ಏಷ್ಯಾದ ಬ್ಯುಸಿನೆಸ್ ವಿಮೆನ್ ಪಟ್ಟಿ ಪ್ರಕಟಿಸಿದ ಫೋರ್ಬ್ಸ್; ಮೂವರು ಭಾರತೀಯ ಮಹಿಳೆಯರಿಗೆ ಸ್ಥಾನ
*ಈ ಪಟ್ಟಿಯಲ್ಲಿ ಏಷ್ಯಾ-ಪೆಸಿಫಿಕ್ ಪ್ರಾಂತ್ಯದಲ್ಲಿ ಅಸಾಮಾನ್ಯ ಸಾಧನೆ ಮಾಡಿದ 20 ಮಹಿಳೆಯರಿಗೆ ಸ್ಥಾನ
*ಹೊಸ ಮುಖಗಳಿಗೆ ಆದ್ಯತೆ
*ಕೋವಿಡ್ ಸಾಂಕ್ರಾಮಿಕದಿಂದ ಸೃಷ್ಟಿಯಾದ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿದ್ದ ಮಹಿಳಾ ಉದ್ಯಮಿಗಳು
ನವದೆಹಲಿ (ನ.9): ಫೋರ್ಬ್ಸ್ ನಿಯತಕಾಲಿಕ ಪ್ರಕಟಿಸಿದ ಏಷ್ಯಾದ ಪವರ್ ಬ್ಯುಸಿನೆಸ್ ವಿಮೆನ್ -2022ರಲ್ಲಿ ಮೂವರು ಭಾರತೀಯ ಉದ್ಯಮಿಗಳು ಸ್ಥಾನ ಪಡೆದಿದ್ದಾರೆ. ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ನ ಮುಖ್ಯಸ್ಥೆ ಸೋಮಾ ಮಂಡಲ್ , ಇಂಡಿಯಾ ಬ್ಯುಸಿನೆಸ್ ಆಫ್ ಎಮ್ಕ್ಯೂರ್ ಫಾರ್ಮಾ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ನಮಿತಾ ಥಾಪರ್ ಹಾಗೂ ಹೊನಸ ಕನ್ಸೂಮರ್ ಮುಖ್ಯ ಇನೋವೇಶನ್ ಆಫೀಸರ್ ಘಜಲ್ ಅಲ್ಘ ಅವರು ಈ ಗೌರವಕ್ಕೆ ಪಾತ್ರರಾದ ಮೂವರು ಭಾರತೀಯ ಮಹಿಳಾ ಉದ್ಯಮಿಗಳು. ಏಷ್ಯಾ-ಪೆಸಿಫಿಕ್ ಪ್ರಾಂತ್ಯದಲ್ಲಿ ಅಸಾಮಾನ್ಯ ಸಾಧನೆ ಮಾಡಿದ 20 ಮಹಿಳೆಯರಿಗೆ ಈ ಗೌರವ ಸಂದಿದೆ. ಅಂದ ಹಾಗೇ ಈ ಪಟ್ಟಿಯಲ್ಲಿ ಸ್ಥಾನ ಪಡೆದ ಎಲ್ಲ 20 ಮಹಿಳೆಯರು ಉದ್ಯಮ ರಂಗದ ಹೊಸ ಮುಖಗಳಾಗಿದ್ದು, ಇದೇ ಮೊದಲ ಬಾರಿಗೆ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಕೋವಿಡ್ ಸಾಂಕ್ರಾಮಿಕ ಹಾಗೂ ಅದರಿಂದ ಸೃಷ್ಟಿಯಾದ ಅನಿಶ್ಚಿತತೆಯ ನಡುವೆಯೂ ವಿವಿಧ ತಂತ್ರಗಳನ್ನು ಅನುಸರಿಸುವ ಮೂಲಕ ತಮ್ಮ ಉದ್ಯಮಕ್ಕೆ ಉತ್ತೇಜನ ನೀಡಿದ ಮಹಿಳಾ ಉದ್ಯಮಿಗಳನ್ನು ಫೋರ್ಬ್ಸ್ ಏಷ್ಯಾ ಆಯ್ಕೆ ಮಾಡಿ ತನ್ನ ನವೆಂಬರ್ ಸಂಚಿಕೆಯಲ್ಲಿ ಪ್ರಕಟಿಸಿದೆ.
ಭಾರತದ ಮೂವರು ಮಹಿಳಾ ಉದ್ಯಮಿಗಳನ್ನು ಹೊರತುಪಡಿಸಿ ಆಸ್ಟ್ರೇಲಿಯಾ, ಚೀನಾ, ದಕ್ಷಿಣ ಕೊರಿಯಾ, ಇಂಡೋನೇಷ್ಯಾ, ಜಪಾನ್, ಸಿಂಗಾಪುರ, ದಕ್ಷಿಣ ಕೊರಿಯಾ, ತೈವಾನ್ ಹಾಗೂ ಥೈಲ್ಯಾಂಡ್ ಮಹಿಳಾ ಉದ್ಯಮಿಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ನ.19ರಂದು ಬ್ಯಾಂಕ್ ನೌಕರರ ಮುಷ್ಕರ; ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ ಸಾಧ್ಯತೆ!
ಘಜಲ್ ಅಲ್ಘ
ಫೋರ್ಬ್ಸ್ (Forbes) ಏಷ್ಯಾದ ಪವರ್ ಬ್ಯುಸಿನೆಸ್ ವಿಮೆನ್ -2022ರಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ ಮಹಿಳೆ (Indian Woman) ಘಜಲ್ ಅಲ್ಘ. ಇವರು ಹೊನಸ ಕನ್ಸೂಮರ್ ಸಂಸ್ಥೆಯ ಮುಖ್ಯ ಇನೋವೇಶನ್ ಆಫೀಸರ್. ಹೊನಸ ಕನ್ಸೂಮರ್ ಸಂಸ್ಥೆ ಮಾಮಾ ಅರ್ಥ್ ಕಂಪನಿಯ ಮಾತೃಸಂಸ್ಥೆ. ಗುರ್ಗಾಂವ್ ಮೂಲದ ಈ ಕಂಪನಿಯನ್ನು ಘಜಲ್ ಅಲ್ಘ 2016ರಲ್ಲಿ ಪತಿ ವರುಣ್ ಅವರೊಂದಿಗೆ ಸೇರಿ ಪ್ರಾರಂಭಿಸಿದರು. ವರುಣ್ ಈ ಸಂಸ್ಥೆಯ ಸಿಇಒ ಆಗಿದ್ದಾರೆ. ಈ ವರ್ಷದ ಜನವರಿಯಲ್ಲಿ ಈ ಕಂಪನಿ ಯುನಿಕಾರ್ನ್ ಆಗಿ ಪರಿವರ್ತನೆಯಾಗಿದೆ. ಕಳೆದ ಸೀಸನ್‌ನ ಶಾರ್ಕ್ ಟ್ಯಾಂಕ್ (Shark tank) ಕಾರ್ಯಕ್ರಮದಲ್ಲಿ ಘಜಲ್ ಅಲ್ಘ ತೀರ್ಪುಗಾರರಾಗಿ ಕೂಡ ಗಮನ ಸೆಳೆದಿದ್ದರು. ಎನ್‌ಐಐಟಿಯಲ್ಲಿ (NIIT) ಎಸ್‌ಕ್ಯುಎಲ್, ಜೆ2ಎಂಇ, ಒರೇಕಲ್ ಮುಂತಾದ ವಿಷಯಗಳ ತರುಬೇತುದಾರರಾಗಿದ್ದ ಘಜಲ್ ಅಲ್ಘ, ಆ ಬಳಿಕ ಸೌಂದರ್ಯವರ್ಧಕ ಹಾಗೂ ಆರೋಗ್ಯ ವರ್ಧಕ ಕ್ಷೇತ್ರ ಪ್ರವೇಶಿಸಿ ತಮ್ಮ ಉದ್ಯಮ ಚತುರತೆ ಪ್ರದರ್ಶಿಸಿದ್ದಾರೆ.
ಸೋಮಾ ಮಂಡಲ್
ಇವರು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾಗೆ (SAIL) ಮುಖ್ಯಸ್ಥೆಯಾದ ಮೊದಲ ಮಹಿಳೆ. ಫೋರ್ಬ್ಸ್ ನೀಡಿರುವ ಮಾಹಿತಿ ಪ್ರಕಾರ 2021ರಲ್ಲಿ ಮಂಡಲ್ ಎಸ್ ಎಐಎಲ್ (SAIL) ಮುಖ್ಯಸ್ಥೆಯಾದ ಬಳಿಕ ಸಂಸ್ಥೆಯ ವಾರ್ಷಿಕ ಆದಾಯ 2022ರ ಮಾರ್ಚ್ 31ಕ್ಕೆ ಕೊನೆಯಾದ ವರ್ಷದಲ್ಲಿ ಶೇ.50ರಷ್ಟು ಹೆಚ್ಚಳವಾಗಿದೆ.
ಮಹಿಳೆಯರು ಹೆಚ್ಚು ರಿಸ್ಕ್ ಇಲ್ಲದೇ ಮಾಡೋ ಬ್ಯುಸಿನೆಸ್ ಇದು!
ನಮಿತಾ ಥಾಪರ್
ಎಮ್ಕ್ಯೂರ್ ಫಾರ್ಮಾದ ( Emcure Pharma) ಭಾರತದ ವ್ಯವಹಾರದ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿರುವ ನಮಿತಾ ಥಾರ್ ಶಾರ್ಕ್ ಟ್ಯಾಂಕ್ ಇಂಡಿಯಾದಲ್ಲಿ (Shark India) ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು. 40 ವರ್ಷಗಳ ಹಿಂದೆ ಆಕೆಯ ತಂದೆ ಸತೀಶ್ ಮೆಹ್ತಾ ಸ್ಥಾಪಿಸದ ಪುಣೆ ಮೂಲದ ಈ ಕಂಪನಿ 61 ಬಿಲಿಯನ್ ರೂ. ವ್ಯವಹಾರ ನಡೆಸುತ್ತಿದೆ. 45 ವರ್ಷದ ನಮಿತಾ ಥಾಪರ್ ಇಂಗ್ಲೆಂಡ್‌ನ ಡ್ಯೂಕ್ ಯೂನಿವರ್ಸಿಟಿಯಿಂದ (Duke University) ಎಂಬಿಎ ಪದವಿ ಪಡೆದಿದ್ದಾರೆ.