ಹೊಲಿಗೆ ಮಷಿನ್ ದಾರ ಪದೇ ಪದೇ ಕಟ್ ಆಗ್ತಿದ್ರೆ ಈ ಟಿಪ್ಸ್ ಫಾಲೋ ಮಾಡಿ
ತುಂಬಾ ದಿನದ ನಂತ್ರ ಹೊಲಿಗೆ ಮಷಿನ್ ಮೇಲೆ ಕುಳಿತಿರ್ತೀರಿ. ಎರಡು ಬಾರಿ ಕಾಲು ಹೊಡೆಯುತ್ತಿದ್ದಂತೆ ದಾರ ಕಟ್ ಆಗುತ್ತೆ. ಇಲ್ಲದೆ ದಾರ ಗಂಟು, ಗಂಟಾಗಿ ಹೊಲಿಗೆ ಹಾಳಾಗುತ್ತೆ. ಈ ಎಲ್ಲ ಸಮಸ್ಯೆ ನಿಮ್ಮನ್ನು ಕಾಡ್ಬಾರದು ಅಂದ್ರೆ ನೀವು ಮಷಿನ್ ಬಗ್ಗೆ ತಿಳಿದಿರಬೇಕು.
ಮಹಿಳೆಯಾದವಳು ಹೊಲಿಗೆ ಕಲಿತಿರಬೇಕು ಎಂಬ ಮಾತನ್ನು ನೀವು ಹಿರಿಯರ ಬಾಯಿಂದ ಕೇಳಿರ್ತೀರಿ. ಹಿಂದಿನ ಕಾಲದಲ್ಲಿ ರೆಡಿಮೆಡ್ ಬಟ್ಟೆಗಳ ಸಂಖ್ಯೆ ಕಡಿಮೆ ಇತ್ತು. ಜನರು ಬಟ್ಟೆಗಳನ್ನು ಹೊಲಿಸ್ತಿದ್ರು. ಹಾಗೆ ಸಣ್ಣಪುಟ್ಟ ಹರಿದ ಬಟ್ಟೆಗಳಿಗೆ ಹೊಲಿಗೆ ಹಾಕಲು ಸರಿಯಾದ ವ್ಯವಸ್ಥೆ ಇರಲಿಲ್ಲ. ಹಾಗಾಗಿಯೇ ಮನೆಯಲ್ಲಿರುವ ಮಹಿಳೆ ಹೊಲಿಗೆ ಕಲಿತ್ರೆ ಒಳ್ಳೆಯದು ಎನ್ನಲಾಗ್ತಿತ್ತು. ಈಗ್ಲೂ ಹೊಲಿಕೆ ಕಲಿಕೆ ಒಳ್ಳೆಯದೆ.
ಹೊಲಿಗೆ (Sewing) ಮಹಿಳೆಯರನ್ನು ಸ್ವಾವಲಂಬಿ ಮಾಡುತ್ತದೆ. ಒಂದ್ವೇಳೆ ನಿಮಗೆ ಹೊಲಿಗೆ ಬ್ಯುಸಿನೆಸ್ (Business) ಶುರು ಮಾಡೋಕೆ ಇಷ್ಟವಿಲ್ಲವೆಂದ್ರೂ ಹೊಲಿಗೆ ಮಷಿನ್ ಬಳಸುವ ವಿಧಾನ ಗೊತ್ತಿರಬೇಕು. ಮನೆಯಲ್ಲೊಂದು ಮಷಿನ್ ಇದ್ರೆ ಉತ್ತಮ. ಮಾರುಕಟ್ಟೆ (Market) ಯಿಂದ ನಾವು ರೆಡಿಮೆಡ್ ಬಟ್ಟೆ ತರ್ತೇವೆ. ಅನೇಕ ಬಾರಿ ಅವುಗಳ ಫಿಟಿಂಗ್ ಸರಿ ಇರೋದಿಲ್ಲ. ಇಲ್ಲವೆ ಹಳೆ ಬಟ್ಟೆಗೆ ಹೊಲಿಗೆ ಹಾಕಬೇಕಾಗುತ್ತದೆ. ಅಂಥ ಸಂದರ್ಭದಲ್ಲಿ ನಾವು ಹೊಲಿಗೆ ಹೊಲಿಯುವವರನ್ನು ಆಶ್ರಯಿಸುವ ಬದಲು ಮನೆಯಲ್ಲಿ ಫ್ರೀ ಇರುವಾಗ ಈ ಕೆಲ ಮಾಡಬಹುದು. ಹೊಲಿಗೆ ಕಲಿತು, ಮಷಿನ್ ತಂದ್ರೆ ಆಗ್ಲಿಲ್ಲ. ಅಪರೂಪಕ್ಕೆ ಮಷಿನ್ (Machine) ಮೇಲೆ ಕುಳಿತಾಗ್ಲೇ ಮಷಿನ್ ಕೈ ಕೊಟ್ಟಿರುತ್ತದೆ. ಆಗಾಗ ದಾರ ಬಿಟ್ಟುಕೊಳ್ಳುತ್ತದೆ, ಹೊಲಿಗೆ ಸರಿಯಾಗಿ ಬೀಳೋದಿಲ್ಲ. ಕೆಲವೊಮ್ಮೆ ಪೂರ್ತಿ ಹೊಲಿದಿರ್ತೇವೆ ಆದ್ರೆ ದಾರ ಯಾವಾಗ್ಲೂ ಕಟ್ ಆಗಿರುತ್ತದೆ. ಈ ಎಲ್ಲ ಸಮಸ್ಯೆ ಆಗಬಾರದು ಅಂದ್ರೆ ಮಷಿನ್ ಬಗ್ಗೆಯೂ ನಾವು ಸರಿಯಾದ ಜ್ಞಾನ ಹೊಂದಿಬೇಕು.
Recycle Hacks: ಮನೆಯಲ್ಲಿರೋ ಹಳೆ ಬ್ರಾ ಎಸಿಬೇಡಿ, ಸಿಕ್ಕಾಪಟ್ಟೆ ಕೆಲಸಕ್ಕೆ ಬರತ್ತೆ ಎದೆಕವಚ
ಹೊಲಿಗೆ ಮಷಿನ್ ಕೈಕೊಡಬಾರದು ಅಂದ್ರೆ ಹೀಗೆ ಮಾಡಿ :
ಸೂಜಿ ಬದಲಿಸಿ : ಮಷಿನ್ ಗೆ ತಪ್ಪಾದ ಸೂಜಿ ಹಾಕಿದಾಗ ಮತ್ತೆ ಮತ್ತೆ ದಾರ ಬಿಡುವ ಅಥವಾ ಕಟ್ ಆಗುವ ಸಮಸ್ಯೆ ಬರಲು ಪ್ರಾರಂಭಿಸುತ್ತದೆ. ದೀರ್ಘಕಾಲದವರೆಗೆ ಈ ಸಮಸ್ಯೆ ಎದುರಿಸುತ್ತಿದ್ದರೆ ಸೂಜಿ ಬದಲಿಸುವುದು ಉತ್ತಮ ಆಯ್ಕೆಯಾಗಿದೆ. ಹೊಲಿಗೆ ಯಂತ್ರದಲ್ಲಿ ಬಳಸುವ ಸೂಜಿಗಳು 16, 18, 20 ಸಂಖ್ಯೆಯ ಸೂಜಿಗಳು. ಸೂಜಿಗಳ ಗಾತ್ರದ ಜೊತೆ ವಿನ್ಯಾಸ ಕೂಡ ವಿಭಿನ್ನವಾಗಿರುತ್ತದೆ. ನಿಮ್ಮ ಯಂತ್ರ ಹಾಗೂ ನೀವು ಬಳಸುವ ಬಟ್ಟೆ ಮೇಲೆ ಸೂಜಿಯನ್ನು ನೀವು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
ಪೇಪರ್ ಇಟ್ಟು ಹೊಲಿಗೆ ಪ್ರಯತ್ನಿಸಿ : ಅನೇಕ ಬಾರಿ ಬಟ್ಟೆ ಮತ್ತು ಹೊಲಿಗೆ ಮಷಿನ್ ಮಧ್ಯೆ ಸರಿಯಾದ ಸಮನ್ವಯತೆ ಇರೋದಿಲ್ಲ. ಇದ್ರಿಂದ ದಾರ ಬಿಚ್ಚಿಕೊಳ್ಳುತ್ತದೆ. ತುಂಬಾ ದಪ್ಪ ಬಟ್ಟೆ ಹೊಲಿಯುವಾಗ ಈ ಸಮಸ್ಯೆ ಕಾಡುತ್ತದೆ. ಈ ಸಂದರ್ಭದಲ್ಲಿ ನೀವು ವೃತ್ತಪತ್ರಿಕೆಯಿಟ್ಟು ಹೊಲಿದ್ರೆ ಸಮಸ್ಯೆ ಕಡಿಮೆಯಾಗುತ್ತದೆ. ಇದಕ್ಕಾಗಿ ನೀವು ವೃತ್ತಪತ್ರಿಕೆಯನ್ನು ಸಣ್ಣ ಸಣ್ಣ ಪಟ್ಟಿಯಾಗಿ ಕತ್ತರಿಸಿಕೊಳ್ಳಬೇಕು. ನಂತ್ರ ಅದನ್ನು ಬಳಸಬೇಕು.
ಹೊಲಿಗೆ ಮಷಿನ್ ಗೆ ಆಯಿಲ್ ಬಳಸಿ : ದೀರ್ಘಕಾಲದಿಂದ ಹೊಲಿಗೆ ಯಂತ್ರ ಬಳಕೆ ಮಾಡದೆ ಇದ್ದರೆ ಅಥವಾ ಒಂದೇ ಸಮನೆ ಯಂತ್ರ ಬಳಸುತ್ತಿದ್ದರೆ ಈ ಎರಡೂ ಸಮಯದಲ್ಲಿ ಮಷಿನ್ ಹಾಳಾಗುವ ಸಾಧ್ಯತೆಯಿರುತ್ತದೆ. ಮಷಿನ್ ಗೆ ಆರೈಕೆ ಮಾಡುವುದು ಬಹಳ ಮುಖ್ಯ. ಮಷಿನ್ ಗಾಗಿಯೇ ಆಯಿಲ್ ಮಾರುಕಟ್ಟೆಯಲ್ಲಿ ಸಿಗುತ್ತದೆ. ನೀವು ಅದನ್ನು ತಂದು ಮಷಿನ್ ಗೆ ಆಗಾಗಾ ಹಾಕ್ತಿರಬೇಕು. ಸೂಜಿ, ಶಟಲ್ ಪಾಯಿಂಟ್, ಬಾಬಿನ್, ಥ್ರೆಡ್ ಟೆನ್ಷನ್ ಡಿಸ್ಕ್ ಮತ್ತು ರಬ್ಬರ್ ರಿಂಗ್ ಇತ್ಯಾದಿಗಳಿಗೆ ಎಣ್ಣೆಯನ್ನು ಬಳಸಬಹುದು. ಎಣ್ಣೆ ಹಾಕಿದ ನಂತ್ರ ಯಂತ್ರವನ್ನು ಒಮ್ಮೆ ಚೆಕ್ ಮಾಡಿ. ಹಳೆ ಬಟ್ಟೆಯನ್ನು ಹೊಲಿದು ನೋಡಿ. ನೀವು ತೆಂಗಿನ ಎಣ್ಣೆಯನ್ನು ಕೂಡ ಬಳಸಬಹುದು.
ಬ್ರೈಡಲ್ ಮೇಕಪ್‌ಗೂ ಮುನ್ನ ಇದನ್ನ ಮಾಡಿದ್ರೆ ಮದ್ವೆ ದಿನ ಮಿಂಚೋದು ಗ್ಯಾರಂಟಿ
ದಾರ ಮುಖ್ಯ : ಮಾರುಕಟ್ಟೆಯಲ್ಲಿ ಸಾಕಷ್ಟು ವೆರೈಟಿ ದಾರ ಲಭ್ಯವಿದೆ. ನೀವು ತೆಳುವಾದ ದಾರ ಬಳಸುವುದು ಒಳ್ಳೆಯದು. ದಪ್ಪದ ದಾರ ಮಷಿನ್ ಗೆ ಸುತ್ತಿಕೊಳ್ಳುವ ಸಾಧ್ಯತೆಯಿರುತ್ತದೆ.