Asianet Suvarna News Asianet Suvarna News

ಮಹಿಳೆಯರೇ..ಉಚಿತ ಹೊಲಿಗೆ ಯಂತ್ರ ಬೇಕಾ..ಇಲ್ಲಿ ಅಪ್ಲೈ ಮಾಡಿ

ಭಾರತ ಸರ್ಕಾರವು ಮಹಿಳೆಯರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಪರಿಚಯಿಸುತ್ತಿದೆ. ಅದರ ಭಾಗವಾಗಿ ಕೇಂದ್ರ ಸರ್ಕಾರವು ಎಲ್ಲಾ ಅರ್ಹ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರವನ್ನು ವಿತರಿಸುತ್ತದೆ. ಈ ಯೋಜನೆಯು ಭಾರತದಾದ್ಯಂತ, ಭಾರತದ ಪ್ರತಿಯೊಂದು ರಾಜ್ಯಕ್ಕೂ ರವಾನೆಯಾಗುತ್ತದೆ. ಕರ್ನಾಟಕ ಉಚಿತ ಹೊಲಿಗೆ ಯಂತ್ರ ಯೋಜನೆ 2023ರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Karnataka Free Sewing Machine Scheme 2023 Apply Online Vin
Author
First Published Jan 6, 2023, 9:51 AM IST

ಸಮಾಜದಲ್ಲಿ ಮಹಿಳೆ (Woman)ಯರನ್ನು ಸಬಲಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಹಲವಾರು ಯೋಜನೆ (Scheme)ಗಳನ್ನು ಜಾರಿಗೆ ತರುತ್ತದೆ. ಈ ಸರಳ ಯೋಜನೆಗಳು ಶೂನ್ಯ ಬಂಡವಾಳದಲ್ಲಿ ಅಥವಾ ಕಡಿಮೆ ಬಂಡವಾಳದಲ್ಲಿ ಆರಂಭಿಸುವಂಥದ್ದಾಗಿದೆ. ಇದರಿಂದ ಹೆಣ್ಣು ಮಕ್ಕಳು ಸ್ವಾವಲಂಬಿಯಾಗಿ ಜೀವನ  (Life) ನಡೆಸಲು ಸಾಧ್ಯವಾಗುತ್ತದೆ. ಅಂಥಾ ಯೋಜನೆಯಲ್ಲೊಂದು ಉಚಿತ ಹೊಲಿಗೆ ಯಂತ್ರ ಯೋಜನೆ. ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಕರ್ನಾಟಕ ಸರ್ಕಾರವು ಸಹ ಈ ಯೋಜನೆಯನ್ನು ಮಹಿಳೆಯರಿಗೆ ನಡೆಸುತ್ತಿದೆ. 

ಕರ್ನಾಟಕ ಉಚಿತ ಹೊಲಿಗೆ ಯಂತ್ರ 2023
ಉಚಿತ ಹೊಲಿಗೆ ಯಂತ್ರದ ಯೋಜನೆಯ ಪ್ರಕಾರ, ಕರ್ನಾಟಕ ಸರ್ಕಾರವು ಅರ್ಹ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರವನ್ನು ವಿತರಿಸುತ್ತದೆ.  ಈ ಯೋಜನೆಯ ಮುಖ್ಯ ಗುರಿ ಮಹಿಳೆಯರನ್ನು ಸ್ವತಂತ್ರ ಮತ್ತು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದಾಗಿದೆ. ಪ್ರತಿಯೊಬ್ಬರ ಕುಟುಂಬದಲ್ಲೂ ಆದಾಯವನ್ನು (Income) ಗಳಿಸುವ ಒಬ್ಬ ವ್ಯಕ್ತಿ ಇರುತ್ತಾರೆ. ಆದ್ರೆ ಕೋವಿಡ್‌ನ ನಂತರ ಪರಿಸ್ಥಿತಿ ಬದಲಾಗಿದೆ. ಹೀಗಿರುವಾಗ ಸಾಧ್ಯವಾದಷ್ಟೂ ಕುಟುಂಬದ ಎಲ್ಲಾ ಸದಸ್ಯರು ಏನಾದರೂ ಕೆಲಸ ಮಾಡುವುದು ಮತ್ತು ಪರಸ್ಪರ ಸಹಾಯ ಮಾಡುವುದು ಬಹಳ ಮುಖ್ಯ.ಹೀಗಿರುವಾಗ ಮನೆಯಲ್ಲಿರುವ ಮಹಿಳೆಯರಿಗೆ ಕರ್ನಾಟಕ ಉಚಿತ ಹೊಲಿಗೆ ಯಂತ್ರ ಯೋಜನೆ (Karnataka Free Sewing Machine Scheme) ನೆರವಿಗೆ ಬರುತ್ತದೆ.

ಹೊಲಿಗೆ ಮಷಿನ್ ದಾರ ಪದೇ ಪದೇ ಕಟ್ ಆಗ್ತಿದ್ರೆ ಈ ಟಿಪ್ಸ್ ಫಾಲೋ ಮಾಡಿ

ಟೈಲರಿಂಗ್‌ನಲ್ಲಿ ಪ್ರತಿಭೆಯನ್ನ ಹೊಂದಿರುವ ಅನೇಕ ಮಹಿಳೆಯರು ಇದ್ದಾರೆ. ಆದರೆ ಬಹುತೇಕರಿಗೆ ಆರ್ಥಿಕ ಸಮಸ್ಯೆಯಿಂದ ಯಂತ್ರಗಳನ್ನ ಖರೀದಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಸರ್ಕಾರವು ಉಚಿತ ಹೋಲಿಗೆ ಯಂತ್ರಗಳನ್ನ ವಿತರಿಸುವ ಮೂಲಕ ಬಡ ಮಹಿಳೆಯರಿಗೆ ನೆರವು ನೀಡುವ ಉದ್ದೇಶವನ್ನು ಹೊಂದಿದೆ. ಅದರಂತೆ, ನೀವು ಕೂಡ ಕರ್ನಾಟಕ ಸರ್ಕಾರ ನೀಡುವ ಉಚಿತ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಉಚಿತ ಹೊಲಿಗೆ ಯಂತ್ರ ಪಡೆಯಲು ಬೇಕಾದ ಅರ್ಹತೆಗಳು

* ಮಹಿಳೆಯರು ಮಾತ್ರ ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದು
* ಅರ್ಜಿದಾರರು ಕರ್ನಾಟಕದ ಖಾಯಂ ಪ್ರಜೆಯಾಗಿರಬೇಕು.
* ಅಭ್ಯರ್ಥಿಯು ಬಡತನ ರೇಖೆಗಿಂತ ಕೆಳಗಿರಬೇಕು.
* ಕುಟುಂಬದ ಆದಾಯವು 12,000 ರೂಪಾಯಿಕ್ಕಿಂತ ಕಡಿಮೆ ಇರಬೇಕು.
* ಮಹಿಳೆಯರು ದುಡಿಯುವ ವರ್ಗದಲ್ಲಿ ಕೆಲಸ ಮಾಡಲು ಸಮರ್ಥರಾಗಿದ್ದರೆ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
* ಈ ಯೋಜನೆಯಡಿಯಲ್ಲಿ ಮಹಿಳೆಯರ ಕನಿಷ್ಠ ವಯಸ್ಸು 20 ಇರಬೇಕು. ಇನ್ನು ಗರಿಷ್ಠ ವಯಸ್ಸು 49.
* ಅಭ್ಯರ್ಥಿಯು ಟೈಲರಿಂಗ್‌ನಲ್ಲಿ ಪ್ರತಿಭೆಯನ್ನ ಹೊಂದಿರಬೇಕು.

ಅರ್ಹತಾ ಮಾನದಂಡಗಳ ಅಡಿಯಲ್ಲಿ ಬರುವ ಮಹಿಳೆಯರು ಮಾತ್ರ ಉಚಿತ ಹೊಲಿಗೆ ಯಂತ್ರ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.

ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವುದೇನು ? 
* ಅರ್ಜಿದಾರರ ಆದಾಯ ಪ್ರಮಾಣಪತ್ರ.
* ಆಧಾರ್ ಕಾರ್ಡ್‌ನ ನಕಲು ಪ್ರತಿ.
* ವಯಸ್ಸಿನ ದೃಢೀಕರಣ ಪ್ರಮಾಣಪತ್ರದ ಛಾಯಾಪ್ರತಿ 
* ಜಾತಿ ಪ್ರಮಾಣ ಪತ್ರದ ಪ್ರತಿ
* ಟೈಲರಿಂಗ್ ಮತ್ತು ಕಟಿಂಗ್ ಸರ್ಟಿಫಿಕೇಟ್
* ಅರ್ಜಿದಾರರು ಅಂಗವಿಕಲರಾಗಿದ್ದರೆ, ಅಂಗವೈಕಲ್ಯವನ್ನ ಸಾಬೀತುಪಡಿಸುವ ಪ್ರಮಾಣಪತ್ರ.
* ಮೊಬೈಲ್ ಸಂಖ್ಯೆ
* ವಿಧವೆಯರ ಸಾಕ್ಷ್ಯದ ಅಫಿಡವಿಟ್

ಆಪರೇಷನ್‌ ಮಾಡಿ ಮಹಿಳೆಯ ಹೊಟ್ಟೆಯೊಳಗೆ ಟವೆಲ್‌ ಬಿಟ್ಟ ವೈದ್ಯ..!

ಯೋಜನೆಗೆ ಆನ್ಲೈನ್ ನೋಂದಣಿಗೆ ಅರ್ಜಿ ಸಲ್ಲಿಸುವುದು ಹೇಗೆ ?
ಮೊದಲು ಯೋಜನೆಯ ಅಧಿಕೃತ ವೆಬ್‌ಸೈಟ್‌ National Portal of India ಗೆ ಭೇಟಿ ನೀಡಿ. https://www.india.gov.in/  ಪುಟವನ್ನ ತೆರೆಯಿರಿ. ಈಗ ಉಚಿತ ಹೊಲಿಗೆ ಯಂತ್ರ ಯೋಜನೆ ಕರ್ನಾಟಕದ ಲಿಂಕ್ ಆನ್ ಲೈನ್ ಅರ್ಜಿ ನಮೂನೆ ಇರುತ್ತದೆ. ಆ ಲಿಂಕ್ ಕ್ಲಿಕ್ ಮಾಡಿ. ಅದರ ನಂತರ ಅರ್ಜಿ ನಮೂನೆ ಪರದೆಯ ಮೇಲೆ ತೆರೆಯುತ್ತದೆ. ಅರ್ಜಿ ನಮೂನೆಯ ಕೆಳಗಿರುವ ಡೌನ್ ಲೋಡ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಮತ್ತು ಎಲ್ಲಾ ಫಾರ್ಮ್‌ಗಳನ್ನು ಭರ್ತಿ ಮಾಡಿ. ಹೆಸರು, ವಯಸ್ಸು, ಮೊಬೈಲ್ ಸಂಖ್ಯೆ, ವಿಳಾಸ, ಆಧಾರ್ ಸಂಖ್ಯೆ ಮತ್ತು ಇತರ ಅಗತ್ಯ ಮಾಹಿತಿಯಂತಹ ನಿಮ್ಮ ಎಲ್ಲಾ ವೈಯಕ್ತಿಕ ವಿವರಗಳನ್ನು ಇಲ್ಲಿ ನಮೂದಿಸಬೇಕು. ಅರ್ಜಿ ನಮೂನೆಯನ್ನು ಪೂರ್ಣಗೊಳಿಸಿದ ನಂತರ ಎಲ್ಲಾ ದಾಖಲೆಗಳನ್ನು ಅರ್ಜಿ ನಮೂನೆಯೊಂದಿಗೆ ಲಗತ್ತಿಸಿಬೇಕು.

Follow Us:
Download App:
  • android
  • ios