Asianet Suvarna News Asianet Suvarna News

ಆಪರೇಷನ್‌ ಮಾಡಿ ಮಹಿಳೆಯ ಹೊಟ್ಟೆಯೊಳಗೆ ಟವೆಲ್‌ ಬಿಟ್ಟ ವೈದ್ಯ..!

ಸೈಫೀ ನರ್ಸಿಂಗ್‌ ಹೋಂನಲ್ಲಿ ಆಪರೇಷನ್‌ ಬಳಿಕ ನಜ್ರಾನಾ ಎಂಬ ಮಹಿಳೆಯ ಹೊಟ್ಟೆಯೊಳಗೆ ವೈದ್ಯ ಮತ್ಲೂಬ್‌ ಟವೆಲ್‌ ಅನ್ನು ಹಾಗೇ ಬಿಟ್ಟಿದ್ದಾರೆ ಎಂದು ರಾಜೀವ್‌ ಸಿಂಘಾಲ್‌ ಹೇಳಿದ್ದಾರೆ.

doctor leaves towel inside womans stomach in uttar pradesh probe launched ash
Author
First Published Jan 4, 2023, 6:11 PM IST

ವೈದ್ಯರು (Doctor) ಆಪರೇಷನ್‌ (Operation) ಮಾಡಿದ ಬಳಿಕ ರೋಗಿಯ (Patient) ದೇಹದಲ್ಲಿ ಕತ್ತರಿ ಮುಂತಾದ ವಸ್ತುಗಳನ್ನು ಬಿಡುವ ಸುದ್ದಿಗಳನ್ನು ಕೇಳುತ್ತಿರುತ್ತೀರಾ ಅಥವಾ ಓದುತ್ತಿರುತ್ತೀರಾ. ಇಂತಹ ಘಟನೆಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತವೆ. ಉತ್ತರ ಪ್ರದೇಶದ (Uttar Pradesh) ಅಮ್ರೋಹಾದಲ್ಲಿ (Amroha) ಮತ್ತೆ ಇಂತದ್ದೇ ಸುದ್ದಿ ಆಗಾಗ್ಗೆ ಬರುತ್ತಿರುತ್ತದೆ. ವೈದ್ಯರೊಬ್ಬರು ಆಪರೇಷನ್‌ ಮಾಡಿದ ಬಳಿಕ ಮಹಿಳೆಯ ಹೊಟ್ಟೆಯೊಳಗೆ ಟವೆಲ್‌ (Towel) ಅನ್ನು ಹಾಗೇ ಬಿಟ್ಟಿದ್ದಾರೆ. ಹೆರಿಗೆ ನೋವಿನ (Labour Pain) ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ ವೈದ್ಯರು ಈ ರೀತಿ ಎಡವಟ್ಟು ಮಾಡಿದ್ದಾರೆ. ಇನ್ನು, ಈ ಘಟನೆ ಸಂಬಂಧ ಮುಖ್ಯ ಮೆಡಿಕಲ್ ಅಧಿಕಾರಿ (Chief Medical Officer) ರಾಜೀವ್‌ ಸಿಂಘಾಲ್‌ (Rajeev Singhal) ತನಿಖೆಗೆ ಆದೇಶಿಸಿದ್ದಾರೆ. 

ಸೈಫೀ ನರ್ಸಿಂಗ್‌ ಹೋಂನಲ್ಲಿ ಆಪರೇಷನ್‌ ಬಳಿಕ ನಜ್ರಾನಾ ಎಂಬ ಮಹಿಳೆಯ ಹೊಟ್ಟೆಯೊಳಗೆ ವೈದ್ಯ ಮತ್ಲೂಬ್‌ ಟವೆಲ್‌ ಅನ್ನು ಹಾಗೇ ಬಿಟ್ಟಿದ್ದಾರೆ ಎಂದು ರಾಜೀವ್‌ ಸಿಂಘಾಲ್‌ ಹೇಳಿದ್ದಾರೆ. ಅಲ್ಲದೆ, ನೌಗವಾನಾ ಸದತ್‌ ಪೊಲೀಸ್‌ ಠಾಣೆ ಪ್ರದೇಶದಲ್ಲಿ ಈ ಆಸ್ಪತ್ರೆ ಇದ್ದು, ಅದನ್ನು ಅನುಮತಿಯೇ ಇಲ್ಲದೆ ನಡೆಸಲಾಗುತ್ತಿತ್ತು ಎಂದೂ ತಿಳಿದುಬಂದಿದೆ. 
ವೈದ್ಯಕೀಯ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಟವೆಲ್ ನಜರಾನಾ ಅವರ ಹೊಟ್ಟೆಯೊಳಗೆ ಉಳಿದಿದೆ ಮತ್ತು ಮಹಿಳೆ ಹೊಟ್ಟೆ ನೋವಿನ ಬಗ್ಗೆ ದೂರು ನೀಡಿದ ನಂತರ, ಹೊರಗಿನ ಚಳಿಯಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದೀರಾ ಎಂದು ಅವರು ಹೇಳಿದ್ದರು. ಅಲ್ಲದೆ, ಇನ್ನೂ 5 ದಿನಗಳ ಕಾಲ ಆಸ್ಪತ್ರೆಯಲ್ಲೇ ದಾಖಲಿಸಿಕೊಂಡಿದ್ದರು ಎಂದೂ ತಿಳಿದುಬಂದಿದೆ. 

ಇದನ್ನು ಓದಿ: ಆಪರೇಷನ್‌ ಮಾಡಲು ಹೋಗಿ ಇದ್ದೊಂದು ಕಣ್ಣನೂ ತೆಗೆದ ವೈದ್ಯ

ಬಳಿಕ, ಮನೆಗೆ ಬಂದರೂ ಸಹ ಮಹಿಳೆಯ ಆರೋಗ್ಯ ಸುಧಾರಿಸದೇ ಇದ್ದಾಗ ಪತಿ ಶಂಶೇರ್ ಅಲಿ ಆಕೆಯನ್ನು ಅಮ್ರೋಹದ ಮತ್ತೊಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಹೊಟ್ಟೆ ನೋವಿನ ಹಿಂದಿನ ಅಸಲಿ ಸತ್ಯ ತಿಳಿದು ಬಂದಿದ್ದು, ಮತ್ತೊಂದು ಆಪರೇಷನ್ ಮಾಡಿ ಟವೆಲ್ ತೆಗೆದು ಹಾಕಿದ್ದಾರೆ.

ಬಳಿಕ, ಈ ಖಾಸಗಿ ವೈದ್ಯ ಮತ್ಲೂಬ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಲಿ ಸಿಎಂಒಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ. "ನಾನು ಘಟನೆಯ ಬಗ್ಗೆ ಮಾಧ್ಯಮ ವರದಿಗಳ ಮೂಲಕ ತಿಳಿದುಕೊಂಡಿದ್ದೇನೆ ಮತ್ತು ಈ ಬಗ್ಗೆ ಪರಿಶೀಲಿಸಲು ನೋಡಲ್ ಅಧಿಕಾರಿ ಡಾ. ಶರದ್ ಅವರನ್ನು ಕೇಳಿದ್ದೇನೆ. ತನಿಖೆ ಪೂರ್ಣಗೊಂಡ ನಂತರವೇ ನಾವು ಹೆಚ್ಚಿನ ವಿವರಗಳನ್ನು ನೀಡಬಹುದು" ಎಂದು ಮುಖ್ಯ ಮೆಡಿಕಲ್‌ ಅಧಿಕಾರಿ ರಾಜೀವ್‌ ಸಿಂಘಾಲ್ ಮಂಗಳವಾರ ಹೇಳಿಕೆ ನೀಡಿದ್ದಾರೆ. 

ಇದನ್ನೂ ಓದಿ: ರಾಜ್ಯದಲ್ಲಿ ಅತೀ ಹೆಚ್ಚು ಲಿವರ್‌ ಕಸಿ ಶಸ್ತ್ರಚಿಕಿತ್ಸೆ ನಡೆಸಿದ ಕೇಂದ್ರ BGS Gleneagles Hospitals

ಇನ್ನೊಂದೆಡೆ, ಈ ಘಟನೆ ಬಗ್ಗೆ ಮಹಿಳೆಯ ಪತಿ ಶಂಶೇರ್‌ ಅಲಿ ಯಾವುದೇ ಲಿಖಿತ ದೂರು ನೀಡಿಲ್ಲ. ಆದರೂ, ತನಿಖೆ ನಡೆಸಲಾಗುವುದು ಎಂದೂ ಮುಖ್ಯ ಮೆಡಿಕಲ್‌ ಅಧಿಕಾರಿ ಭರವಸೆ ನೀಡಿದ್ದಾರೆ. ಇನ್ನು, ಸಿಎಂಒ ತನಿಖೆಯ ವರದಿ ಬಂದ ನಂತರ ಪೊಲೀಸರು ತನಿಖೆ ಆರಂಭಿಸುತ್ತಾರೆ ಎಂಬುದು ಉಲ್ಲೇಖಾರ್ಹವಾಗಿದೆ. 

ಇದ್ದ ಒಂದು ಕಣ್ಣನ್ನೂ ತೆಗೆದ ವೈದ್ಯರು..!
ವೈದ್ಯೋ ನಾರಾಯಣ ಹರಿ ಎಂಬ ಮಾತಿದೆ. ಆದರೆ ವೈದ್ಯರು ಮಾಡುವ ಕೆಲವೊಂದು ಎಡವಟ್ಟು ಕೆಲವರ ಬದುಕನ್ನ ಸಂಪೂರ್ಣವಾಗಿ ಅಂಧಕಾರಕ್ಕೆ ತಳ್ಳುವುದು. ಅದೇ ರೀತಿಯ ಘಟನೆಯೊಂದು ಸ್ಲೊವಾಕಿಯಾದಲ್ಲಿ ಕೆಲ ತಿಂಗಳ ಹಿಂದೆ ನಡೆದಿತ್ತು. ಆಸ್ಪತ್ರೆಗೆ ಒಂದು ಕಣ್ಣಿನಲ್ಲಿ ತೊಂದರೆ ಇದೆ ಎಂದು ಚಿಕಿತ್ಸೆಗೆ ಬಂದ ರೋಗಿ ಈಗ ತನಗಿದ್ದ ಒಂದೇ ಒಂದು ಕಣ್ಣನ್ನು ಕಳೆದುಕೊಂಡು ಸಂಪೂರ್ಣ ಅಂಧನಾಗಿದ್ದಾನೆ. 

ಇದನ್ನೂ ಓದಿ: ಮಗುವಿನ ಯಶಸ್ವಿ ಶಸ್ತ್ರಚಿಕಿತ್ಸೆಗೆ ಕಾರಣರಾದ ಸೂದ್! ಅಭಿಮಾನಿಗಳ ಮೆಚ್ಚುಗೆ ಸುರಿಮಳೆ!

ಸ್ಲೊವಾಕಿಯಾದ ಪ್ರಮುಖ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ರೋಗಿಯು ತನ್ನ ತೊಂದರೆಗೀಡಾದ ಒಂದು ಕಣ್ಣಿಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದಿದ್ದರು. ಆದರೆ ವೈದ್ಯರು ಆ ಕಣ್ಣಿಗೆ ಶಸ್ತ್ರಚಿಕಿತ್ಸೆ ಮಾಡುವ ಬದಲು ತಪ್ಪಾಗಿ ಸರಿ ಇದ್ದ ಕಣ್ಣಿಗೆ ಚಿಕಿತ್ಸೆ ಮಾಡಲು ಹೋಗಿ ಸರಿ ಇರುವ ಒಂದು ಕಣ್ಣನ್ನು ಕಿತ್ತು ಹಾಕಿದ್ದಾರೆ. ಇದರ ಪರಿಣಾಮ ಈಗ ಈ ರೋಗಿ ಜೀವನ ಪರ್ಯಂತ ತನ್ನ ಕುಟುಂಬವನ್ನು ಅವಲಂಬಿಸುವಂತಾಗಿದೆ. 

Follow Us:
Download App:
  • android
  • ios