ಕಡುಬಡತನವನ್ನು ಗೆದ್ದು ವಿದ್ಯಾಭ್ಯಾಸದಲ್ಲಿ ಸಾಧನೆಗೈದ ಅನೇಕ ವಿದ್ಯಾರ್ಥಿಗಳ ಬಗ್ಗೆ ಕೇಳಿರುತ್ತೇವೆ. ಆದರೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ದಿನಗೂಲಿ ಕಾರ್ಮಿಕ ಮಹಿಳೆಯೊಬ್ಬರು ವಿದ್ಯಾಭ್ಯಾಸದಲ್ಲಿ ಸಾಧನೆ ಮಾಡಿದ್ದಾರೆ. ಅದೂ ಅಂತಿಂಥಾ ಸಾಧನೆಯಲ್ಲ. ದಿನಗೂಲಿ ಮಾಡುತ್ತಲೇ ಪಿಎಚ್‌ಡಿ ಮಾಡಿದ್ದಾರೆ. 

ಮಹಿಳೆ ಮನಸ್ಸು ಮಾಡಿದರೆ ಏನನ್ನೂ ಸಹ ಸಾಧಿಸಬಲ್ಲಳು ಅನ್ನೋದಕ್ಕೆ ಈ ಘಟನೆ ಸ್ಪಷ್ಟ ಉದಾಹರಣೆ. ಆಕೆ ಸಾಮಾನ್ಯ ಕೂಲಿ ಮಹಿಳೆ. ಆದರೆ ಈಗ ಎಲ್ಲರೂ ನಿಬ್ಬೆರಗಾಗುವಂಥಾ ಸಾಧನೆ ಮಾಡಿದ್ದಾಳೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ದಿನಗೂಲಿ ಕಾರ್ಮಿಕ ಮಹಿಳೆ ಭಾರತಿ, ಬಹಳಷ್ಟುಅಡೆತಡಗಳ ಮಧ್ಯೆಯೇ ರಸಾಯನಶಾಸ್ತ್ರದಲ್ಲಿ ಪಿಎಚ್‌ಡಿ ಮಾಡಿದ್ದಾರೆ. ಬಹಳಷ್ಟುಅಡೆತಡಗಳ ಮಧ್ಯೆಯೇ ರಸಾಯನಶಾಸ್ತ್ರದಲ್ಲಿ ಪಿಎಚ್‌ಡಿ ಮಾಡಿದ್ದಾರೆ. ಛಾವಣಿ ಮುರಿದ ಮನೆಯಲ್ಲಿ ವಾಸಿಸುವ ಭಾರತಿ ಇದೀಗ ಡಾ.ಭಾರತಿಯಾಗಿ ಎಲ್ಲರಿಗೂ ಸಾಧಿಸುವ ಛಲವಿದ್ದರೆ ಎಲ್ಲವೂ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಡಾ. ಭಾರತಿಗೆ ದೇಶಾದ್ಯಂತ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಗಂಡ ಮತ್ತು ದಿವಂಗತ ತಾತನ ಬೆಂಬಲವೇ ನನ್ನ ಈ ಸಾಧನೆಗೆ ಕಾರಣ ಎನ್ನುತ್ತಾರೆ ಡಾ. ಭಾರತಿ.

ಭಾರತಿ, ರಸಾಯನಶಾಸ್ತ್ರದಲ್ಲಿ ಪಿಎಚ್‌ಡಿ ಗಳಿಸಲು ಪರಿಶ್ರಮಪಟ್ಟರು. ಆರು ವರ್ಷಗಳ ಕಾಲ, ಡಾ.ಭಾರತಿ ತನ್ನ ಪದವಿಯನ್ನು ಮುಂದುವರಿಸಲು ತಮ್ಮನ್ನು ತಾನು ಸಮರ್ಪಿಸಿಕೊಂಡರು ಮತ್ತುಕೃಷಿ ಫಾರ್ಮ್‌ನಲ್ಲಿ ಸಹ ಶ್ರದ್ಧೆಯಿಂದ ದೈನಂದಿನ ಕೂಲಿ ಕೆಲಸ (Labourer) ಮಾಡುತ್ತಿದ್ದರು. ಸದ್ಯ ಅವರ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ಭಾರತಿಯ ಸಾಧನೆಯನ್ನು (Achievement) ಊರವರು ಕೊಂಡಾಡುತ್ತಿದ್ದಾರೆ. 

Inspiring Story : ಟ್ಯಾಕ್ಸಿ ಓಡಿಸ್ತಾನೇ ಯುಕೆ ವಿವಿಗೆ ಪ್ರವೇಶ ಪಡೆದ ದಿಟ್ಟೆ

ಪತಿಯ ಬೆಂಬಲದಿಂದ ವಿದ್ಯಾಭ್ಯಾಸ ಮುಂದುವರಿಸಿದ ಭಾರತಿ
ಮೂವರು ಹೆಣ್ಣುಮಕ್ಕಳಿರುವ ಕುಟುಂಬದಲ್ಲಿ (Family) ಜನಿಸಿದ ಭಾರತಿ ಸಹಜವಾಗಿ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗಲ್ಲಿಲ್ಲ. ಆದರೆ ಆಕೆಯ ಅಜ್ಜ ವಿದ್ಯಾಭ್ಯಾಸ ಮುಂದುವರಿಸಲು ಪ್ರೇರೇಪಿಸಿದರು. ಇದರಿಂದ ಉತ್ಸಾಹದಿಂದ ವಿದ್ಯಾಭ್ಯಾಸ (Education) ಮುಂದುವರೆಸಲು ಹೊರಟ ಭಾರತಿಗೆ ನಿರಾಶೆ ಕಾದಿತ್ತು. ಯಾಕೆಂದರೆ ಭಾರತಿಯ ಅಜ್ಜ ತೀರಿಕೊಂಡರು. ಭಾರತಿಯ ಕನಸು ಮತ್ತೆ ಭಗ್ನವಾಯಿತು. ಹೀಗಾಗಿ ಪಿಯುಸಿ ಕಲಿಕೆಯ ನಂತರ ಭಾರತಿಯ ಮದುವೆಯಾಯಿತು. ಮದುವೆಯ ನಂತರ ಅಚ್ಚರಿಯೆಂಬಂತೆ ಪತಿ ಶಿವಪ್ರಸಾದ್, ಭಾರತಿಯ ಕಲಿಕೆಗೆ ಬೆಂಬಲವಾಗಿ ನಿಂತರು.

'ನನ್ನ ಪತಿ ಶಿವಪ್ರಸಾದ್ ನನ್ನ ಅಧ್ಯಯನವನ್ನು ಮುಂದುವರಿಸಲು ನನಗಿಂತ ಉತ್ಸುಕರಾಗಿದ್ದರು. ಮಹಿಳೆಯರು (Woman) ಕಷ್ಟ ಮತ್ತು ಬಡತನದಿಂದ ಪಾರಾಗಲು ಶಿಕ್ಷಣವೊಂದೇ ದಾರಿ ಎಂದು ಹೇಳುತ್ತಿದ್ದರು. ನಾನು ಬಯಸಿದಲ್ಲಿ ಅವರು ನನ್ನನ್ನು ಬೆಂಬಲಿಸುತ್ತಾರೆ ಎಂದು ಹೇಳಿದರು ಮತ್ತು ಅವರು ತಮ್ಮ ಮಾತನ್ನು ಉಳಿಸಿಕೊಂಡರು. ಎಂದು ಡಾ.ಭಾರತಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

10 ವರ್ಷಗಳ ಬಳಿಕ ಪತಿಯನ್ನು ಮನೆಗೆ ಕರೆತಂದ ಪತ್ನಿ, ಪುನರ್ಮಿಲದ ಬೆನ್ನಲ್ಲೇ ಕಾದಿತ್ತು ಶಾಕ್!

ಮನೆಕೆಲಸ ಮುಗಿಸಿ, ಕೂಲಿ ಕೆಲಸ ಮಾಡಿ ವಿದ್ಯಾಭ್ಯಾಸ
ಬಡತನದಿಂದಾಗಿ ಭಾರತಿ ಮತ್ತು ಶಿವಪ್ರಸಾದ್ ಅವರು ತಮ್ಮ ಕುಟುಂಬವನ್ನು ಪೋಷಿಸಲು ಮೂಲಭೂತ ಅವಶ್ಯಕತೆಗಳ ಕೊರತೆಯನ್ನು ಕಂಡುಕೊಂಡರು. ಆದರೆ ಭಾರತಿ ಇದ್ಯಾವುದಕ್ಕೂ ಹಿಂಜರಿಯಲ್ಲಿಲ್ಲ. ಅವಳು ಮನೆಕೆಲಸಗಳನ್ನು ಮುಗಿಸಿ, ಕೆಲಸಕ್ಕೆ ಹೋಗುತ್ತಿದ್ದಳು, ನಂತರ ಕಾಲ್ನಡಿಗೆಯಲ್ಲಿ ಕಾಲೇಜಿಗೆ ಹೋಗುತ್ತಿದ್ದಳು. ಕೊನೆಗೂ ಆಕೆಗೆ ತನ್ನ ಸತತ ಪರಿಶ್ರಮದಿಂದ ತಾನು ಅಂದುಕೊಂಡದ್ದನ್ನು ಸಾಧಿಸಿದಳು. ರಸಾಯನಶಾಸ್ತ್ರದಲ್ಲಿ ಪಿಹೆಚ್‌ಡಿ ಪಡೆದುಕೊಂಡಳು. ಮಹಿಳೆಯ ಸಾಧನೆಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕಡು ಬಡತನದಲ್ಲಿಯೂ ಆಕೆ ಮಾಡಿದ ಸಾಧನೆಗೆ ಶಹಬ್ಬಾಸ್ ಅಂದಿದ್ದಾರೆ. 

ಒಬ್ಬ ಬಳಕೆದಾರರು, 'ಅತ್ಯಂತ ಸ್ಫೂರ್ತಿದಾಯಕ' ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು, 'ಈಕೆಯ ಪರಿಶ್ರಮವನ್ನು ಸರ್ಕಾರ ಗುರುತಿಸಬೇಕು' ಎಂದು ಹೇಳಿದ್ದಾರೆ. ಮತ್ತೆ ಕೆಲವರು, 'ಎಲ್ಲಾ ಸವಲತ್ತುಗಳಿದ್ದೂ ಸುಮ್ಮನೆ ಕನಸು ಕಾಣುತ್ತಾ ಕೂರುವವರಿಗೆ ಭಾರತಿಯ ಕಥೆ ನಿಜಕ್ಕೂ ಸ್ಪೂರ್ತಿದಾಯಕವಾಗಿದೆ' ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಆದರೆ ಸದ್ಯ ಭಾರತಿ, ಡಾಕ್ಟರೇಟ್ ಪಡೆದಿದ್ದರೂ ಉದ್ಯೋಗ ಹುಡುಕುವ ಸವಾಲನ್ನು ಎದುರಿಸುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ಭಾರತಿ ಪತಿ, 'ಕೆಲಸವು ವಿದ್ಯಾಭ್ಯಾಸದ ಅಂತಿಮ ಗುರಿಯಲ್ಲ. ಆದರೆ ಕಷ್ಟಪಟ್ಟು ವಿದ್ಯಾಭ್ಯಾಸ ಪೂರೈಸಿರುವುದರಿಂದ ಆಕೆಗೆ ಸಹಾಯಕ ಪ್ರಾಧ್ಯಾಪಕಿ ಕೆಲಸ ಸಿಕ್ಕರೆ ಕನಸು ನನಸಾಗುತ್ತದೆ. ಇಲ್ಲದಿದ್ದರೆ, ಶಿಕ್ಷಣವು ಅದರ ಅಂತ್ಯ ಎಂದು ನಾವು ಭಾವಿಸುತ್ತೇವೆ' ಎಂದು ಹೇಳಿದ್ದಾರೆ. ಅದೇನೇ ಇದ್ದರೂ, ಈ ಘಟನೆ ಬಡತನ, ಸಾಧನೆಗೆ ಅಡ್ಡಿಯಲ್ಲ ಅನ್ನೋದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಜೀವನದಲ್ಲಿ ಎಷ್ಟೇ ಅಡೆತಡೆಗಳು ಎದುರಾದರೂ ನಮ್ಮ ಕನಸುಗಳು ಮತ್ತು ಆಕಾಂಕ್ಷೆಗಳನ್ನು ನಾವು ಎಂದಿಗೂ ಬಿಟ್ಟುಕೊಡಬಾರದು ಎಂಬುದನ್ನು ಇದು ನಮಗೆ ನೆನಪಿಸುತ್ತದೆ.