Gautam Adani: ಗೌತಮ್ ಅದಾನಿ ಪತ್ನಿ ಯಾರು? ಮದುವೆಗೂ ಮುನ್ನ ಅವ್ರೇನ್ ಮಾಡ್ತಿದ್ರು?
ಗೌತಮ್ ಅದಾನಿ ಯಶಸ್ಸಿನಲ್ಲಿ ಅವರ ಪತ್ನಿ ಪ್ರೀತಿ ಅದಾನಿ ಕೊಡುಗೆ ಸಾಕಷ್ಟಿದೆ. ಮೂಲತಃ ವೈದ್ಯರಾಗಿದ್ದರೂ ತಮ್ಮ ವೃತ್ತಿಯನ್ನು ಬದಿಗಿಟ್ಟು ಅದಾನಿ ಫೌಂಡೇಷನ್ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿದ ಮಹಿಳೆ ಪ್ರೀತಿ ಅದಾನಿ.
ಅದಾನಿ ಹೆಸರು ದೇಶದಲ್ಲಿ ಸಾಕಷ್ಟು ಪ್ರಚಾರದಲ್ಲಿದೆ. ರಾಜಕೀಯವಾಗಿಯೂ, ಆರ್ಥಿಕ ಕ್ಷೇತ್ರದಲ್ಲೂ, ಶ್ರೀಮಂತಿಕೆಯ ವಿಚಾರದಲ್ಲಿ ಜನಸಾಮಾನ್ಯರ ನಡುವೆಯೂ ಹೆಚ್ಚು ಚಾಲ್ತಿಯಲ್ಲಿರುವ ಹೆಸರು ಗೌತಮ್ ಅದಾನಿ. ತೀರ ಇತ್ತೀಚಿನವರೆಗೆ ವಿಶ್ವದ ಮೂರನೇ ಅತಿ ಶ್ರೀಮಂತ ವ್ಯಕ್ತಿ ಎನ್ನುವ ಹೆಗ್ಗಳಿಕೆಗೆ ಗೌತಮ್ ಅದಾನಿ ಪಾತ್ರರಾಗಿದ್ದರು. ಅಷ್ಟೆಲ್ಲ ಸಾಧನೆ ಮಾಡಿದ್ದರೂ ಅವರ ಖಾಸಗಿ ಬದುಕು ಮಾತ್ರ ಬೆಳಕಿಗೆ ಬಂದಿರುವುದು ಕಡಿಮೆ. ನಮ್ಮ ದೇಶದ ಇನ್ನೋರ್ವ ಅತಿ ಶ್ರೀಮಂತ ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿಯ ಬಗೆಗೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿದೆ. ಆದರೆ, ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿದ್ದ ಗೌತಮ್ ಅದಾನಿ ಅವರ ಪತ್ನಿಯ ಬಗ್ಗೆ ಸುದ್ದಿಯಾಗಿದ್ದು ಕಡಿಮೆ. ನಮ್ಮಲ್ಲೊಂದು ಮಾತಿದೆ, ಪ್ರತಿ ಸಾಧಕ ವ್ಯಕ್ತಿಯ ಹಿಂದಿನ ಪ್ರೇರಣೆಯಾಗಿ ಸ್ತ್ರೀ ಇರುತ್ತಾಳೆ ಎಂದು. ಗೌತಮ್ ಅದಾನಿ ಪಾಲಿಗೆ ಇದು ಅಕ್ಷರಶಃ ಸತ್ಯವಾದ ಸಂಗತಿ. ಹೀಗಾಗಿ, ಗೌತಮ್ ಅವರು ತಮ್ಮ ಪತ್ನಿಯನ್ನು “ಅರ್ಧಸ್ತಂಭʼ ಎಂದು ಭಾವಿಸುತ್ತಾರೆ. ಏಕೆಂದರೆ, ಪತಿಯ ಯಶಸ್ಸಿಗಾಗಿ ತಮ್ಮ ವೃತ್ತಿಯನ್ನು ದೂರವಿಟ್ಟ ಮಹಿಳೆ ಪ್ರೀತಿ ಅದಾನಿ.
ಅರೇಂಜ್ ಮ್ಯಾರೇಜ್
ಗೌತಮ್ ಅದಾನಿ (Goutham Adani) ಮತ್ತು ಪ್ರೀತಿ ಅವರದ್ದು ಅರೇಂಜ್ ಮ್ಯಾರೇಜ್ (Arrange Marriage). ಗೌತಮ್ ಅದಾನಿ ಹೇಳಿಕೊಂಡಂತೆ, ಮೊದಲ ಭೇಟಿಯಲ್ಲಿ ಪ್ರೀತಿ ನಾಚಿಕೆಯ ಮುದ್ದೆಯಂತೆ ವರ್ತಿಸಿದ್ದರು. ಅಷ್ಟೇ ಅಲ್ಲ, ಗೌತಮ್ ಹೆಚ್ಚು ಓದಿರಲಿಲ್ಲ, ಪ್ರೀತಿ ಡಾಕ್ಟರ್ (Doctor) ಆಗಿದ್ದರು. “ಸಹಜವಾಗಿ ನಮ್ಮದು ಮಿಸ್ ಮ್ಯಾಚ್ ಆಗಿತ್ತುʼ ಎಂದೂ ಅದಾನಿ ಹಿಂದೊಮ್ಮೆ ಹೇಳಿಕೊಂಡಿದ್ದರು. ಆದರೆ, ಮದುವೆಯ ಬಳಿಕ ಪ್ರೀತಿ ಅವರು ತಮ್ಮ ಪತಿಗಾಗಿ (Husband) ವೈದ್ಯ ವೃತ್ತಿಯನ್ನು (Profession) ಕೈಬಿಟ್ಟು ಅದಾನಿ ಫೌಂಡೇಷನ್ ಮುಖ್ಯಸ್ಥೆಯಾಗಿ ಹೊಸದೊಂದು ಜೀವನಕ್ಕೆ ತೆರೆದುಕೊಂಡರು.
ಜರ್ಮನಿಯಲ್ಲಿದ್ದ ಐಟಿ ಕೆಲಸ ಬಿಟ್ಟು ಹಳ್ಳಿಯಲ್ಲಿ ಹೈನುಗಾರಿಗೆ ಮಾಡ್ತಿರೋ ಯುವತಿ !
ಓದಿನಲ್ಲಿ ಅತಿ ಚುರುಕು
ಪ್ರೀತಿ ಹುಟ್ಟಿದ್ದು ಮುಂಬೈನಲ್ಲಾದರೂ ಓದಿದ್ದೆಲ್ಲ ಅಹಮದಾಬಾದಿನಲ್ಲಿ. ಕೆಲ ಸಮಯ ಅಮೆರಿಕಾದಲ್ಲೂ ತಮ್ಮ ಕುಟುಂಬದೊಂದಿಗೆ ನೆಲೆಸಿದ್ದರು. ಓದಿನಲ್ಲಿ (Education) ಅತ್ಯಂತ ಚುರುಕಾಗಿದ್ದ ಪ್ರೀತಿ ಅಹಮದಾಬಾದಿನ ಗವರ್ನ್ ಮೆಂಟ್ ಡೆಂಟಲ್ ಕಾಲೇಜ್ ಆಂಡ್ ಹಾಸ್ಪಿಟಲ್ ನಲ್ಲಿ ವೈದ್ಯಕೀಯ ಶಿಕ್ಷಣ ಓದಿದರು. ಆದರೆ, ಮದುವೆಯ ಬಳಿಕ, ಅಂದರೆ 1996ರಲ್ಲಿ ಗೌತಮ್ ಅದಾನಿಗೆ ಸೇರಿದ್ದ ಎನ್ ಜಿಒ ಅದಾನಿ ಫೌಂಡೇಷನ್ (Adani Foundation) ಅಧ್ಯಕ್ಷೆಯಾಗಿ (Chair Person) ಕಾರ್ಯಾರಂಭ ಮಾಡಿದರು.
ನೋ ರಿಗ್ರೆಟ್
ವೈದ್ಯ ವೃತ್ತಿ ತೊರೆದು ಪತಿಯೊಂದಿಗೆ ಕೆಲಸ ನಿರ್ವಹಿಸಿದ್ದರ ಬಗ್ಗೆ ಪ್ರೀತಿ ಅವರಿಗೆ ಚೂರೂ ಬೇಸರವಿಲ್ಲ. ಗೌತಮ್ ಅದಾನಿ ಅವರಿಗೆ 60 ವರ್ಷ ತುಂಬಿದ ಸಂದರ್ಭದಲ್ಲಿ ಪ್ರೀತಿ ಅದಾನಿ (Preethi Adani) ಟ್ವೀಟ್ ಮೂಲಕ, “36 ವರ್ಷಗಳಿಗಿಂತ ಹೆಚ್ಚು ಕಾಲವಾಯಿತು. ನಾನು ನನ್ನ ವೃತ್ತಿಯನ್ನು ತೊರೆದೆ. ಅದಾನಿಯವರೊಂದಿಗೆ ಹೊಸ ಹೆಜ್ಜೆ (Step) ಹಾಕಿದೆ. ಆದರೆ, ಇಂದು ಹಿಂತಿರುಗಿ ನೋಡಿದಾಗ ಈ ಬಗ್ಗೆ ಹೆಮ್ಮೆ (Proud) ಎನಿಸುತ್ತದೆ. ನನಗೆ ಸಾಕಷ್ಟು ಗೌರವ (Respect) ದೊರೆತಿದೆʼ ಎಂದು ಹೇಳಿಕೊಂಡಿದ್ದರು. ಅಷ್ಟೇ ಅಲ್ಲ, “ಎಂದಾದರೂ ನಿರಾಶೆಗೆ ಒಳಗಾದಾಗ ಗೌತಮ್ ಜತೆಗೆ ನಿಲ್ಲುತ್ತಾರೆ, ಧೈರ್ಯ, ಬೆಂಬಲ (Support) ನೀಡುತ್ತಾರೆ, ಸಮಸ್ಯೆಯಿಂದ ಹೊರಬರಲು ಉತ್ತಮ ಮಾರ್ಗ ತೋರುತ್ತಾರೆ. ಡೆಂಟಿಸ್ಟ್ (Dentist) ಆಗಿ ಕೆಲವು ಜನರ ಸೇವೆ ಮಾಡಲು ಸಾಧ್ಯ, ಆದರೆ, ಫೌಂಡೇಷನ್ ಮೂಲಕ ಲಕ್ಷಾಂತರ ಜನರ ಸೇವೆ ಮಾಡುವ ಅವಕಾಶವಿದೆ ಎಂದು ಗೌತಮ್ ಧೈರ್ಯ ನೀಡಿದಾಗ ತಾನು ವೃತ್ತಿ ತೊರೆದಿದ್ದೆʼ ಎಂದು ಹೇಳಿದ್ದರು.
ಅಂದು ಮೂವರು ಕಾಲೇಜು ಗೆಳೆಯರು ಸೇರಿ ಆರಂಭಿಸಿದ ಆನ್‌ಲೈನ್ ಬೇಕರಿಗೆ ಇಂದು 75 ಕೋಟಿಯ ವ್ಯವಹಾರ
ಪತ್ನಿಯ ಬಗ್ಗೆ ಹೆಮ್ಮೆ
ಫೌಂಡೇಷನ್ ಪ್ರಗತಿಯಲ್ಲಿ (Development) ಪ್ರೀತಿ ನಿರ್ವಹಿಸಿದ ಪಾತ್ರದ ಬಗ್ಗೆ ಗೌತಮ್ ಅವರಿಗೆ ಹೆಮ್ಮೆ ಅಪಾರ. “ಪ್ರೀತಿ ನನ್ನ ಅರ್ಧ ಸ್ತಂಭವಾಗಿದ್ದಾರೆ. ಕುಟುಂಬ (Family), ಇಬ್ಬರು ಮಕ್ಕಳು, ಮೊಮ್ಮಗು ಎಲ್ಲರನ್ನೂ ನಿಭಾಯಿಸುತ್ತಾರೆ, ಮಕ್ಕಳನ್ನು ಬೆಳೆಸಿದ್ದಾರೆ. ಫೌಂಡೇಷನ್ ಕಾರ್ಯವನ್ನೂ ನೋಡಿಕೊಳ್ಳುತ್ತಾರೆʼ ಎಂದಿದ್ದಾರೆ.
ಕುಟುಂಬಕ್ಕೆ ಸಮಯ
ಗೌತಮ್ ಅದಾನಿ ಅವರಿಗೆ ತಮ್ಮ ಕುಟುಂಬದೊಂದಿಗೆ ಬೆರೆಯುವುದೆಂದರೆ ಖುಷಿ. ಅವರು ವಾರದಲ್ಲಿ ಮೂರು ದಿನ ಅಹಮದಾಬಾದಿನಿಂದ ಹೊರಗಿರುತ್ತಾರೆ. ನಾಲ್ಕು ದಿನ ನಗರದಲ್ಲಿರುವಾಗ ಕಚೇರಿಗೆ ತಡವಾಗಿ ಹೋಗುತ್ತಾರೆ, ಕುಟುಂಬದೊಂದಿಗೆ ಹೆಚ್ಚು ಸಮಯ (Time) ಕಳೆಯುತ್ತಾರೆ. ರಾತ್ರಿ ಮನೆಗೆ ವಾಪಸಾದ ಬಳಿಕ ಪ್ರೀತಿಯೊಂದಿಗೆ ರಮ್ಮಿ, ಕಾರ್ಡ್ ಗೇಮ್ (Card Game) ಆಡುತ್ತಾರೆ. ಪ್ರತಿದಿನ 8-10 ಬಾರಿ ಆಟವಾಡುತ್ತಾರಂತೆ, ಆದರೆ, ಪ್ರೀತಿಯೇ ಹೆಚ್ಚು ಬಾರಿ ಗೆಲ್ಲುತ್ತಾರೆ.