ಪುತ್ತೂರು: ಕಸದಿಂದ ರಸ ತೆಗೆದು ಪರಿಸರ ರಕ್ಷಕಿಯಾದ ರೋಹಿಣಿ
Best Out of Waste: ಪರಿಸರದಿಂದ ಉಂಟಾಗುವ ಮಾಲಿನ್ಯವನ್ನು ತಡೆಯುವ ಉದ್ದೇಶದಿಂದ ಪರಿಸರ ರಕ್ಷಕಿಯಾದ ರೋಹಿಣಿ ಸಮಾಜ ಸೇವೆಯೊಂದಿಗೆ ಪ್ರಕೃತಿಯ ಉಳಿವಿಗಾಗಿ ತಮ್ಮ ದಿಟ್ಟ ಹೆಜ್ಜೆ ಮೂಲಕ ಸಮಾಜ ಸೇವಕಿಯಾಗಿದ್ದಾರೆ
ವರದಿ: ಸುಕನ್ಯ ಎನ್ ಆರ್, ಆಳ್ವಾಸ್ ಕಾಲೇಜು, ಮೂಡುಬಿದಿರೆ
ಮಂಗಳೂರು ( ಅ. 20): ರೋಹಿಣಿ ರಾಘವ ಆಚಾಯ೯ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ಇವರು ಅನೇಕ ಸಾಮಾಜಿಕ ಕಾಯ೯ಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಜೊತೆಗೆ ಕಸದಿಂದ ರಸ ಎಂಬ ಯೋಜನೆಯೊಂದಿಗೆ ಪ್ರತಿದಿನ ತಮ್ಮ ಕಣ್ಣ ಮುಂದೆ ಕಾಣುವ ಕಸವನ್ನು ಸಂಗ್ರಹಿಸಿ ಮರುಬಳಕೆ ಮಾಡಿ ಉಪಯೋಗಕ್ಕೆ ಬರುವ ರೀತಿ ಕಲಾತ್ಮಕ ವಸ್ತುಗಳನ್ನಾಗಿ ಪರಿವರ್ತಿಸುತ್ತಿದ್ದಾರೆ. ರೋಹಿಣಿ ಯಾವುದೇ ವಸ್ತುವನ್ನು ಮಾರುಕಟ್ಟೆಯಿಂದ ಖರೀದಿಸದೆ ತಾಜ್ಯಗಳನ್ನು ಬಳಸಿ ವಿಭಿನ್ನ ರೀತಿಯ ಕಲಾತ್ಮಕ ಕಲಾಕೃತಿಗಳನ್ನು ರಚಿಸುತ್ತಿದ್ದಾರೆ. ಈ ಮೂಲಕ ಪರಿಸರದ ರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ರೋಹೀಣಿ ಆಸಕ್ತ ವಿದ್ಯಾಥಿ೯ಗಳಿಗೆ ಕಲಾಕೃತಿಗಳನ್ನು ತಯಾರಿಸುವ ಬಗ್ಗೆ ತರಬೇತಿ ಕೂಡ ನೀಡಿದ್ದಾರೆ.
ಇದನ್ನೂ ಓದಿ: ತರಕಾರಿ ಬೀಜ ಎಸಿಬೇಕಾಗಿಲ್ಲ, ಸ್ಟೈಲಿಶ್ ಆಭರಣ ತಯಾರಿಸ್ಬೋದು