, ಕಾರ್ಪಸ್ ಯುಟೆರಿ ಕ್ಯಾನ್ಸರ್, ಥೈರಾಯ್ಡ್ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್ ಅನ್ನು ಹಿಂದಿಕ್ಕಿದೆ ಎಂದು ವರದಿಯಲ್ಲಿ ಹೇಳಲಾಗಿದೆ.  ಮಹಿಳೆಯರಿಗೆ ಕಾಡುವ ಕ್ಯಾನ್ಸರ್ ನಲ್ಲಿ ಕೊಲೊರೆಕ್ಟಲ್ ಕ್ಯಾನ್ಸರ್ ಎರಡನೇ ಸ್ಥಾನದಲ್ಲಿದೆ ಮತ್ತು ಸ್ತನ ಕ್ಯಾನ್ಸರ್ ಮೊದಲ ಸ್ಥಾನದಲ್ಲಿದೆ.

ಚಿಕಿತ್ಸೆ (Treatment)ವಿಳಂಬವಾಗಲು ಇದು ಕಾರಣ : ಶ್ವಾಸಕೋಶದ ಕ್ಯಾನ್ಸರ್ ಪತ್ತೆ ಮಾಡುವುದು ಕಷ್ಟ. ಆರಂಭದಲ್ಲಿ ಇದು ಟಿಬಿಯನ್ನು ಹೋಲುತ್ತದೆ. ಹಾಗಾಗಿ ಸರಿಯಾದ ಚಿಕಿತ್ಸೆ ಸಿಗುವುದಿಲ್ಲ. ಟಿಬಿ ಹಾಗೂ ಶ್ವಾಸಕೋಶದ ಕ್ಯಾನ್ಸರ್ ಆರಂಭಿಕ ಲಕ್ಷಣ ಒಂದೇ ಇರುವುದು ಇದಕ್ಕೆ ಕಾರಣ.

Hair Health: ಶ್ಯಾಂಪೂನಲ್ಲಿರೋ ಈ ಅಂಶಗಳಿಂದಲೇ ಕೂದಲು ಉದುರೋದು

ಶ್ವಾಸಕೋಶದ ಕ್ಯಾನ್ಸರ್ ತಡೆಯೋದು ಹೇಗೆ ? : ತಂಬಾಕು (Tobacco) ಸೇವನೆ ನಿಯಂತ್ರಣ ಮಾಡಿದಲ್ಲಿ ಜೊತೆಗೆ ವಾಯು ಮಾಲಿನ್ಯ ನಿಯಂತ್ರಣ (Air Polution) ಮಾಡಿದ್ರೆ ಶ್ವಾಸಕೋಶದ ಕ್ಯಾನ್ಸರ್ ತಡೆಯಬಹುದು. ಇದ್ರ ಜೊತೆಗೆ ಶ್ವಾಸಕೋಶದ ಕ್ಯಾನ್ಸರ್ ಚಿಕಿತ್ಸೆಗೆ ಕೆಲ ವಿಶೇಷ ಕೇಂದ್ರಗಳನ್ನು ತೆರೆಯುವ ಅವಶ್ಯಕತೆಯಿದೆ.  
 

Follow Us:
Download App:
  • android
  • ios