ಬಳ್ಳಾರಿಗೆ ಶ್ರೀರಾಮುಲು ಕೊಡುಗೆ ಚೊಂಬು, ದಯವಿಟ್ಟು ಗೆಲ್ಲಿಸಬೇಡಿ: ಸಿಎಂ ಸಿದ್ದರಾಮಯ್ಯ
ಕಳೆದ ಹತ್ತು ವರ್ಷದಿಂದ ನರೇಂದ್ರ ಮೋದಿ ಪ್ರಧಾನಿಯಾಗಿದ್ದರು. ಇದೀಗ ಮತ್ತೊಮ್ಮೆ ಪ್ರಧಾನಿಯಾಗಲು ಪ್ರಯತ್ನ ಮಾಡ್ತಿದ್ದಾರೆ. ಹತ್ತು ವರ್ಷದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಏನು ಅಭಿವೃದ್ಧಿ ಮಾಡಿದ್ರು? ಎಂದು ಪ್ರಧಾನಿ ಮೋದಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ವಿಜಯನಗರ (ಏ.29): ಕಳೆದ ಹತ್ತು ವರ್ಷದಿಂದ ನರೇಂದ್ರ ಮೋದಿ ಪ್ರಧಾನಿಯಾಗಿದ್ದರು. ಇದೀಗ ಮತ್ತೊಮ್ಮೆ ಪ್ರಧಾನಿಯಾಗಲು ಪ್ರಯತ್ನ ಮಾಡ್ತಿದ್ದಾರೆ. ಹತ್ತು ವರ್ಷದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಏನು ಅಭಿವೃದ್ಧಿ ಮಾಡಿದ್ರು? ಎಂದು ಪ್ರಧಾನಿ ಮೋದಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಇಂದು ವಿಜಯನಗರದ ಕೂಡ್ಲಿಗಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಹತ್ತು ವರ್ಷದಲ್ಲಿ ಮೋದಿ ಕೊಟ್ಟ ಮಾತುಗಳನ್ನು ಉಳಿಸಿಕೊಂಡಿದ್ದಾರಾ? ದೇಶವನ್ನು ಆರ್ಥಿಕವಾಗಿ ಮುನ್ನಡೆಸಲು ಆಗಿಲ್ಲ. ಹೀಗಾಗಿ ಮೋದಿ ಈ ಚುನಾವಣೆಯಲ್ಲಿ ಹತಾಶರಾಗಿದ್ದಾರೆ. ಗೆಲ್ಲುವ ವಿಶ್ವಾಸ ಕಳೆದುಕೊಂಡಿದ್ದಾರೆ. ಮೋದಿ ಸರ್ವೇ ಪ್ರಕಾರ 200 ರಿಂದ 220 ಸೀಟು ಮಾತ್ರ ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಿತ್ತು. ಈ ವಿಷಯ ಜನರಿಗೆ ಗೊತ್ತಾದ್ರೆ ಕಷ್ಟ ಎಂದು ಆ ಸರ್ವೆಯನ್ನೇ ಡಿಲಿಟ್ ಮಾಡಿಸಿದ್ರು. ಕಳೆದ ಬಾರಿ ಕರ್ನಾಟಕದಲ್ಲಿ 25 ಸ್ಥಾನದಲ್ಲಿ ಭಾವನಾತ್ಮಕ ವಿಚಾರ ಪ್ರಸ್ತಾಪ ಮಾಡಿ ಗೆದ್ರು. 370 ರದ್ದು, ಪುಲ್ವಾಮ ವಿಚಾರ ಪ್ರಸ್ತಾಪ ಮಾಡಿದ್ರು ದೇಶದ ರಕ್ಷಣೆ ಮೋದಿ ಮಾತ್ರ ಎಂದು ಮತ ನೀಡಿದ್ರು. ಆದರೆ ಈಗ ಯಾವುದೇ ಭಾವನಾತ್ಮಕ ವಿಚಾರವಿಲ್ಲ. ಹೀಗಾಗಿ ಸುಳ್ಳು ಹೇಳ್ತಿದ್ದಾರೆ. ಕರ್ನಾಟಕದ ಬಗ್ಗೆ ಹೆಚ್ಚು ಕಾನ್ಸಂಟ್ರೇಶನ್ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.
ಲೋಕಸಭಾ ಚುನಾವಣೆ: ಕಾಂಗ್ರೆಸ್ ಗೆಲುವು ಗ್ಯಾರಂಟಿ ಎಂದ ಸಿಎಂ ಸಿದ್ದರಾಮಯ್ಯ
ಮೋದಿ ಮತ್ತೆ ಕರ್ನಾಟಕಕ್ಕೆ ಬಂದಿದ್ದಾರೆ. ಎಲ್ಲಾ ಸಮಾವೇಶದಲ್ಲೂ ಅದೇ ಸುಳ್ಳು ಹೇಳ್ತಿದ್ದಾರೆ. ಬೆಳಗಾವಿಯಲ್ಲಿ ಶಿವಾಜಿ, ರಾಣಿ ಚೆನ್ನಮ್ಮಗೆ ಅವಮಾನ ಮಾಡಿದ್ದಾರೆ ಎಂದರು.ನಮಗೆ ಶಿವಾಜಿ ಮತ್ತು ಚೆನ್ನಮ್ಮ ಬಗ್ಗೆ ಗೌರವವಿದೆ. ಚೆನ್ನಮ್ಮ ಜಯಂತಿ ಆಚರಣೆ ನಮ್ಮ ಕಾಲದಲ್ಲಿ ಮಾಡಿದ್ದು ಬಿಜೆಪಿ ಯಾವತ್ತೂ ಮಾಡಿರಲಿಲ್ಲ. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬೊಮ್ಮಾಯಿ ಯಾರೂ ಮಾಡಿಲ್ಲ. ಚೆನ್ನಮ್ಮ ಜಯಂತಿ ಮಾಡಿದ್ದು ಸಿದ್ದರಾಮಯ್ಯ ಎಂದರು.
ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಶಾಸಕ ಮತ್ತು ಸಂಸದರಾಗಲು ಆರ್ಹರಲ್ಲ, ದಯವಿಟ್ಟು ಗೆಲ್ಲಿಸಬೇಡಿ. ಈ ಹಿಂದೆ ಆ ಮನುಷ್ಯ ಆರೋಗ್ಯ ಮಂತ್ರಿಯಾಗಿದ್ದಾಗ ಕೋವಿಡ್ ನಿರ್ವಹಣೆ ಮಾಡಲಿಲ್ಲ ಎಂದು ಖಾತೆ ತೆಗೆದು ಹಾಕಿದ್ರು. ಸುಧಾಕರ ಖಾತೆ ಬದಲಾವಣೆ ಮಾಡಿದ್ರು.. ಶ್ರೀರಾಮುಲು ಭ್ರಷ್ಟಾಚಾರದಲ್ಲಿ ಮುಳುಗಿ ಹೊಗಿದ್ದಾರೆ. ಬಳ್ಳಾರಿ ಗೆ ಶ್ರೀರಾಮುಲು ಕೊಡುಗೆ ಚೆಂಬು ಎಂದು ಚೆಂಬು ಪ್ರದರ್ಶನ ಮಾಡಿದ ಸಿದ್ದರಾಮಯ್ಯ. ಪ್ರದರ್ಶನದ ಮೊದಲು ಆ ಕಡೆ ಈ ಕಡೆ ಹುಡುಕಾಡಿ ಚೆಂಬು ಹಿಡಿದು ಪ್ರದರ್ಶಿಸಿದರು. ಇದೇ ವೇಳೆ ಮೋದಿ ಕೂಡ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ ಚೊಂಬು ನೀಡಿದ್ದಾರೆ ಲೇವಡಿ ಮಾಡಿದರು.
ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ, ಎಲ್ಲ ಕೈ ನಾಯಕರು ಚೊಂಬು ಹಿಡ್ಕೊಂಡು ಹೋಗ್ತಾರೆ: ಯತ್ನಾಳ್ ವಾಗ್ದಾಳಿ
ಕರ್ನಾಟಕ ಬರಪರಿಹಾರ ಅನ್ಯಾಯಕ್ಕೆ ಸುಪ್ರೀಂ ಕೋರ್ಟ್ ನಲ್ಲಿ ಚೀಮಾರಿ ಹಾಕಿದ ಮೇಲೆಯೇ ಹಣ ನೀಡಲು ಮುಂದಾಗಿದ್ದಾರೆ. ಇನ್ನೂ ಬಂದಿಲ್ಲ. ಹೀಗಾರಿ ಶ್ರೀರಾಮುಲು ಬಳ್ಳಾರಿ, ರಾಜ್ಯಕ್ಕೆ ಮೋದಿ ಖಾಲಿ ಚೊಂಬು ನೀಡಿದ್ದಾರೆಂದು ಪ್ರದರ್ಶನ ಮಾಡಿದರು. ಈ ಚುನಾವಣೆಯಲ್ಲಿ ಶ್ರೀರಾಮುಲುಗೆ ಚೊಂಬು ಕೊಟ್ಟು ಕಳುಹಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.