Asianet Suvarna News Asianet Suvarna News

ಸಂಸತ್ತಲ್ಲಿ ಹಾಲುಣಿಸಿ ಇತಿಹಾಸ ಬರೆದ ಇಟಲಿ ಸಂಸದೆ: ವಿಡಿಯೋ ವೈರಲ್‌..

ಇಟಲಿ ಸಂಸದೆ ಗಿಲ್ಡಾ ಸ್ಪೋರ್ಟಿಯೆಲ್ಲೋ ಸಂಸತ್ತಿನಲ್ಲಿ ತಮ್ಮ 2 ತಿಂಗಳ ಮಗನಾದ ಫ್ರೆಡೆರಿಕೋಗೆ ಹಾಲುಣಿಸುವ ಮೂಲಕ ಮೊದಲ ಸಂಸದೆ ಎನಿಸಿಕೊಂಡಿದ್ದಾರೆ.

italian mp gilda sportiello makes history by breastfeeding baby in parliament ash
Author
First Published Jun 8, 2023, 6:41 PM IST

ರೋಮ್‌ (ಜೂನ್ 8, 2023):  ತಮ್ಮ ಪುಟ್ಟ ಮಗುವಿಗೆ ಅಮ್ಮಂದಿರು ಎದೆ ಹಾಲು ಉಣಿಸುವುದು ಸಾಮಾನ್ಯ. ಆದರೆ, ಸಾರ್ವಜನಿಕವಾಗಿ ಹಾಲುಣಿಸುವುದು ಅಪರೂಪವೇ ಸರಿ. ಆದರೆ, ಇತ್ತೀಚೆಗೆ ಸಂಸತ್‌ನಲ್ಲಿ ಮಹಿಳಾ ಶಾಸಕರು ಹಾಗೂ ಸಂಸದರು ಈ ರೀತಿ ಮಾಡುತ್ತಿರುವ ಕೆಲ ವರದಿಗಳು ಬರುತ್ತಿವೆ. ಅದೇ ರೀತಿ, ಇತ್ತೀಚೆಗೆ ಇಟಲಿ ಸಂಸದರು ಸಹ ಸಂಸತ್‌ನಲ್ಲಿ ಸಾರ್ವಜನಿಕವಾಗೇ ತಮ್ಮ ಮಗುವಿಗೆ ಸ್ತನ್ಯಪಾನ ಮಾಡಿದ್ದು, ಈ ಮೂಲಕ ಇತಿಹಾಸ ಬರೆದಿದ್ದಾರೆ. 

ಇಟಲಿಯ ಸಂಸದೆ ಗಿಲ್ಡಾ ಸ್ಪೋರ್ಟಿಯೆಲ್ಲೋ ಅವರು ಜೂನ್ 7 ರಂದು ರೋಮ್‌ನಲ್ಲಿರೋ ದೇಶದ ಸಂಸತ್ತಿನಲ್ಲಿ ತಮ್ಮ 2 ತಿಂಗಳ ಮಗನಾದ ಫ್ರೆಡೆರಿಕೋಗೆ ಹಾಲುಣಿಸುವ ಮೂಲಕ ಈ ಕಾರ್ಯ ಮಾಡಿದ ಇಟಲಿಯ ಮೊದಲ ಮಹಿಳಾ ಸಂಸದೆ ಎನಿಸಿಕೊಂಡಿದ್ದಾರೆ. ಈ ಐತಿಹಾಸಿಕ ಘಟನೆಗೆ ಆಕೆಯ ಸಹ ಸಂಸದರಿಂದ ಸರ್ವಾನುಮತದ ಚಪ್ಪಾಳೆಯೂ ದೊರಕಿತು.

ಇದನ್ನು ಓದಿ: ನನಗೇ ಇದೇ ಸರಿಯಾದ ಸಮಯ: ಪ್ರಧಾನಿ ಹುದ್ದೆಗೆ ದಿಢೀರ್‌ ರಾಜೀನಾಮೆ ಘೋಷಿಸಿದ 42 ವರ್ಷದ ಜಸಿಂಡಾ ಅರ್ಡೆರ್ನ್

ನವೆಂಬರ್ 2022 ರಲ್ಲಿ, ಸಂಸದೀಯ ನಿಯಮಗಳ ಸಮಿತಿಯು ದೇಶದ ಮಹಿಳಾ ಸಂಸದರಿಗೆ ತಮ್ಮ ಮಕ್ಕಳನ್ನು ಚೇಂಬರ್‌ಗೆ ಕರೆತರಲು ಮತ್ತು ಒಂದು ವರ್ಷದವರೆಗೆ ಅವರಿಗೆ ಹಾಲುಣಿಸಲು ಅನುಮತಿ ನೀಡಿತ್ತು. ಆದರೆ, ಅಂದಿನಿಂದ ಈ ಐತಿಹಾಸಿಕ ಕ್ರಮವನ್ನು ಯಾವ ಸಮದೆಯೂ ಮಾಡಿರಲಿಲ್ಲ ಎಂದು ತಿಳಿದುಬಂದಿದೆ. ಜೂನ್ 7 ರಂದು ಗಿಲ್ಡಾ ಸ್ಪೋರ್ಟಿಯೆಲ್ಲೋ ಈ ಮೂಲಕ ಇತಿಹಾಸ ಬರೆದಿದ್ದಾರೆ. 

ಇನ್ನು, TheMissRossi ಎಂಬ ಟ್ವಿಟ್ಟರ್ ಬಳಕೆದಾರರು ಸಂಸದೆ ಮಗುವನ್ನು ಎತ್ತಿಕೊಂಡು ಸ್ತನ್ಯಪಾನ ಮಾಡಿಸುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಐತಿಹಾಸಿಕ ಘಟನೆಗೆ ಇಡೀ ಸಭೆಯೇ ಚಪ್ಪಾಳೆ ತಟ್ಟುತ್ತಿರುವುದನ್ನು ಸಹ ವಿಡಿಯೋದಲ್ಲಿ ನೋಡಬಹುದು. ಅಲ್ಲದೆ, ಈ ವಿಡಿಯೋಗೆ “ಇಂದು ಇಟಲಿಯ ಗಿಲ್ಡಾ ಸ್ಪೋರ್ಟಿಯೆಲ್ಲೊ ಅವರು ಚೇಂಬರ್ ಆಫ್ ಡೆಪ್ಯೂಟೀಸ್‌ನಲ್ಲಿ ನವಜಾತ ಶಿಶುವಿನೊಂದಿಗೆ ಕಾಣಿಸಿಕೊಂಡ ಮತ್ತು ತನ್ನ ಮಗುವಿಗೆ ಹಾಲುಣಿಸುವ ಫೆಡೆರಿಕೊದ ಮೊದಲ ಸಂಸದರಾಗಿದ್ದಾರೆ. ಇಡೀ ಅಸೆಂಬ್ಲಿಯಿಂದ ಚಪ್ಪಾಳೆಗಳು ದೀರ್ಘ ಮತ್ತು ತೀವ್ರವಾಗಿತ್ತು’’ ಎಂದು ಜರ್ಮನ್ ಭಾಷೆಯಲ್ಲಿ ಶೀರ್ಷಿಕೆಯನ್ನು ಬರೆದಿದ್ದಾರೆ.

ಇದನ್ನೂ ಓದಿ: ಪಬ್ಲಿಕ್ ಪ್ಲೇಸ್‌ನಲ್ಲಿ ಮಗುವಿಗೆ ಎದೆ ಹಾಲುಣಿಸೋದು ನಾಚಿಕೆಯ ವಿಷ್ಯವಲ್ಲ

ವಿಡಿಯೋವನ್ನು ಇಲ್ಲಿ ವೀಕ್ಷಿಸಿ:

"ಇದು ಮೊದಲ ಬಾರಿಗೆ, ಎಲ್ಲಾ ಪಕ್ಷಗಳ ಬೆಂಬಲದೊಂದಿಗೆ. ದೀರ್ಘ, ಮುಕ್ತ ಮತ್ತು ಶಾಂತಿಯುತ ಜೀವನಕ್ಕಾಗಿ ಫೆಡೆರಿಕೋಗೆ ಶುಭಾಶಯಗಳು" ಎಂದು ಜಾರ್ಜಿಯೊ ಮ್ಯೂಲ್‌ ಅವರು ಸಂಸತ್ತಿನ ಅಧಿವೇಶನದ ಅಧ್ಯಕ್ಷತೆ ವಹಿಸಿ ಹೇಳಿದರು. "ಈಗ ನಾವು ಸದ್ದಿಲ್ಲದೆ ಮಾತನಾಡುತ್ತೇವೆ" ಎಂದೂ ಅವರು ಹೇಳಿದರು. 

ಇನ್ನೊಂದೆಡೆ, ಈ ಬಗ್ಗೆ ಮಾತನಾಡಿದ ಇಟಲಿಯ ಸಂಸದೆ ಗಿಲ್ಡಾ ಸ್ಪೋರ್ಟಿಯೆಲ್ಲೊ "ಹಲವು ಮಹಿಳೆಯರು ಸ್ತನ್ಯಪಾನವನ್ನು ಸಮಯಕ್ಕಿಂತ ಮುಂಚಿತವಾಗಿ ನಿಲ್ಲಿಸುತ್ತಾರೆ. ಇದು, ಆಯ್ಕೆಯಿಂದ ಅಲ್ಲದಿದ್ದರೂ, ಅವರು ಕೆಲಸದ ಸ್ಥಳಕ್ಕೆ ಮರಳಲು ಬಲವಂತವಾಗಿ ನಿಲ್ಲಿಸುತ್ತಾರೆ" ಎಂದು ಎಡ-ಸಿದ್ಧಾಂತ ಪಕ್ಷದ ಸಂಸದೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಅಯ್ಯೋ ವಿಧಿಯೇ..ಎದೆ ಹಾಲು ಗಂಟಲಲ್ಲಿ ಸಿಲುಕಿ ನವಜಾತ ಶಿಶು ಸಾವು

ಜಾರ್ಜಿಯಾ ಮೆಲೋನಿ ಅವರು ಅಕ್ಟೋಬರ್‌ನಲ್ಲಿ ಇಟಲಿಯ ಮೊದಲ ಮಹಿಳಾ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಈ ದೇಶದ ಮೂರನೇ ಎರಡರಷ್ಟು ಶಾಸಕರು ಪುರುಷರಾಗಿದ್ದರೂ ಅವರು ಈ ಸಾಧನೆ ಮಾಡಿದ್ದಾರೆ. ಬುಧವಾರದ ಈ ಐತಹಾಸಿಕ ಕ್ರಮ ಇಟಲಿಗೆ ಮೊದಲನೆಯದಾಗಿದ್ದರೆ, 13 ವರ್ಷಗಳ ಹಿಂದೆ ಈಗ ಸೆಂಟರ್-ರೈಟ್ ಫೋರ್ಜಾ ಇಟಾಲಿಯಾ ಪಕ್ಷದ ಸೆನೆಟರ್ ಆಗಿರುವ ಲಿಸಿಯಾ ರೊನ್‌ಜುಲ್ಲಿ ಸ್ಟ್ರಾಸ್‌ಬರ್ಗ್‌ನ ಯುರೋಪಿಯನ್ ಪಾರ್ಲಿಮೆಂಟ್‌ನಲ್ಲಿ ತನ್ನ ಮಗಳಿಗೆ ಹಾಲುಣಿಸಿ ಸುದ್ದಿಯಾಗಿದ್ದರು.

ಇದನ್ನೂ ಓದಿ: ಮಕ್ಕಳಿಗೆ ಆರು ತಿಂಗಳ ವರೆಗೆ ಹಾಲುಣಿಸಲೇಬೇಕು ಅನ್ನೋದು ಯಾಕೆ ?

Follow Us:
Download App:
  • android
  • ios