Women Health: ಅಮ್ಮನ ಪರ್ಸ್‌ನಲ್ಲಿ ಇರಲಿ ಈ ಮಾತ್ರೆ
ಅಮ್ಮನ ಆರೋಗ್ಯ ಬಹಳ ಸೂಕ್ಷ್ಮವಾಗಿರುತ್ತದೆ. ಒಂದಲ್ಲ ಒಂದು ನೋವು, ಖಾಯಿಲೆ ಆಕೆಯನ್ನು ಕಾಡುತ್ತದೆ. ತುರ್ತು ಸಂದರ್ಭದಲ್ಲಿ ಮಾತ್ರೆಯಿಲ್ಲದೆ ಆಕೆ ಪರದಾಡ್ತಾಳೆ. ಆಕೆ ಆರೋಗ್ಯದ ಬಗ್ಗೆ ಕಾಳಜಿ ಇರುವ ಮಕ್ಕಳು ಇದನ್ನು ಓದಿ.
ಪ್ರತಿಯೊಬ್ಬರ ಜೀವನದಲ್ಲೂ ತಾಯಿ ಪಾತ್ರ ದೊಡ್ಡದು. ತನ್ನೆಲ್ಲ ಸುಖವನ್ನು ತ್ಯಾಗ ಮಾಡಿ ತಾಯಿಯಾದವಳು ಮಕ್ಕಳ ಆರೈಕೆ ಮಾಡ್ತಾಳೆ. ಮೇ 14ರಂದು ವಿಶ್ವ ತಾಯಂದಿರ ದಿನವನ್ನು ಆಚರಣೆ ಮಾಡಲಾಗಿದೆ. ಎಲ್ಲರೂ ಅಮ್ಮಂದಿರಿಗೆ ಶುಭ ಕೋರಿದ್ದಾರೆ. ವಿಶೇಷ ಉಡುಗೊರೆ ನೀಡಿದ್ದಾರೆ. ಆದ್ರೆ ತಾಯಂದಿರ ದಿನ ಎಂದೂ ಒಂದೇ ದಿನಕ್ಕೆ ಮೀಸಲಾಗಿಲ್ಲ. ಪ್ರತಿ ದಿನ ಅಮ್ಮಂದಿರ ದಿನವಾಗಬೇಕು. ತಾಯಿಯ ಆರೋಗ್ಯ ನೋಡಿಕೊಳ್ಳೋದು ಮಕ್ಕಳ ದೊಡ್ಡ ಜವಾಬ್ದಾರಿ.
ಮಹಿಳೆಯರ ಆರೋಗ್ಯ (Health) ತುಂಬಾ ಸೂಕ್ಷ್ಮವಾಗಿರುತ್ತದೆ. ಒಂದಲ್ಲ ಎರಡಲ್ಲ, ನೂರಾರು ಕೆಲಸ (Job) ಗಳನ್ನು ತಾಯಿ ಮಾಡ್ತಾಳೆ. ಆಕೆ ಕೆಲಸಕ್ಕೆ ಮಾತ್ರವಲ್ಲ ಆಕೆ ಆರೋಗ್ಯಕ್ಕೂ ಬೆಲೆ ಇಲ್ಲದಂತಾಗಿದೆ. ಮಹಿಳೆಗೆ ವಯಸ್ಸಾಗ್ತಿದ್ದಂತೆ, ಆಕೆ ಕೆಲಸ ಮಾಡುವ ಶಕ್ತಿ ಕಳೆದುಕೊಳ್ತಿದ್ದಂತೆ ಆಕೆಯನ್ನು ನಿರ್ಲಕ್ಷ್ಯ ಮಾಡೋರೇ ಹೆಚ್ಚು. ವಯಸ್ಸಾಗ್ತಿದ್ದಂತೆ ಅವರನ್ನು ಹೆಚ್ಚು ಕಾಳಜಿಯಿಂದ ನೋಡಿಕೊಳ್ಳಬೇಕು. ವೃದ್ಧಾಪ್ಯ (Old Age) ದಲ್ಲಿ ಮಹಿಳೆ ಕೂಡ ತನ್ನ ಆರೋಗ್ಯದ ಬಗ್ಗೆ ಎಚ್ಚರಿಕೆವಹಿಸಬೇಕು. ಯಾವಾಗಲೂ ತಮ್ಮೊಂದಿಗೆ ಕೆಲವು ಔಷಧಿಗಳನ್ನು ಇಟ್ಟುಕೊಳ್ಳಬೇಕು. ಮಕ್ಕಳಾದವರು ತಾಯಿಯ ಆರೋಗ್ಯ ಹಾಗೂ ಆಕೆಗೆ ಅಗತ್ಯವಿರುವ ಮಾತ್ರೆಗಳ ಬಗ್ಗೆ ಎಚ್ಚರಿಕೆವಹಿಸಬೇಕು. ಆಕೆ ಬ್ಯಾಗ್ ನಲ್ಲಿ ಕೆಲ ಔಷಧಿಗಳನ್ನು ತಪ್ಪದೆ ಇಡಬೇಕು.
ಅರಿಶಿನ ರಾತ್ರಿ ಮುಖಕ್ಕೆ ಹಚ್ಚುವುದು ಒಳ್ಳೆಯದೇ?
ನೋವಿನ ಮಾತ್ರೆ : ಮಹಿಳೆಯರಿಗೆ ನೋವಿನ ಸಮಸ್ಯೆ ಹೆಚ್ಚು. ಸ್ನಾಯು, ಅಂಗಾಂಶ ಮತ್ತು ನರಗಳು ದುರ್ಬಲಗೊಂಡಾಗ ನೋವು ಹೆಚ್ಚಾಗಿ ಕಾಡುತ್ತದೆ. ಮೈಗ್ರೇನ್ ನೋವು, ಬೆನ್ನು ನೋವು, ಸೊಂಟ ನೋವು, ಮಂಡಿ ನೋವು ಇತ್ಯಾದಿಗಳು ದೀರ್ಘಕಾಲ ಉಳಿಯುತ್ತವೆ. ಯಾವಾಗ ಬೇಕಾದ್ರೂ ಈ ನೋವು ಮಹಿಳೆಯರನ್ನು ಕಾಡುತ್ತದೆ. ಮನೆಯಲ್ಲಿ ಕೆಲಸ ಹೆಚ್ಚಾದಾಗ, ಪ್ರವಾಸಕ್ಕೆ ಹೋದಾಗ ಇಲ್ಲವೆ ದೂರದ ಊರಿಗೆ ಹೋದಾಗ ಈ ನೋವು ಶುರುವಾದ್ರೆ ಕಷ್ಟವಾಗುತ್ತದೆ. ಹಾಗಾಗಿಯೇ ಅಮ್ಮನ ಕಿಟ್ ನಲ್ಲಿ ನೋವು ನಿವಾರಕ ಔಷಧವನ್ನು ಇಡಬೇಕು.
ಮಲ್ಟಿ ವಿಟಮಿನ್ : ವಿಟಮಿನ್ ಡಿ, ಕಬ್ಬಿಣ, ಫೋಲೇಟ್, ಕ್ಯಾಲ್ಸಿಯಂ ಇತ್ಯಾದಿ ಪೋಷಕಾಂಶಗಳ ಕೊರತೆ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದರಿಂದಾಗಿ ಆಸ್ಟಿಯೊಪೊರೋಸಿಸ್, ರಕ್ತಹೀನತೆ ಮುಂತಾದ ಗಂಭೀರ ಸಮಸ್ಯೆಯನ್ನು ಮಹಿಳೆಯರು ಎದುರಿಸುತ್ತಾರೆ. ವೃದ್ಧಾಪ್ಯದಲ್ಲಿ ಮಲ್ಟಿ ವಿಟಮಿನ್ ಕೊರತೆ ಹೆಚ್ಚು. ಹಾಗಾಗಿ ಮಹಿಳೆಯರು ಮಲ್ಟಿ ವಿಟಮಿನ್ ಮಾತ್ರೆಗಳನ್ನು ಅಮ್ಮನ ಪರ್ಸ್ ನಲ್ಲಿ ಇಡಬೇಕು.
ಪಿರಿಯಡ್ಸ್ ಸಮಯದಲ್ಲಿ ಜ್ವರ ಬರುತ್ತಾ? ಹಾಗಿದ್ರೆ ಏನ್ ಮಾಡೋದು?
ಆಂಟಾಸಿಡ್ : ಆಂಟಾಸಿಡ್ ಗಳು ಆಮ್ಲೀಯತೆ ಮತ್ತು ಗ್ಯಾಸ್ಟ್ರಿಕ್ ನಿಂದ ಪರಿಹಾರ ನೀಡುವ ಔಷಧಿಗಳಾಗಿವೆ. ಪ್ರತಿಯೊಬ್ಬ ಮಹಿಳೆ ಈ ಔಷಧಿಗಳನ್ನು ತನ್ನೊಂದಿಗೆ ಇಟ್ಟುಕೊಳ್ಳಬೇಕು. ವಯಸ್ಸು ಹೆಚ್ಚಾದಂತೆ ಹಾಗೂ ಒತ್ತಡದಿಂದ ಜೀರ್ಣಕ್ರಿಯೆ ಕಡಿಮೆಯಾಗುತ್ತದೆ. ಇದ್ರಿಂದ ಹೊಟ್ಟೆ ಉಬ್ಬರ, ಎದೆಯುರಿ ಕಾಣಿಸಿಕೊಳ್ಳುತ್ತದೆ. ಅದರಿಂದ ನೆಮ್ಮದಿ ಬೇಕೆಂದ್ರೆ ಆಂಟಾಸಿಡ್ ಮಾತ್ರೆಯನ್ನು ಸೇವನೆ ಮಾಡ್ಬೇಕು. ಅಮ್ಮನ ಬ್ಯಾಗ್ ನಲ್ಲಿ ಸದಾ ಇರುವಂತೆ ನೋಡಿಕೊಳ್ಳಿ.
ಥೈರಾಯ್ಡ್ ಔಷಧಿ : ಪುರುಷರಿಗಿಂತ ಮಹಿಳೆಯರಿಗೆ ಥೈರಾಯ್ಡ್ ಕಾಯಿಲೆಗೆ ಹೆಚ್ಚಾಗಿ ಕಾಡುತ್ತದೆ. ವಯಸ್ಸು ಹೆಚ್ಚಾದಂತೆ ಅದರ ಅಪಾಯವು ಹೆಚ್ಚಾಗುತ್ತದೆ. ಈ ಕಾಯಿಲೆಯಲ್ಲಿ ಬಳಲುವವರಿಗೆ ದೈಹಿಕ ನೋವು, ತೂಕ ಹೆಚ್ಚಳ ಅಥವಾ ತೂಕದಲ್ಲಿ ಇಳಿಕೆ ಸಮಸ್ಯೆ ಇರುತ್ತದೆ. ಒಂದ್ವೇಳೆ ನಿಮ್ಮಮ್ಮನಿಗೂ ಥೈರಾಯ್ಡ್ ಸಮಸ್ಯೆಯಿದ್ರೆ ಥೈರಾಯ್ಡ್ ಮಾತ್ರೆಯನ್ನು ಪರ್ಸ್ನಲ್ಲಿಡಿ.
ಬಿಪಿ ಹಾಗೂ ಮಧುಮೇಹದ ಮಾತ್ರೆ : ಹೈ ಬಿಪಿ ಮತ್ತು ಶುಗರ್ ಕಾಯಿಲೆಗಳಿಗೆ ಪ್ರತಿನಿತ್ಯ ನಿಯಮಿತವಾಗಿ ಮಾತ್ರೆ ಸೇವನೆ ಮಾಡಬೇಕಾಗುತ್ತದೆ. ಈ ಔಷಧಿಗಳ ಒಂದು ಡೋಸ್ ತಪ್ಪಿದ್ರೂ ಅನಾರೋಗ್ಯ ಎದುರಿಸಬೇಕಾಗುತ್ತದೆ. ಮಹಿಳೆಗೆ ಅಧಿಕ ಬಿಪಿ ಅಥವಾ ಶುಗರ್ ಕಾಯಿಲೆ ಇದ್ದರೆ ಆಕೆ ಮಾತ್ರೆಗಳನ್ನು ತಪ್ಪಿಸದೆ ತಿನ್ನಬೇಕು. ಅಮ್ಮನ ಪರ್ಸ್ ನಲ್ಲಿ ಈ ಮಾತ್ರೆಗಳು ಇರುವಂತೆ ನೀವು ನೋಡಬೇಕು.