Asianet Suvarna News Asianet Suvarna News

Woman Health: ಎರಡನೇ ಬಾರಿ ಅಮ್ಮನಾಗ್ತಿದ್ರೆ ನಿರ್ಲಕ್ಷ್ಯ ಬೇಡ

ತಾಯಿಗೆ ಎಲ್ಲ ಮಕ್ಕಳು ಒಂದೇ ನಿಜ. ಆದ್ರೆ ಮೊದಲು ಗರ್ಭಧರಿಸಿದ ವೇಳೆ ಇರುವ ಕಾಳಜಿ, ಸಮಯ ಎರಡನೇ ಮಗು ಹೆರುವಾಗ ಇರೋದಿಲ್ಲ. ಇದು ಮಗುವಿನ ಜೊತೆ ತಾಯಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅನೇಕ ಬಾರಿ ತಾಯಿ ಡಿಪ್ರೆಶನ್ ಗೆ ಹೋಗಲು ಇದು ಕಾರಣವಾಗುತ್ತದೆ.
 

Keep These Things In Mind If You Are Getting Pregnant For Second Time
Author
First Published Dec 20, 2022, 2:19 PM IST

ಮೊದಲ ಬಾರಿ ಅಮ್ಮನಾಗುವುದು ಒಂದು ಸಂಭ್ರಮ. ಚೊಚ್ಚಲ ಹೆರಿಗೆಯಲ್ಲಿ ಮಹಿಳೆ ಅತಿ ಹೆಚ್ಚು ಕಾಳಜಿವಹಿಸುತ್ತಾಳೆ. ಗರ್ಭಿಣಿ ಎಂಬ ವಿಷ್ಯ ತಿಳಿದ ನಂತ್ರ ಪ್ರತಿ ಹೆಜ್ಜೆಯನ್ನು ನಿಧಾನವಾಗಿಡಲು ಶುರು ಮಾಡ್ತಾಳೆ. ತನ್ನ ಜೊತೆ ಮಗುವಿನ ಬಗ್ಗೆ ಅತಿಯಾದ ಕಾಳಜಿ ಹೊಂದಿರುತ್ತಾಳೆ. ಆದ್ರೆ ಎರಡನೇ ಬಾರಿ ಗರ್ಭಿಣಿಯಾಗುವ ಮಹಿಳೆಯರು ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಾರೆ. ಒಂದೆಡೆ ಮೊದಲ ಮಗುವಿನ ಜವಾಬ್ದಾರಿ ಮತ್ತೊಂದೆಡೆ ಕುಟುಂಬದ ಜವಾಬ್ದಾರಿ. ಇದ್ರಿಂದ ಬರಲಿರುವ ಮಗು ಮತ್ತು ತಮ್ಮ ಆರೋಗ್ಯದ ಬಗ್ಗೆ ಮೊದಲ ಮಗುವಿನ ಹೆರಿಗೆಯ ಸಮಯದಲ್ಲಿ ತೋರುವಷ್ಟು ಗಮನ ಹರಿಸಲು ಸಾಧ್ಯವಾಗುವುದಿಲ್ಲ. 

ಎರಡನೇ ಬಾರಿಗೆ ಗರ್ಭಿಣಿಯಾಗುವ ಮಹಿಳೆಯರು ತಮ್ಮ ಆರೋಗ್ಯ (Health) ವನ್ನು ನಿರ್ಲಕ್ಷಿಸುತ್ತಾರೆ. ಒಂದೆಡೆ ಮೊದಲ ಮಗುವಿನ ಜವಾಬ್ದಾರಿ ಮತ್ತೊಂದೆಡೆ ಕುಟುಂಬದ ಜವಾಬ್ದಾರಿ, ಇಂತಹ ಪರಿಸ್ಥಿತಿಯಲ್ಲಿ ಮಹಿಳೆಯರು ತಮ್ಮ ಬರಲಿರುವ ಮಗು ಮತ್ತು ಅವರ ಆರೋಗ್ಯದ ಬಗ್ಗೆ ಮೊದಲ ಮಗುವಿನ ಹೆರಿಗೆಯ ಸಮಯದಲ್ಲಿ ತೋರುವಷ್ಟು ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಮಹಿಳೆಯರು  ಎರಡನೇ ಬಾರಿ ಗರ್ಭ ಧರಿಸಿದಾಗ ಅಜಾಗರೂಕತೆ ತೋರಿ ದೈಹಿಕವಾಗಿ ಮತ್ತು ಮಾನಸಿಕವಾಗಿ ದಣಿಯುತ್ತಾರೆ. ಅಷ್ಟೇ ಅಲ್ಲ, ಎರಡನೇ ಗರ್ಭಾವಸ್ಥೆಯಲ್ಲಿ ಕೆಲವು ಮಹಿಳೆಯರು ಹೆಚ್ಚುವರಿ ಸಮಸ್ಯೆಗಳನ್ನು ಎದುರಿಸುತ್ತಾರೆ. ನೀವು ಎರಡನೇ ಬಾರಿಗೆ ತಾಯಿಯಾಗಲು ಹೊರಟಿದ್ದರೆ, ನೀವು ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಎರಡನೇ ಬಾರಿಗೆ ಗರ್ಭಾವಸ್ಥೆಯಲ್ಲಿ ನೀವು ಯಾವ ವಿಷಯಗಳನ್ನು ಕಾಳಜಿ ವಹಿಸಬೇಕು ಎಂಬುದನ್ನು ತಿಳಿಯಿರಿ.

ತೂಕ ಕಡಿಮೆ ಮಾಡಿ ಕೊಳ್ಳಬೇಕಾ? ಮನಸಾರೆ ನಗುವುದು ಕಲೀರಿ ಸಾಕು!

ತೂಕ (Weight) ನಿಯಂತ್ರಣ : ಸ್ತ್ರೀರೋಗ ತಜ್ಞರ ಪ್ರಕಾರ, ಎರಡನೇ ಬಾರಿ ತಾಯಿಯಾಗಲು ಹೊರಟಿರುವ ಮಹಿಳೆ ಮೊದಲು ತೂಕವನ್ನು ನಿಯಂತ್ರಿಸಿಕೊಳ್ಳಬೇಕು. ಗರ್ಭಾವಸ್ಥೆಯಲ್ಲಿ  ತೂಕ ಹೆಚ್ಚಾಗುವುದು  ತೊಂದರೆಯುಂಟು ಮಾಡುತ್ತದೆ. ಗರ್ಭಿಣಿಯ ತೂಕ ಹೆಚ್ಚಾಗುವುದರಿಂದ ರಕ್ತದೊತ್ತಡ (Blood Pressure) ಮತ್ತು ಸಕ್ಕರೆ ಖಾಯಿಲೆ (Diabetes ) ಸಮಸ್ಯೆ ಕಾಡುವ ಸಾಧ್ಯತೆಯಿರುತ್ತದೆ. ತೂಕ ಏರಿಕೆಯಿಂದ ಎರಡನೇ ಬಾರಿ ಗರ್ಭ ಧರಿಸುವುದೇ ಸಮಸ್ಯೆಯಾಗುತ್ತದೆ. ಗರ್ಭ ಧರಿಸಿದ ಮೇಲೆ ತೂಕ ಹೆಚ್ಚಾಗ್ತಾ ಹೋದ್ರೆ ಹೆರಿಗೆ ಕಷ್ಟವಾಗುತ್ತದೆ. ಜೊತೆಗೆ ಮಗುವಿನ ಆರೋಗ್ಯದಲ್ಲಿ ಸಮಸ್ಯೆ ಕಾಡಬಹುದು. ಹಾಗಾಗಿ ಗರ್ಭಿಣಿಯರು ನಿಯಮಿತವಾಗಿ ವಾಕಿಂಗ್ ಮಾಡುವ ಜೊತೆಗೆ ತೂಕ ಇಳಿಸಿಕೊಳ್ಳಲು ವೈದ್ಯ (Doctor) ರ ಸಲಹೆ ಪಾಲಿಸಬೇಕಾಗುತ್ತದೆ.   

ಸಪ್ಲಿಮೆಂಟರಿ (Supplementary) ತೆಗೆದುಕೊಳ್ಳಿ : ಗರ್ಭಿಣಿಗೆ ಹೆಚ್ಚುವರಿ ಪೋಷಣೆಯ ಅಗತ್ಯವಿರುತ್ತದೆ. ನಿಮ್ಮ ಮತ್ತು ನಿಮ್ಮ ಮಗುವಿನ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸಲು ನೀವು ಕೆಲವು ಅಗತ್ಯ ಪೂರಕಗಳನ್ನು ತೆಗೆದುಕೊಳ್ಳಬಹುದು. ಆಹಾರದ ಜೊತೆ ನೀವು ಪೂರಕ ತೆಗೆದುಕೊಳ್ಳಲು ಮುಂದಾಗಿದ್ದರೆ ಮೊದಲು ವೈದ್ಯರ ಸಲಹೆ ಪಡೆದು ನಂತ್ರ ಪ್ರಾರಂಭಿಸಿ.  

ಆರೋಗ್ಯ ತಪಾಸಣೆ (Health Checkup) ಬಹಳ ಮುಖ್ಯ : ಗರ್ಭಿಣಿಯರು ಆಗಾಗ ವೈದ್ಯರನ್ನು ಭೇಟಿಯಾಗಿ ತಪಾಸಣೆಗೆ ಒಳಗಾಗಬೇಕು. ಎರಡನೇ ಮಗುವಿನ ಸಂದರ್ಭದಲ್ಲಿ ಕೆಲ ಮಹಿಳೆಯರ ವಯಸ್ಸು 35ರ ಗಡಿ ದಾಟಿರುತ್ತದೆ. ವಯಸ್ಸಾ ಕಾರಣದಿಂದ ಕೆಲವು ಆರೋಗ್ಯ ಸಮಸ್ಯೆ  ಉಂಟಾಗುತ್ತದೆ. ಆರೋಗ್ಯ ತಪಾಸಣೆಗೆ ಒಳಗಾಗ್ತಿದ್ದರೆ ನಿಮ್ಮ ಆರೋಗ್ಯ ಹಾಗೂ ಮಗುವಿನ ಬೆಳವಣಿಗೆ ಎರಡಕ್ಕೂ ಒಳ್ಳೆಯದು   

Nail Care: ಉಗರು ಬೇಗ ಬೇಗ ಬೆಳೀಬೇಕು ಅಂದ್ರೆ ಹೀಗ್ ಮಾಡಿ!

ಪ್ರತಿ ನಿತ್ಯ ಇರಲಿ ಆರೋಗ್ಯಕ ಆಹಾರ (Healthy Food) : ಗರ್ಭಿಣಿಯರು ಉತ್ತಮ ಆಹಾರ ಸೇವನೆ ಮಾಡಬೇಕು. ಎರಡನೇ ಬಾರಿ ತಾಯಿಯಾಗಲಿರುವ ಮಹಿಳೆಯರು ಆರೋಗ್ಯಕರ ಆಹಾರ ನಿರ್ಲಕ್ಷ್ಯಿಸುತ್ತಾರೆ. ಮೊದಲ ಮಗುವಿನ ಕೆಲಸದಲ್ಲಿ ತಮ್ಮ ಆರೋಗ್ಯ ಮರೆಯುತ್ತಾರೆ. ಈ ತಪ್ಪನ್ನು ಎಂದಿಗೂ ಮಾಡಬಾರದು. 30 ವರ್ಷದ ನಂತ್ರ ಮಹಿಳೆಯರ ದೇಹದಲ್ಲಿ ಪೋಷಕಾಂಶದ ಕೊರತೆ ಕಾಣಿಸುತ್ತದೆ. ಇದು ಹುಟ್ಟುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ.   
 

Follow Us:
Download App:
  • android
  • ios