Asianet Suvarna News Asianet Suvarna News

ನನಗೇ ಇದೇ ಸರಿಯಾದ ಸಮಯ: ಪ್ರಧಾನಿ ಹುದ್ದೆಗೆ ದಿಢೀರ್‌ ರಾಜೀನಾಮೆ ಘೋಷಿಸಿದ 42 ವರ್ಷದ ಜಸಿಂಡಾ ಅರ್ಡೆರ್ನ್

ನಾಯಕರಾಗಿ ಮುಂದುವರಿಯಲು ಶಕ್ತಿಯನ್ನು ಕಂಡುಕೊಳ್ಳುವ ಭರವಸೆಯನ್ನು ಹೊಂದಿದ್ದೆ. ಆದರೆ ಅದನ್ನು ಮಾಡಲು ನನಗೆ ಸಾಧ್ಯವಾಗಲಿಲ್ಲ ಎಂದು ದಿಢೀರನೇ ಪ್ರಧಾನಿ ಹುದ್ದೆಗೆ ಇನ್ನೊಂದು ತಿಂಗಳ ಬಳಿಕ ರಾಜೀನಾಮೆ ಘೋಷಿಸಿದರು.

new zealand pm jacinda ardern says she will resign next month ash
Author
First Published Jan 19, 2023, 8:06 AM IST

ವೆಲ್ಲಿಂಗ್ಟನ್‌ (ಜನವರಿ 19, 2023): ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ಅವರು ಮುಂದಿನ ತಿಂಗಳು ಅಂದರೆ ಫೆಬ್ರವರಿ 2023 ರಿಂದ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಗುರುವಾರ ಘೋಷಿಸಿದ್ದಾರೆ. ನನಗೆ ಇದೇ ಸರಿಯಾದ ಸಮಯ. ನಾನು ಇನ್ನೂ 4 ವರ್ಷಗಳ ಕಾಲ ಅಧಿಕಾರ ವಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ತಮ್ಮ ಲೇಬರ್ ಪಕ್ಷದ ಸದಸ್ಯರ ಸಭೆಯಲ್ಲಿ ಹೇಳಿದರು. 42 ವರ್ಷ ವಯಸ್ಸಿನ ಪ್ರಧಾನಿಯೊಬ್ಬರು ಇಷ್ಟು ಬೇಗ ಪ್ರಧಾನಿ ಹುದ್ದೆಗೆ ರಾಜೀನಾಮೆ ಘೋಷಿಸಿರುವುದು ನಿಜಕ್ಕೂ ಅಚ್ಚರಿದಾಯಕ ವಿಚಾರ.  

2017 ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ (Coalition Government) ಪ್ರಧಾನ ಮಂತ್ರಿಯಾದ (Prime MInister)  ಜಸಿಂಡಾ ಅರ್ಡೆರ್ನ್ (Jacinda Ardern), ನಂತರ ಮೂರು ವರ್ಷಗಳ ನಂತರ ನಡೆದ ಚುನಾವಣೆಯಲ್ಲಿ (Election) ತಮ್ಮ ಆಡಳಿತಾರೂಢ ಲೇಬರ್ ಪಕ್ಷವನ್ನು (Labour Party) ಭಾರಿ ಗೆಲುವಿನತ್ತ (Victory) ಮುನ್ನಡೆಸಿದ್ದರು. ಆದರೆ, ಇತ್ತೀಚಿನ ಸಮೀಕ್ಷೆಗಳಲ್ಲಿ (Survey) ಅವರ ಪಕ್ಷ ಮತ್ತು ಜಸಿಂಡಾ ಅರ್ಡೆರ್ನ್ ಅವರ ವೈಯಕ್ತಿಕ ಜನಪ್ರಿಯತೆ ಕುಸಿತ ಕಂಡಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಪ್ರಧಾನಿ ಹುದ್ದೆಗೆ ರಾಜೀನಾಮೆ ಘೋಷಿಸಿದ್ದಾರಾ ಎಂದೂ ಹೇಳಲಾಗುತ್ತಿದೆ.

ಇದನ್ನು ಓದಿ: Covid Crisis: ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಮದುವೆ ರದ್ದು!

ಸಂಸತ್ತಿನ ಬೇಸಿಗೆಯ ವಿರಾಮದ ಬಳಿಕ ಅಂದರೆ ಒಂದು ತಿಂಗಳ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ನ್ಯೂಜಿಲೆಂಡ್‌ ಪ್ರಧಾನಿ, ಲೇಬರ್‌ ಪಕ್ಷದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ನಾಯಕರಾಗಿ ಮುಂದುವರಿಯಲು ಶಕ್ತಿಯನ್ನು ಕಂಡುಕೊಳ್ಳುವ ಭರವಸೆಯನ್ನು ಹೊಂದಿದ್ದೆ. ಆದರೆ ಅದನ್ನು ಮಾಡಲು ನನಗೆ ಸಾಧ್ಯವಾಗಲಿಲ್ಲ ಎಂದು ದಿಢೀರನೇ ಪ್ರಧಾನಿ ಹುದ್ದೆಗೆ ಇನ್ನೊಂದು ತಿಂಗಳ ಬಳಿಕ ರಾಜೀನಾಮೆ ಘೋಷಿಸಿದರು.

ಹಾಗೂ, ಅಕ್ಟೋಬರ್ 14 ರ ಶನಿವಾರದಂದು ನ್ಯೂಜಿಲೆಂಡ್‌ನಲ್ಲಿ ಮುಂದಿನ ಸಾರ್ವತ್ರಿಕ ಚುನಾವಣೆ ನಡೆಯಲಿದೆ ಮತ್ತು ಅಲ್ಲಿಯವರೆಗೆ ನಾನು ಚುನಾವಣಾ ಸಂಸದರಾಗಿ ಮುಂದುವರಿಯುತ್ತೇನೆ ಎಂದು ಜಸಿಂಡಾ ಅರ್ಡೆರ್ನ್ ಹೇಳಿದರು.  ನಾವು ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ನಾನು ಹೊರಡುತ್ತಿಲ್ಲ. ಆದರೆ, ನಾವು ಗೆಲ್ಲಬಹುದು ಮತ್ತು ಗೆಲ್ಲುತ್ತೇವೆ ಎಂದು ನಾನು ನಂಬುತ್ತೇನೆ" ಎಂದೂ ನ್ಯೂಜಿಲೆಂಡ್‌ ಪ್ರಧಾನಿ ಹೇಳಿದರು. ತನ್ನ ರಾಜೀನಾಮೆ ಫೆಬ್ರವರಿ 7 ರೊಳಗೆ ಜಾರಿಗೆ ಬರಲಿದೆ ಎಂದು ಜಸಿಂಡಾ ಅರ್ಡೆರ್ನ್ ಹೇಳಿದ್ದು, ಅಲ್ಲದೆ, ಜನವರಿ 22 ರಂದು ಲೇಬರ್ ಕಾಕಸ್ ಹೊಸ ನಾಯಕನನ್ನು ಆಯ್ಕೆ ಮಾಡಲಿದೆ ಎಂದೂ ಅವರು ಹೇಳಿದರು.

ಇದನ್ನೂ ಓದಿ: ಕೊರೋನಾ ನಿಯಮ ಮೀರಿ ಸೆಲ್ಫಿ; ಕ್ಷಮೆ ಕೇಳಿದ ಪ್ರಧಾನಿ!

 ತಮ್ಮ ರಾಜೀನಾಮೆಯ ಹಿಂದೆ ಯಾವುದೇ ರಹಸ್ಯವಿಲ್ಲ ಎಂದೂ ಜಸಿಂಡಾ ಅರ್ಡೆರ್ನ್ ಹೇಳಿದ್ದಾರೆ. ನಾನು ಮನುಷ್ಯ, ನಾವು ಎಲ್ಲಿಯವರೆಗೆ ಸಾಧ್ಯವೋ ಅಷ್ಟು ನೀಡುತ್ತೇವೆ ಮತ್ತು ನಂತರ ಅದು ಸಮಯ. ಮತ್ತು ನನಗೆ, ಇದೇ ಸರಿಯಾದ ಸಮಯ. ನಾನು ಹೊರಡುತ್ತಿದ್ದೇನೆ, ಏಕೆಂದರೆ ಅಂತಹ ಸವಲತ್ತು ಹೊಂದಿರುವ ಕೆಲಸವು ದೊಡ್ಡ ಜವಾಬ್ದಾರಿಯನ್ನು ಸಹ ಹೊಂದಿದೆ. ನೀವು ನಾಯಕತ್ವಕ್ಕೆ ಸರಿಯಾದ ವ್ಯಕ್ತಿಯಾಗಿದ್ದಾಗ ಮತ್ತು ಸರಿಯಾದ ವ್ಯಕ್ತಿಯಾಗಿರದಿದ್ದಾಗ ಜವಾಬ್ದಾರಿಯನ್ನು ತಿಳಿದುಕೊಳ್ಳಬೇಕು ಎಂದೂ 42 ವರ್ಷ ವಯಸ್ಸಿನ ನ್ಯೂಜಿಲೆಂಡ್‌ ಪ್ರಧಾನಿ ಜಸಿಂಡಾ ಅರ್ಡೆನ್‌ ತಿಳಿಸಿದ್ದಾರೆ. 

ಇನ್ನು, ನ್ಯೂಜಿಲೆಂಡ್ ಉಪ ಪ್ರಧಾನ ಮಂತ್ರಿ ಗ್ರಾಂಟ್ ರಾಬರ್ಟ್ಸನ್ ಅವರು  ಪ್ರಧಾನಿ ಹುದ್ದೆಯ ರೇಸ್‌ನಲ್ಲಿ ನಾನಿಲ್ಲ ಎಂದು ಸೂಚ್ಯವಾಗಿ ಹೇಳಿದ್ದಾರೆ. 

ಇದನ್ನೂ ಓದಿ: ಕೊರೋನಾ ಹೊಡೆದೋಡಿಸಿದ ನ್ಯೂಜಿಲೆಂಡ್‌ನಲ್ಲಿ ಮತ್ತೊಂದು ಕ್ರಾಂತಿಕಾರಕ ಹೆಜ್ಜೆ; ವಿಶ್ವಕ್ಕೆ ಮಾದರಿ!

Follow Us:
Download App:
  • android
  • ios