Asianet Suvarna News Asianet Suvarna News

Nail Care: ಉಗರು ಬೇಗ ಬೇಗ ಬೆಳೀಬೇಕು ಅಂದ್ರೆ ಹೀಗ್ ಮಾಡಿ!

ಮಹಿಳೆಯರ ಅಂದ ಕೇವಲ ಸೌಂದರ್ಯದಲ್ಲಷ್ಟೇ ಅಲ್ಲದೆ ಕೈಬೆರಳಿನಲ್ಲೂ(Finger) ಇರುತ್ತದೆ. ಎಷ್ಟೇ ತಿಪ್ಪರಲಾಗ ಹಾಕಿದರೂ ಉಗುರು(Nails) ಬೆಳೆಸೋದಕ್ಕೆ ಆಗುತ್ತಿಲ್ಲ. ಬಹಳ ತೆಳ್ಳಗಿದ್ದು(Thin), ಪದೇ ಪದೇ ಮುರಿದು ಹೋಗುತ್ತದೆ. ದಿನಗಳಾದರೂ ಉಗುರು ಬೆಳೆಯೋದಿಲ್ಲ. ಈ ರೀತಿ ಹಲವು ಸಮಸ್ಯೆಗಳನ್ನು ನೀವು ಎದುರಿಸುತ್ತಿರಬಹುದು. ಉಗುರು ಬೇಗ ಬೆಳಿಯಬೇಕು ಎಂದರೆ ಹೀಗೆ ಮಾಡಿನೋಡಿ.

Tips to Grow  Nail Faster
Author
First Published Dec 19, 2022, 11:58 AM IST

 ದೃಢವಾದ(Strong), ಉದ್ದವಾದ(Long) ಮತ್ತು ಸುಂದರವಾಗಿ(Beautiful) ಕಾಣುವ ಉಗುರುಗಳು ಪ್ರತಿಯೊಬ್ಬ ಮಹಿಳೆಯ ಕನಸು. ನೇಲ್ ಆರ್ಟ್(Nail Art), ನೇಲ್ ಪೇಯಿಂಟ್‌ಗೆ(Nail Paint) ಅತ್ಯಾಕರ್ಷಕ ಬಣ್ಣಗಳ ಅಂದ ಮಾಡಿಕೊಂಡ ಉಗುರುಗಳಲ್ಲಿ ಉತ್ತಮವಾಗಿ ಕಾಣುತ್ತವೆ. ವೇಗವಾಗಿ(Fast), ಆರೋಗ್ಯಕರ(Healthy) ಮತ್ತು ಸುಂದರವಾಗಿ ಕಾಣುವ ಉಗುರುಗಳು ಬೆಳೆಯಬೇಕು. ಹೆಚ್ಚಿನ ಮಹಿಳೆಯರಲ್ಲಿ ಉಗುರುಗಳು ಸುಲಭವಾಗಿ, ದುರ್ಬಲ(Week) ಮತ್ತು ಮಂದವಾಗಿರುವ ಸಮಸ್ಯೆಗಳನ್ನು ಹೊಂದಿರುತ್ತಾರೆ. ಆದರೆ ಸರಿಯಾದ ಆಹಾರ ಮತ್ತು ಕೆಲ ಸಲಹೆಗಳಿಂದ ಉಗುರುಗಳು ವೇಗವಾಗಿ ಮತ್ತು ಬಲವಾಗಿ ಬೆಳೆಯುವಂತೆ ಮಾಡಬಹುದು.

ಉಗುರುಗಳು ಅನಾರೋಗ್ಯವಾಗಿರಲು ಕಾರಣ ಏನು? 
ಉಗುರು ಸಮಸ್ಯೆ ಎದುರಾಗಿದೆ ಎಂದರೆ ಅದಕ್ಕೆ ಕಾರಣ ಹಲವು. ಇದು ಎಲ್ಲಾ ವಯಸ್ಸಿನವರಿಗೂ ಸಾಮಾನ್ಯವಾಗಿದೆ. ದುರ್ಬಲ ಮತ್ತು ಅನಾರೋಗ್ಯಕರ ಉಗುರುಗಳಿಗೆ ತೀವ್ರವಾದ ಅಪೌಷ್ಟಿಕತೆ ಒಂದು ಕಾರಣವಾದರೆ, ಸೋಂಕು(Infection), ಗಾಯ(Wound), ಅಥವಾ ಸೋರಿಯಾಸಿಸ್(Psoriasis) ಮತ್ತು ಎಸ್ಜಿಮಾದಂತಹ ಚರ್ಮ ರೋಗಗಳಿಂದಲೂ ಉಗುರಿನಲ್ಲಿ ಸಮಸ್ಯೆ ಉಂಟಾಗಬಹುದು. ಸೋಂಕು, ಕಳಪೆ ನರ ಪೂರೈಕೆ(Poor Nerve Supply), ಕಳಪೆ ರಕ್ತಪರಿಚಲನೆ(Poor Circulation), ಗಾಯ ಮತ್ತು ಇತರೆ ಸಮಸ್ಯೆಗಳಿಂದಲೂ ಉಗುರು ಅನಾರೋಗ್ಯಕರವಾಗಿರಬಹುದು.

ಉಗುರುಗಳನ್ನು ಕಚ್ಚುವುದು(Biting Nails) ಉಗುರಿನ ಬೆಳವಣಿಗೆ, ಹೊಟ್ಟೆ(Stomach) ಮತ್ತು ದೇಹಕ್ಕೆ ಒಳ್ಳೆಯದಲ್ಲ. ಇದು ಬ್ಯಾಕ್ಟೀರಿಯಾದ(Bacteria) ಸೋಂಕಿಗೆ ಕಾರಣವಾಗಬಹುದು. ಉಗುರು ಬಣ್ಣ ಹಚ್ಚುವ ಮೊದಲು ಬೇಸ್ ಕೋಟ್(Base Coat) ಅನ್ನು ಹಚ್ಚದಿರುವುದು ಉಗುರುಗಳನ್ನು ಹಾನಿ ಮಾಡುತ್ತದೆ. ಅಕ್ರಿಲಿಕ್(Acrylic) ಉಗುರು ಬಣ್ಣಗಳು ಮತ್ತು ಜೆಲ್(Gel) ಉಗುರುಗಳ ನೈಸರ್ಗಿಕ ಬೆಳವಣಿಗೆಯನ್ನು(Natural Growth) ತಡೆಯುತ್ತದೆ. ಆದ್ದರಿಂದ, ನೈಸರ್ಗಿಕವಾಗಿ ಉದ್ದವಾದ ಮತ್ತು ಆರೋಗ್ಯಕರ ಉಗುರುಗಳನ್ನು ಪಡೆಯಬೇಕೆಂದರೆ ಈ ಅಭ್ಯಾಸ ಬಿಟ್ಟುಬಿಡಿ. 

ಉಗುರು ಕಚ್ಚೋ ಅಭ್ಯಾಸ ಹಲ್ಲನ್ನೂ ಹಾಳು ಮಾಡುತ್ತೆ

ಆರೋಗ್ಯಕರ ಉಗುರು ಬೆಳೆಯಲು ಹೀಗೆ ಮಾಡಿ.

1. ಸುಳಿಗಳು ತೇವದಿಂದಿರಲಿ(Tip Hydrate)
ತ್ವಚೆ(Face) ಅಥವಾ ಕೂದಲಿಗೆ(Hair) ಕಾಳಜಿವಹಿಸುವಂತೆ, ಉಗುರುಗಳು ತೇವದಿಂದಿರಬೇಕು. ಅದಕ್ಕೆ ನಿಯಮಿತವಾಗಿ ಹ್ಯಾಂಡ್ ಕ್ರೀಮ್(Hand Cream) ಅನ್ನು ಹಚ್ಚುವ ಮೂಲಕ ಅಥವಾ ಹೊರಪೊರೆ ಆರೈಕೆ ಮಾಡುವ ಮೂಲಕ ಉಗುರುಗಳನ್ನು ತೇವದಿಂದಿರಿಸಬಹುದು. ಇದು ಉಗುರಿನ ಬೆಳವಣಿಗೆಗೂ ಸಹಾಯ ಮಾಡುತ್ತದೆ.

2. ಪೂರಕ ಆಹಾರ(Supplement Food)
ದೇಹದ ಆರೋಗ್ಯ ನಮ್ಮ ಉಗುರಿನಲ್ಲಿದೆ. ಉಗುರು ಎಲ್ಲವನ್ನೂ ತಿಳಿಸುತ್ತದೆ ಕೂಡ. ಇದಕ್ಕೆ ಕ್ಯಾನರಿ(Canary) ಪರೀಕ್ಷೆ ಎಂದು ಸೂಚಿಸುತ್ತಾರೆ. ಉಗುರಿನ ನಿಧಾನವಾದ ಬೆಳವಣಿಗೆ ಮತ್ತು ಒಡೆಯುವಿಕೆಯು ದೇಹದಲ್ಲಿ ಜೀವಸತ್ವಗಳು ಮತ್ತು ಖನಿಜಗಳ(Minerals) ಆಹಾರದ ಕೊರತೆಯನ್ನು ತಿಳಿಸುತ್ತದೆ. ಉಗುರುಗಳನ್ನು ಕೆರಾಟಿನ್(Keratin) ನಿರ್ಮಿಸುವ ಅಮೈನೋ ಆಮ್ಲಗಳಿಂದ(Amino Acid) ತಯಾರಿಸಲಾಗುತ್ತದೆ. ಕಾಲಜನ್(Collegen) ಮತ್ತು ಬಯೋಟಿನ್‌ನಂತಹ(Biotin) ಪೂರಕಗಳು ಉಗುರುಗಳು ಒಂದು ವಾರದಲ್ಲಿ ವೇಗವಾಗಿ, ಬಲವಾಗಿ ಮತ್ತು ಆರೋಗ್ಯಕರವಾಗಿ ಬೆಳೆಯುವಂತೆ ಮಾಡುತ್ತದೆ. ಬಯೋಟಿನ್ ಮತ್ತು ಕಾಲಜನ್ ಪೂರಕಗಳು ಉಗುರುಗಳ ದೃಢತೆ ಮತ್ತು ದಪ್ಪವನ್ನು(Thick) ಹೆಚ್ಚಿಸುತ್ತದೆ. ಒಡೆಯುವುದನ್ನು ಕಡಿಮೆ ಮಾಡುವುದರ ಜೊತೆಗೆ ಉದ್ದವಾಗಿ ತ್ವರಿತವಾಗಿ ಬೆಳೆಯಲು ಸಹಾಯ ಮಾಡುತ್ತದೆ. 

3. ನಕಲಿ ಉಗುರು ತಪ್ಪಿಸಿ(Artificial Nails)
ಇತ್ತೀಚೆಗೆ ನಕಲಿ ಉಗುರುಗಳ ಟ್ರೆಂಡ್ ಶುರುವಾಗಿದೆ. ಬೇಕಾದಾಗ ಅಂಟಿಸಿಕೊಳ್ಳುವುದು ಬೇಡವಾದಾಗ ತೆಗೆದುಹಾಕುವುದು. ಇದರಲ್ಲಿ ಬಳಸುವ ಅಕ್ರಿಲಿಕ್(Acrylic), ಡಿಪ್ಸ್(Dips) ಮತ್ತು ಜೆಲ್‌ಗಳು(Gel) ಉಗುರುಗಳನ್ನು ಆಕರ್ಷಕವಾಗಿ ಮತ್ತು ಸುಂದರವಾಗಿ ಕಾಣುವಂತೆ ಮಾಡುತ್ತದೆ. ಆದರೆ ಇದು ನೈಸರ್ಗಿಕ ಉಗುರುಗಳ ಬೆಳವಣಿಗೆಯನ್ನು ಮಿತಿಗೊಳಿಸುತ್ತದೆ. ಅಲ್ಲದೆ, ವಿವಿಧ ಪ್ರಕ್ರಿಯೆಗಳಿಂದ ರಾಸಾಯನಿಕಗಳು(Chemicals) ಉಗುರಿನ ಒಳಚರ್ಮಕ್ಕೆ ಹಾನಿ ಮಾಡುತ್ತದೆ. ಜೊತೆಗೆ ಸರಿಯಾಗಿ ಬಳಸದಿದ್ದರೆ, ಬ್ಯಾಕ್ಟೀರಿಯಾದ ಸೋಂಕನ್ನು ಉಂಟುಮಾಡುತ್ತದೆ.

4. ಕಚ್ಚುವುದು ನಿಲ್ಲಿಸಿ (Biting)
ಯಾವುದೇ ವಿಷಯಕ್ಕೆ ಆತಂಕವಾದಾಗ(Anxiety), ಗಾಭರಿಯಾದಾಗ(Fear) ಅನೇಕರು ಉಗುರನ್ನು ಕಚ್ಚುವುದು ಅಥವಾ ಉಗುರುಗಳ ತಿಕ್ಕಾಟ ನಡೆಸಿ ಕೀಳುವುದು(Picking) ಮಾಡುತ್ತಾರೆ. ಈ ಅಭ್ಯಾಸವನ್ನು ತಪ್ಪಿಸಬೇಕು. ಅದಕ್ಕೆ ಉಗುರುಗಳನ್ನು ಬ್ಯಾಂಡೇಜ್ ಅಥವಾ ಮುಚ್ಚಿಡುವುದು ಮಾಡಬೇಕು. ಏಕೆಂದರೆ ಉಗುರು ಕಚ್ಚುವುದರಿಂದ ದೇಹಕ್ಕಷ್ಟೇ ಅಲ್ಲದೆ ಉಗುರಿನ ಬೆಳವಣಿಗೆಗೂ ಒಳ್ಳೆಯದಲ್ಲ. 

5. ನೇಲ್ ಪಾಲಿಶ್ ಆಯ್ಕೆ(Nail Polish)
ಉಗುರು ಬೆಳವಣಿಗೆಗೆ ನೇಲ್ ಪಾಲಿಶ್ ಆಯ್ಕೆಯೂ ಮುಖ್ಯವಾಗಿರುತ್ತದೆ. ಆಯ್ಕೆ ಮಾಡುವ ಟಾಪ್ ಕೋಟ್‌ಗಳು, ಉಗುರು ಬಣ್ಣಗಳು(Nail Color) ಮತ್ತು ಬೇಸ್ ಕೋಟ್‌ಗಳು(Base Coat) ಪೋಷಣೆ ಮತ್ತು ಕಂಡೀಷನಿAಗ್(Conditioning) ಅಂಶಗಳನ್ನು ಹೊಂದಿರಬೇಕು. ಇದು ಟೊಲ್ಯೂನ್(Toluene), ಕರ್ಪೂರ ಮತ್ತು ಫಾರ್ಮಾಲ್ ಡಿಹೈಡ್‌ನಂತಹ ಒಣಗಿಸುವ ಸೇರ್ಪಡೆಗಳನ್ನು ಹೊಂದಿರಬಾರದು. ಬಣ್ಣದ ಕೋಟ್ ನಿರ್ಜಲೀಕರಣವಾಗಿದ್ದರೂ(Dehydrate) ಸಹ ಕ್ಲೀನರ್ ಮತ್ತು ಉತ್ತಮ ಬೇಸ್ ಕೋಟ್ ಅನ್ನು ಬಳಸುವುದನ್ನು ಖಚಿತಪಡಿಸಿಕೊಳ್ಳಿ.

ಉದ್ದವಾದ ಉಗುರು ಬಿಟ್ಟಿದ್ದೀರಾ? ನಿಮ್ ಆರೋಗ್ಯ ಹುಷಾರ್ ಕಣ್ರೀ…

6. ರಿಮೂವರ್ (Remover)
ಅಸಿಟೋನ್ ರಿಮೂವರ್‌ಗಳು(Acetone Remover) ಉಗುರುಗಳ ಮೇಲೆ ತುಂಬಾ ಕಠಿಣವಾಗಿರುತ್ತವೆ. ಸೋಯಾ ಆಧಾರಿತ ರಿಮೂವರ್‌ನಂತಹ ಆರ್ಧ್ರಕ ಪದಾರ್ಥಗಳೊಂದಿಗೆ ನೈಸರ್ಗಿಕ ರಿಮೂವರ್ ಬಳಸುವುದು ಒಳ್ಳೆಯದು. ಇದು ಉಗುರುಗಳನ್ನು ತೇವಗೊಳಿಸುವುದಲ್ಲದೆ ವಿಟಮಿನ್‌ಗಳೊಂದಿಗೆ(Vitamin) ಪಂಪ್ ಮಾಡುವುದರಿಂದ ಉಗುರುಗಳನ್ನು ಕರಗಿಸುತ್ತದೆ ಮತ್ತು ಬಲಪಡಿಸುತ್ತದೆ.

7. ಕೆಲಸ(Work)
ಕೈ ಬೆರಳುಗಳು ನಿರಂತರವಾಗಿ ಕಚೇರಿ, ಮನೆ ಅಥವಾ ಉದ್ಯಾನದಲ್ಲಿ ಕೆಲಸಗಳಲ್ಲಿ ತೊಡಗಿಕೊಂಡಿರುತ್ತವೆ. ಇವು ಕೈಗಳ ಜೊತೆಗೆ ಉಗುರುಗಳ ಸವೆತ ಮತ್ತು ನಾನಾ ರಾಸಾಯನಿಕಗಳಿಗೆ(Chemicals) ಒಡ್ಡಿಕೊಳ್ಳುತ್ತವೆ. ಹಾಗಾಗಿ ಬಟ್ಟೆ ಅಥವಾ ಪಾತ್ರೆ ತೊಳೆಯುವುದು, ತೋಟಗಾರಿಕೆ ಅಥವಾ ಸರಳವಾದ ಮನೆ ಕೆಲಸಗಳನ್ನು ಮಾಡುವಾಗ ಕೈಗಳಿಗೆ ಗ್ಲೌಸ್(Glows) ಅಥವಾ ಕೈ ಚೀಲಗಳನ್ನು ಧರಿಸುವುದು ಉತ್ತಮ. ಹೀಗೆ ಮಾಡುವುದರಿಂದ ಉಗುರಿನ ಬೆಳವಣಿಗೆ ಜೊತೆಗೆ ನೋಡಲೂ ಚೆನ್ನಾಗಿ ಕಾಣುತ್ತದೆ.

8. ಉಗುರಿನ ನೈರ್ಮಲ್ಯ(Nail Hygiene)
ಉಗುರಿನ ಜೊತೆಗೆ ಅವುಗಳ ನೈರ್ಮಲ್ಯದ ಕಡೆ ಗಮನಿಸುವುದು ಅಷ್ಟೇ ಮುಖ್ಯ. ಸುಕ್ಕುಗಟ್ಟಿದ ಹೊರಪೊರೆಗಳನ್ನು ತಪ್ಪಿಸುವುದು, ಉಗುರಿನ ಸಂಧುಗಳಲ್ಲಿನ(Corner) ಕೊಳೆಯನ್ನು ಸ್ವಚ್ಛಗೊಳಿಸುವುದು ಮಾಡಬೇಕು. ಅವುಗಳನ್ನು ನಿಯಮಿತವಾಗಿ ಟ್ರಿಮ್(Trim) ಮಾಡುವುದು ಮತ್ತು ಸುತ್ತಲಿನ ಚರ್ಮವನ್ನು ತೇವಾಂಶದಿAದ ಇಡಬೇಕು. 

9. ಮನೆಮದ್ದು(Home Remedies)
ಉಗುರುಗಳು ವೇಗವಾಗಿ ಬೆಳೆಯಲು ಮನೆಯಲ್ಲೇ ಔಷಧ ಮಾಡಬಹುದು. ನಿಂಬೆ(Lemon), ತೆಂಗಿನ ಎಣ್ಣೆ(Coconut Oil), ಆಲಿವ್ ಎಣ್ಣೆ(Olive Oil) ಅಥವಾ ಕಿತ್ತಳೆಯನ್ನು(Orange) ಬಳಸುವುದರಿಂದ ಉಗುರು ಬೆಳವಣಿಗೆ ಮತ್ತು ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಆರೋಗ್ಯಕರ, ಬಲವಾದ(Strong) ಮತ್ತು ಉದ್ದವಾದ(Long) ಉಗುರುಗಳಿಗಾಗಿ ಮೊಟ್ಟೆ(Egg), ಬೀನ್ಸ್(Beans), ಓಟ್ಸ್(Oats), ಸೂರ್ಯಕಾಂತಿ ಬೀಜ(Sunflower Seeds), ಸಾಲ್ಮನ್, ಬೆರಿಹಣ್ಣುಗಳು(Berry Fruits) ಪೌಷ್ಟಿಕಾಂಶದ ಆಹಾರ ಪದಾರ್ಥಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬೇಕು.

Follow Us:
Download App:
  • android
  • ios