ಮೂರೇ ತಾಸಲ್ಲಿ ಅತ್ಯಾಚಾರಿ ಸಿಕ್ಕಿಬಿದ್ದ, ಗುಂಡೇಟಿಗೆ ಸತ್ತ! ಅಂಥದ್ದು ಮತ್ತೆ ನಡೆಯದಂತೆ ಮಾಡಿದ ಘಟನೆ!

ಹೆಣ್ಮಕ್ಕಳ ವಿರುದ್ಧ ದೌರ್ಜನ್ಯ ಎಸಗುವವರ ವಿರುದ್ಧ ತಕ್ಷಣವೇ ಕಠಿಣ ಕ್ರಮ ಕೈಗೊಂಡರೆ ಮತ್ಯಾವತ್ತೂ ಅಂಥ ಘಟನೆ ಮರುಕಳಿಸೋಲ್ಲ ಎನ್ನುವುದಕ್ಕೆ ಚೀನಾದಲ್ಲಿ 53 ವರ್ಷದ ಹಿಂದೆ ನಡೆದ ಈ ಘಟನೆಯೇ ಸಾಕ್ಷಿ!

criminal of crime against women in chian beijing shot dead in three hours

‘ಅರ್ಧ ಗಂಟೆಯೊಳಗೆ ಅತ್ಯಾಚಾರಿಯ ಹೆಸರು ಹೇಳಿದರೆ ಬಿಟ್ಟು ಬಿಡಿ. ಇಲ್ಲವೇ ಎಲ್ಲರನ್ನೂ ಕೊಂದು ಬಿಡಿ’- ಹೀಗೆಂದು ಗುಡುಗಿದ್ದು ಆ ಪ್ರಾಂತ್ಯದ ಸಿಟಿ ಚೇರ್ಮನ್ ಮಾವೋ ಝಿದಾಂಗ್​.

ಚೀನಾ ರಾಜಧಾನಿ ಬೀಜಿಂಗ್​ನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆದಿತ್ತು. ಘಟನೆ ನಡೆದು ಹಲವು ದಿನಗಳ ಬಳಿಕ ವಿಷಯ ಸಿಟಿ ಚೇರ್ಮನ್​ ಮಾವೋ ಝಿದಾಂಗ್ ಕಿವಿಗೆ ಬಿತ್ತು. ತಡ ಮಾಡದೇ ಹುಡುಗಿ ಮನೆಗೆ ಧಾವಿಸಿದ ಮಾವೋ, ಮಾನಸಿಕ, ದೈಹಿಕವಾಗಿ ತೀವ್ರವಾಗಿ ನೊಂದು ಹಾಸಿಗೆ ಹಿಡಿದಿದ್ದ ಸಂತ್ರಸ್ತೆ ಪಕ್ಕ ಕುಳಿತ. ಬಾಲಕಿ ಹಣೆ ಮೇಲೆ ಕೈ ಇಟ್ಟು ಸಮಾಧಾನದ ಮಾತನಾಡುತ್ತಾ, ‘ನಿನ್ನ ಮೇಲೆ ದೌರ್ಜನ್ಯ ನಡೆಯುವಾಗ ಕಿರುಚಿಕೊಂಡೆಯಾ?’ ಎಂದು ಕೇಳಿದ. ಹೌದು ಎಂದು ತಲೆಯಾಡಿಸಿದಳು ತನ್ನ ಮೇಲಾಗಿದೆ ಏನಾಗಿದೆ ಎಂಬ ಅರಿವೂ ಇಲ್ಲದ ಮುಗ್ಧ ಬಾಲೆ. 

‘ಈಗ ಮತ್ತೊಮ್ಮೆ ಕಿರುಚಲು ಸಾಧ್ಯವೇ?’ ಮಾವೋ ದನಿ ತಗ್ಗಿಸಿ ಪ್ರಶ್ನಿಸಿದ.  ಸರಿ ಎಂದು ಮತ್ತೆ ತಲೆಯಾಡಿಸಿದಳು ಹುಡುಗಿ. 

ಕೋಲ್ಕತ್ತಾ ರೇಪ್ ಕೇಸ್‌ಗೆ ಟ್ವಿಸ್ಟ್‌: ಸಿಬಿಐ ಸತ್ಯ ಪರೀಕ್ಷೆ ವೇಳೆ ಆರೋಪಿ ಸಂಜಯ್ ರಾಯ್ ಹೇಳಿದ್ದೇನು?

ತಕ್ಷಣವೇ ಪೊಲೀಸ್ ಅಧಿಕಾರಿಗಳನ್ನು ಕರೆಸಿದ ಮಾವೋ, ಹುಡುಗಿ ಮನೆಯ ಅರ್ಧ ಕಿಲೋ ಮೀಟರ್ ಸುತ್ತ ಮುತ್ತಲಿನ ಪ್ರದೇಶದಲ್ಲಿ ಅವರೆಲ್ಲರನ್ನೂ ನಿಲ್ಲುವಂತೆ ಸೂಚಿಸಿದ. ಪೊಲೀಸರು ನಿಲ್ಲುತ್ತಿದ್ದಂತೆ, ಮಾವೋ, ಆ ಹುಡುಗಿಗೆ, ಘಟನೆ ನಡೆದ ದಿನ ಕಿರುಚಿದಂತೆ ಕಿರುಚಲು ಹೇಳಿದ. ಮಾವೋ ಹೇಳಿದಂತೆಯೇ ಆ ಹುಡುಗಿ ಗಂಟಲು ಬಿರಿಯುವಂತೆ ಕಿರುಚಿದಳು. ಕಣ್ಣೀರಾದಳು. ಇದನ್ನೆಲ್ಲ ಮೌನವಾಗಿ ನೋಡುತ್ತಾ ನಿಂತ ಮಾವೋ, ಅದಾಗಲೇ ಒಂದು ನಿರ್ಧಾರಕ್ಕೆ ಬಂದುಬಿಟ್ಟಿದ್ದ. 

ಅರ್ಧ ಕಿಮೀ ದೂರದಲ್ಲಿ ನಿಂತಿದ್ದ ಪೊಲೀಸರನ್ನೆಲ್ಲ ಕರೆದ ಮಾವೋ, ಹುಡುಗಿ ಕಿರುಚಿದ್ದು ಕೇಳಿಸಿತಾ? ಎಂದು ಪ್ರಶ್ನಿಸಿದ. ಪ್ರತಿಯೊಬ್ಬ ಅಧಿಕಾರಿಯೂ ಹುಡುಗಿ ಕಿರುಚಿದ್ದು ಕೇಳಿಸಿತೆಂದು ಖಚಿತಪಡಿಸಿದ್ರು. ತಕ್ಷಣವೇ ಮಾವೋ, ಅರ್ಧ ಕಿಮೀ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬ ಗಂಡಸರನ್ನೂ ಕರೆ ತರುವಂತೆ ಆದೇಶಿಸಿದ. ಗಂಡಸರೆಲ್ಲ ಆ ಹುಡುಗಿ ಮನೆ ಎದುರು ಜಮಾಯಿಸುತ್ತಿದ್ದಂತೆ, ಪೊಲೀಸರತ್ತ ತಿರುಗಿದ ಮಾವೋ ‘ಆ ಹುಡುಗಿ ಮೇಲೆ ಅತ್ಯಾಚಾರ ಎಸಗಿದವನು ಯಾರೆಂದು ಹೇಳಿದರೆ ಬಿಟ್ಟು ಬಿಡಿ, ಇಲ್ಲದಿದ್ರೆ ಪ್ರತಿಯೊಬ್ಬ ಗಂಡಸರನ್ನೂ ಗುಂಡಿಟ್ಟು ಕೊಲ್ಲಿ,’ ಎಂದು ಖಡಕ್​ ಆಗಿ ಆಜ್ಞಾಪಿಸಿದ. ಮಾವೋ ಹೇಳಿದ ಕೇವಲ ಹತ್ತೇ ನಿಮಿಷದಲ್ಲಿ ಅತ್ಯಾಚಾರಿಯ ಗುರುತು ಪತ್ತೆಯಾಯ್ತು. ಎಲ್ಲರ ಎದುರೇ ಆ ಕ್ಷಣವೇ ಅತ್ಯಾಚಾರಿಗೆ ಪೊಲೀಸರು ಗುಂಡಿಟ್ಟು ಕೊಂದರು.
ಈ ಇಡೀ ಬೆಳವಣಿಗೆ ಕೇವಲ 3 ಗಂಟೆಯಲ್ಲಿ ಮುಗಿದು ಹೋಯ್ತು. 

ಈ ಘಟನೆ ನಡೆದ ಮುಂದಿನ 53 ವರ್ಷ ಬೀಜಿಂಗ್​ನಲ್ಲಿ ಒಂದೇ ಒಂದು ಅತ್ಯಾಚಾರದ ಕೇಸ್ ದಾಖಲಾಗಲಿಲ್ಲ. ಒಬ್ಬೇ ಒಬ್ಬ ಹುಡುಗಿ ಮೇಲೆ ದೌರ್ಜನ್ಯ ನಡೆಯಲಿಲ್ಲ. ಜನಸಂಖ್ಯೆಯಲ್ಲಿ ಭಾರತಕ್ಕಿಂತ ಮುಂದಿರುವ ಚೀನಾ, ಜಗತ್ತಿನಲ್ಲೇ ಸೂಪರ್​ ಪವರ್ ಆಗಿದ್ದು ಹೇಗೆ ಅಂತ ಅರ್ಥ ಆಯ್ತಲ್ವಾ? 

ಆಸ್ಪತ್ರೆಯ ಅದೊಂದು ಡೋರ್ ಸರಿ ಇರ್ತಿದ್ರೆ ಬದುಕುಳಿತಿದ್ರ ಕೋಲ್ಕತಾ ಟ್ರೈನಿ ವೈದ್ಯೆ

ನಮ್ಮ ದೇಶದ ವ್ಯವಸ್ಥೆ ಹೇಗಿದೆ ಅಂದ್ರೆ, ದೌರ್ಜನ್ಯಕ್ಕೊಳಗಾದ ಸಂತ್ರಸ್ತೆ ತನ್ನ ಜೀವನವಿಡೀ ನ್ಯಾಯಕ್ಕಾಗಿ ಕೋರ್ಟ್‌ನಿಂದ ಕೋರ್ಟ್​ಗೆ ಅಲೆಯಬೇಕು. ಒಂದೊಮ್ಮೆ ಆತ್ಯಾಚಾರಿಗಳಿಂದ ಆಕೆ ಕೊಲೆಯಾದರೆ, ಜನರು ಕೆಲವು ದಿನಗಳವರೆಗೆ ಕ್ಯಾಂಡಲ್​ ಹಿಡಿದು ಪ್ರತಿಭಟನೆ ಮಾಡ್ತಾರೆ, ಆಮೇಲೆ ಮರೆತುಬಿಡ್ತಾರೆ, ಎಲ್ಲಿವರೆಗೆ ಅಂದ್ರೆ ಮತ್ತೊಬ್ಬ ಯುವತಿ ಕಾಮುಕರಿಗೆ ಬಲಿಯಾಗುವವ ತನಕ. ಅಷ್ಟೇ ಏಕೆ, ಅತ್ಯಾಚಾರಿಯನ್ನೇ ನಮ್ಮ ನಾಯಕನೆಂದು ಆಯ್ಕೆ ಮಾಡಿ, ಎಲೆಕ್ಷನ್​ಗೆ ನಿಲ್ಲಿಸಿ ವೋಟ್​ ಹಾಕಿ ಗೆಲ್ಲಿಸಿ ಬಿಡ್ತಾರೆ. ಅದೇ ನಾಯಕನ ಬಳಿ ಅತ್ಯಾಚಾರಿಗಳನ್ನು ಶಿಕ್ಷಿಸಿ ಎಂದು ಮನವಿ ಪತ್ರ ಕೊಡ್ತಾರೆ. ಅತ್ಯಾಚಾರಿಗಳು ದಿನಕ್ಕೊಂದು ಹೆಣ್ಣನ್ನು ಮುಕ್ಕುತ್ತಿರುತ್ತಾರೆ. ದುರಂತ!

Latest Videos
Follow Us:
Download App:
  • android
  • ios