Asianet Suvarna News Asianet Suvarna News

Womens Day : ಎಲ್ಲಿಂದ ಶುರುವಾಯ್ತು ಮಹಿಳಾ ದಿನಾಚರಣೆ?

ಮಾರ್ಚ್ 8ರಂದು ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಣೆ ಮಾಡಲಾಗುತ್ತದೆ. ಇದು ಶುರುವಾಗಿದ್ದು ಈಗಲ್ಲ. ಬಹಳ ಹಿಂದೆಯೇ ಮಹಿಳಾ ದಿನವನ್ನು ಆಚರಣೆ ಮಾಡಲಾಗ್ತಾಯಿತ್ತು. ಅದ್ರ ಇತಿಹಾಸ ಹಾಗೂ ಥೀಮ್ ವಿವರ ಇಲ್ಲಿದೆ.
 

International Women Day History And Facts
Author
First Published Feb 16, 2023, 12:30 PM IST

ಪ್ರತಿ ವರ್ಷ ನಾವು ನಮ್ಮ ಹುಟ್ಟುಹಬ್ಬ ಆಚರಿಸಿಕೊಳ್ತೇವೆ. ರಾಷ್ಟ್ರೀಯ ಹಬ್ಬಗಳನ್ನು ಆಚರಿಸ್ತೇವೆ. ಹಾಗೆಯೇ ಮಹಿಳೆಯರಿಗಾಗಿಯೇ ಒಂದು ದಿನವಿದೆ. ಮಾರ್ಚ್ 8ರಂದು ಅಂತರಾಷ್ಟ್ರೀಯ ಮಹಿಳಾ ದಿನಚರಣೆಯನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷ ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಳ್ಳುವ ಕೆಲವರಿಗೆ ಕೂಡ ಯಾಕೆ ಇದನ್ನು ಆಚರಣೆ ಮಾಡಲಾಗ್ತಿದೆ ಎಂಬುದು ಗೊತ್ತಿಲ್ಲ. ನಾವಿಂದು ಅಂತರಾಷ್ಟ್ರೀಯ ಮಹಿಳಾ ದಿನದ ಇತಿಹಾಸ ಹಾಗೂ ಅದ್ರ ಥೀಮ್ ಬಗ್ಗೆ ನಿಮಗೊಂದಿಷ್ಟು ಮಾಹಿತಿಯನ್ನು ನೀಡ್ತೇವೆ.

ಅಂತಾರಾಷ್ಟ್ರೀಯ (International) ಮಹಿಳಾ ದಿನದ ಇತಿಹಾಸ (History) : ಅಂತರಾಷ್ಟ್ರೀಯ ಮಹಿಳಾ ದಿನವು ಕಾರ್ಮಿಕ ಚಳುವಳಿಯಾಗಿದೆ. ಇದನ್ನು ವಾರ್ಷಿಕ ಕಾರ್ಯಕ್ರಮವಾಗಿ ವಿಶ್ವಸಂಸ್ಥೆಯು ಅನುಮೋದಿಸಿದೆ. ಇದ್ರ ಪ್ರಸ್ತಾಪವಾಗಿದ್ದು 1908 ರಲ್ಲಿ. ನ್ಯೂಯಾರ್ಕ್ (New York) ನಗರದಲ್ಲಿ 15,000 ಮಹಿಳೆ (Woman) ಯರು ಕಡಿಮೆ ಕೆಲಸದ ಸಮಯ, ಉತ್ತಮ ವೇತನ ಮತ್ತು ಮತದಾನದ ಹಕ್ಕನ್ನು ಒತ್ತಾಯಿಸಿ ಪ್ರತಿಭಟಿಸಲು ಮೆರವಣಿಗೆ ನಡೆಸಿದರು. 

Health Tips : ತಲೆಯ ಅಲ್ಲಲ್ಲಿ ಕೂದಲು ಮಾಯವಾಗಿದ್ರೆ ಹೀಗ್ ಮಾಡಿ

ಒಂದು ವರ್ಷದ ನಂತರ, ಅಮೇರಿಕನ್ ಸಮಾಜವಾದಿ ಪಕ್ಷವು ಮೊದಲ ಬಾರಿಗೆ ರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲು ಪ್ರಾರಂಭಿಸಿತು. ಆದರೆ ಈ ದಿನವನ್ನು ಅಂತಾರಾಷ್ಟ್ರೀಯವಾಗಿ ಆಚರಿಸುವ ಆಲೋಚನೆ ಕ್ಲಾರಾ ಜೆಟ್ಕಿನ್ ಎಂಬ ಮಹಿಳೆಯ ಮನಸ್ಸಿನಲ್ಲಿ ಬಂದಿತು. 1910 ರಲ್ಲಿ ಕೋಪನ್ ಹ್ಯಾಗನ್ ನಲ್ಲಿ ನಡೆದ ದುಡಿಯುವ ಮಹಿಳೆಯರ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ತಮ್ಮ ಕಲ್ಪನೆಯನ್ನು ಮುಂದಿಟ್ಟರು. 17 ದೇಶಗಳ 100 ಮಹಿಳಾ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಅವರೆಲ್ಲರೂ ಕ್ಲಾರಾ ಅವರ ಸಲಹೆಯನ್ನು ಸ್ವಾಗತಿಸಿದರು. ಇದರ ನಂತರ, ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಮೊದಲು 1911 ರಲ್ಲಿ ಆಸ್ಟ್ರಿಯಾ, ಡೆನ್ಮಾರ್ಕ್, ಜರ್ಮನಿ, ಸ್ವಿಟ್ಜರ್ಲೆಂಡ್ ನಲ್ಲಿ ಆಚರಿಸಲಾಯಿತು.  ಇದರ ಶತಮಾನೋತ್ಸವ ಕಾರ್ಯಕ್ರಮವನ್ನು 2011 ರಲ್ಲಿ ಆಚರಿಸಲಾಯಿತು. 
ವಿಶ್ವಸಂಸ್ಥೆಯು 1975 ರಲ್ಲಿ ಇದಕ್ಕೆ ಅಧಿಕೃತ ಒಪ್ಪಿಗೆ ನೀಡಿತು. 1996ರಲ್ಲಿ ವಿಶ್ವಸಂಸ್ಥೆ ಮೊದಲ ಬಾರಿ ಅಂತರಾಷ್ಟ್ರೀಯ ಮಹಿಳಾ ದಿನಕ್ಕೊಂದು ಥೀಮ್ ನೀಡಲು ಶುರು ಮಾಡ್ತು. 

ಮಾರ್ಚ್ 8ರಂದೇ ಅಂತರಾಷ್ಟ್ರೀಯ ಮಹಿಳಾ ದಿನ ಶುರುವಾಗಿದ್ದು ಹೇಗೆ? : ಮೊದಲು ಮಹಿಳಾ ದಿನಾಚರಣೆ ಬಗ್ಗೆ ಮಾಹಿತಿ ನೀಡಿದ್ದ ಕ್ಲಾರಾ ಜೆಟ್ಕಿನ್ ಯಾವುದೇ ದಿನವನ್ನು ನಿಗದಿಪಡಿಸಿರಲಿಲ್ಲ. 1917ರವರೆಗೂ ಮಹಿಳಾ ದಿನಾಚರಣೆಗೆ ಯಾವುದೇ ದಿನ ಸೀಮಿತವಾಗಿರಲಿಲ್ಲ. 1917 ರಲ್ಲಿ ರಷ್ಯಾದ ಮಹಿಳೆಯರು ಆಹಾರ ಮತ್ತು ಶಾಂತಿಯ ಬೇಡಿಕೆಯೊಂದಿಗೆ ನಾಲ್ಕು ದಿನಗಳ ಕಾಲ ಪ್ರತಿಭಟನೆ ನಡೆಸಿದರು. ಆಗಿನ ಸರ್ಕಾರ ಪದತ್ಯಾಗ ಮಾಡಿತು. ಮಧ್ಯಂತರ ಸರ್ಕಾರವು ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿತು. ರಷ್ಯಾದಲ್ಲಿ ಬಳಸಲಾಗುವ ಜೂಲಿಯನ್ ಕ್ಯಾಲೆಂಡರ್ ಪ್ರಕಾರ ರಷ್ಯಾದ ಮಹಿಳೆಯರು ಪ್ರತಿಭಟನೆಯನ್ನು ಪ್ರಾರಂಭಿಸಿದ ದಿನ ಫೆಬ್ರವರಿ 23 ಮತ್ತು ಭಾನುವಾರ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ, ಈ ದಿನವು ಮಾರ್ಚ್ 8 ಆಗಿತ್ತು. ಹಾಗಾಗಿ ಅಂದಿನಿಂದ ಈ ದಿನದಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸಲಾಯ್ತು. 

ಅಂತರಾಷ್ಟ್ರೀಯ ದಿನವನ್ನು ಪ್ರತಿನಿಧಿಸುವ ಬಣ್ಣ ಯಾವುದು? : ನೇರಳೆ, ಹಸಿರು ಮತ್ತು ಬಿಳಿ  ಈ ಮೂರು ಅಂತರಾಷ್ಟ್ರೀಯ ಮಹಿಳಾ ದಿನದ ಬಣ್ಣಗಳು. ಅಂತರಾಷ್ಟ್ರೀಯ ಮಹಿಳಾ ದಿನದ ಅಭಿಯಾನದ ಪ್ರಕಾರ, ನೇರಳೆ ಬಣ್ಣವು ನ್ಯಾಯ ಮತ್ತು ಘನತೆಯ ಬಣ್ಣವಾಗಿದೆ. ಹಸಿರು ಭರವಸೆಯ ಬಣ್ಣವಾಗಿದೆ. ಬಿಳಿ ಬಣ್ಣವು ಶುದ್ಧತೆಯನ್ನು ಸೂಚಿಸುತ್ತದೆ.

Gautam Adani: ಗೌತಮ್‌ ಅದಾನಿ ಪತ್ನಿ ಯಾರು? ಮದುವೆಗೂ ಮುನ್ನ ಅವ್ರೇನ್‌ ಮಾಡ್ತಿದ್ರು?

ಅಂತರಾಷ್ಟ್ರೀಯ ಮಹಿಳಾ ದಿನದ ಥೀಮ್ : ಹಿಂದೆ ಹೇಳಿದಂತೆ ಪ್ರತಿ ವರ್ಷವೂ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಥೀಮ್ ನೊಂದಿಗೆ ಆಚರಣೆ ಮಾಡಲಾಗುತ್ತದೆ. ಈ ಬಾರಿ DigitALL: ಲಿಂಗ ಸಮಾನತೆಗಾಗಿ ನಾವೀನ್ಯತೆ ಮತ್ತು ತಂತ್ರಜ್ಞಾನ ಎಂಬ ಥೀಮ್ ನೊಂದಿಗೆ ಮಹಿಳಾ ದಿನವನ್ನು ಆಚರಣೆ ಮಾಡಲಾಗ್ತಿದೆ. 
 

Follow Us:
Download App:
  • android
  • ios