Asianet Suvarna News Asianet Suvarna News

ಮತದಾನ ಮಾಡಿದ ಮಹಿಳೆಯರಿಗೆ ಕನ್ನಡತಿ ನ್ಯಾಚುರಲ್‌ ಬ್ಯೂಟಿ ಪಾರ್ಲರ್‌ನಿಂದ ಉಚಿತ ಐಬ್ರೊ ಭಾಗ್ಯ!

 ಮತದಾನ ಮಾಡಿದ ಮಹಿಳೆಯರೇ, ಇಲ್ಲಿ ನಿಮ್ಮ ಬೆರಳಿಗೆ ಹಾಕಿದ ಶಾಯಿ ಗುರುತು ತೋರಿದರೆ ಸಾಕು ನಿಮಗೆ ಉಚಿತ ಐ ಬ್ರೋ (ಕಣ್ಣಿನ ಹುಬ್ಬು ಅಲಂಕಾರ) ಭಾಗ್ಯ ಲಭಿಸಲಿದೆ!

Lok sabha election 2024 in Karnataka Free eye brow from Kannadathi Natural Beauty Parlor for women who voted rav
Author
First Published May 2, 2024, 12:33 PM IST

ಬಿ.ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ: ಮತದಾನ ಮಾಡಿದ ಮಹಿಳೆಯರೇ, ಇಲ್ಲಿ ನಿಮ್ಮ ಬೆರಳಿಗೆ ಹಾಕಿದ ಶಾಯಿ ಗುರುತು ತೋರಿದರೆ ಸಾಕು ನಿಮಗೆ ಉಚಿತ ಐ ಬ್ರೋ (ಕಣ್ಣಿನ ಹುಬ್ಬು ಅಲಂಕಾರ) ಭಾಗ್ಯ ಲಭಿಸಲಿದೆ!

ಹೌದು! ಇಲ್ಲಿಯ ಮಠದ ಕೇರಿಯ ರಾಘವೇಂದ್ರ ಮಠದ ಬಳಿ ಇರುವ ಕನ್ನಡತಿ ನ್ಯಾಚುರಲ್‌ ಬ್ಯೂಟಿ ಪಾರ್ಲರ್‌ ಮಾಲಕರು ಮೇ 7 ರಂದು ನಡೆಯುವ ಲೋಕಸಭೆ ಮತದಾನ ವೇಳೆ ಮತ ಚಲಾಯಿಸಿ ಬಂದ ಮಹಿಳೆಯರಿಗೆ ಇಂತಹ ಒಂದು ಆಫರ್‌ ನೀಡಿದ್ದಾರೆ.

ಬಳ್ಳಾರಿಗೆ ಶ್ರೀರಾಮುಲು ಕೊಡುಗೆ ಚೊಂಬು, ದಯವಿಟ್ಟು ಗೆಲ್ಲಿಸಬೇಡಿ: ಸಿಎಂ ಸಿದ್ದರಾಮಯ್ಯ 

ಮತದಾನ ಪ್ರಮಾಣ ಹೆಚ್ಚಾಗಲಿ, ಅದರಲ್ಲೂ ಹೆಚ್ಚು ಹೆಚ್ಚು ಮಹಿಳೆಯರು ಮತದಾನದಲ್ಲಿ ಪಾಲ್ಗೊಳ್ಳಲಿ ಎನ್ನುವ ಕಾರಣಕ್ಕೆ ಉಚಿತ ಐ ಬ್ರೊ ಮಾಡುವುದಾಗಿ ಘೋಷಿಸಿದ್ದಾರೆ.

ಮೇ 7ರಂದು ಬೆಳಿಗ್ಗೆ 7ರಿಂದ ಸಂಜೆ 6 ಗಂಟೆವರೆಗೂ ನಿರಂತರವಾಗಿ ನಡೆಯುತ್ತದೆ. ಈ ಸಮಯದಲ್ಲಿ ಮತದಾನ ಮಾಡಿದ ಎಷ್ಟೇ ಮಹಿಳೆಯರು ತಮ್ಮ ಪಾರ್ಲರ್‌ಗೆ ಆಗಮಿಸಿದರೂ ಯಾವುದೇ ಹಣ ಪಡೆಯದೇ ಉಚಿತ ಐ ಬ್ರೊ ಮಾಡಲಾಗುವುದು ಎಂದು ಹೇಳುತ್ತಾರೆ ಬ್ಯೂಟಿಷಿಯನ್‌ ಕೆ.ಎಂ. ಲತಾ.

ಉಚಿತ ರಾಖಿ ವಿತರಣೆ:

ಈ ಹಿಂದೆ ಇವರು ಲೇಡೀಸ್‌ ಟೈಲರಿಂಗ್‌ ಶಾಪ್‌ ನಡೆಸುತ್ತಿದ್ದರು. ಆಗಲೂ ರಾಖಿ ಹಬ್ಬದಲ್ಲಿ ಸತತ ಎಂಟು ವರ್ಷ ಮಹಿಳೆಯರಿಗೆ ಉಚಿತವಾಗಿ ರಾಖಿಗಳನ್ನು ವಿತರಿಸಿ ಸಹೋದರರ ಭ್ರಾತೃತ್ವದ ಬಗ್ಗೆ ಸಂದೇಶ ನೀಡಿದ್ದರು. ಈಗ್ಗೆ 6 ತಿಂಗಳ ಹಿಂದೆ ಇವರು ಈ ಬ್ಯೂಟಿ ಪಾರ್ಲರ್‌ ಆರಂಭಿಸಿದ್ದಾರೆ.

ಬಿರು ಬಿಸಿಲಿನ ಮಧ್ಯೆ ಬಿಸಿ ಏರಿದ ಬೀದರ್ ಎಲೆಕ್ಷನ್: ಬಿಜೆಪಿ ಅಭ್ಯರ್ಥಿ ಖೂಬಾಗೆ ಸಚಿವ ಖಂಡ್ರೆ ಮಗ ಸವಾಲ್!

ಮತದಾನದ ಉತ್ತೇಜನಕ್ಕಾಗಿ, ಸಾಮಾಜಿಕ ಕಳಕಳಿಗಾಗಿ ನಮ್ಮ ಉಚಿತ ಐ ಬ್ರೊ ಮಾಡಲಿದ್ದೇವೆ. ಮಹಿಳೆಯರು ತಪ್ಪದೇ ಮತ ಚಲಾಯಿಸಿ, ಈ ಸೌಲಭ್ಯ ಪಡೆದುಕೊಳ್ಳಬೇಕು ಎನ್ನುತ್ತಾರೆ ಬ್ಯೂಟಿಷಿಯನ್‌ ಕೆ.ಎಂ.ಲತಾ.

Latest Videos
Follow Us:
Download App:
  • android
  • ios