Reddit Post : ಮಾತು ಮಿತಿಯಲ್ಲಿದ್ರೂ ನಂಬರ್ ಕೇಳಿದ ಕಂಡಕ್ಟರ್…. ಮಹಿಳೆ ಕಥೆ ಕೇಳಿ ನೆಟ್ಟಿಗರು ಶಾಕ್
ಕೊಚ್ಚಿಯಲ್ಲಿ ಪ್ರತಿದಿನ ಬಸ್‌ನಲ್ಲಿ ಕೆಲಸಕ್ಕೆ ಹೋಗುವ ಮಹಿಳೆಯೊಬ್ಬರು ಕಂಡಕ್ಟರ್‌ನಿಂದ ಕಿರುಕುಳಕ್ಕೊಳಗಾದ ಘಟನೆ ಬೆಳಕಿಗೆ ಬಂದಿದೆ. ಆರಂಭದಲ್ಲಿ ಸೌಜನ್ಯದಿಂದ ವರ್ತಿಸುತ್ತಿದ್ದ ಕಂಡಕ್ಟರ್, ನಂತರ ಮಹಿಳೆಯ ಮೇಲೆ ನಿಗಾ ಇರಿಸಲು ಪ್ರಾರಂಭಿಸಿದ್ದಲ್ಲದೆ, ಅವರ ಫೋನ್ ನಂಬರ್ ಕೇಳಿ ಕಿರುಕುಳ ನೀಡಿದ್ದಾರೆ.
ಬೆರಳು ಕೊಟ್ರೆ ಹಸ್ತ ನುಂಗಿದ್ರು ಎನ್ನುವ ಗಾದೆ ಇದೆ. ಈಗಿನ ಕಾಲದಲ್ಲಿ ವಯಸ್ಸು ಎಷ್ಟೇ ಇರಲಿ, ಅಪರಿಚಿತರ ಜೊತೆ ಮಾತನಾಡುವಾಗ ಎಚ್ಚರಿಕೆಯಿಂದ ಇರ್ಬೇಕು. ಬಸ್ ನಿಲ್ದಾಣ (bus stand ) ದಲ್ಲಿ, ಮೆಟ್ರೋ ಸ್ಟೇಷನ್ (Metro Station) ನಲ್ಲಿ, ಆಫೀಸ್ ಪಕ್ಕದಲ್ಲಿ ಇಲ್ಲ ಆಫೀಸ್ ನಲ್ಲಿ ನೋಡ್ತಾ ನೋಡ್ತಾ ಕೆಲವರು ಆಪ್ತರು ಎನ್ನಿಸಲು ಶುರುವಾಗುತ್ತೆ. ಒಂದು ದಿನ ಅವರು ನಮ್ಮ ಬಳಿ ಬಂದು ಮಾತಿಗೆ ಇಳಿಯುತ್ತಾರೆ. ನಮ್ಮ ಮಾತು ವರ್ತನೆ ಸಾಮಾನ್ಯದವರಂತೆ ಇದ್ರೂ ಆಕಡೆಯಿಂದ ಇದೇ ಪ್ರತಿಕ್ರಿಯೆ ಬರುತ್ತೆ ಎನ್ನಲು ಸಾಧ್ಯವಿಲ್ಲ. ಕೊಚ್ಚಿ (Kochi) ಯಲ್ಲಿ ಮಹಿಳೆಯೊಬ್ಬಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಪ್ರತಿ ದಿನ ನೋಡ್ತಿದ್ದ ಕಂಡೆಕ್ಟರ್ ಬದಲಾವಣೆ ನೋಡಿ ಆಕೆ ಕಂಗಾಲಾಗಿದ್ದಾಳೆ. ರೆಡ್ಡಿಟ್ (reddit) ನಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದು, ಅದು ಸಿಕ್ಕಾಪಟ್ಟೆ ವೈರಲ್ ಆಗಿದೆ.
ರೆಡ್ಡಿಟ್ ನಲ್ಲಿ ಪೋಸ್ಟ್ ಹಂಚಿಕೊಂಡ ಕೊಚ್ಚಿ ಮಹಿಳೆ, ಕಂಡಕ್ಟರ್ (Conductor) ವರ್ತನೆ ಸಹಜವಾಗಿದ್ಯಾ ಇಲ್ಲ ಭಯಾನಕವಾಗಿದ್ಯಾ ಅರ್ಥವಾಗ್ತಿಲ್ಲ. ಮುಂದೇನು ಮಾಡ್ಲಿ ಎಂದು ಆಕೆ ಕೇಳಿದ್ದಾಳೆ. ಅಷ್ಟಕ್ಕೂ ಬಸ್ ನಲ್ಲಿ ಆಗಿದ್ದು ಏನು? : ಮಹಿಳೆ ಪ್ರತಿ ದಿನ ಒಂದೇ ಬಸ್ ನಲ್ಲಿ ತನ್ನ ಆಫೀಸ್ ಗೆ ಹೋಗ್ತಾಳೆ. ಆ ಬಸ್ ನಲ್ಲಿ ಇಬ್ಬರು ಕಂಡಕ್ಟರ್ ಇದ್ದಾರೆ. ಒಬ್ಬರು ಶಾಂತ ಸ್ವಭಾವದವರಾಗಿದ್ದು, ಟಿಕೆಟ್ ನೀಡುವ ಕೆಲಸ ಮಾಡ್ತಾರೆ. ಇನ್ನೊಬ್ಬರು, ಮಹಿಳೆ ಪ್ರತಿ ದಿನ ಇದೇ ಬಸ್ ನಲ್ಲಿ ಬರೋದ್ರಿಂದ ಆರಂಭದಲ್ಲಿ ನಮಸ್ತೆ ಮಾಡಲು ಶುರು ಮಾಡಿದ್ದರಂತೆ. ಮಹಿಳೆ ಇದನ್ನು ಸಹಜವಾಗಿ ಸ್ವೀಕರಿಸಿದ್ದಳು. ಆದ್ರೆ ದಿನ ಕಳೆದಂತೆ ಕಂಡಕ್ಟರ್ ವರ್ತನೆ ಬದಲಾಗ್ತಾ ಹೋಯ್ತು ಎನ್ನುತ್ತಾಳೆ ಮಹಿಳೆ. ನನ್ನ ಗಮನ ಸೆಳೆಯಲು ಸಾಕಷ್ಟು ಪ್ರಯತ್ನ ಮಾಡ್ತಿದ್ದ ಕಂಡಕ್ಟರ್. ಟೀ ಆಯ್ತಾ, ತಿಂಡಿ ಆಯ್ತಾ ಎನ್ನುತ್ತಿದ್ದವ, ಪಬಸ್ ನಲ್ಲಿ ಮಹಿಳೆಯನ್ನು ಹುಡುಕಲು ಶುರು ಮಾಡಿದ್ದನಂತೆ. ಮಹಿಳೆ ಮಲಗಿದ್ರೂ ಆಕೆಯನ್ನು ಎಬ್ಬಿಸಿ ಮಾತನಾಡ್ತಿದ್ದ. ಮಹಿಳೆ ಕೈ ಟಚ್ ಮಾಡಿ, ಆಕೆ ಫೋನ್ ನಲ್ಲಿ ಏನು ನೋಡ್ತಿದ್ದಾಳೆ ಎಂಬುದನ್ನು ತಿಳಿದುಕೊಳ್ಳಲು ಪ್ರಶ್ನೆ ಕೇಳ್ತಿದ್ದ. ಮಹಿಳೆ ಏನ್ ಮಾಡ್ತಿದ್ದಾಳೆ, ಯಾರ್ ಜೊತೆ ಮಾತನಾಡ್ತಾಳೆ ಎಲ್ಲ ಮಾಹಿತಿ ಆತನಿಗೆ ಬೇಕಿತ್ತು.
ಮೂರೇ ತಾಸಲ್ಲಿ ಅತ್ಯಾಚಾರಿ ಸಿಕ್ಕಿಬಿದ್ದ, ಗುಂಡೇಟಿಗೆ ಸತ್ತ! ಅಂಥದ್ದು ಮತ್ತೆ ನಡೆಯದಂತೆ ಮಾಡಿದ ಘಟನೆ!
ಒಂದು ದಿನ ಫೋನ್ ನೋಡ್ತಿರುವ ಸಮಯದಲ್ಲಿ ಅಲ್ಲಿಗೆ ಬಂದ ಕಂಡಕ್ಟರ್ ನಂಬರ್ ಕೇಳಿದ್ದಾನೆ. ನಂಬರ್ ನೀಡಲು ಮಹಿಳೆ ನಿರಾಕರಿಸಿದ್ದಾಳೆ. ಮಹಿಳೆಗೆ ಕಂಡಕ್ಟರ್ ವರ್ತನೆ ವಿಚಿತ್ರವೆನ್ನಿಸಿದೆ. ಆತನಿಂದ ತಪ್ಪಿಸಿಕೊಳ್ಳಲು, ಬಸ್ ನಲ್ಲಿ ಆತ ಹಾಯ್ ಹೇಳಲು ಬಂದಾಗ ಮಹಿಳೆ ತಲೆ ತಿರುಗಿಸಿದ್ದಾಳೆ. ಇಷ್ಟಕ್ಕೆ ಮುಗಿದಿಲ್ಲ. ಮಹಿಳೆ ತನ್ನ ಸ್ಟಾಪ್ ಬರ್ತಿದ್ದಂತೆ ಇಳಿಯಲು ಮುಂದಾದಾಗ ಕಂಡಕ್ಟರ್ ಆಕೆ ದಾರಿಗೆ ಅಡ್ಡ ನಿಂತಿದ್ದ. ಮಹಿಳೆಗೆ ಇಳಿಯಲು ಅಡ್ಡಿ ಮಾಡಿದ್ದ. ಈ ಸಮಯದಲ್ಲಿ ಪಕ್ಕದಲ್ಲಿದ್ದ ಮಹಿಳೆ ಕಂಡಕ್ಟರ್ ಥಳ್ಳಿದ್ದರಿಂದ ಈಕೆ ಬಸ್ ಇಳಿದ್ಲು. ಈ ಎಲ್ಲ ವಿಷ್ಯವನ್ನು ಓದಿದ ಬಳಕೆದಾರರು, ಆಘಾತಗೊಂಡಿದ್ದಾರೆ.
Kolkata Rape Case : ಅದ್ಯಾರಪ್ಪು ಕೊಲ್ಕತ್ತಾ ಅತ್ಯಾಚಾರಿ ಪರ ವಾದಿಸಲು ಮುಂದಾದ ಲಾಯರ್? ಈ ಕೆಲಸಕ್ಕೆ ಒಪ್ಪಿದ್ಹೇಗೆ?
ಆರಂಭದಲ್ಲಿ ಇದು ವಿಶೇಷ ಎನ್ನಿಸಲಿಲ್ಲ. ಆದ್ರೆ ನಂತ್ರದ ಕಥೆ ಭಯಾನಕವಾಗಿದೆ. ಇದು ಸ್ನೇಹಪರ ವರ್ತನೆಯಲ್ಲ. ಯಾವುದಕ್ಕೂ ಎಚ್ಚರದಿಂದ ಇರಿ ಎಂದು ಬಳಕೆದಾರರು ಮಹಿಳೆಗೆ ಎಚ್ಚರಿಕೆ ನೀಡಿದ್ದಾರೆ. 40 ವರ್ಷದ ವ್ಯಕ್ತಿ ನಿಮ್ಮ ನಂಬರ್ ಕೇಳ್ತಾನೆ ಅಂದ್ರೆ ಆತ ಸೂಕ್ತ ವ್ಯಕ್ತಿಯಲ್ಲ. ನೀವು ದಾರಿ ಅಥವಾ ಬಸ್ ಬದಲಿಸುವ ಅಗತ್ಯವಿದೆ ಎಂದು ಮತ್ತೊಬ್ಬರು ಸಲಹೆ ನೀಡಿದ್ದಾರೆ. 300ಕ್ಕೂ ಹೆಚ್ಚು ಮಂದಿ ಮಹಿಳೆಗೆ ಧೈರ್ಯ ನೀಡುವ ಕಮೆಂಟ್ ಮಾಡಿದ್ದಾರೆ.