Hair Health: ಶ್ಯಾಂಪೂನಲ್ಲಿರೋ ಈ ಅಂಶಗಳಿಂದಲೇ ಕೂದಲು ಉದುರೋದು

ಕೂದಲು ಉದುರುವ ಸಮಸ್ಯೆಗೆ ಹಲವು ಕಾರಣಗಳಿರುತ್ತವೆ. ಆದರೆ, ನಾವು ಯಾವ್ಯಾವುದೋ ಶ್ಯಾಂಪೂ ಬಳಕೆ ಮಾಡುತ್ತ ಹೇಗಾದರೂ ಕೂದಲು ಉದುರುವುದನ್ನು ತಡೆಯಲು ಯತ್ನಿಸುತ್ತೇವೆ. ಆದರೆ, ನಿಮ್ಮ ಶ್ಯಾಂಪೂವೇ ಕೂದಲು ಉದುರುವಿಕೆಗೆ ಕಾರಣವಾಗಬಹುದು. ಅದರಲ್ಲಿರುವ ಕೆಲವು ರಾಸಾಯನಿಕಗಳು ಕೂದಲು ಉದುರುವ ಸಮಸ್ಯೆ ಹೆಚ್ಚಿಸಬಹುದು, ಹುಷಾರು.
 

Some of these chemicals in your shampoo may reason for hairfall

ಕೂದಲು ಉದುರುವ ಸಮಸ್ಯೆಗೆ ಬಹಳಷ್ಟು ಮಹಿಳೆಯರು ಕಂಗಾಲಾಗಿ ಹೋಗಿದ್ದಾರೆ. ದಿನೇ ದಿನೆ ಕೂದಲು ತೆಳ್ಳಗಾಗುತ್ತಿರುವುದನ್ನು ನೋಡಲಾಗದೆ, ಏನೇ ಪ್ರಯತ್ನ ಪಟ್ಟರೂ ಅದನ್ನು ನಿಲ್ಲಿಸಲಾಗದೆ ಹೈರಾಣಾಗಿದ್ದಾರೆ. ಕೂದಲು ಹಲವಾರು ಕಾರಣಗಳಿಂದ ಉದುರುತ್ತದೆ. ಹವಾಮಾನ, ವಾಯುಮಾಲಿನ್ಯದಂತಹ ಸಮಸ್ಯೆಯಿಂದ ಹಿಡಿದು, ಚಿಂತೆ, ಒತ್ತಡ, ನಮ್ಮ ಜೀವನಶೈಲಿ, ಆಹಾರದವರೆಗೆ ಹಲವಾರು ಅಂಶಗಳು ಇಲ್ಲಿ ಪ್ರಭಾವ ಬೀರುತ್ತವೆ. ಹಾಗೆ ನೋಡಿದರೆ, ಪ್ರತಿದಿನ ಸರಿಸುಮಾರು ನೂರು ಕೂದಲು ಉದುರುವುದು ಸಾಮಾನ್ಯ ಎನ್ನುತ್ತಾರೆ ತಜ್ಞರು. ಅಂದರೆ, ನೂರು ಕೂದಲು ಉದುರುವುದನ್ನು ಸಮಸ್ಯೆ ಎಂದು ಪರಿಗಣಿಸಲು ಬರುವುದಿಲ್ಲ. ಆದರೆ, ಅದಕ್ಕಿಂತ ಹೆಚ್ಚು ವಿಪರೀತ ಎನ್ನುವಂತೆ ಕೂದಲು ಉದುರಿದರೆ ಖಂಡಿತವಾಗಿ ಎಚ್ಚರಿಕೆ ವಹಿಸಬೇಕು. ಕೆಲವರಿಗೆ ತಲೆಸ್ನಾನ ಮಾಡಿದಾಗ ಶ್ಯಾಂಪೂ ಬಳಕೆ ಮಾಡಿದರೆ ಕೂದಲು ಉದುರುತ್ತದೆ ಎನ್ನುವ ಭಾವನೆ ಇದೆ. ಹಾಗೇನೂ ಇಲ್ಲ. ಆದರೆ, ಶ್ಯಾಂಪೂವಿನಲ್ಲಿರುವ ಕೆಲವು ಅಂಶಗಳು ಕೂದಲು ಉದುರಲು ಕಾರಣವಾಗಬಹುದು. ಹೀಗಾಗಿ, ನಿಮ್ಮ ಶ್ಯಾಂಪೂವಿನಲ್ಲಿ ಕೆಲವು ಅಂಶಗಳು ಇವೆಯಾ ಎಂದು ಚೆಕ್ ಮಾಡಿಕೊಳ್ಳಿ. ಆ ಅಂಶಗಳಿದ್ದರೆ ಖಂಡಿತವಾಗಿ ಅಂತಹ ಶ್ಯಾಂಪೂಗೆ ಬೈ ಹೇಳಿ.

·        ಸಲ್ಫೇಟ್ (Sulfate)
ಸೋಡಿಯಂ ಲಾರಿಲ್ ಸಲ್ಫೇಟ್ ಹಾಗೂ ಅಮೋನಿಯಂ ಲಾರಿಲ್ ಸಲ್ಫೇಟ್ ಅಂಶಗಳು ಬಹಳಷ್ಟು ಶ್ಯಾಂಪೂಗಳಲ್ಲಿರುತ್ತವೆ. ವಿಶ್ವದಾದ್ಯಂತ ಸಿಗುವ ಶ್ಯಾಂಪೂಗಳಲ್ಲಿ (Shampoo) ಇವು ಇರುತ್ತವೆ ಎಂದರೆ ಅಚ್ಚರಿಯಾಗಬಹುದು. ಈ ಸಲ್ಫೇಟ್ ಗಳು ಅತ್ಯಂತ ತೀಕ್ಷ್ಣ ಡಿಟರ್ಜೆಂಟ್ (Detergent) ಆಗಿದ್ದು, ಅತೀವ ನೊರೆ (Foam) ಬರಿಸುತ್ತವೆ. ತಲೆಬುಡವನ್ನು ತೀಕ್ಷ್ಣವಾಗಿ ಕ್ಲೀನ್ ಮಾಡುತ್ತವೆ. ಆದರೆ, ಇವುಗಳಿಂದಾಗಿ ಕೂದಲು (Hair) ಒಣಗುತ್ತದೆ. ಅಂದರೆ, ಶುಷ್ಕವಾಗಿ (Dry) ತೈಲದಂಶ ಕಳೆದುಕೊಳ್ಳುತ್ತವೆ, ಗರಿಗರಿಯಾದಂತೆ ಭಾಸವಾಗುತ್ತವೆ. ಇದರಿಂದಾಗಿ ಕೂದಲು ತುಂಡಾಗುತ್ತವೆ. ಸಿಕ್ಕಾಗುವ ಜತೆಗೆ ಬಿಡಿಸುವಾಗ ಇನ್ನಷ್ಟು ಕೂದಲು ನಷ್ಟವಾಗುತ್ತದೆ. ಅಲ್ಲದೆ, ಸಲ್ಫೇಟ್ ಅಂಶದಿಂದ ಕೂದಲಿನಲ್ಲಿರುವ ನೈಸರ್ಗಿಕ ತೈಲದ (Natural Oil) ಅಂಶ ನಾಶವಾಗಿ ಆರೋಗ್ಯಪೂರ್ಣ ಬೆಳವಣಿಗೆಗೆ ಧಕ್ಕೆಯಾಗುತ್ತದೆ.

ಮುಖದಲ್ಲಿ ಕೂದಲಿದೆ ಅಂತ ಶೇವ್ ಮಾಡ್ಬೇಡಿ..ಇಲ್ಲೊಬ್ಬ ಮಹಿಳೆಗೆ ಗಡ್ಡವೇ ಬಂತು ನೋಡಿ

·        ಸೋಡಿಯಂ ಕ್ಲೋರೈಡ್ (Sodium Chloride)
ನಿರ್ದಿಷ್ಟ ಪ್ರಮಾಣದಲ್ಲಿರುವ ಸೋಡಿಯಂ ಕ್ಲೋರೈಡ್ ನಿಂದ ಹೆಚ್ಚು ಧಕ್ಕೆಯಾಗುವುದಿಲ್ಲ. ಕೂದಲು ದಪ್ಪವಾಗಲು ಇದನ್ನು ಬಳಸುತ್ತಾರೆ. ಜಿಡ್ಡಿನಂಶ (Oily) ಹೆಚ್ಚಿರುವ ತಲೆಬುಡಕ್ಕೆ ಇದು ಸಮಸ್ಯೆಯಾಗುವುದಿಲ್ಲ. ಆದರೆ, ಜಿಡ್ಡಿಲ್ಲದಿರುವಾಗ ಕೂದಲ ಬುಡದಲ್ಲಿ ತುರಿಕೆ ಕಾಣಬಹುದು. ಕೂದಲು ಉದುರುವುದು (Hair Fall) ಹೆಚ್ಚಬಹುದು.

·        ಫಾರ್ಮಲ್ಡಿಹೈಡ್ (Formaldehyde)
ಶ್ಯಾಂಪೂ ದೀರ್ಘಕಾಲ (Shelf Life) ಬಾಳಿಕೆ ಬರಲೆಂದು ಈ ರಾಸಾಯನಿಕವನ್ನು (Chemical) ಬಳಕೆ ಮಾಡಲಾಗುತ್ತದೆ. ನಿರ್ದಿಷ್ಟ ಪ್ರಮಾಣದ ಬಳಕೆ ಮಾಡದಿದ್ದರೆ ಕೂದಲಿಗೆ ಹಾನಿಯಾಗುತ್ತದೆ. ಅಲರ್ಜಿ (Allergy), ಕೂದಲು ಉದುರುವುದು, ತಲೆಬುಡದಲ್ಲಿ ಗುಳ್ಳೆಗಳು ಉಂಟಾಗಬಹುದು. ಅಸಲಿಗೆ, ಶ್ಯಾಂಪೂದಲ್ಲಿರುವ ಕೆಲವು ರಾಸಾಯನಿಕ ಸಂಯುಕ್ತಗಳು ಫಾರ್ಮಲ್ಡಿಹೈಡ್ ಅನ್ನು ನೀಡುತ್ತವೆ. ಪದೇ ಪದೆ ಶ್ಯಾಂಪೂ ಬಳಕೆ ಮಾಡಿದಾಗ ತಲೆಬುರುಡೆ (Scalp) ಹಾಗೂ ಗಾಳಿಯ ಮೂಲಕ ಕಣ್ಣು (Eyes), ಶ್ವಾಸಕೋಶ (Lungs), ಮೂಗಿನಲ್ಲಿ ಅಲರ್ಜಿ ಉಂಟಾಗಬಹುದು.

ಮುಟ್ಟಿನ ಸಮಯದಲ್ಲಿ ಕೂದಲು ಕತ್ತರಿಸಿದ್ರೆ ಏನಾಗುತ್ತೆ?

·        ಆಲ್ಕೋಹಾಲ್ (Alclohol)
ಸಿಟೆರಿಲ್, ಸ್ಟೀರಿಲ್, ಸೆಟಿಲ್ ನಂತಹ ಆಲ್ಕೋಹಾಲ್ ಅಂಶಗಳನ್ನು ಬಹಳಷ್ಟು ಶ್ಯಾಂಪೂಗಳಲ್ಲಿ ಬಳಸಲಾಗುತ್ತದೆ. ಇವು ಸಲ್ಫೇಟ್ ನೊಂದಿಗೆ ಸೇರಿದಾಗ ನೆತ್ತಿಯನ್ನು ಶುಷ್ಕಗೊಳಿಸಿ, ನೈಸರ್ಗಿಕ ತೈಲದ ಅಂಶವನ್ನು ನಾಶಪಡಿಸುತ್ತವೆ. ಹೀಗಾಗಿ, ಕೂದಲು ಉದುರುತ್ತಲೇ ಇರುತ್ತದೆ.

·        ಪ್ರೊಪಿಲೀನ್ ಗ್ಲೈಕೊಲ್ (Propylene Glycol)
ಪ್ರೊಪಿಲ್ ಪಾರಾಬೆನ್ ಮತ್ತು ಪ್ರೊಪಿಲೀನ್ ಗ್ಲೈಕೊಲ್ ಅಂಶಗಳನ್ನು ಆರ್ದೃಕಗಳನ್ನಾಗಿ ಬಳಸಲಾಗುತ್ತದೆ. ಪೌಷ್ಟಿಕಾಂಶಗಳು (Nutrients) ತಲೆಬುರುಡೆಯ ಮೂಲಕ ಒಳಹೋಗಲು ಇವು ನೆರವಾಗುತ್ತವೆ. ಆದರೆ, ಇವುಗಳ ಅಧಿಕ ಬಳಕೆಯಿಂದ ಅಲರ್ಜಿ ಶುರುವಾಗಬಹುದು. ಕೂದಲು ಉದುರಬಹುದು. ಅಲ್ಲದೆ, ಇದರಿಂದಾಗಿ ಕೂದಲ ಬೆಳವಣಿಗೆಗೆ ಕಾರಣವಾಗುವ ಹಾರ್ಮೋನ್ (Hormones) ಸ್ರವಿಕೆಯಲ್ಲಿ ವ್ಯತ್ಯಾಸವಾಗಬಹುದು.

·        ಪರಿಮಳ (Fragrance)
ಕೃತಕ (Artificial) ಪರಿಮಳ ಹಾಗೂ ಕೃತಕ ಬಣ್ಣಗಳು (Color) ಎಲ್ಲಿಯೂ ಒಳ್ಳೆಯದಲ್ಲ. ಸೂಕ್ಷ್ಮವಾದ ಚರ್ಮ ಹಾಗೂ ಕೂದಲು ನಿಮ್ಮದಾಗಿದ್ದರೆ ಈ ಬಗ್ಗೆ ಎಚ್ಚರವಾಗಿರಬೇಕು. ಏಕೆಂದರೆ, ಗರಿಷ್ಠ ಮಟ್ಟದಲ್ಲಿ ಉತ್ತಮ ಪರಿಮಳ ಬೀರುವ ಶ್ಯಾಂಪೂವಿನಿಂದಾಗಿ ಕೂದಲು ಉದುರಬಹುದು.

·        ಫಲೇಟ್ಸ್ (Phthalates)
ಫಲೇಟ್ ದ್ರಾವಕ ಕೃತಕ ಪರಿಮಳಕ್ಕೆ ಸಮನಾಗಿದೆ. ಇದು ಕೆಟ್ಟ ರೀತಿಯ ಪರಿಣಾಮ ಬೀರಬಹುದು. ಹಾರ್ಮೋನ್ ವ್ಯವಸ್ಥೆಯಲ್ಲಿ ತೊಂದರೆಯಾಗಿ ಕೂದಲು ಉದುರುವಿಕೆ ತೀವ್ರವಾಗಿ ಹೆಚ್ಚಬಹುದು. 

Latest Videos
Follow Us:
Download App:
  • android
  • ios