ಭಾರತೀಯ ಸೇನೆಯ ಮೊದಲ ಮಹಿಳಾ ಸ್ಕೈ ಡೈವರ್ ಲ್ಯಾನ್ಸ್ ನಾಯಕ್ ಮಂಜು
ಮಹಿಳೆಯರು ಈಗ ಅಬಲೆಯರಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿರುವ ಸಬಲೆಯರು. ಶಿಕ್ಷಣ, ಸೇನೆ, ವೈದ್ಯಕೀಯ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರಿದ್ದಾರೆ. ಸದ್ಯ ಸೇನಾ ಪೊಲೀಸ್ ತಂಡದ ಈಸ್ಟರ್ನ್ ಕಮಾಂಡರ್‌ನ ಲ್ಯಾನ್ಸ್ ನಾಯಕ್ ಮಂಜು ಅವರು ಭಾರತೀಯ ಸೇನೆಯ ಮೊದಲ ಮಹಿಳಾ ಸ್ಕೈ ಡೈವರ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಸೇನಾ ಪೊಲೀಸ್ ತಂಡದ ಈಸ್ಟರ್ನ್ ಕಮಾಂಡರ್‌ನ ಲ್ಯಾನ್ಸ್ ನಾಯಕ್ ಮಂಜು ಅವರು ಭಾರತೀಯ ಸೇನೆಯ (Indian Army) ಮೊದಲ ಮಹಿಳಾ ಸ್ಕೈ ಡೈವರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಲ್ಯಾನ್ಸ್ ನಾಯಕ್ ಮಂಜು ಭಾರತೀಯ ಸೇನೆಯ ಇತರ ಮಹಿಳೆಯರಿಗೆ ಮಾದರಿಯಾಗಿದ್ದಾರೆ ಎಂದು ಭಾರತೀಯ ಸೇನೆ ಹೇಳಿದೆ. ಈಸ್ಟರ್ನ್ ಕಮಾಂಡ್ ಮಹಿಳೆಯ ಸಾಧನೆಯನ್ನು (Womans Achievement) ಸ್ಪೂರ್ತಿದಾಯಕ ಕಾರ್ಯ ಎಂದು ಕರೆದಿದೆ.
10,000 ಅಡಿ ಎತ್ತರದಿಂದ ಜಿಗಿದು ಲ್ಯಾನ್ಸ್ ನಾಯಕ್ ಮಂಜು ಸಾಧನೆ
ಸ್ಕೈಡೈವರ್ ಲ್ಯಾನ್ಸ್ ನಾಯಕ್ ಮಂಜು, ALH ಧ್ರುವ ಚಾಪರ್ (ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್) ನಿಂದ ಜಿಗಿದು ದಾಖಲೆ ನಿರ್ಮಿಸಿದರು. 10,000 ಅಡಿ ಎತ್ತರದಿಂದ ಜಿಗಿದು ಲ್ಯಾನ್ಸ್ ನಾಯಕ್ ಮಂಜು ಸಾಧನೆ ಮಾಡಿದ್ದಾರೆ ಎಂದು ಈಸ್ಟರ್ನ್ ಕಮಾಂಡ್ ಮಾಹಿತಿ ನೀಡಿದೆ. ಜಂಪ್ ಮಾಡಲು ಭಾರತೀಯ ಸೇನೆಯ ಸಾಹಸ ವಿಭಾಗದ ಸ್ಕೈಡೈವಿಂಗ್ ತರಬೇತಿ ತಂಡದಿಂದ ತರಬೇತಿ (Training) ಪಡೆದಿದ್ದರು. ಲ್ಯಾನ್ಸ್ ನಾಯಕ್ ಮಂಜು ಅವರು ಮಿಲಿಟರಿ ಪೊಲೀಸ್ ಕಾರ್ಪ್ಸ್‌ನಿಂದ ಬಂದವರು. ಈ ವೀರೋಚಿತ ಜಿಗಿತಕ್ಕಾಗಿ ಭಾರತೀಯ ಸೇನೆಯ ಸಾಹಸ ವಿಭಾಗದ ಸ್ಕೈಡೈವಿಂಗ್ ತರಬೇತಿ ತಂಡದಿಂದ ಆಕೆಗೆ ತರಬೇತಿ ನೀಡಲಾಗಿದೆ.
ಏಷ್ಯಾದ ಬ್ಯುಸಿನೆಸ್ ವಿಮೆನ್ ಪಟ್ಟಿ ಪ್ರಕಟಿಸಿದ ಫೋರ್ಬ್ಸ್; ಮೂವರು ಭಾರತೀಯ ಮಹಿಳೆಯರಿಗೆ ಸ್ಥಾನ
ಸ್ಕೈ ಡೈವ್ ಅನ್ನು ಪೂರ್ಣಗೊಳಿಸಿದ ಲ್ಯಾನ್ಸ್ ನಾಯಕ್ 'ಪಕ್ಷಿ ತನ್ನ ರೆಕ್ಕೆಗಳನ್ನು ನಂಬಲು ಕಲಿತಾಗ, ಅದು ಆಕಾಶವನ್ನು ಸಹ ಗೆಲ್ಲಬಲ್ಲದು' ಎಂದಿದ್ದಾರೆ. ಈ ವರ್ಷದ ಮೇ ತಿಂಗಳಲ್ಲಿ, ಮತ್ತೊಬ್ಬ ಮಹಿಳೆ ಭಾರತೀಯ ಸೇನೆಯಲ್ಲಿ ಮೊದಲ ಮಹಿಳಾ ಯುದ್ಧ ಏವಿಯೇಟರ್ ಆಗುವ ಮೂಲಕ ಪಡೆಗಳಲ್ಲಿ ಇತಿಹಾಸವನ್ನು ಬರೆದಿದ್ದರು.
'ಈಸ್ಟರ್ನ್ ಕಮಾಂಡ್‌ನ ಎಲ್/ಎನ್‌ಕೆ (ಡಬ್ಲ್ಯೂಎಂಪಿ) ಮಂಜು ಅವರು ಭಾರತೀಯ ಸೇನೆಯ ಮೊದಲ ಮಹಿಳಾ ಸೈನಿಕ ಸ್ಕೈ ಡೈವರ್ ಆದರು. ಅವru ನಿನ್ನೆ ALH ನಿಂದ 10,000 ಅಡಿಯಿಂದ ಜಿಗಿದಿದ್ದಾರೆ. ಅವರ ಈ ಸ್ಪೂರ್ತಿದಾಯಕ ಕಾರ್ಯವು ಸೇನೆಯಲ್ಲಿರುವ ಇತರ ಮಹಿಳೆಯರಿಗೆ ಮಾದರಿಯಾಗಲಿದೆ' ಎಂದು ಈಸ್ಟರ್ನ್ ಕಮಾಂಡ್_IA ಟ್ವೀಟ್ ಮಾಡಿದೆ.
7 ತಿಂಗಳಲ್ಲಿ 42 ಲೀಟರ್ ಎದೆಹಾಲು ದಾನ ಮಾಡಿ ದಾಖಲೆ ಬರೆದ ಮಹಾತಾಯಿ
ಭಾರತೀಯ ಸೇನೆಯಲ್ಲಿ ಹಲವು ಯುವತಿಯರು ಸಾಧನೆ ಮಾಡುತ್ತಾ ದೇಶದ ಹಿರಿಮೆಯನ್ನು ಎಲ್ಲೆಡೆ ಸಾರುತ್ತಿದ್ದಾರೆ. ಈ ಹಿಂದೆ ಕ್ಯಾಪ್ಟನ್ ಅಭಿಲಾಷಾ ಬರಾಕ್ ಅವರು ಭಾರತದ ಶಕ್ತಿಶಾಲಿ ಮಹಿಳೆಯರ ಪಟ್ಟಿಗೆ ತಮ್ಮ ಹೆಸರು ದಾಖಲಿಸಿದ್ದರು. ಮೇ 2022ರಲ್ಲಿ ಏವಿಯೇಟರ್ ಆಗಿ ಆರ್ಮಿ ಏವಿಯೇಶನ್ ಕಾರ್ಪ್ಸ್ ಸೇರಿದ ಮೊದಲ ಮಹಿಳಾ ಅಧಿಕಾರಿಯೆನಿಸಿದರು. ಸದ್ಯ ಸೇನಾ ಪೊಲೀಸ್ ತಂಡದ ಈಸ್ಟರ್ನ್ ಕಮಾಂಡರ್‌ನ ಲ್ಯಾನ್ಸ್ ನಾಯಕ್ ಮಂಜು ಅವರು ಭಾರತೀಯ ಸೇನೆಯ ಮೊದಲ ಮಹಿಳಾ ಸ್ಕೈ ಡೈವರ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ಪುತ್ತೂರು: ಕಸದಿಂದ ರಸ ತೆಗೆದು ಪರಿಸರ ರಕ್ಷಕಿಯಾದ ರೋಹಿಣಿ