97ನೇ ವಯಸ್ಸಿನಲ್ಲಿ ಅಕ್ಷರ ಕಲಿತ, 'ನಾರಿಶಕ್ತಿ' ಪ್ರಶಸ್ತಿ ಪುರಸ್ಕೃತೆ ಕಾರ್ತ್ಯಾಯಿನಿ ಅಮ್ಮ ನಿಧನ
ಅತೀ ಹಿರಿಯ ಸಾಕ್ಷರತಾ ವಿದ್ಯಾರ್ಥಿನಿ ಕೇರಳದ ಕಾರ್ತ್ಯಾಯಿನಿ ಅಮ್ಮ ನಿಧನರಾಗಿದ್ದಾರೆ. ಅವರಿಗೆ 101 ವಯಸ್ಸಾಗಿತ್ತು. ಕೇರಳ ಸರ್ಕಾರದ 'ಅಕ್ಷರಲಕ್ಷಂ' ಪರೀಕ್ಷೆಯಲ್ಲಿ ಕಾರ್ತ್ಯಾಯಿನಿ ಅಮ್ಮ ಟಾಪರ್ ಆಗಿದ್ದು, 98 ಪರ್ಸೆಂಟ್ ಮಾರ್ಕ್ಸ್ ಪಡೆದಿದ್ದರು. ಕಲಿಕೆಗೆ ವಯಸ್ಸು ಅಡ್ಡಿಯಾಗಲ್ಲ ಎಂಬುದನ್ನು ಸಾಬೀತುಪಡಿಸಿ ಎಲ್ಲರಿಗೂ ಮಾದರಿಯಾಗಿದ್ದರು.

ಆಲಪ್ಪುಳ: ದೇಶದ ಅತೀ ಹಿರಿಯ ಸಾಕ್ಷರತಾ ವಿದ್ಯಾರ್ಥಿನಿ ಕೇರಳದ ಕಾರ್ತ್ಯಾಯಿನಿ ಅಮ್ಮ ನಿಧನರಾಗಿದ್ದಾರೆ. ಅವರಿಗೆ 101 ವಯಸ್ಸಾಗಿತ್ತು. ಆಲಪ್ಪುಳ ಜಿಲ್ಲೆಯ ಹರಿಪಾಡ್ ಮುತ್ತುಲ್ಲದ ಸ್ವಗೃಹದಲ್ಲಿ ನಿಧನರಾದರು. ಕೇರಳ ಸರ್ಕಾರದ 'ಅಕ್ಷರಲಕ್ಷಂ' ಪರೀಕ್ಷೆಯಲ್ಲಿ ಕಾರ್ತ್ಯಾಯಿನಿ ಅಮ್ಮ ಟಾಪರ್ ಆಗಿದ್ದರು. 40,000 ಮಂದಿ ಈ ಪರೀಕ್ಷೆ ಬರೆದಿದ್ದು, ಇದರಲ್ಲಿ ಕಾರ್ತ್ಯಾಯಿನಿ ಅವರು 98 ಪರ್ಸೆಂಟ್ ಮಾರ್ಕ್ಸ್ ಪಡೆದಿದ್ದರು. 2018ರಲ್ಲಿ, ನಾರಿಶಕ್ತಿ ಪ್ರಶಸ್ತಿಯನ್ನು ಗೆದ್ದರು. ಕಳೆದ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ನಾರಿಶಕ್ತಿ ಪ್ರಶಸ್ತಿ ವಿಜೇತೆ ಕಾರ್ತ್ಯಾಯಿನಿ ಅಮ್ಮನವರ ಸ್ತಬ್ಧಚಿತ್ರ ಸಹ ಸೇರಿತ್ತು.
ಆರ್ಥಿಕ ಸಮಸ್ಯೆಯಿಂದ ವಿದ್ಯಾಭ್ಯಾಸ ಮೊಟಕುಗೊಳಿಸಿದ ಕಾರ್ತ್ಯಾಯಿನಿ
ಮನೆಯಲ್ಲಿರೋ ಆರ್ಥಿಕ ಸಮಸ್ಯೆಯಿಂದಾಗಿ ಕಾರ್ತ್ಯಾಯಿನಿ, ಚಿಕ್ಕಂದಿನಲ್ಲೇ ವಿದ್ಯಾಭ್ಯಾಸವನ್ನು ಅರ್ಧದಲ್ಲಿ ಮೊಟಕುಗೊಳಿಸಿದ್ದರು. ಗಂಡನ ಸಾವಿನ ನಂತರ ಕಸಗುಡಿಸುವ ಕೆಲಸ ಮಾಡಿ ತಮ್ಮ ಆರು ಮಕ್ಕಳ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿದ್ದರು. ಬಡತನವಿದ್ದರೂ ಕಷ್ಟಪಟ್ಟು ಎಲ್ಲರನ್ನೂ ಬೆಳೆಸಿದ್ದರು. ತಮ್ಮ 96ನೇ ವಯಸ್ಸಿನಲ್ಲಿ ಪರೀಕ್ಷೆ ಬರೆಯುವ ಮೂಲಕ ಎಲ್ಲರಿಗೂ ಮಾದರಿ ಅನಿಸಿಕೊಂಡರು. 2020ರಲ್ಲಿ ಮಹಿಳಾ ದಿನಾಚರಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಾರಿಶಕ್ತಿ ಪ್ರಶಸ್ತಿಯನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಂದ ಸ್ವೀಕರಿಸಿದರು.
ದಿನಗೂಲಿ ಮಾಡುತ್ತಿದ್ದಾಕೆ ಈಗ ಡಾಕ್ಟರ್ ಭಾರತಿ
ಉದ್ಯೋಗ ಪಡೆಯುವ ಗುರಿ ಇಟ್ಟುಕೊಂಡಿದ್ದರು
ಎಲ್ಲ ಗೌರವ, ಪುರಸ್ಕಾರಗಳು ಅರಸಿ ಬಂದರೂ ಕಾರ್ತಿಯಾನಿ ಅಮ್ಮನ ಗುರಿ ಇನ್ನೂ ದೊಡ್ಡದಿತ್ತು. ಕಾರ್ತ್ಯಾಯಿನಿ ಅಮ್ಮನವರ ಗುರಿ ಉದ್ಯೋಗವನ್ನು ಪಡೆಯುವುದಾಗಿತ್ತು,. 10ನೇ ತರಗತಿಯಲ್ಲಿ ಪಾಸಾದ ಕಾರ್ತ್ಯಾಯಿನಿ ಅಮ್ಮ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿ ಮಾಡಿ ಕಂಪ್ಯೂಟರ್ ಕಲಿಯುವ ಆಸೆಯನ್ನೂ ವ್ಯಕ್ತಪಡಿಸಿದ್ದರು. ಶೀಘ್ರದಲ್ಲೇ ಲ್ಯಾಪ್‌ಟಾಪ್ ಮನೆ ತಲುಪಲಿದೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದರು.
ಬಳಿಕ ಅಂದಿನ ಶಿಕ್ಷಣ ಸಚಿವ ಪ್ರೊ.ಸಿ.ರವೀಂದ್ರನಾಥ್ ಲ್ಯಾಪ್ ಟಾಪ್ ಹಿಡಿದು ಕಾರ್ತ್ಯಾಯಿನಿಯಮ್ಮ ಮನೆಗೆ ಬಂದಿದ್ದರು. ಹೀಗೆ . ಹೀಗೆ ಕಾರ್ತ್ಯಾಯಿನಿಯಮ್ಮ ವಿದ್ಯಾಭ್ಯಾಸಕ್ಕೆ ವಯಸ್ಸು ಅಡ್ಡಿಯಲ್ಲ ಎಂಬುದನ್ನು ಸಾಬೀತುಪಡಿಸಿದ್ದರು. 53 ದೇಶಗಳನ್ನು ಒಳಗೊಂಡಿರುವ ಕಾಮನ್‌ವೆಲ್ತ್ ಕಲಿಕೆಯ ಸದ್ಭಾವನಾ ರಾಯಭಾರಿಯಾಗಿಯೂ ಕಾರ್ತ್ಯಾಯಿನಿಯಮ್ಮ ಆಯ್ಕೆಯಾದರು.
ಸಾಧನೆಗೆ ವಯಸ್ಸಿನ ಹಂಗಿಲ್ಲ..87ನೇ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ವೃದ್ಧೆ!
ಕಾರ್ತ್ಯನಿಯಮ್ಮ ನಿಧನಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದಾರೆ. 'ಕಾರ್ತ್ಯಾನಿಯಮ್ಮ ತಾನು 10ನೇ ತರಗತಿ ತೇರ್ಗಡೆಯಾದ ಮೇಲೆ ಉದ್ಯೋಗ ಪಡೆಯಬೇಕೆಂದು ಹೇಳಿದ್ದರು. ಆ ಮಾತುಗಳಲ್ಲಿ ಆತ್ಮವಿಶ್ವಾಸ ಮತ್ತು ದೃಢತೆ ಇತ್ತು. ನಾರಿಶಕ್ತಿ ಪ್ರಶಸ್ತಿ ಪಡೆದ ನಂತರ ಖುದ್ದಾಗಿ ಭೇಟಿಯಾಗಲು ಬಂದಿದ್ದರು' ಎಂದು ತಿಳಿಸಿದ್ದಾರೆ. 'ವಯಸ್ಸಿನ ಹೊರತಾಗಿಯೂ, ಕಲಿಯುವ ಇಚ್ಛೆಯು ನೂರಾರು ಮಹಿಳೆಯರಿಗೆ ಸ್ಫೂರ್ತಿಯಾಗಿದೆ. ಕಾರ್ತ್ಯಾನಿಯಮ್ಮ ಕೇರಳದ ಹೆಮ್ಮೆ. ನಾವು ಆದರ್ಶಪ್ರಾಯ ವ್ಯಕ್ತಿತ್ವವನ್ನು ಕಳೆದುಕೊಂಡಿದ್ದೇವೆ' ಎಂದು ಮುಖ್ಯಮಂತ್ರಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.